ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೊನಾಲ್ಡ್ ಟ್ರಂಪ್‌ ವಿರುದ್ಧ ತಿರುಗಿಬಿದ್ದರಾ ಅರಿಝೋನಾ ಮತದಾರರು..?

|
Google Oneindia Kannada News

ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಕೌಂಟ್‌ಡೌನ್ ಶುರುವಾದಂತೆ ಟ್ರಂಪ್ ಎದೆಬಡಿತವೂ ಹೆಚ್ಚಾಗುತ್ತಿದೆ. ಏಕೆಂದರೆ ದಿನದಿಂದ ದಿನಕ್ಕೆ ಜೋ ಬಿಡೆನ್ ಒಂದೊಂದೇ ರಾಜ್ಯವನ್ನ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಬರೋಬ್ಬರಿ 7 ದಶಕಗಳ ಕಾಲ ರಿಪಬ್ಲಿಕನ್ಸ್ (ಟ್ರಂಪ್ ಪಕ್ಷ)ಗೆ ವೋಟ್ ಹಾಕಿದ್ದ ಅರಿಝೋನಾ ರಾಜ್ಯದ ಮತದಾರ ಪ್ರಭು, ಈ ಬಾರಿ ಮಾತ್ರ ತಮ್ಮ ಮತ ಡೆಮಾಕ್ರಟಿಕ್ ಪಕ್ಷಕ್ಕೆ ಎನ್ನುತ್ತಿದ್ದಾನೆ. ಈಗಾಗಲೇ ಚುನಾವಣಾ ಪೂರ್ವ ಸಮೀಕ್ಷೆಗಳು ಹಾಗೂ ಅವಧಿಪೂರ್ವ ಮತದಾನದ ಆಧಾರದಲ್ಲಿ ಬಿಡೆನ್ ಈ ರಾಜ್ಯದ ಅನಭಿಶಕ್ತ ದೊರೆಯಾಗಿದ್ದಾರೆ.

ಬರೋಬ್ಬರಿ 11 ಮತ (ಅಧ್ಯಕ್ಷರ ಆಯ್ಕೆಗೆ ಬೇಕಾದ ಮತ) ಹೊಂದಿರುವ ಈ ರಾಜ್ಯದಲ್ಲಿ 1952ರಿಂದಲೂ ರಿಪಬ್ಲಿಕನ್ಸ್ ಪರವಾದ ಅಲೆಯೇ ಇತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ಮತ ನಿಮಗಲ್ಲ ಡೆಮಾಕ್ರಟಿಕ್ ಪಕ್ಷಕ್ಕೆ ಎನ್ನುತ್ತಿದ್ದಾರೆ ಮತದಾರರು. ಇದಕ್ಕೆ ನಾನಾ ಕಾರಣಗಳು ಇವೆ. ಮುಖ್ಯವಾಗಿ ಇಲ್ಲಿನ ಮತದಾರರು ಪ್ರಬುದ್ಧರಾಗಿದ್ದು, ವಿದ್ಯಾವಂತರ ಸಂಖ್ಯೆ ಇಲ್ಲಿ ಹೆಚ್ಚಾಗಿದೆ. ಇವರೆಲ್ಲರೂ ಸದ್ಯದ ಪರಿಸ್ಥಿತಿ ಗಮನಿಸಿದರೆ ಬಿಡೆನ್ ಬೆಸ್ಟ್ ಎಂಬ ವಾದ ಮುಂದಿಡುತ್ತಿದ್ದಾರೆ. ಆದರೆ 2016ರ ಚುನಾವಣೆಯಲ್ಲಿ ಟ್ರಂಪ್ ಈ ರಾಜ್ಯದಲ್ಲಿ ಭರ್ಜರಿ ಜಯ ಸಾಧಿಸಿದ್ದರು. 2020ರಲ್ಲಿ ಅದೇನಾಯ್ತೋ ಗೊತ್ತಿಲ್ಲ ಮತದಾರರು ತಿರುಗಿಬಿದ್ದಿದ್ದಾರೆ.

ಮಾಧ್ಯಮಗಳ ಸಂದರ್ಶನಲ್ಲಿ ಮುಕ್ತ ಹೇಳಿಕೆ

ಮಾಧ್ಯಮಗಳ ಸಂದರ್ಶನಲ್ಲಿ ಮುಕ್ತ ಹೇಳಿಕೆ

ಅಮೆರಿಕದಲ್ಲಿ ವಾಕ್ ಸ್ವಾತಂತ್ರ್ಯ ಬಲವಾಗಿದೆ. ಹೀಗಾಗಿ ಇಲ್ಲಿನ ಜನರು ಯಾವುದೇ ಭಯ ಇಲ್ಲದೆ ಯಾರಿಗೆ ಮತ ಹಾಕುತ್ತೇವೆ, ತಮ್ಮ ಅಭ್ಯರ್ಥಿ ಯಾರು ಎಂಬುದನ್ನು ಮುಕ್ತವಾಗಿ ಹಂಚಿಕೊಳ್ಳುತ್ತಾರೆ. ಹೀಗಾಗಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ಬಂತು ಎಂದರೆ ಅಲ್ಲಿನ ಮಾಧ್ಯಮಗಳಿಗೆ ಸಮೀಕ್ಷೆಗಳನ್ನು ಸಿದ್ಧ ಮಾಡುವುದೇ ದೊಡ್ಡ ಕೆಲಸ. ಹೀಗೆ ಅಮೆರಿಕದ ಮಾಧ್ಯಮಗಳು ಅರಿಝೋನಾ ರಾಜ್ಯದಲ್ಲಿ ಇದೀಗ ನಡೆಸಿರುವ ಸಂದರ್ಶನಗಳ ಪೈಕಿ ಟ್ರಂಪ್ ವಿರುದ್ಧವೇ ಮತದಾರರು ಮಾತನಾಡಿದ್ದು, ತಾವು ಜೋ ಬಿಡೆನ್‌ಗೆ ಮತ ಹಾಕುವುದಾಗಿ ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್ ಸೋಲುವುದು ಗ್ಯಾರಂಟಿ: ಅಮೆರಿಕದ 'ನಾಸ್ಟ್ರಡಾಮಸ್'ಡೊನಾಲ್ಡ್ ಟ್ರಂಪ್ ಸೋಲುವುದು ಗ್ಯಾರಂಟಿ: ಅಮೆರಿಕದ 'ನಾಸ್ಟ್ರಡಾಮಸ್'

ಪ್ರಮುಖ ರಾಜ್ಯಗಳಲ್ಲಿ ಬಿಡೆನ್ ಮುಂದೆ

ಪ್ರಮುಖ ರಾಜ್ಯಗಳಲ್ಲಿ ಬಿಡೆನ್ ಮುಂದೆ

ಅಮೆರಿಕ ಚುನಾವಣೆ ಕಾವು ಹೇಗಿದೆ ಎಂದರೆ, ಬಿಡೆನ್ ಪರ ಮತದಾರರು ಒಗ್ಗಟ್ಟಾಗಿರುವ ಮುನ್ಸೂಚನೆ ಸಿಗುತ್ತಿದೆ. ಅಮೆರಿಕ ಅಧ್ಯಕ್ಷರ ಆಯ್ಕೆಗೆ ಅತಿಹೆಚ್ಚು ಮತ ಹೋಂದಿರುವ ಕ್ಯಾಲಿಫೋರ್ನಿಯ ರಾಜ್ಯದಲ್ಲಿ ಈಗಾಗಲೇ ಬಿಡೆನ್ ಭಾಗಶಃ ಗೆದ್ದು ಬೀಗಿದ್ದಾರೆ. ಇನ್ನು ಫಲಿತಾಂಶ ಬರುವುದು ಮಾತ್ರ ಬಾಕಿ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ಕ್ಯಾಲಿಫೋರ್ನಿಯ ರಾಜ್ಯದಲ್ಲಿ ಬರೋಬ್ಬರಿ 55 ಮತಗಳು ಸಿಗಲಿವೆ. 55 ಮತಗಳು ಎಂದರೆ, ಈ ಮತಗಳ ಆಧಾರದಲ್ಲಿ ಅಮೆರಿಕ ಅಧ್ಯಕ್ಷರನ್ನ ಆಯ್ಕೆ ಮಾಡಲಾಗುತ್ತದೆ. ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗಲು 270 ಮತಗಳು ಬೇಕಿದ್ದು, ಕ್ಯಾಲಿಫೋರ್ನಿಯ ಒಂದರಿಂದಲೇ ಬರೋಬ್ಬರಿ 55 ಮತಗಳು ಬಿಡೆನ್ ಬುಟ್ಟಿಗೆ ಬಂದು ಬಿದ್ದಿವೆ. ಈಗ ನೀವೇ ಯೋಚಿಸಿ ಅಮೆರಿಕ ಚುನಾವಣೆ ಅದೆಷ್ಟು ಜಿದ್ದಾಜಿದ್ದಿನಿಂದ ಕೂಡಿರಬಹುದು ಎಂದು.

ಶೇಕಡವಾರು ಮತಗಳಿಕೆಯಲ್ಲೂ ಬಿಡೆನ್ ಮುಂದೆ

ಶೇಕಡವಾರು ಮತಗಳಿಕೆಯಲ್ಲೂ ಬಿಡೆನ್ ಮುಂದೆ

ಬಿಡೆನ್ 538 ಸ್ಥಾನಗಳ ಪೈಕಿ 290 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಳ್ಳುವ ಜೊತೆ ಜೊತೆಗೆ ಶೇಕಡವಾರು ಮತದಾನದಲ್ಲಿ ಶೇ. 53.8 ರಷ್ಟು ಮತಗಳನ್ನು ಬಾಚಿಕೊಳ್ಳುವ ಮುನ್ಸೂಚನೆ ನೀಡಿದ್ದಾರೆ. ಆದರೆ ಮತ್ತೊಂದು ಬದಿಯಲ್ಲಿ ಟ್ರಂಪ್‌ಗೆ ಶೇಕಡವಾರು ಮತದಾನದಲ್ಲೂ ಭಾರಿ ಹಿನ್ನಡೆಯಾಗಿದೆ. ಬಿಡೆನ್‌ಗಿಂತಲೂ ಟ್ರಂಪ್ ಶೇಕಡ 9.6ರಷ್ಟು ಕಡಿಮೆ ಮತ ಗಳಿಸಿದ್ದಾರೆ. ಚುನಾವಣೆಗೆ ಇನ್ನೂ 6 ದಿನಗಳು ಬಾಕಿ ಇರುವಾಗಲೇ ಇದು ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಆಘಾತ ನೀಡಿದೆ.

ಅಮೆರಿಕ ಚುನಾವಣೆ: ಮತ ಚಲಾಯಿಸಿದ ಡೆಮಾಕ್ರಟಿಕ್ ಅಭ್ಯರ್ಥಿ ಜೋ ಬಿಡೆನ್ಅಮೆರಿಕ ಚುನಾವಣೆ: ಮತ ಚಲಾಯಿಸಿದ ಡೆಮಾಕ್ರಟಿಕ್ ಅಭ್ಯರ್ಥಿ ಜೋ ಬಿಡೆನ್

ನಿರ್ಣಾಯಕ ರಾಜ್ಯಗಳಲ್ಲೇ ಟ್ರಂಪ್‌ಗೆ ಶಾಕ್..?

ನಿರ್ಣಾಯಕ ರಾಜ್ಯಗಳಲ್ಲೇ ಟ್ರಂಪ್‌ಗೆ ಶಾಕ್..?

ಈ ಬಾರಿಯ ಅಮೆರಿಕ ಅಧ್ಯಕ್ಷೀಯ ಚುನಾವಣೆ ಅದೆಷ್ಟು ಕ್ಲಿಷ್ಟಕರವಾಗಿದೆ ಎಂದರೆ ನಿರೀಕ್ಷೆಗಳೆಲ್ಲಾ ಉಲ್ಟಾ ಆಗುತ್ತಿವೆ. ಟ್ರಂಪ್ ಗೆದ್ದು ಬೀಗಬಹುದು ಎಂದುಕೊಂಡಿದ್ದ ರಾಜ್ಯಗಳಲ್ಲೇ ಟ್ರಂಪ್ ಸೋಲುವ ಮುನ್ಸೂಚನೆ ಸಿಕ್ಕಿದೆ. ಅದರಲ್ಲೂ ಟ್ರಂಪ್ ಕಳೆದಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಲು ಸಹಕಾರಿಯಾಗಿದ್ದ ರಾಜ್ಯಗಳಲ್ಲಿಯೇ ಟ್ರಂಪ್‌ಗೆ ಸೋಲು ಎದುರಾಗುತ್ತಿದೆ. ಇನ್ನುಳಿದಂತೆ ನಿರ್ಣಾಯಕ ಪಾತ್ರ ವಹಿಸುವ, ಅತಿಹೆಚ್ಚು ಮತಗಳನ್ನು ಹೊಂದಿರುವ ರಾಜ್ಯಗಳಲ್ಲೂ ಟ್ರಂಪ್‌ಗೆ ಭಾರಿ ಹಿನ್ನಡೆ ಉಂಟಾಗುತ್ತಿದೆ. ಈ ಮೂಲಕ ಟ್ರಂಪ್‌ಗೆ 2ನೇ ಅವಧಿ ಬಹುತೇಕ ಅನುಮಾನ ಎನ್ನುವಂತಾಗಿದೆ.

ಚುನಾಯಿತ ಪ್ರತಿನಿಧಿಗಳ ಸಂಖ್ಯೆ ಎಷ್ಟು..?

ಚುನಾಯಿತ ಪ್ರತಿನಿಧಿಗಳ ಸಂಖ್ಯೆ ಎಷ್ಟು..?

ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲಿ 50 ರಾಜ್ಯಗಳಿದ್ದು, ವಾಶಿಂಗ್‌ಟನ್ ಡಿಸಿ ಅಮೆರಿಕದ ರಾಜಧಾನಿಯಾಗಿದೆ. ಹೀಗೆ ವಾಶಿಂಗ್‌ಟನ್ ಡಿಸಿ ಸೇರಿದಂತೆ 51 ರಾಜ್ಯಗಳ ಪ್ರಜೆಗಳು ಅಮೆರಿಕ ಅಧ್ಯಕ್ಷರ ಆಯ್ಕೆಗೆ ಮತದಾನ ಮಾಡುತ್ತಾರೆ. ಒಟ್ಟು 538 ಚುನಾಯಿತ ಪ್ರತಿನಿಧಿಗಳಿರುತ್ತಾರೆ. 538 ಪ್ರತಿನಿಧಿಗಳ ಪೈಕಿ ಪ್ರತಿ ರಾಜ್ಯವನ್ನೂ ಪ್ರತಿನಿಧಿಸಲು ಇಬ್ಬರು ಸೆನೆಟರ್‌ಗಳು ಆಯ್ಕೆಯಾಗುತ್ತಾರೆ. ಒಟ್ಟು 100 ಸೆನೆಟರ್‌ಗಳು ಆಯ್ಕೆಯಾಗುತ್ತಾರೆ. ವಾಷಿಂಗ್ಟನ್ ಡಿಸಿ ಸೇರಿದಂತೆ ಒಟ್ಟು 51 ಎಲೆಕ್ಟೊರಾಲ್ ಕಾಲೇಜುಗಳಿವೆ. ಪ್ರತಿ ರಾಜ್ಯದಲ್ಲಿ ಯಾವ ಪಕ್ಷದ ಅಭ್ಯರ್ಥಿಗೆ ಬಹುಮತ ದೊರೆಯುತ್ತದೆಯೋ ಆ ಅಭ್ಯರ್ಥಿಗೆ ರಾಜ್ಯದ ಇತರ ಎಲ್ಲ ಮತಗಳು ಒಗ್ಗೂಡುತ್ತವೆ.

ಅಮೆರಿಕ ಚುನಾವಣೆಯಲ್ಲಿ ಯಾರಿಗೆ ಗೆಲುವು..? ಯಾರಿಗೆ ಸೋಲು..?ಅಮೆರಿಕ ಚುನಾವಣೆಯಲ್ಲಿ ಯಾರಿಗೆ ಗೆಲುವು..? ಯಾರಿಗೆ ಸೋಲು..?

ಅಧ್ಯಕ್ಷರಾಗಲು ಎಷ್ಟು ಬಹುಮತ ಅಗತ್ಯ..?

ಅಧ್ಯಕ್ಷರಾಗಲು ಎಷ್ಟು ಬಹುಮತ ಅಗತ್ಯ..?

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಅಧ್ಯಕ್ಷ ಸ್ಥಾನ ಅಲಂಕರಿಸಬೇಕಾದರೆ ಕನಿಷ್ಠ 270 ಮತ ಅಗತ್ಯವಾಗಿರುತ್ತದೆ. ಅಂದರೆ ಒಟ್ಟು 538 ಚುನಾಯಿತ ಪ್ರತಿನಿಧಿಗಳ ಪೈಕಿ 270 ಚುನಾಯಿತ ಅಭ್ಯರ್ಥಿಗಳ ಬೆಂಬಲ ಅತ್ಯಗತ್ಯವಾಗಿರುತ್ತದೆ. ಪ್ರತಿಯೊಬ್ಬ ಚುನಾಯಿತ ಪ್ರತಿನಿಧಿಗೂ 2 ಮತಗಳನ್ನು ಹಾಕುವ ಹಕ್ಕು ಇರುತ್ತದೆ. ಒಂದು ಮತ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಮತ್ತೊಂದು ಮತ ಉಪಾಧ್ಯಕ್ಷ ಸ್ಥಾನಕ್ಕೆ ಸಲ್ಲುತ್ತದೆ. ಇನ್ನು ಚುನಾವಣೆ ಪ್ರಕ್ರಿಯೆ ಬಗ್ಗೆ ಅನುಮಾನ ಹೊಂದಿದ್ದರೆ ಅಥವಾ ಈ ಕುರಿತಾಗಿ ತಕರಾರು ಇದ್ದರೆ ಸೋತ ಅಭ್ಯರ್ಥಿ ಅಮೆರಿಕದ ಸುಪ್ರೀಂಕೋರ್ಟ್ ಮೊರೆ ಹೋಗಲು ಅವಕಾಶ ಇದೆ. ಇದೀಗ ಟ್ರಂಪ್ ಕೂಡ ಅಂಚೆ ಮತದಾನದ ಬಗ್ಗೆ ಅನುಮಾನ ವ್ಯಕ್ತಪಡಿಸಿ, ತಾವು ಸೋತರೆ ಅಧಿಕಾರ ಹಸ್ತಾಂತರ ಸುಪ್ರೀಂಕೋರ್ಟ್‌ನಲ್ಲಿ ನಿರ್ಧಾರವಾಗಬಹುದು ಎಂದಿದ್ದಾರೆ.

ಟ್ರಂಪ್ ಎಡವಟ್ಟು ಹೇಳಿಕೆಗಳಿಂದ ವಿವಾದ

ಟ್ರಂಪ್ ಎಡವಟ್ಟು ಹೇಳಿಕೆಗಳಿಂದ ವಿವಾದ

ಮಾಸ್ಕ್ ವಿಚಾರದಿಂದ ಹಿಡಿದು, ಕೊರೊನಾ ವೈರಸ್ ತನಕ ಟ್ರಂಪ್ ಮೇಲಿಂದ ಮೇಲೆ ವಿವಾದಗಳನ್ನು ಸೃಷ್ಟಿ ಮಾಡಿದ್ದರು. ಮೊದಲಿಗೆ ಮಾಸ್ಕ್ ಹಾಕುವುದನ್ನು ಕಡ್ಡಾಯ ಮಾಡುವುದಿಲ್ಲ ಎಂದು ಹಠ ಹಿಡಿದಿದ್ದರು. ಬಳಿಕ ತಾವೇ ಮಾಸ್ಕ್ ತೊಟ್ಟು ಹೊರಗೆ ಕಾಣಿಸಿಕೊಂಡಿದ್ದರು. ಹಾಗೇ ಕೊರೊನಾ ವೈರಸ್ ಸಾಯಲು ದೇಹಕ್ಕೆ ಸೋಂಕು ನಿವಾರಕ ರಾಸಾಯನಿಕಗಳನ್ನು ಚುಚ್ಚಿ ಎಂದಿದ್ದರು. ಸಾಲದು ಎಂಬಂತೆ ನೆರಳಾತೀತ ಕಿರಣಗಳನ್ನು ದೇಹಕ್ಕೆ ಹಾಯಿಸಿದರೆ ಮನುಷ್ಯನ ದೇಹದಲ್ಲಿರುವ ಕೊರೊನಾ ಸಾಯುತ್ತದೆ ಅಂತಾ ಹೇಳಿಕೆ ಕೊಟ್ಟಿದ್ದರು. ಆದರೆ ಇದೆಲ್ಲಾ ಮನುಷ್ಯನನ್ನೇ ಸಾಯಿಸುತ್ತದೆ ಎಂಬುದನ್ನೇ ಟ್ರಂಪ್ ಮರೆತಂತೆ ಮಾತನಾಡಿದ್ದರು. ಇಂತಹ ವಿಚಿತ್ರ ಹೇಳಿಕೆಗಳಿಂದ ಟ್ರಂಪ್ ವಿಶ್ವಾಸ ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದ್ದು, ಇದು ಚುನಾವಣೆ ಮೇಲೂ ಭಾರಿ ಪ್ರಭಾವ ಬೀರುತ್ತಿದೆ. ಆದರೆ ಚುನಾವಣೆ ಮುಗಿಯಲು ಇನ್ನೂ 5 ದಿನಗಳು ಬಾಕಿ ಇದ್ದು, 5 ದಿನಗಳ ಒಳಗೆ ಟ್ರಂಪ್ ಮ್ಯಾಜಿಕ್ ಮಾಡಲಿದ್ದಾರಾ ಕಾದು ನೋಡಬೇಕಿದೆ.

ಭಾರತದ ಗಾಳಿ ಹೊಲಸು ಎಂದ ಟ್ರಂಪ್‌ಗೆ ಭಾರತೀಯರಿಂದ ತಕ್ಕ ಪಾಠ..?ಭಾರತದ ಗಾಳಿ ಹೊಲಸು ಎಂದ ಟ್ರಂಪ್‌ಗೆ ಭಾರತೀಯರಿಂದ ತಕ್ಕ ಪಾಠ..?

English summary
Arizona state voters who have been voting for the Republican nominee for several decades, are favouring Democratic candidate Biden in 2020 Presidential Election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X