• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಜ್ಞಾನಿಯ ಭವಿಷ್ಯ: ಕೋಳಿಯಿಂದ ಬರಲಿದ್ಯಾ ಕೊರೊನಾಗಿಂತಲೂ ಭೀಕರ ವೈರಸ್?

|

ವಾಷಿಂಗ್ಟನ್, ಜೂನ್ 2: ಮಹಾಮಾರಿ ಕೊರೊನಾ ವೈರಸ್ ನಿಂದ ಇಡೀ ವಿಶ್ವವೇ ತತ್ತರಿಸಿದೆ. ಜಗತ್ತಿನಾದ್ಯಂತ ಇಲ್ಲಿಯವರೆಗೂ 63,71,696 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಕೋವಿಡ್-19 ಗೆ ಈವರೆಗೂ 377,556 ಮಂದಿ ಜೀವ ಕಳೆದುಕೊಂಡಿದ್ದಾರೆ.

ಕೋವಿಡ್-19 ಪ್ಯಾಂಡೆಮಿಕ್ ಅದ್ಯಾವಾಗ ಕೊನೆಗೊಳ್ಳುತ್ತೋ ಎಂಬ ಆತಂಕದಲ್ಲಿ ಜನರು ದಿನಗಳನ್ನು ತಳ್ಳುತ್ತಿರುವಾಗಲೇ, ಒಂದು ಆಘಾತಕಾರಿ ಸಂಗತಿಯನ್ನು ವಿಜ್ಞಾನಿಯೊಬ್ಬರು ಬಹಿರಂಗ ಪಡಿಸಿದ್ದಾರೆ.

ಅತಿ ಎತ್ತರದ ಪ್ರದೇಶದಲ್ಲಿದ್ದರೆ ಕೊರೊನಾ ವೈರಸ್ ಸೋಂಕು ಹರಡುವುದಿಲ್ಲವೇ?

ಕೋವಿಡ್-19 ಗಿಂತಲೂ ಭೀಕರವಾದ ಪ್ಯಾಂಡೆಮಿಕ್ (ಸಾಂಕ್ರಾಮಿಕ ಪಿಡುಗು) ಗೆ ಜಗತ್ತು ಸಾಕ್ಷಿಯಾಗಲಿದ್ದು, ಅದರಿಂದ ಅರ್ಧದಷ್ಟು ಜನಸಂಖ್ಯೆ ಬಲಿಯಾಗಲಿದೆ ಎಂದು ಡಾ.ಮೈಕೇಲ್ ಗ್ರೆಗೆರ್ ಭವಿಷ್ಯ ನುಡಿದಿದ್ದಾರೆ.

ವಿನಾಶಕಾರಿ ವೈರಸ್

ವಿನಾಶಕಾರಿ ವೈರಸ್

''ಮುಂದಿನ ಪ್ಯಾಂಡೆಮಿಕ್ ಗೆ ಚಿಕನ್ ಕಾರಣವಾಗಿರಲಿದ್ದು, ಅದು ಕೋವಿಡ್-19 ಗಿಂತಲೂ ಭೀಕರವಾಗಿರಲಿದೆ. ಚಿಕನ್ ಫಾರ್ಮ್ ಗಳಲ್ಲಿ ಕಂಡುಬರುವ ಅಪೋಕ್ಯಾಲಿಪ್ಟಿಕ್ ವೈರಸ್ ಕೊರೊನಾ ವೈರಸ್ ಗಿಂತಲೂ ಹೆಚ್ಚು ವಿನಾಶಕಾರಿ'' ಎಂದು 'ಹೌ ನಾಟ್ ಟು ಡೈ' ಎಂಬ ಜನಪ್ರಿಯ ಪುಸ್ತಕ ಬರೆದಿರುವ ಡಾ.ಮೈಕೇಲ್ ಗ್ರೆಗೆರ್ ಹೇಳಿದ್ದಾರೆ.

ಪೌಲ್ಟ್ರಿ ಇರುವವರೆಗೂ ಪ್ಯಾಂಡೆಮಿಕ್ ಇದ್ದೇ ಇರುತ್ತದೆ.!

ಪೌಲ್ಟ್ರಿ ಇರುವವರೆಗೂ ಪ್ಯಾಂಡೆಮಿಕ್ ಇದ್ದೇ ಇರುತ್ತದೆ.!

ಸದ್ಯ 'ಹೌ ಟು ಸರ್ವೈವ್ ಎ ಪ್ಯಾಂಡೆಮಿಕ್' ಎಂಬ ಪುಸ್ತಕ ಬರೆದಿರುವ ಡಾ.ಮೈಕೇಲ್ ಗ್ರೆಗೆರ್, ''ಪೌಲ್ಟ್ರಿ ಇರುವವರೆಗೂ ಪ್ಯಾಂಡೆಮಿಕ್ (ಸಾಂಕ್ರಾಮಿಕ ಪಿಡುಗು) ಇದ್ದೇ ಇರುತ್ತದೆ'' ಎಂಬ ಕಟ್ಟೆಚ್ಚರಿಕೆ ನೀಡಿದ್ದಾರೆ.

ಮೈಸೂರಿನ ಗ್ರಾಮವೊಂದರಲ್ಲಿ 25 ಕೋಳಿಗಳ ಸಾವು; ಹೆಚ್ಚಾದ ಹಕ್ಕಿ ಜ್ವರ ಭೀತಿ

ಅಪ್ಪಟ ಸಸ್ಯಹಾರಿ ಆಗಿರುವ ಡಾ.ಮೈಕೇಲ್ ಗ್ರೆಗೆರ್, ಮಾಂಸಾಹಾರಿ ಉತ್ಪನ್ನಗಳ ಬಳಕೆಯ ವಿರುದ್ಧ ಹಲವಾರು ವರ್ಷಗಳಿಂದ ಕ್ಯಾಂಪೇನ್ ಮಾಡುತ್ತಿದ್ದಾರೆ.

ಪ್ರಾಣಿಗಳೊಂದಿಗಿನ ಮಾನವರ ನಿಕಟ ಸಂಪರ್ಕದಿಂದಲೇ ಸಾಂಕ್ರಾಮಿಕ ರೋಗಗಳು ಹಬ್ಬುತ್ತಿವೆ ಎಂಬುದನ್ನು ಡಾ.ಮೈಕೇಲ್ ಗ್ರೆಗೆರ್ ಬಲವಾಗಿ ನಂಬಿದ್ದಾರೆ. ನೋವೆಲ್ ಕೊರೊನಾ ವೈರಸ್ ಕೂಡ ಬಾವಲಿಗಳಿಂದಲೇ ಮನುಷ್ಯರಿಗೆ ಹರಡಿದೆ ಎನ್ನಲಾಗಿದೆ.

ಭೀಕರ ಭವಿಷ್ಯ ನುಡಿದ ಡಾ.ಮೈಕೇಲ್ ಗ್ರೆಗೆರ್

ಭೀಕರ ಭವಿಷ್ಯ ನುಡಿದ ಡಾ.ಮೈಕೇಲ್ ಗ್ರೆಗೆರ್

ಪೌಲ್ಟ್ರಿ ಫಾರ್ಮ್ ಗಳಿಂದ ಮತ್ತೊಂದು ಪ್ಯಾಂಡೆಮಿಕ್ ಹರಡಬಹುದು ಎಂದು ಡಾ.ಮೈಕೇಲ್ ಗ್ರೆಗೆರ್ ಭವಿಷ್ಯ ನುಡಿದಿದ್ದಾರೆ.

1997 ರಲ್ಲಿ ಹಾಂಗ್ ಕಾಂಗ್ ನಲ್ಲಿ H5N1 ಹರಡಿದ ಪರಿಣಾಮ, ಲಕ್ಷಾಂತರ ಕೋಳಿಗಳ ಮಾರಣಹೋಮ ನಡೆದಿತ್ತು. ಆದರೆ, 2003 ರಿಂದ 2009 ರವರೆಗೆ ಹಾಂಗ್ ಕಾಂಗ್ ನಲ್ಲಿ ಹಲವು ಬಾರಿ H5N1 ಕಾಣಿಸಿಕೊಂಡಿದೆ. ಹೀಗಾಗಿ, H5N1 ವೈರಸ್ ಸಂಪೂರ್ಣವಾಗಿ ನಾಶಗೊಂಡಿಲ್ಲ ಎಂದಿದ್ದಾರೆ ಡಾ.ಮೈಕೇಲ್ ಗ್ರೆಗೆರ್.

ಕೋಳಿ ಸಾಕುವ ವಿಧಾನ ಬದಲಿಸಬೇಕು

ಕೋಳಿ ಸಾಕುವ ವಿಧಾನ ಬದಲಿಸಬೇಕು

ಪೌಲ್ಟ್ರಿ ಫಾರ್ಮ್ ಗಳಿಂದ ವೈರಸ್ ಹರಡುವುದನ್ನು ತಡೆಯಲು ಕೋಳಿ ಸಾಕುವ ವಿಧಾನವನ್ನು ಬದಲಿಸಬೇಕಿದೆ. ಹಲವು ಪೌಲ್ಟ್ರಿ ಫಾರ್ಮ್ ಗಳಲ್ಲಿ ಚಿಕ್ಕ ಚಿಕ್ಕ ಜಾಗಗಳಲ್ಲಿ ಹೆಚ್ಚಿನ ಕೋಳಿಗಳನ್ನು ಇರಿಸಲಾಗುತ್ತದೆ. ಇದರಿಂದ ಅವುಗಳಿಗೆ ತಮ್ಮ ರೆಕ್ಕೆಗಳನ್ನು ಅಲುಗಾಡಿಸಲು ಸಹ ಸಾಧ್ಯವಾಗುವುದಿಲ್ಲ. ಕೋಳಿಗಳಲ್ಲಿ ಅಮೋನಿಯಾ ಮಟ್ಟ ಹೆಚ್ಚಾದರೆ ರೋಗಕ್ಕೆ ದಾರಿ ಮಾಡುತ್ತದೆ ಎನ್ನುತ್ತಾರೆ ಡಾ.ಮೈಕೇಲ್ ಗ್ರೆಗೆರ್

ಕೊರೊನಾ ಎಫೆಕ್ಟ್: 4 ಸಾವಿರ ಕೋಳಿಗಳು ಜೀವಂತವಾಗಿ ಗುಂಡಿಗೆ

ಸಲಹೆ ನೀಡಿದ ಡಾ.ಮೈಕೇಲ್ ಗ್ರೆಗೆರ್

ಸಲಹೆ ನೀಡಿದ ಡಾ.ಮೈಕೇಲ್ ಗ್ರೆಗೆರ್

ಪೌಲ್ಟ್ರಿ ಫಾರ್ಮ್ ನಿಂದ ಪ್ಯಾಂಡೆಮಿಕ್ ಹರಡಬಾರದು ಎಂದರೆ, ಕೋಳಿಗಳ ಸಾಮೂಹಿಕ ಉತ್ಪಾದನೆಯನ್ನು ನಿಷೇಧಿಸಬೇಕು. ಹೊರಾಂಗಣ ಪ್ರದೇಶದಲ್ಲಿ, ಜನದಟ್ಟಣೆ ಕಡಿಮೆ ಇರುವ ಸ್ಥಳಗಳಲ್ಲಿ ಸಣ್ಣ ಹಿಂಡುಗಳಾಗಿ ಕೋಳಿಗಳನ್ನು ಬೆಳೆಸಬೇಕು ಎಂದು ಡಾ.ಮೈಕೇಲ್ ಗ್ರೆಗೆರ್ ಸಲಹೆ ನೀಡಿದ್ದಾರೆ.

ಹಾಗೇ, ಮೊಟ್ಟೆಯ ಅಸ್ವಾಭಾವಿಕ ಉತ್ಪಾದನೆ ಮತ್ತು ಸಂತಾನೋತ್ಪತ್ತಿ ಅಭ್ಯಾಸವನ್ನು ಕೊನೆಗೊಳಿಸುವ ಅವಶ್ಯಕತೆ ಇದೆ ಎಂದಿದ್ದಾರೆ ಡಾ.ಮೈಕೇಲ್ ಗ್ರೆಗೆರ್.

English summary
Dr Michael Greger predicts that the worst pandemic could emerge from Apocalyptic Virus in chicken farms. Apocalyptic virus from chicken farming could kill more people than COVID-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more