• search
 • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

''ಟ್ರಂಪ್ ನನ್ನ ಮೈ ಮುಟ್ಟಿ, ಬಲವಂತವಾಗಿ ಮುತ್ತುಕೊಟ್ಟಿದ್ದರು''

|

ಟ್ರಂಪ್ ನನ್ನ ಮೈ ಮುಟ್ಟಿ ಬಲವಂತವಾಗಿ ಮುತ್ತುಕೊಟ್ಟಿದ್ದರು ಅಂತಾ ಮಾಜಿ ರೂಪದರ್ಶಿಯೊಬ್ಬರು ಅಮೆರಿಕ ಅಧ್ಯಕ್ಷರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಶತಾಯಗತಾಯ ಅಮೆರಿಕ ಅಧ್ಯಕ್ಷರಾಗಿ 2ನೇ ಬಾರಿಗೆ ಆಯ್ಕೆ ಆಗಲೇಬೇಕು ಅಂತಾ ಒದ್ದಾಡುತ್ತಿರುವ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಮಾಜಿ ರೂಪದರ್ಶಿ ಆಮಿ ಡೋರಿಸ್ ಈ ರೀತಿ ಟ್ರಂಪ್ ವಿರುದ್ಧ ಆರೋಪ ಮಾಡಿದವರು. 1997ರಲ್ಲಿ ನ್ಯೂಯಾರ್ಕ್‌ನಲ್ಲಿ ಯುಎಸ್ ಓಪನ್ ಟೆನಿಸ್ ನಡೆಯುತ್ತಿದ್ದಾಗ ವಿಐಪಿ ಕೋಣೆಯಲ್ಲಿ ಟ್ರಂಪ್ ನನ್ನ ಮೈ ಮುಟ್ಟಿ ಬಲವಂತವಾಗಿ ಮುತ್ತುಕೊಟ್ಟಿದ್ದಾರೆ ಎಂದು ಆಮಿ ಆರೋಪಿಸಿರುವುದಾಗಿ ಬ್ರಿಟನ್‌ನ 'ದಿ ಗಾರ್ಡಿಯನ್' ಪತ್ರಿಕೆ ವರದಿ ಮಾಡಿದೆ.

ಟ್ರಂಪ್‌ಗೆ ಸೋಲುವ ಆತಂಕ, ವೋಟಿಂಗ್ ಮೇಲೆ ಅನುಮಾನ

ಆದರೆ ಈ ಗಂಭೀರ ಆರೋಪವನ್ನು ಟ್ರಂಪ್ ತಳ್ಳಿಹಾಕಿದ್ದಾರೆ. ಅಷ್ಟೇ ಅಲ್ಲದೆ ಟ್ರಂಪ್‌ರನ್ನ ಆಚೆ ತಳ್ಳಲು ಯತ್ನಿಸಿದಾಗ ನನ್ನ ಎದೆ, ಹಿಂಭಾಗ ಸೇರಿದಂತೆ ದೇಹದ ಎಲ್ಲಾ ಭಾಗಗಳನ್ನು ಮುಟ್ಟಿದ್ದರು. ಆದರೆ ಟ್ರಂಪ್ ಹಿಡಿತದಿಂದ ತಪ್ಪಿಸಿಕೊಳ್ಳಲು ನನಗೆ ಆಗಲೇ ಇಲ್ಲ ಎನ್ನುವ ಮೂಲಕ ಮಾಜಿ ರೂಪದರ್ಶಿ ಆಮಿ ಡೋರಿಸ್, ಹಾಲಿ ಅಧ್ಯಕ್ಷರ ವಿರುದ್ಧ ಭಯಂಕರ ಬಾಂಬ್ ಸಿಡಿಸಿದ್ದಾರೆ.

ಟ್ರಂಪ್ ವಿರುದ್ಧ ಆರೋಪ ಹೊಸದೇನಲ್ಲ

ಟ್ರಂಪ್ ವಿರುದ್ಧ ಆರೋಪ ಹೊಸದೇನಲ್ಲ

ಅಮೆರಿಕ ಅಧ್ಯಕ್ಷ ಟ್ರಂಪ್ ವಿರುದ್ಧ ಲೈಂಗಿಕ ದೌರ್ಜನ್ಯದಂತಹ ಆರೋಪಗಳು ಕೇಳಿಬರುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಸಾಕಷ್ಟುಬಾರಿ ಟ್ರಂಪ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪಗಳು ಕೇಳಿ ಬಂದಿವೆ. ಬಹಳ ವರ್ಷಗಳ ಹಿಂದೆಯೇ ಅಮೆರಿಕದ ಅಂಕಣಗಾರ್ತಿ ಇ. ಜಿನ್‌ ಕರೋಲ್‌, ಟ್ರಂಪ್‌ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. 1990ರ ದಶಕದಲ್ಲಿ ಡಿಪಾರ್ಟ್‌ಮೆಂಟ್ ಸ್ಟೋರ್‌ನಲ್ಲಿ ಟ್ರಂಪ್ ನನ್ನ ಮೇಲೆ ಅತ್ಯಾಚಾರವೆಸಗಿದ್ದರು ಎಂದು ಇ. ಜಿನ್‌ ಕರೋಲ್‌ ಟ್ರಂಪ್ ವಿರುದ್ಧ ಆರೋಪಿಸಿದ್ದರು. ಅಲ್ಲದೆ ಅಮೆರಿಕದ ಮಾಜಿ ಆಂಕರ್, ಸಿನಿ ತಾರೆಯರು ಕೂಡ ಇದೇ ರೀತಿ ಟ್ರಂಪ್ ವಿರುದ್ಧ ಲೈಂಗಿಕ ದೌರ್ಜನ್ಯ ಹಾಗೂ ಅಸಭ್ಯ ವರ್ತನೆಯ ಆರೋಪ ಮಾಡಿದ್ದಾರೆ.

ಟ್ರಂಪ್‌ಗೆ ಹಿನ್ನಡೆ ಮೇಲೆ ಹಿನ್ನಡೆ

ಟ್ರಂಪ್‌ಗೆ ಹಿನ್ನಡೆ ಮೇಲೆ ಹಿನ್ನಡೆ

ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಕೇವಲ 45 ದಿನಗಳು ಬಾಕಿ ಉಳಿದಿವೆ. ನವೆಂಬರ್ 3ರಂದು ಅಮೆರಿಕದ ನಾಗರಿಕರು ತಮ್ಮ ಅಧ್ಯಕ್ಷರ ಆಯ್ಕೆಗಾಗಿ ಮತದಾನ ಮಾಡಲಿದ್ದಾರೆ. ಆದರೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೇ ಟ್ರಂಪ್‌ಗೆ ಎಲ್ಲಾ ಉಲ್ಟಾ ಆಗುತ್ತಿದೆ. ಒಂದ್ಕಡೆ ಕೊರೊನಾ ನಿಯಂತ್ರಣದಲ್ಲಿ ಟ್ರಂಪ್‌ ಎಡವಿದ್ದು, ಮತ್ತೊಂದ್ಕಡೆ ಕ್ಯಾಲಿಫೊರ್ನಿಯ ಕಾಡ್ಗಿಚ್ಚು, ಇದೆಲ್ಲದರ ಹೊರಗೆ ಜನಾಂಗೀಯ ಸಂಘರ್ಷ, ಇದರ ಜೊತೆಗೆ ಮತ್ತೊಂದು ಎನ್ನುವಂತೆ ಡೊನಾಲ್ಡ್ ಟ್ರಂಪ್ ವಿರುದ್ಧ ಪದೇ ಪದೆ ಕೇಳಿಬರುತ್ತಿರುವ ಲೈಂಗಿಕ ದೌರ್ಜನ್ಯದಂತಹ ಗಂಭೀರ ಆರೋಪಗಳು. ಇದು ಸಹಜವಾಗಿಯೇ ಆಡಳಿತಾರೂಢ ರಿಪಬ್ಲಿಕನ್ ಪಾರ್ಟಿ ಹಾಗೂ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಮರು ಆಯ್ಕೆ ಮೇಲೆ ಪ್ರಭಾವ ಬೀರುತ್ತಿದೆ.

67 ವಯಸ್ಸಿನ ನೀಲಿಚಿತ್ರ ತಾರೆಗೆ 250 ವರ್ಷ ಜೈಲುವಾಸ?

ಸಮೀಕ್ಷೆಗಳಲ್ಲಿ ಸೋಲು ಕಂಡಿರುವ ಟ್ರಂಪ್

ಸಮೀಕ್ಷೆಗಳಲ್ಲಿ ಸೋಲು ಕಂಡಿರುವ ಟ್ರಂಪ್

ಈಗಾಗಲೇ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಡೊನಾಲ್ಡ್ ಟ್ರಂಪ್ ಸೋಲು ಕಂಡಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಟ್ರಂಪ್‌ಗಿಂತ ಮುನ್ನಡೆ ಕಾಯ್ದುಕೊಂಡಿದ್ದಾರೆ. ಇನ್ನು ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಕಮಲಾ ಹ್ಯಾರಿಸ್ ಆಯ್ಕೆ ಕೂಡ ಬಿಡೆನ್‌ಗೆ ದೊಡ್ಡ ತಿರುವು ಕೊಟ್ಟಿದೆ. ಏಕೆಂದರೆ ಕಮಲಾ ಅವರಿಗೆ ಭಾರತೀಯರು ಸೇರಿದಂತೆ ಆಫ್ರಿಕನ್-ಅಮೆರಿಕನ್ ಮತದಾರರು ಬೆಂಬಲ ಸೂಚಿಸುತ್ತಿದ್ದಾರೆ. ಈಗಾಗಲೇ ಕಮಲಾ ವಿರುದ್ಧ ಹಲವು ಬಾರಿ ವಾಗ್ದಾಳಿ ನಡೆಸಿರುವ ಟ್ರಂಪ್, ಕಮಲಾ ಆಯ್ಕೆಯಿಂದ ವಿಚಲಿತರಾಗಿರುವುದು ಮೇಲ್ನೋಟಕ್ಕೆ ಸಾಬೀತಾಗುತ್ತಿದೆ.

  Drugs ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ DK Shivakumar | Oneindia Kannada
  ಟ್ರಂಪ್ ವಿರುದ್ಧ ಅನೇಕ ಆರೋಪಗಳು ಕೇಳಿ ಬಂದಿತ್ತು

  ಟ್ರಂಪ್ ವಿರುದ್ಧ ಅನೇಕ ಆರೋಪಗಳು ಕೇಳಿ ಬಂದಿತ್ತು

  ಕಳೆದ ಬಾರಿ ಕೂಡಾ ಅಮೆರಿಕದ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಅವರ ವಿರುದ್ಧ ಅನೇಕ ಆರೋಪಗಳು ಕೇಳಿಬಂದಿದ್ದವು. ಈಗ ನ್ಯೂಯಾರ್ಕ್ ಮೂಲದ ಬರಹಗಾರ್ತಿ, ಮಹಿಳಾ ಸಲಹಾ ಅಂಕಣಕಾರ್ತಿ ಇ. ಜೀನ್ ಕಾರೊಲ್ ಎಂಬುವವರು ಎರಡು ದಶಕಕ್ಕೂ ಹೆಚ್ಚು ಸಮಯದ ಹಿಂದೆ ಡೊನಾಲ್ಡ್ ಟ್ರಂಪ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಆರೋಪಿಸಿದ್ದರು. ಇವರಲ್ಲದೆ, ಪತ್ರಕರ್ತೆ ನಟಾಶಾ ಸ್ಟಾಯ್ನಾಫ್, ರಿಸೆಪ್ಶನಿಸ್ಟ್ ರಾಚೆಲ್ ಕ್ರೂಕ್ಸ್, ಕ್ಯಾಥಿ ಹೆಲ್ಲರ್, ಕ್ರಿಸ್ಟಿನ್ ಆಂಡರ್ಸನ್, ಸಮ್ಮರ್ ಜೆರ್ವೋಸ್, ಮಿಂಡಿ ಮ್ಯಾಕ್ ಗಿಲಿವ್ರೆ, ಜಿಲ್ ಹರಾತ್, ಜೆಸ್ಸಿಕಾ ಲೀಡ್ಸ್, ಕರೀನಾ ವರ್ಜೀನಿಯಾ, ಟೆಂಪಲ್ ಟಗ್ಗಾರ್ಟ್ ಮ್ಯಾಕ್ ಡೊವೆಲ್, ಜೆನ್ನಿಫರ್ ಮರ್ಫಿ ಮುಂತಾದವರು ಆರೋಪಗಳ ಸುರಿಮಳೆ ಎರಚಿದ್ದಾರೆ.

  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಮತ್ತೊಂದು ಲೈಂಗಿಕ ದೌರ್ಜನ್ಯ ಆರೋಪ

  English summary
  Amy Dorris alleges Trump forcefully kissed her. Amy alleged that Trump forcefully kissed her outside the bathroom in his VIP box at the tournament in New York on 5 September 1997.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X