• search
 • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗೆದ್ದರು ಟ್ರಂಪ್, ಸೋತ ವಿರೋಧಿಗಳು; ಸುಪ್ರೀಂಗೆ ಹೊಸ ನ್ಯಾಯಾಧೀಶರ ನೇಮಕ

|

ರುತ್‌ ಬೇಡರ್‌ ಗಿನ್ಸ್‌ಬರ್ಗ್ ಅವರಿಂದ ತೆರವಾಗಿದ್ದ ಅಮೆರಿಕದ ಸುಪ್ರೀಂಕೋರ್ಟ್ ನ್ಯಾಯಾಧೀಶರ ಸ್ಥಾನಕ್ಕೆ ಅಧ್ಯಕ್ಷ ಟ್ರಂಪ್ ಆಮಿ ಕೋನಿ ಬ್ಯಾರೆಟ್‌ರನ್ನು ನೇಮಿಸಿದ್ದಾರೆ. 'ಮೆಟಾಸ್ಟಾಟಿಕ್ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್' ಕಾಯಿಲೆಯಿಂದ ಬಳಲುತ್ತಿದ್ದ ರುತ್‌ ಬೇಡರ್‌ ಗಿನ್ಸ್‌ಬರ್ಗ್ ಸೆಪ್ಟೆಂಬರ್ 18ರಂದು ತಮ್ಮ 87ನೇ ವಯಸ್ಸಿನಲ್ಲಿ ಮೃತಪಟ್ಟಿದ್ದರು.

ಬಿಲ್‌ಕ್ಲಿಂಟನ್ ಅಧಿಕಾರವಧಿಯಲ್ಲಿ ಗಿನ್ಸ್‌ಬರ್ಗ್ ಅವರನ್ನು ಅಮೆರಿಕ ಸುಪ್ರೀಂಕೋರ್ಟ್‌ನ ನ್ಯಾಯಾಧೀಶರಾಗಿ ನೇಮಿಸಲಾಗಿತ್ತು. ಆದರೆ ಬಹುಕಾಲದವರೆಗೂ ರುತ್‌ ಬೇಡರ್‌ ಗಿನ್ಸ್‌ಬರ್ಗ್ ಕ್ಯಾನ್ಸರ್‌ ವಿರುದ್ಧ ಹೋರಾಡಿ ಇತ್ತೀಚೆಗೆ ಮೃತಪಟ್ಟಿದ್ದರು. ಹೀಗಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಿನ್ಸ್‌ಬರ್ಗ್ ಸ್ಥಾನಕ್ಕೆ ಆಮಿ ಬ್ಯಾರೆಟ್‌ರನ್ನ ನಾಮನಿರ್ದೇಶಿಸಿದ್ದಾರೆ.

ನಾನು ಸುಮ್ಮನೆ ಕುರ್ಚಿ ಬಿಟ್ಟು ಹೋಗಲ್ಲ: ಟ್ರಂಪ್ ವಾರ್ನಿಂಗ್..!

ಇದೀಗ ಟ್ರಂಪ್ ನಿರ್ಧಾರ ಡೆಮಾಕ್ರಟಿಕ್ ನಾಯಕರನ್ನ ಕೆರಳಿಸಿದೆ. ಅಧ್ಯಕ್ಷೀಯ ಚುನಾವಣೆ ಹತ್ತಿರದಲ್ಲೇ ಇರುವಾಗ ತರಾತುರಿ ನಿರ್ಧಾರ ಏಕೆಂಬುದು ಡೆಮಾಕ್ರಟಿಕ್ ಪಕ್ಷದ ನಾಯಕರ ಪ್ರಶ್ನೆ. ಒಂದ್ಕಡೆ ಟ್ರಂಪ್ ಅಂಚೆ ಮತದಾನದ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಮತದಾನದ ವಿಧಾನವೇ ಸರಿಯಿಲ್ಲ ಎನ್ನುತ್ತಿದ್ದಾರೆ. ಅಲ್ಲದೆ ಈ ಬಾರಿ ಸೋತರೆ ಶಾಂತಿಯುತವಾಗಿ ಅಧಿಕಾರ ಹಸ್ತಾಂತರ ಮಾಡಲ್ಲ ಎಂದು ಸವಾಲು ಎಸೆದಿದ್ದಾರೆ.

ಟ್ರಂಪ್‌ಗೆ ಸೋಲುವ ಆತಂಕ, ವೋಟಿಂಗ್ ಮೇಲೆ ಅನುಮಾನ

ಈ ಬೆನ್ನಲ್ಲೇ ತಾವು ಸೋತರೆ ಸುಪ್ರೀಂ ಮೆಟ್ಟಿಲೇರುವುದಾಗಿ ಶಾಕ್ ಕೊಟ್ಟಿದ್ದಾರೆ. ಇಷ್ಟೆಲ್ಲದರ ಮಧ್ಯೆ ತೆರವಾದ ನ್ಯಾಯಾಧೀಶರ ಸ್ಥಾನಕ್ಕೆ ಟ್ರಂಪ್ ಆಮಿ ನೇಮಿಸಿರುವುದು ಉರಿವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ವಿಪಕ್ಷ ಡೆಮಾಕ್ರಟಿಕ್ ಲೀಡರ್ಸ್‌ಗೆ ಮತ್ತೊಂದು ಚುನಾವಣಾ ಅಸ್ತ್ರ ಸಿಕ್ಕಿದೆ.

ಅಮೆರಿಕದಲ್ಲೂ ಲಿಂಗ ಸಮಾನತೆ ಇಲ್ಲವಾ..?

ಅಮೆರಿಕದಲ್ಲೂ ಲಿಂಗ ಸಮಾನತೆ ಇಲ್ಲವಾ..?

ಲಿಂಗ ಅಸಮಾನತೆ ಎಂಬುದು ಇಡೀ ಜಗತ್ತು ಎದುರಿಸುತ್ತಿರುವ ಸಮಸ್ಯೆ, ಇದು 1 ದೇಶಕ್ಕೆ ಸೀಮಿತವಾಗಿಲ್ಲ. ಅಮೆರಿಕದಲ್ಲೂ ಲಿಂಗ ಅಸಮಾನತೆ ತಾಂಡವವಾಡುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಸುಪ್ರೀಂಕೋರ್ಟ್‌ಗೆ ಈವರೆಗೂ ನೇಮಕವಾಗಿರುವ ಮಹಿಳಾ ನ್ಯಾಯಾಧೀಶರ ಸಂಖ್ಯೆ. ಅಮೆರಿಕ ಇತಿಹಾಸದಲ್ಲಿ ನಾಲ್ವರು ಮಹಿಳಾ ನ್ಯಾಯಾಧೀಶರು ಸುಪ್ರೀಂಕೋರ್ಟ್‌ಗೆ ನಾಮನಿರ್ದೇಶನಗೊಂಡಿದ್ದರು. ಇದೀಗ ಆಮಿ ಕೋನಿ ಬ್ಯಾರೆಟ್‌ ಸೇರಿ ಕೇವಲ ಐವರು ಮಹಿಳಾ ನ್ಯಾಯಾಧೀಶರನ್ನ ಕಂಡಿದೆ ಅಮೆರಿಕದ ಸುಪ್ರೀಂಕೋರ್ಟ್‌. ಈವರೆಗೂ ಅಮೆರಿಕದ ನ್ಯಾಯಾಂಗ ಇತಿಹಾಸದಲ್ಲಿ, 115 ನ್ಯಾಯಾಧೀಶರನ್ನು ಆ ದೇಶದ ಅತಿದೊಡ್ಡ ನ್ಯಾಯಾಲಯ ಕಂಡಿದೆ. ಈ 115 ನ್ಯಾಯಾಧೀಶರ ಪೈಕಿ ಐವರು ಮಹಿಳೆಯರಿಗೆ ಮಾತ್ರ ಈ ಅತಿದೊಡ್ಡ ಸ್ಥಾನ ಒಲಿದುಬಂದಿದೆ.

 ಚುನಾವಣೆಗೆ ಮುನ್ನ ಟ್ರಂಪ್ ಕೊಟ್ಟರು ಗಿಫ್ಟ್..!

ಚುನಾವಣೆಗೆ ಮುನ್ನ ಟ್ರಂಪ್ ಕೊಟ್ಟರು ಗಿಫ್ಟ್..!

ಆಮಿ ಕೋನಿ ಬ್ಯಾರೆಟ್‌ ಸದ್ಯಕ್ಕೆ 7ನೇ ಸರ್ಕೀಟ್‌ ಕೋರ್ಟ್‌ನ ನ್ಯಾಯಾಧೀಶೆಯಾಗಿದ್ದಾರೆ. 2017ರಲ್ಲಿ ಸ್ವತಃ ಟ್ರಂಪ್ ಆಮಿ ಅವರನ್ನು ಈ ಸ್ಥಾನಕ್ಕೆ ನಾಮನಿರ್ದೇಶನ ಮಾಡಿದ್ದರು. ಇದೀಗ ಭರ್ಜರಿ ಪ್ರಮೋಷನ್ ಜೊತೆ ಆಮಿ ಕೋನಿ ಬ್ಯಾರೆಟ್‌ಗೆ ಸುಪ್ರೀಂ ನ್ಯಾಯಾದೀಶರ ಸ್ಥಾನ ಒಲಿದು ಬಂದಿದೆ. ರುತ್‌ ಬೇಡರ್‌ ಗಿನ್ಸ್‌ಬರ್ಗ್ ನಿಧನದ ಬಳಿಕ ಸ್ವತಃ ಟ್ರಂಪ್ ಮಹಿಳಾ ನ್ಯಾಯಾಧೀಶರನ್ನೇ ಈ ಬಾರಿ ನಾಮನಿರ್ದೇಶನ ಮಾಡುವುದಾಗಿ ಹೇಳಿದ್ದರು. ಅದರಂತೆ ಆಮಿ ಅವರನ್ನ ನೂತನ ನ್ಯಾಯಾಧೀಶರಾಗಿ ನಾಮನಿರ್ದೇಶನ ಮಾಡಲಾಗಿದೆ.

ನಂಬಿಕೆ ಕಳೆದುಕೊಂಡ ಟ್ರಂಪ್, ಶಾಕ್ ಕೊಟ್ಟ ಕೊರೊನಾ..!

ಟೀಕೆಗೆ ಅಂಜದೆ ಗೆದ್ದರು ಟ್ರಂಪ್..!

ಟೀಕೆಗೆ ಅಂಜದೆ ಗೆದ್ದರು ಟ್ರಂಪ್..!

ನವೆಂಬರ್ ಚುನಾವಣೆಯಲ್ಲಿ ನಾನು ಸೋತರೆ ಅಧಿಕಾರವನ್ನು ಶಾಂತಿಯುತವಾಗಿ ಹಸ್ತಾಂತರ ಮಾಡುವ ಬಗ್ಗೆ ಗ್ಯಾರಂಟಿ ಕೊಡೋದಿಲ್ಲ, ಎಂದು ಹೇಳುವ ಮೂಲಕ ಟ್ರಂಪ್ ಕೆಲದಿನಗಳ ಹಿಂದಷ್ಟೇ ಎದುರಾಳಿಗಳಿಗೆ ಶಾಕ್ ನೀಡಿದ್ದರು. ಈ ಹೇಳಿಕೆಯ ಬೆನ್ನಲ್ಲೇ ಟ್ರಂಪ್ ತಾವು ಸೋತರೆ ಸುಪ್ರೀಂ ಮೊರೆ ಹೋಗುವುದಾಗಿ ಸವಾಲನ್ನೂ ಹಾಕಿದ್ದರು. ಅಲ್ಲದೆ ರುತ್‌ ಬೇಡರ್‌ ಗಿನ್ಸ್‌ಬರ್ಗ್‌ರಿಂದ ತೆರವಾದ ಸ್ಥಾನಕ್ಕೆ ಅವಸರದಲ್ಲಿ ನೇಮಕ ಮಾಡಲು ಮುಂದಾಗಿ ಟೀಕೆಗೆ ಗುರಿಯಾಗಿದ್ದರು. ಇದ್ಯಾವುದಕ್ಕೂ ಕೇರ್ ಮಾಡದೆ ತಮ್ಮ ಕೆಲಸ ಈಡೇರಿಸಿದ್ದಾರೆ.

  Armenia Azerbaijan ನಡುವೆ ಯುದ್ಧ ಸ್ಫೋಟ | Nagorno-Karabakh region | Oneindia Kannada
  ಡೊನಾಲ್ಡ್ ಟ್ರಂಪ್‌ಗೆ ಇದು ನೆರವಾಗುತ್ತಾ..?

  ಡೊನಾಲ್ಡ್ ಟ್ರಂಪ್‌ಗೆ ಇದು ನೆರವಾಗುತ್ತಾ..?

  ಇನ್ನು ತಮ್ಮ ನಿರ್ಧಾರದ ಬಗ್ಗೆ ಸಮಜಾಯಿಷಿ ನೀಡಿದ್ದ ಟ್ರಂಪ್, ಈ ಬಾರಿ ಚುನಾವಣೆಯಲ್ಲಿ ತಾವು ಸೋತು ಸುಪ್ರೀಂ ಮೊರೆ ಹೋದರೆ 4-4ರ ಸಮ ಅನುಪಾತದಲ್ಲಿ ತೀರ್ಪು ಹೊರ ಬೀಳಬಹುದು. ಇದೇ ಕಾರಣಕ್ಕಾಗಿ ತೆರವಾದ 9ನೇ ನ್ಯಾಯಮೂರ್ತಿ ಸ್ಥಾನಕ್ಕೆ ಅಧ್ಯಕ್ಷೀಯ ಚುನಾವಣೆಗೂ ಮೊದಲೇ ನೇಮಕಾತಿ ಮಾಡಿ ಎಂದು ಹಠಹಿಡಿದಿದ್ದರು. ಟ್ರಂಪ್ ಅದನ್ನ ಸಾಧಿಸಿ ತೋರಿಸಿದ್ದಾರೆ. ಆದರೆ ಈಗ ಉಳಿದಿರುವ ಟ್ರಿಲಿಯನ್ ಡಾಲರ್ ಪ್ರಶ್ನೆಯೆಂದರೆ, ಆಮಿ ಕೋನಿ ಬ್ಯಾರೆಟ್‌ ಆಯ್ಕೆ ಟ್ರಂಪ್‌ಗೆ ಅದೆಷ್ಟರಮಟ್ಟಿಗೆ ಸಹಾಯಕವಾಗಲಿದೆ ಎಂಬುದು.

  English summary
  US President Trump nominated Amy Coney Barrett, for Supreme Court. Amy Coney Barrett is appointed for Ginsburg place, who died on Sep 18, 2020.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X