ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾ ಅಧ್ಯಕ್ಷೀಯ ಚುನಾವಣೆ ನಡುವೆ 1 ಕೋಟಿ ಮೀರುತ್ತಾ ಕೊರೊನಾವೈರಸ್?

|
Google Oneindia Kannada News

ಚಿಕಾಗೋ, ಅಕ್ಟೋಬರ್.30: ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ 282 ದಿನಗಳಲ್ಲೇ ಮೊದಲ ಬಾರಿಗೆ 90,000ರಕ್ಕೂ ಹೆಚ್ಚು ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಒಂದೇ ದಿನದಲ್ಲಿ ಪತ್ತೆಯಾಗಿದ್ದು, ಹೊಸ ದಾಖಲೆಯಾಗಿದೆ.

ಅಮೆರಿಕಾ ಅಧ್ಯಕ್ಷೀಯ ಚುನಾವಣೆ ನಡುವೆ ಕಳೆದ ಒಂದೇ ವಾರದಲ್ಲಿ 5 ಲಕ್ಷಕ್ಕಿಂತ ಹೆಚ್ಚು ಕೊವಿಡ್-19 ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಗುರುವಾರ ಕೂಡಾ ಯುಎಸ್ಎನಲ್ಲಿ 89,000ಕ್ಕೂ ಹೆಚ್ಚು ಸೋಂಕಿತ ಪ್ರಕರಣಗಳು ದಾಖಲಾಗಿದ್ದವು.

ಚಳಿಗಾಲದಲ್ಲಿ ಕೊವಿಡ್-19 ಸೋಂಕು ತಗುಲಿದರೆ ಸಾವು ಪಕ್ಕಾ?ಚಳಿಗಾಲದಲ್ಲಿ ಕೊವಿಡ್-19 ಸೋಂಕು ತಗುಲಿದರೆ ಸಾವು ಪಕ್ಕಾ?

ಅಮೆರಿಕಾದ 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ಒಂದು ವಾರದಿಂದ ಹಿಂದೆಂದೂ ದಾಖಲಾಗದಷ್ಟು ಕೊವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗಿವೆ. ಸೋಂಕಿತ ರೋಗಿಗಳನ್ನು ಎಲ್ ಪಾಸೊ ಮತ್ತು ಮಿಲ್ವಾಕೀ ಉಪನಗರಗಳಲ್ಲಿ ಇರುವ ಆಸ್ಪತ್ರೆಗಳಿಗೆ ಕಳುಹಿಸಿ ಕೊಡಲಾಗುತ್ತಿದೆ. ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಚಿಕಾಗೋದಲ್ಲಿ ವ್ಯಾಪಾರ-ವಹಿವಾಟಿನ ಮೇಲೆ ಮತ್ತಷ್ಟು ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ. ಒಂದು ಕಡೆ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಮತ್ತೊಂದು ಕಡೆಯಲ್ಲಿ ಕೊವಿಡ್-19 ಆತಂಕದ ನಡುವೆ ವಿಶ್ವದ ದೊಡ್ಡಣ್ಣನ ನೆಲದಲ್ಲಿ ಪರಿಸ್ಥಿತಿ ಹೇಗಿದೆ ಎನ್ನುವುದರ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ಬಿಕ್ಕಟ್ಟು

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ಬಿಕ್ಕಟ್ಟು

"ಕೊರೊನಾವೈರಸ್ ಸೋಂಕಿನ ಹರಡುವಿಕೆಯನ್ನು ತಕ್ಷಣಕ್ಕೆ ತಡೆಗಟ್ಟಲು ಯಾವುದೇ ಮಾರ್ಗವಿಲ್ಲ. - ನಾವೀಗ ತುರ್ತು ಬಿಕ್ಕಟ್ಟನ್ನು ಎದುರಿಸುತ್ತಿದ್ದೇವೆ. ನಿಮಗೆ, ನಿಮ್ಮ ಕುಟುಂಬ ಸದಸ್ಯರು, ನಿಮ್ಮ ಸ್ನೇಹಿತರು ಮತ್ತು ನಿಮ್ಮ ನೆರೆಹೊರೆಯವರಿಗೂ ಕೂಡಾ ಅಪಾಯ ಸನ್ನಿಹಿತದಲ್ಲಿದ್ದು, ಮುನ್ನೆಚ್ಚರಿಕೆ ವಹಿಸಬೇಕಿದೆ" ಎಂದು ವಿಸ್ಕಾನ್ಸಿನ್ ‌ನ ಗವರ್ನರ್ ಟೋನಿ ಎವರ್ಸ್ ಹೇಳಿದ್ದಾರೆ.

60 ನಿಮಿಷ ಸಂದರ್ಶನ ಎದುರಿಸಲಾಗದ ಟ್ರಂಪ್ ಕೈಗೆ ದೇಶ ಕೊಡಬೇಕೇ?: ಒಬಾಮಾ60 ನಿಮಿಷ ಸಂದರ್ಶನ ಎದುರಿಸಲಾಗದ ಟ್ರಂಪ್ ಕೈಗೆ ದೇಶ ಕೊಡಬೇಕೇ?: ಒಬಾಮಾ

ಅಧ್ಯಕ್ಷೀಯ ಚುನಾವಣೆ ಹೊಸ್ತಿಲಿನಲ್ಲೇ ಎದುರಾದ ಅಪಾಯ

ಅಧ್ಯಕ್ಷೀಯ ಚುನಾವಣೆ ಹೊಸ್ತಿಲಿನಲ್ಲೇ ಎದುರಾದ ಅಪಾಯ

ಅಮೆರಿಕಾದ ಅಧ್ಯಕ್ಷೀಯ ಚುನಾವಣೆಗೆ ಕೆಲವೇ ದಿನಗಳಷ್ಟೇ ಬಾಕಿ ಉಳಿದಿದೆ. ಈ ಚುನಾವಣೆ ಹೊಸ್ತಿಲಿನಲ್ಲೇ ಪ್ರತಿನಿತ್ಯ ಸರಾಸರಿ 75000ಕ್ಕೂ ಹೆಚ್ಚು ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗುತ್ತಿವೆ. ಒಟ್ಟು ಸೋಂಕಿತ ಪ್ರಕರಣಗಳಿಗೆ ಹೋಲಿಸಿದ್ದಲ್ಲಿ ಕಡಿಮೆಯಾಗಿದ್ದ ಸಾವಿನ ಸಂಖ್ಯೆಯ ಪ್ರಮಾಣ ಕೂಡಾ ಇದೀಗ ಹೆಚ್ಚಳವಾಗುತ್ತಿದೆ. ಸರಾಸರಿ 780 ಜನರು ಪ್ರತಿನಿತ್ಯ ಕೊವಿಡ್-19 ಸೋಂಕಿಗೆ ಬಲಿಯಾಗುತ್ತಿರುವುದು ಗೊತ್ತಾಗಿದೆ.

 ಚಳಿಗಾಲದಲ್ಲಿ ಕೊರೊನಾವೈರಸ್ ಸೋಂಕು ಹೆಚ್ಚಾಗುವ ಅಪಾಯ

ಚಳಿಗಾಲದಲ್ಲಿ ಕೊರೊನಾವೈರಸ್ ಸೋಂಕು ಹೆಚ್ಚಾಗುವ ಅಪಾಯ

ಈ ಬಾರಿಯ ಕೊರೊನಾವೈರಸ್ ಸೋಂಕಿನ ಹರಡುವಿಕೆ ಪ್ರಮಾಣವು ಮೊದಲೆಂದೂ ಕಂಡು ಕೇಳರಿಯದಷ್ಟು ಅಪಾಯಕಾರಿ ಆಗಿರಲಿದೆ ಎಂದು ವಿಸ್ಕಾನ್ಸಿನ್ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗ ಶಾಸ್ತ್ರಜ್ಞ ಅಮಂದ್ ಸೀಮಾನೆಕ್ ತಿಳಿಸಿದ್ದಾರೆ. ಚಳಿಗಾಲದಲ್ಲಿ ಜನರು ಮನೆಗಳಲ್ಲಿ ಇರುವುದರಿಂದ ಕೊವಿಡ್-19 ಸೋಂಕಿತ ಪ್ರಕರಣಗಳು ಹೆಚ್ಚಾಗುವ ಅಪಾಯವಿದೆ. ಈ ಹಂತದಲ್ಲಿ ಸೋಂಕಿತ ಪ್ರಕರಣಗಳನ್ನು ತಗ್ಗಿಸುವ ಅಥವಾ ನಿರ್ವಹಿಸುವುದಕ್ಕೆ ಸಾಧ್ಯ ಆಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಅಮೆರಿಕಾ: 24 ಗಂಟೆಗಳಲ್ಲೇ 90,000ಕ್ಕೂ ಹೆಚ್ಚು ಕೊವಿಡ್-19 ಕೇಸ್!ಅಮೆರಿಕಾ: 24 ಗಂಟೆಗಳಲ್ಲೇ 90,000ಕ್ಕೂ ಹೆಚ್ಚು ಕೊವಿಡ್-19 ಕೇಸ್!

3 ಅಂಶಗಳ ಸಂಗಮದಿಂದ ಕೊರೊನಾವೈರಸ್ ಭೀತಿ

3 ಅಂಶಗಳ ಸಂಗಮದಿಂದ ಕೊರೊನಾವೈರಸ್ ಭೀತಿ

ಅಮೆರಿಕಾದ ಮಿನ್ನೇಸೋಟಾ ವಿಶ್ವವಿದ್ಯಾಲಯದ ತಜ್ಞ ಮೈಕೆಲ್ ಓಸ್ಟರ್ಹೋಮ್, ಸಾಂಕ್ರಾಮಿಕ ಪಿಡುಗಿನ ಹಾವಳಿ ಹೆಚ್ಚಾಗುವುದರ ಹಿಂದಿನ ಮರ್ಮವನ್ನು ವಿವರಿಸಿದ್ದಾರೆ.

"ಸಾಂಕ್ರಾಮಿಕ ಆಯಾಸ" - ಕೆಲಸ ಕಾರ್ಯಗಳಿಗಾಗಿ ನಿತ್ಯ ಹೊರಗೆ ಸಂಚರಿಸುವ ಜನರಲ್ಲಿ ಹೆಚ್ಚಾಗಿ ಕೊವಿಡ್-19 ಸೋಂಕು ಅಂಟಿಕೊಳ್ಳುತ್ತಿದೆ.

"ಸಾಂಕ್ರಾಮಿಕ ಕೋಪ" - ಉಪದ್ರವ ಎಂಬುವುದು ನಿಜವಾದ ಬೆದರಿಕೆ ಎಂದು ನಂಬುವುದಕ್ಕೆ ಸಾಧ್ಯವಿಲ್ಲ

"ಶೀತ ಹವಾಮಾನ" - ಶೀತ ಹವಾಮಾನದಿಂದಾಗಿ ಜನರು ಮನೆಗಳಲ್ಲೇ ಉಳಿದುಕೊಳ್ಳುತ್ತಿದ್ದಾರೆ. ಆದರೆ ಇನ್ನೊಂದು ಕಡೆಯಲ್ಲಿ ಹೊರಗೆ ಸಂಚರಿಸುವ ಜನರಿಂದಾಗಿ ಕೊವಿಡ್-19 ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ರೀತಿಯ ಮೂವರನ್ನು ಒಟ್ಟಿಗೆ ಸೇರಿಸಿದಾಗ ಸಿಗುವ ಫಲಿತಾಂಶವು ನಮಗೆ ಆಶ್ಚರ್ಯವನ್ನು ಉಂಟು ಮಾಡುತ್ತದೆ ಎಂದು ಮೈಕಲ್ ಓಸ್ಟ್ ರ್ಹೋಮ್ ತಿಳಿಸಿದ್ದಾರೆ.

ಒಂದು ವಾರದಲ್ಲಿ ಕೊವಿಡ್-19ಗೆ ನಲುಗಿದ 21 ರಾಜ್ಯ

ಒಂದು ವಾರದಲ್ಲಿ ಕೊವಿಡ್-19ಗೆ ನಲುಗಿದ 21 ರಾಜ್ಯ

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ 21 ರಾಜ್ಯಗಳು ಕಳೆದ ಒಂದು ವಾರದಲ್ಲಿ ಕೊರೊನಾವೈರಸ್ ಸೋಂಕಿನ ಅಟ್ಟಹಾಸಕ್ಕೆ ಸಿಕ್ಕು ನಲುಗಿವೆ. ಇದಾಹೋ ಮತ್ತು ಕಾನ್ಸಾಸ್ ಪ್ರದೇಶಗಳಲ್ಲಿ ಸೋಂಕಿತರಿಗೆ ಬೆಡ್ ವ್ಯವಸ್ಥೆಯ ಅಭಾವ ಎದುರಾಗಿದೆ. ಉತ್ತರ ದಾಕೋಟ್ ಜನಸಂಖ್ಯೆಯ ಶೇ.5ರಷ್ಟು ಜನರಿಗೆ ಕೊವಿಡ್-19 ಸೋಂಕು ತಗುಲಿದ್ದು, ಪ್ರತಿನಿತ್ಯ 1200ಕ್ಕೂ ಹೆಚ್ಚು ಸೋಂಕಿತ ಪ್ರಕರಣಗಳು ದಾಖಲಾಗುತ್ತಿವೆ.

ಅಚ್ಚರಿಪಡುವ ಮಟ್ಟಿಗೆ ವೇಗದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಹೆಚ್ಚಳವಾಗುತ್ತಿವೆ ಎಂದು ಜಾನ್ಸ್ ಹಾಪ್ ಕಿನ್ಸ್ ವಿಶ್ವವಿದ್ಯಾಲಯದ ತಜ್ಞವೈದ್ಯರಾದ ಡಾ.ಲ್ಯಾರಿ ಚಾಂಗ್ ತಿಳಿಸಿದ್ದಾರೆ. ಕೊವಿಡ್-19 ಸಾಂಕ್ರಾಮಿಕ ರೋಗವನ್ನು ತಗ್ಗಿಸಲು ಇಡೀ ದೇಶ ಸಂಘಟಿತವಾಗುದ್ದು, ಸಾಕ್ಷ್ಯ ಆಧಾರಿತ ರಾಷ್ಟ್ರೀಯ ಯೋಜನೆ ಜೊತೆಗೆ ಉತ್ತಮ ಕೆಲಸಗಳಾಗುತ್ತವೆ ಎಂದುಕೊಂಡಿದ್ದೆವು. ಆದರೆ, ಅಂದುಕೊಂಡಿದ್ದಕ್ಕಿಂತ ವೇಗವಾಗಿ ಆಶ್ಚರ್ಯವಾಗುವ ಮಟ್ಟಕ್ಕೆ ಸೋಂಕು ಹರಡುತ್ತಿದೆ ಎಂದು ಅಭಿಪ್ರಾಯ ಮಂಡಿಸಿದ್ದಾರೆ.

ಕೊವಿಡ್-19 ನಿಯಂತ್ರಣಕ್ಕಾಗಿ ನಿಷೇಧಾಜ್ಞೆ

ಕೊವಿಡ್-19 ನಿಯಂತ್ರಣಕ್ಕಾಗಿ ನಿಷೇಧಾಜ್ಞೆ

ಒಂದು ತಿಂಗಳವರೆಗೂ ಕೊವಿಡ್-19 ಸೋಂಕಿತ ಸಂಖ್ಯೆಯು ಸ್ಥಿರವಾಗಿದ್ದ ನ್ಯೂ ಜೆರ್ಸಿ ಮತ್ತು ರೋದ್ ಪ್ರದೇಶಗಳಲ್ಲಿ ಏಕಾಏಕಿ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡು ಬಂದಿದೆ. ಕೆಂಟುಕಿ ಮತ್ತು ಪೆನ್ಸಿಲ್ವಾನಿಯಾ ಪ್ರದೇಶಗಳಲ್ಲಿ ದಾಖಲೆ ಪ್ರಮಾಣದ ಪ್ರಕರಣಗಳು ಪತ್ತೆಯಾಗಿವೆ. ಎಲ್ ಪ್ಯಾಸೋ ಮತ್ತು ಟೆಕ್ಸಾಸ್ ಪ್ರದೇಶಗಳಲ್ಲಿ ಕೊವಿಡ್-19 ಸೋಂಕಿತರು ಆಸ್ಪತ್ರೆಗಳಿಂದ ತಪ್ಪಿಸಿಕೊಂಡಿರುವ ಘಟನೆ ವರದಿಯಾದ ಹಿನ್ನೆಲೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಆರ್ಥಿಕ, ಶೈಕ್ಷಣಿಕ ಚಟುವಟಿಕೆಗಳಿಗೆ ಮುಕ್ತ ಅವಕಾಶ

ಆರ್ಥಿಕ, ಶೈಕ್ಷಣಿಕ ಚಟುವಟಿಕೆಗಳಿಗೆ ಮುಕ್ತ ಅವಕಾಶ

ಸಾಂಕ್ರಾಮಿಕ ಪಿಡುಗಿನ ಅಪಾಯದ ನಡುವೆ ಅಮೆರಿಕಾ ಬಹುತೇಕ ಆರ್ಥಿಕ ಚಟುವಟಿಕೆಗಳಿಗೆ ತೆರೆದುಕೊಂಡಿದೆ. ಕೊರೊನಾವೈರಸ್ ಹರಡುವಿಕೆ ಭೀತಿ ನಡುವೆಯೂ ವ್ಯಾಪಾರ ವಹಿವಾಟಿಗೆ ಮುಕ್ತ ಅವಕಾಶ ನೀಡಲಾಗಿದೆ. ಶಾಲಾ-ಕಾಲೇಜುಗಳು ಆರಂಭವಾಗಿದ್ದು, ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿಲ್ಲ. ಇನ್ನೊಂದು ಕಡೆಯಲ್ಲಿ ಕೊವಿಡ್-19 ಲಸಿಕೆ ಸಿಗುತ್ತದೆ ಎಂಬ ವಿಶ್ವಾಸದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೇಶದ ಮೂಲೆ ಮೂಲೆಗಳನ್ನು ಸುತ್ತಿ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ದೇಶದ ಹಲವೆಡೆ ಜನ ಸಂದಣಿ ಸೇರುವುದಕ್ಕೆ ಅವಕಾಶ ಕಲ್ಪಿಸಿ ಕೊಡಲಾಗುತ್ತಿದೆ.

"ಕೊವಿಡ್-19 ಸೋಂಕು ನಿಯಂತ್ರಿಸಬಹುದಿತ್ತು"

ಕೊರೊನಾವೈರಸ್ ಸೋಂಕು ಹರಡುವಿಕೆಯನ್ನು ನಿಯಂತ್ರಿಸಬಹುದಿತ್ತು ಎಂದು ಕೈಟ್ಲಿನ್ ಉರೆಂಡಾ-ಕಲ್ಪೆಪ್ಪರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎಲ್ ಪ್ಯಾಸೋದಲ್ಲಿ ಕಳೆದ ಬೇಸಿಗೆ ಸಂದರ್ಭದಲ್ಲಿ ತಮ್ಮ ತಾಯಿ ಕೊವಿಡ್-19 ಸೋಂಕಿಗೆ ಬಲಿಯಾದರು. ಅಂದು ಸಂಯುಕ್ತ ರಾಷ್ಟ್ರಗಳಲ್ಲಿ ಮಹಾಮಾರಿ ಬಗ್ಗೆ ನಿರ್ಲಕ್ಷ್ಯ ತೋರಿದ ಸರ್ಕಾರವು ದೋಚುವುದರಲ್ಲೇ ಬ್ಯುಸಿ ಆಗಿದ್ದರು. ಅಂದು ಸರಿಯಾದ ಸ್ಪಂದನೆ ಸಿಕ್ಕಿದ್ದರೆ ನಮ್ಮ ತಾಯಿ ಸಾವನ್ನಪ್ಪುತ್ತಿರಲಿಲ್ಲ ಎಂದು ಆರೋಪಿಸಿದ್ದಾರೆ.

ಕೊರೊನಾವೈರಸ್ ಈಶಾನ್ಯ ರಾಜ್ಯಗಳಲ್ಲಿಯೇ ಕೇಂದ್ರೀಕೃತ

ಕೊರೊನಾವೈರಸ್ ಈಶಾನ್ಯ ರಾಜ್ಯಗಳಲ್ಲಿಯೇ ಕೇಂದ್ರೀಕೃತ

ಕೊವಿಡ್-19 ಸೋಂಕಿನ ತಪಾಸಣೆಯು ಸೀಮಿತವಾಗಿರುವ ಸಂದರ್ಭಗಳಲ್ಲಿ ಸಾವಿನ ಪ್ರಮಾಣವು ಹೆಚ್ಚಾಗಿತ್ತು. ಈಶಾನ್ಯ ಭಾಗದ ದೊಡ್ಡ ನಗರಗಳಿಗಷ್ಟೇ ಕೊರೊನಾವೈರಸ್ ಪರೀಕ್ಷೆ ಕೇಂದ್ರೀಕರಿಸಲಾಗಿತ್ತು. ಈ ಹಿನ್ನೆಲೆ ಪ್ರತಿನಿತ್ಯ 2,000ಕ್ಕೂ ಹೆಚ್ಚು ಮಂದಿ ಮಹಾಮಾರಿಗೆ ಬಲಿಯಾಗುತ್ತಿದ್ದು, ಸರಾಸರಿ 66,000 ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿದ್ದವು. ಸಣ್ಣ ಗ್ರಾಮಗಳಿಂದ ದೊಡ್ಡ ನಗರಗಳವರೆಗೂ ಕೊವಿಡ್-19 ಸೋಂಕಿನ ತಪಾಸಣೆಯನ್ನು ಹೆಚ್ಚಿಸಲಾಗಿದೆ.

Recommended Video

ಭಾರತದಿಂದ ಕೊರೊನಾ‌ ತವರಿಗೆ ಶುರುವಾಯ್ತು ವಿಮಾನಯಾನ | Oneindia Kannada
ಅಮೆರಿಕಾದಲ್ಲಿ ಹೊಸ ದಾಖಲೆ ಬರೆದ ಕೊರೊನಾವೈರಸ್

ಅಮೆರಿಕಾದಲ್ಲಿ ಹೊಸ ದಾಖಲೆ ಬರೆದ ಕೊರೊನಾವೈರಸ್

ಅಮೆರಿಕಾದಯಲ್ಲಿ ಕಳೆದ 24 ಗಂಟೆಗಳಲ್ಲೇ 90,000ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿರುವ ಬಗ್ಗೆ ಜಾನ್ ಹಾಪ್ ಕಿನ್ಸ್ ವಿಶ್ವವಿದ್ಯಾಲಯವು ಸ್ಪಷ್ಟಪಡಿಸಿದೆ. ಅಕ್ಟೋಬರ್ ಮಧ್ಯಭಾಗದಿಂದ ಈವರೆಗಿನ ಕೊವಿಡ್-19 ಅಂಕಿ-ಅಂಶಗಳಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ಒಂದೇ ದಿನ 91295 ಜನರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ಪತ್ತೆಯಾಗಿದೆ. ದೇಶದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 80.94 ಲಕ್ಷದ ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲಿ ಕೊರೊನಾವೈರಸ್ ಸೋಂಕಿನಿಂದ 1021 ಜನರು ಪ್ರಾಣ ಬಿಟ್ಟಿದ್ದು, ಒಟ್ಟು ಸಾವಿನ ಸಂಖ್ಯೆಯು 2,28,625ಕ್ಕೆ ಏರಿಕೆಯಾಗಿದೆ. ಆ ಮೂಲಕ ವಿಶ್ವದಲ್ಲೇ ಅತಿಹೆಚ್ಚು ಸಾವಿನ ಪ್ರಕರಣಗಳು ಯುಎಸ್ಎನಲ್ಲೇ ದಾಖಲಾಗಿವೆ.

English summary
Amid USA Presidential Election, Coronavirus Cases Will Soon Surpass Reach 1 Crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X