ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾದ ಆರ್ಥಿಕತೆ ಬಲಪಡಿಸಲು ಜೋ ಬಿಡೆನ್ ಪ್ರತಿಜ್ಞೆ

|
Google Oneindia Kannada News

ವಾಶಿಂಗ್ಟನ್, ನವೆಂಬರ್.17: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆಯೂ ಅಮೆರಿಕಾದ ಆರ್ಥಿಕತೆ ಮತ್ತು ಉತ್ಪಾದನೆ ವಲಯವನ್ನು ಪುನಶ್ಚೇತನಗೊಳಿಸುವುದಾಗಿ ನೂತನ ಅಧ್ಯಕ್ಷ ಜೋ ಬಿಡೆನ್ ಪ್ರತಿಜ್ಞೆ ಮಾಡಿದ್ದಾರೆ.

ದೆಲವಾರೆಯಲ್ಲಿ ಉದ್ಯಮಿಗಳು, ವ್ಯಾಪಾರಿಗಳು ಮತ್ತು ಕಾರ್ಮಿಕ ಮುಖಂಡರ ಜೊತೆಗೆ ಜೋ ಬಿಡೆನ್ ಮಾತುಕತೆ ನಡೆಸಿದರು. ಕೊರೊನಾವೈರಸ್ ನಿಂದಾಗಿ ದೇಶವು ಕತ್ತಲೆಯಲ್ಲಿ ಮುಳುಗಿದೆ. ಜನವರಿ.20ರಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರವಧಿ ಪೂರ್ಣಗೊಳ್ಳಲಿದೆ. ಅಂದಿನಿಂದ ದೇಶದ ನೂತನ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಮುಂದಿನ ನಾಲ್ಕು ವರ್ಷಗಳಲ್ಲಿ ಆರ್ಥಿಕತೆಗೆ ಚುರುಕು ಮುಟ್ಟಿಸುವಂತಾ ಕಟ್ಟುನಿಟ್ಟಿನ ಯೋಜನೆಗಳನ್ನು ಜಾರಿಗೊಳಿಸಲಾಗುತ್ತದೆ ಎಂದು ಜೋ ಬಿಡೆನ್ ಹೇಳಿದ್ದಾರೆ.

ಯುಎಸ್ ಚುನಾವಣೆಯಲ್ಲಿ ಜೋ ಬಿಡೆನ್ ಗೆಲುವು ಒಪ್ಪಿಕೊಂಡ ಟ್ರಂಪ್!ಯುಎಸ್ ಚುನಾವಣೆಯಲ್ಲಿ ಜೋ ಬಿಡೆನ್ ಗೆಲುವು ಒಪ್ಪಿಕೊಂಡ ಟ್ರಂಪ್!

"ನಾನು ಸುಳ್ಳು ಕನಸುಗಳನ್ನು ಕಾಣುವ ಆಶಾವಾದಿಯಲ್ಲ ಎಂದ ಜೋ ಬಿಡೆನ್, ನಾವು ಅಂದುಕೊಂಡಿದ್ದನ್ನು ಸಾಧಿಸಿ ತೀರುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಮೆರಿಕಾದ ಉತ್ಪಾದನೆ ವಲಯ, ಆರೋಗ್ಯ ವಲಯದಲ್ಲಿನ ಪರಿಸರ ಬದಲಾವಣೆ ಮಾಡುವ ಅಗತ್ಯವಿದೆ. ಆರ್ಥಿಕತೆ ಪುನಶ್ಚೇತನಕ್ಕಾಗಿ ತ್ರಿಲಿಯನ್ ಡಾಲರ್ ನಷ್ಟು ಹಣವನ್ನು ಹೂಡಿಕೆ ಮಾಡಲಾಗುತ್ತದೆ ಎಂದು ಜೋ ಬಿಡೆನ್ ಆಶ್ವಾಸನೆ ನೀಡಿದ್ದಾರೆ.

Amid Covid-19 Pandemic, Joe Biden Will Vows To Strengthen US Economy

ಅಮೆರಿಕಾದ ಆರ್ಥಿಕತೆಗೆ ಲಾಕ್ ಡೌನ್ ಹೊಡೆತ:

ಕೊರೊನಾವೈರಸ್ ಸೋಂಕಿನ ನಿಯಂತ್ರಣಕ್ಕಾಗಿ ಜಾರಿಗೊಳಿಸಿದ ಲಾಕ್ ಡೌನ್ ಅವಧಿಯನ್ನು ಕಡಿತಗೊಳಿಸುವಂತೆ ಮೊದಲೇ ಸಲಹೆ ನೀಡಲಾಗಿತ್ತು. ಕೊವಿಡ್-19 ಸಲಹಾ ಸಮಿತಿ ಸದಸ್ಯ ಡಾ.ಮೈಕಲ್ ಆಸ್ಚರ್ ಹೂಮ್ ಅವರು 4 ರಿಂದ 6 ವಾರ ರಾಷ್ಟ್ರಾದ್ಯಂತ ಲಾಕ್ ಡೌನ್ ಜಾರಿಗೊಳಿಸುವುದು ಸೂಕ್ತ ಕ್ರಮವಲ್ಲ. ಇದರಿಂದ ದೇಶದ ಆರ್ಥಿಕತೆಗೆ ಅಪಾಯವಿದೆ ಎಂದು ಮೊದಲೇ ಎಚ್ಚರಿಕೆ ನೀಡಿದ್ದರು. ಲಾಕ್ ಡೌನ್ ಬದಲಿಗೆ ಪ್ರಮಾಣಿಕ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಅಗತ್ಯವಿತ್ತು ಎಂದು ಡಾ.ಮೈಕಲ್ ಆಸ್ಚರ್ ಹೂಮ್ ಹೇಳಿದ್ದರು.

ಕೊವಿಡ್-19 ಲಸಿಕೆ ವಿತರಣೆಯಲ್ಲಿ ಪೈಪೋಟಿ:

ಅಮೆರಿಕಾದಲ್ಲಿ ಜನವರಿ.20ರವರೆಗೂ ಡೊನಾಲ್ಡ್ ಟ್ರಂಪ್ ಕೈಯಲ್ಲಿ ಅಧಿಕಾರವಿದ್ದು, ತಮ್ಮ ಅಧಿಕಾರವಧಿಯಲ್ಲೇ ಕೊವಿಡ್-19 ಲಸಿಕೆ ವಿತರಣೆ ಪ್ರಕ್ರಿಯೆ ಆರಂಭಿಸುವುದಕ್ಕೆ ಟ್ರಂಪ್ ಹಾತೊರೆಯುತ್ತಿದ್ದಾರೆ. ಈಗಾಗಲೇ ಮಾಡರ್ನ್ ಲಸಿಕೆ ಅಭಿವೃದ್ಧಿ ಬಗ್ಗೆ ತಮ್ಮ ಸರ್ಕಾರದ ಸಾಧನೆ ಎನ್ನುವಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಜನವರಿ ಆರಂಭದಲ್ಲೇ ಲಸಿಕೆಯು ಸಿದ್ಧವಾಗಲಿದ್ದು, ದೇಶಾದ್ಯಂತ ವಿತರಣೆದೆ ಯೋಜನೆ ರೂಪಿಸಲು ಮುಂದಾಗಿದ್ದಾರೆ.

ಅಮೆರಿಕಾದಲ್ಲಿ ತುರ್ತು ಅಧಿಕಾರ ಹಸ್ತಾಂತರಕ್ಕೆ ಜೋ ಬಿಡೆನ್ ಮನವಿಅಮೆರಿಕಾದಲ್ಲಿ ತುರ್ತು ಅಧಿಕಾರ ಹಸ್ತಾಂತರಕ್ಕೆ ಜೋ ಬಿಡೆನ್ ಮನವಿ

ಅಮೆರಿಕಾದ ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿರುವ ಜೋ ಬಿಡೆನ್ ತಮ್ಮ ಅಧಿಕಾರವಧಿ ಆರಂಭದಲ್ಲಿ ಕೊವಿಡ್-19 ಲಸಿಕೆ ವಿತರಣೆ ಮಾಡುವುದಕ್ಕೆ ಎದುರು ನೋಡುತ್ತಿದ್ದಾರೆ. ಸಾವಿನ ಪ್ರಮಾಣ ಹೆಚ್ಚಳ ಆಗುವುದರಲ್ಲೇ ಟ್ರಂಪ್ ಅಧಿಕಾರವನ್ನು ಹಸ್ತಾಂತರಿಸಬೇಕು ಎಂದು ಬಿಡೆನ್ ಹೇಳುತ್ತಿದ್ದಾರೆ.

English summary
US Election: Amid Covid-19 Pandemic, Joe Biden Will Vows To Strengthen US Economy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X