ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾದಲ್ಲಿ ಸಾಂಕ್ರಾಮಿಕ ಪಿಡುಗಿನ ನಡುವೆ ಸಂಭ್ರಮದ ದೀಪಾವಳಿ

|
Google Oneindia Kannada News

ಕ್ಯಾಲಿಫೋರ್ನಿಯಾ, ನವೆಂಬರ್.16: ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ಹಬ್ಬ-ಹರಿದಿನ, ಆಚರಣೆ ರಜಾದಿನಗಳಿಗೆ ನಿರ್ಬಂಧ ವಿಧಿಸಲಾಗಿದೆ. ಇದರ ಮಧ್ಯೆ ಸ್ಯಾಕ್ರಮೆಂಟೊದಲ್ಲಿ ಭಾರತೀಯ ಅಮೆರಿಕನ್ನರು ಸಂಭ್ರಮದಿಂದ ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸಿದರು.

ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊದ ಉಪನಗರ ರೋಸ್ ‌ವಿಲ್ಲೆಯಲ್ಲಿ 100ಕ್ಕೂ ಹೆಚ್ಚು ಅನಿವಾಸಿ ಭಾರತೀಯರು ನವೆಂಬರ್.08ರ ಭಾನುವಾರ ಸಂಜೆ 6 ಗಂಟೆ ವೇಳೆಗೆ ಸೇರಿಕೊಂಡು 2020ನೇ ಸಾಲಿನ ದೀಪಾವಳಿ ಹಬ್ಬವನ್ನು ಕ್ವಾರೆಂಟೈನ್ ಶೈಲಿಯಲ್ಲಿ ಆಚರಿಸಿದ್ದು ವಿಶೇಷವಾಗಿತ್ತು.

ನರಕಚತುರ್ದಶಿ 2020: ನರಕಾಸುರನನ್ನು ವಧೆ ಮಾಡಿದ್ದು ಯಾರು, ಯಾವಾಗ?ನರಕಚತುರ್ದಶಿ 2020: ನರಕಾಸುರನನ್ನು ವಧೆ ಮಾಡಿದ್ದು ಯಾರು, ಯಾವಾಗ?

ಬೆಳಕಿನ ಹಬ್ಬಕ್ಕಾಗಿ ತಮ್ಮ ಕಾರುಗಳನ್ನು ವಿಭಿನ್ನವಾಗಿ ದೀಪಗಳಿಂದ ಅಲಂಕರಿಸಿದ್ದರು. ಕತ್ತಲ ರಾತ್ರಿಯಲ್ಲಿ ಝಗಮಗಿಸುವ ಲೈಟ್ ಗಳಿಂದ ಅಲಂಕರಿಸಿದ ಕಾರಿನಲ್ಲಿ ಭಾರತೀಯ ಶೈಲಿಯ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟ ಜನರು ಮಕ್ಕಳೊಂದಿಗೆ ಸಂಭ್ರಮಿಸುತ್ತಾ ಝೇಂಕಾರ ಹಾಕಿದರು. ಅನಿವಾಸಿ ಭಾರತೀಯರ ದೀಪಾವಳಿ ಸಂಭ್ರಮದಲ್ಲಿ ಸ್ಥಳೀಯರು ಕೂಡಾ ಕೈ ಜೋಡಿಸಿದರು.

Amid Covid-19 Condition, Deepavali Celebration With Bright Lights At Roseville In California

ಕತ್ತಲೆಯ ವಿರುದ್ಧ ಬೆಳಕಿನ ಯುದ್ಧ:

ದೀಪಾವಳಿ ಭಾರತೀಯ ಸಂಪ್ರದಾಯದ ಎಲ್ಲ ಧರ್ಮದವರು ಒಗ್ಗಟ್ಟಿನಿಂದ ಆಚರಿಸುವ ಪವಿತ್ರ ಹಬ್ಬ. ಹಿಂದೂಗಳು, ಸಿಖ್ಖರು, ಬೌದ್ಧರು ಸೇರಿದಂತೆ ಆಚರಣೆಗಳ ಮೇಲೆ ನಂಬಿಕೆ ಇಲ್ಲದವರೂ ಕೂಡಾ ದೀಪಾವಳಿ ಹಬ್ಬವನ್ನು ಉತ್ಸಾಹದಿಂದ ಆಚರಿಸುತ್ತಾರೆ. ಏಕೆಂದರೆ ಆಧ್ಯಾತ್ಮಿಕವಾಗಿ ದೀಪಾವಳಿ ಹಬ್ಬವು ಕತ್ತಲೆಯಿಂದ ಬೆಳಕಿಗೆ ಸಾಗುವುದರ ಸಂಕೇತ ಎನಿಸಿದೆ. ಈ ಹಿನ್ನೆಲೆ ಮೊದಲ ಬಾರಿಗೆ ರೋಸ್ ವಿಲ್ಲೆಯಲ್ಲಿ ಸೇವಾ ಸ್ಯಾಕ್ರಮೆಂಟೊ ದೀಪಾವಳಿಯ ಬೆಳಕಿನ ಮೆರವಣಿಗೆ ಕಾರ್ಯಕ್ರಮವನ್ನು ಆಚರಿಸಲಾಯಿತು.

Amid Covid-19 Condition, Deepavali Celebration With Bright Lights At Roseville In California

ಶತಮಾನದಲ್ಲೇ ತೀವ್ರ ಶೀತ ಹವಾಮಾನ ದಾಖಲಾಗಿದ್ದರ ನಡುವೆಯೂ ಸ್ಥಳೀಯ ಭಾರತೀಯ ಸಮುದಾಯದ ಆಚರಣೆಗೆ ಮೆರಗು ನೀಡಲು ಸಾವಿರಾರು ಜನರು ಬೆಳಕಿನ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಎಲ್ಕಾಗ್ರೊವ್, ಫೊಲ್ಸೊಮ್, ಆರೆಂಜ್ ವಾಲಿ, ರಾಂಚೊ, ರಾಕ್ಲಿನ್ ಮತ್ತು ರೊಸ್ ವಿಲ್ಲೆಯ ಅನಿವಾಸಿ ಭಾರತೀಯರು ತಮ್ಮ ವಾಹನಗಳನ್ನು ಝಗಮಗಿಸುವ ಎಲ್ಇಡಿ ಲೈಟುಗಳಿಂದ ಅಲಂಕರಿಸಿಕೊಂಡು ಬಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Amid Covid-19 Condition, Deepavali Celebration With Bright Lights At Roseville In California

ದೀಪಾವಳಿ ಹಿನ್ನೆಲೆ ಈ ಬಾರಿ ಫುಡ್ ಡ್ರೈವ್ ಮೂಲಕ 50 ಪೌಂಡ್ ಗಿಂತ ಹೆಚ್ಚು ಆಹಾರ ದೇಣಿಗೆ ಸಂಗ್ರಹಿಸಲಾಗಿತ್ತು. ಸೇವಾ ಸಂಸ್ಥೆಯು ಹೀಗೆ ಸಂಗ್ರಹಿಸಿದ ಆಹಾರದ ಕಿಟ್ ಗಳನ್ನು ಸ್ಥಳೀಯ ಆಹಾರ ಸಂಗ್ರಹಾಲಯಕ್ಕೆ ನೀಡಲಾಯಿತು. ರಿಲಾಯನ್ಸ್ ಸೂಪರ್ ಮಾರ್ಕೆಟ್ ವತಿಯಿಂದ ಬೆಳಕಿನ ಮೆರವಣಿಗೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಸಿಹಿತಿಂಡಿಯನ್ನು ವಿತರಿಸಲಾಯಿತು.

English summary
Amid Covid-19 Condition, Deepavali Celebration With Bright Lights At Roseville In California.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X