ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂಮಿ ಮೇಲೆ ಮತ್ತೆ ಹಿಮಯುಗ..? ಕೊತ ಕೊತ ನೀರು ಕೂಡ ಮಂಜುಗಡ್ಡೆ..!

|
Google Oneindia Kannada News

ನೀವು 'ಹಿಮಯುಗ'ದ ಬಗ್ಗೆ ಕೇಳಿರಬಹುದು ಅಥವಾ ತಿಳಿದಿರಬಹುದು. ಸುಮಾರು 20 ಲಕ್ಷ ವರ್ಷದ ಹಿಂದೆ ಭೂಮಿ ಮೇಲೆ ಎದುರಾದ ಅತ್ಯಂತ ಭೀಕರ ವಾತಾವರಣ ಇದು. ಹೀಗೆ 20 ಲಕ್ಷ ವರ್ಷಗಳ ಕಾಲ ಭೂ ಗ್ರಹ ಮಂಜುಗಡ್ಡೆಯಂತೆ ಆಗಿತ್ತು. ಆದರೆ 11 ಸಾವಿರ ವರ್ಷಗಳ ಹಿಂದೆ ಭೂಮಿಯಲ್ಲಿ ಹಿಮಯುಗ ಅಂತ್ಯವಾಗಿತ್ತು. ಮಾನವರ ಬೆಳವಣಿಗೆಗೆ ಹಾಗೂ ಅಭಿವೃದ್ಧಿಗೆ ಇದೇ ಸಹಕಾರಿಯಾಗಿತ್ತು. ಆದರೆ ಇದೀಗ ಮತ್ತೆ ಹಿಮಯುಗದ ಭೀತಿ ಆವರಿಸಿದೆ. ಇದಕ್ಕೆ ಅಮೆರಿಕದ ದಕ್ಷಿಣದ ರಾಜ್ಯಗಳ ಹೀನಾಯ ಪರಿಸ್ಥಿತಿ ಉದಾಹರಣೆ ಎನ್ನಬಹುದು.

ಕೆಲ ದಿನಗಳಿಂದ ಅಲ್ಲಿ ಕೊತ ಕೊತ ಕುದಿಯುವ ನೀರು ಕೂಡ ಹೆಪ್ಪುಗಟ್ಟುವ ಸ್ಥಿತಿಗೆ ತಲುಪುತ್ತಿದೆ. ಅದರಲ್ಲೂ ಟೆಕ್ಸಾಸ್ ಪರಿಸ್ಥಿತಿ ಊಹಿಸಿದವನೇ ಬಲ್ಲ. ಏಕೆಂದರೆ ಜನರು ಹೊರಗೆ ಬರುವ ಮಾತಿರಲಿ, ಮನೆಯ ಒಳಗಿದ್ದು ಜೀವ ಉಳಿಸಿಕೊಳ್ಳುವುದೇ ಕಷ್ಟಕರವಾಗಿದೆ. ಕರೆಂಟ್ ಕೈಕೊಟ್ಟಿದೆ, ನೀರು ಬರುತ್ತಿಲ್ಲ, ದಿನಸಿ ಇಲ್ಲ, ಔಷಧಗಳು ದೊರಕದೆ ರೋಗಿಗಳು ನರಳುತ್ತಿದ್ದಾರೆ. ಮತ್ತೊಂದು ಕಡೆ ಕತ್ತಲಾದ್ರೆ ಸಾಕು ಮತ್ತಷ್ಟು ಭಯ ಆವರಿಸುತ್ತಿದೆ.

ಜೀವ ಉಳಿಕೊಳ್ಳಲು ಹರಸಾಹಸ..!

ಜೀವ ಉಳಿಕೊಳ್ಳಲು ಹರಸಾಹಸ..!

ಅಮೆರಿಕದ ಟೆಕ್ಸಾಸ್ ರಾಜ್ಯ ಸೇರಿದಂತೆ ದಕ್ಷಿಣ ಭಾಗದ ರಾಜ್ಯಗಳಲ್ಲಿ ಭೀಕರ ಶೀತಮಾರುತಗಳು ಆವರಿಸಿವೆ. ಹೀಗಾಗಿ ವಿಪರೀತ ಚಳಿ ಇದೆ. -15 ಡಿಗ್ರಿವರೆಗೆ ವಾತಾವರಣದ ತಾಪಮಾನ ಕುಸಿಯುತ್ತಿದೆ. ಒಮ್ಮೆ ಊಹಿಸಿ ನಮ್ಮ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ತಾಪಮಾನ 10ರಿಂದ 15 ಡಿಗ್ರಿ ತಲುಪಿದರೆ ಚಳಿ ತಡೆಯಲು ಸಾಧ್ಯವಿಲ್ಲ. ಇನ್ನು -15 ಡಿಗ್ರಿಯ ಸ್ಥಿತಿ ಹೇಗಿರುತ್ತದೆ ಹೇಳಿ..? ಇಂತಹ ಚಳಿಯಲ್ಲಿ ಕುದಿಯುವ ನೀರನ್ನ ಹೊರಗಡೆ ತಂದು ಗಾಳಿಗೆ ಎಸೆದರೆ, ಅದು ಕೆಲವೇ ಸೆಕೆಂಡ್‌ಗಳಲ್ಲಿ ಮಂಜುಗಡ್ಡೆ ಆಗಿಬಿಡುತ್ತದೆ. ಹಿಮಾವೃತ ವಾತಾವರಣದಲ್ಲಿ ಜನರು ಬದುಕಿದರೆ ಸಾಕಪ್ಪ ಎಂಬ ಪರಿಸ್ಥಿತಿಗೆ ಬಂದಿದ್ದಾರೆ.

ಹವಾಮಾನ ಬದಲಾವಣೆ ಎಫೆಕ್ಟ್..?

ಹವಾಮಾನ ಬದಲಾವಣೆ ಎಫೆಕ್ಟ್..?

ಹೌದು, ಖುದ್ದು ಅಮೆರಿಕ ಸರ್ಕಾರವೇ ಈ ಹೇಳಿಕೆ ನೀಡಿದೆ. ಅಮೆರಿಕದ ದಕ್ಷಿಣ ರಾಜ್ಯಗಳ ಮೇಲೆ ಅತ್ಯಂತ ಭೀಕರವಾಗಿ ಶೀತ ಮಾರುತಗಳು ದಾಳಿ ಮಾಡಿರುವುದರ ಹಿಂದೆ ಹವಾಮಾನ ಬದಲಾವಣೆ ಪರಿಣಾಮವಿದೆ. ಹೀಗಾಗಿ ನಾವು ತಕ್ಷಣ ಎಚ್ಚೆತ್ತುಕೊಳ್ಳಬೇಕು ಎಂದು ಬೈಡನ್ ನೇತೃತ್ವದ ಸರ್ಕಾರ ಎಚ್ಚರಿಕೆ ರವಾನಿಸಿದೆ. ಈ ಪರಿಸ್ಥಿತಿಯಲ್ಲಿ ಜನರಿಗೆ ಕನಿಷ್ಠ ವಿದ್ಯುತ್ ಪೂರೈಕೆ ಮಾಡುವುದಕ್ಕೂ ಪರದಾಡುತ್ತಿದೆ ಜಗತ್ತಿನ ದೊಡ್ಡಣ್ಣ. ಜನ ಕುಡಿವ ನೀರಿಗೂ ಪರದಾಡುತ್ತಿದ್ದಾರೆ. ಊಟ ಸಿಗದೆ ನರಳುತ್ತಿದ್ದಾರೆ. ಈ ನಡುವೆ ರಿಪಬ್ಲಿಕನ್ ಪಕ್ಷದ ಟೆಕ್ಸಾಸ್ ಗವರ್ನರ್ ಗ್ರೆಗ್ ಅಬಾಟ್ ಹಾಗೂ ಶ್ವೇತಭವನದ ನಡುವೆ ಭಿನ್ನಾಭಿಪ್ರಾಯ ಏರ್ಪಟ್ಟಿದೆ.

10 ಲಕ್ಷ ಜನರಿಗೆ ವಿದ್ಯುತ್ ಇಲ್ಲ

ಒಂದು ಗಂಟೆ ಕರೆಂಟ್ ಇಲ್ಲ ಅಂದ್ರೆ ಸಾಕು, ಜನರು ಚಡಪಡಿಸುತ್ತಾರೆ. ಹೀಗಿರುವಾಗ ಸುಮಾರು 4-5 ದಿನ ಟೆಕ್ಸಾಸ್ ಜನರು ವಿದ್ಯುತ್ ಕಂಡಿಲ್ಲ. ಹೀಗೆ ಹಿಮ ಬಿರುಗಾಳಿ ಪರಿಣಾಮ 10 ಲಕ್ಷಕ್ಕೂ ಹೆಚ್ಚು ಜನ ಈಗಲೂ ವಿದ್ಯುತ್ ಸಿಗದೆ ಪರದಾಡುತ್ತಿದ್ದಾರೆ. ಬೈಡನ್ ಸರ್ಕಾರ ವಿದ್ಯುತ್ ಲೈನ್‌ಗಳನ್ನ ಸರಿಪಡಿಸಲು ಟೆಕ್ಸಾಸ್ ಮತ್ತು ದಕ್ಷಿಣದ ಇತರ ರಾಜ್ಯಗಳಿಗೆ ಬೆಂಬಲ ನೀಡುತ್ತಿದೆ. ಆದರೆ ಟೆಕ್ಸಾಸ್ ಗವರ್ನರ್ ರಿಪಬ್ಲಿಕನ್ ಗ್ರೆಗ್ ಅಬಾಟ್ ಮತ್ತು ಬೈಡನ್ ತಂಡದ ನಡುವೆ ದೊಡ್ಡ ಭಿನ್ನಾಭಿಪ್ರಾಯ ತಲೆದೂರಿ, ಪರಿಸ್ಥಿತಿ ಮತ್ತಷ್ಟು ಕಗ್ಗಂಟಾಗಿದೆ.

ಟೆಕ್ಸಾಸ್‌ನ ರಸ್ತೆಗಳು ಜಾರುತ್ತಿವೆ..!

ಸ್ವಲ್ಪ ಮಳೆ ಬಿದ್ದರೆ ಸಾಕು, ಗಾಡಿ ಓಡಿಸುವವರ ಜೀವ ಕೈಗೆ ಬಂದಿರುತ್ತೆ. ಹೀಗಿರುವಾಗ ಅಮೆರಿಕದ ಹಿಮ ಬಿರುಗಾಳಿಯಿಂದ ಟೆಕ್ಸಾಸ್‌ನ ರಸ್ತೆಗಳ ಮೇಲೆ ಭಾರಿ ಪ್ರಮಾಣದ ಮಂಜುಗಡ್ಡೆ ಕೂತಿದೆ. ಹೀಗಾಗಿ ವಾಹನ ಚಾಲನೆ ಕೂಡ ಕಷ್ಟಕರವಾಗಿದೆ. ಕಾಲಿಟ್ಟರೆ ಸಾಕು ಜಾರುಬಂಡಿಯಂತೆ ರಸ್ತೆಗಳು ತಳ್ಳುತ್ತಿವೆ. ಹೀಗಾಗಿ ಜನ ಗಾಡಿ ಒಡಿಸಲು ಧೈರ್ಯ ಮಾಡುತ್ತಿಲ್ಲ. ಮೇಲಾಗಿ ಎಷ್ಟೋ ಕಾರ್‌ಗಳ ಡೋರ್ ತೆಗೆಯಲು ಸಾಧ್ಯವಾಗುತ್ತಿಲ್ಲ. ಕಾರ್‌ಗಳ ಡೋರ್ ಪೂರ್ತಿ ಮಂಜುಗಡ್ಡೆಯಿಂದ ಕಟ್ಟಿಕೊಂಡಿರುತ್ತದೆ ಅಥವಾ ಶೀತಗಾಳಿಗೆ ಇಂಜಿನ್ ಸೀಜ್ ಆಗಿರುವ ಉದಾಹರಣೆಗಳು ಕೇಳಿಬಂದಿವೆ. ಇನ್ನು ಕೆಲ ದಿನಗಳ ಕಾಲ ಇದೇ ಪರಿಸ್ಥಿತಿ ಅಮೆರಿಕದ ದಕ್ಷಿಣದ ರಾಜ್ಯಗಳನ್ನು ಕಾಡುವುದು ಪಕ್ಕಾ.

English summary
The United States of America’s southern states suffered by horrible Winter Storm. Residents are waiting in line to get drinking water.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X