• search
 • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

4ನೇ ಅಲೆಯ ಬಲೆಯೊಳಗೆ ಅಮೆರಿಕ? ‘ಡೆಡ್ಲಿ’ ಆರ್ಭಟಕ್ಕೆ ಬೆಚ್ಚಿದ ‘ದೊಡ್ಡಣ್ಣ’!

|
Google Oneindia Kannada News

ಜಗತ್ತಿನ ನಂಬರ್ 1 ದೇಶದ ಹಣೆಬರಹ ಸರಿಯಿಲ್ಲ ಅಂತಾ ಕಾಣುತ್ತೆ. ಕೊರೊನಾ ಅಪ್ಪಳಿಸಿದ ಮರು ಕ್ಷಣವೇ ಅಮೆರಿಕದ ಹಣೆಬರಹ ಕೂಡ ಬದಲಾಗಿ ಹೋಗಿದೆ. ಎಲ್ಲಿ ನೋಡಿದರೂ ಸಾವು, ನೋವು. ಎಲ್ಲೆಲ್ಲೂ ಬಡವರ ಆಕ್ರಂದನ. ಇಂತಹ ಸಂದರ್ಭದಲ್ಲೇ ಕೆಲವು ತಿಂಗಳಿಂದ ಕೊರೊನಾ ಕಂಟ್ರೋಲ್‌ಗೆ ಸಿಕ್ಕಿತ್ತು. ಆದರೆ ಅಮೆರಿಕ ಮತ್ತು ಅಮೆರಿಕನ್ನರ ದುರಾದೃಷ್ಟ ಎಂಬಂತೆ ಮತ್ತೆ ಕೊರೊನಾ ವಕ್ಕರಿಸಿದೆ. ಅದು 4ನೇ ಅಲೆಯ ರೂಪದಲ್ಲಿ..!

ಹೌದು, ಅಮೆರಿಕದ ಪರಿಸ್ಥಿತಿ ಮತ್ತೆ ಕೈಮೀರಿ ಹೋಗುತ್ತಿದೆ. ಕೊರೊನಾ ಸೋಂಕಿನ ಆರ್ಭಟ ಮತ್ತೆ ಹೆಚ್ಚಾಗಿದೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ಪತ್ತೆಯಾಗುತ್ತಿದೆ. ನಿನ್ನೆಯೂ 1 ಲಕ್ಷ 12 ಸಾವಿರ ಅಮೆರಿಕನ್ನರಿಗೆ ಕೊರೊನಾ ವಕ್ಕರಿಸಿದೆ. ಇಷ್ಟೇ ಅಲ್ಲದೆ ಒಂದೇ ದಿನ 656 ಜನ 'ಕೊರೊನಾ' ಸೋಂಕಿಗೆ ಬಲಿಯಾಗಿ ಹೋಗಿದ್ದಾರೆ. ಈಗಾಗಲೇ ಕೊರೊನಾ ಸೋಂಕಿನಲ್ಲಿ 3 ಅಲೆ ಎದುರಿಸಿರುವ ದೊಡ್ಡಣ್ಣ ಇದೀಗ 4ನೇ ಅಲೆಯ ಬಲೆಯೊಳಗೆ ಸಿಲುಕಿ ವಿಲವಿಲನೆ ಒದ್ದಾಡುವ ಸ್ಥಿತಿ ನಿರ್ಮಾಣವಾಗಿದೆ.

ವ್ಯಾಕ್ಸಿನ್ ಪಡೆದರೆ $7 ಸಾವಿರ..!

ವ್ಯಾಕ್ಸಿನ್ ಪಡೆದರೆ $7 ಸಾವಿರ..!

ಅಮೆರಿಕದಲ್ಲಿ ವ್ಯಾಕ್ಸಿನ್ ಪಡೆಯದವರ ಸಂಖ್ಯೆ ಹೆಚ್ಚಾಗಿದೆ. ಮತ್ತೊಂದು ಕಡೆ ಅಮೆರಿಕದಲ್ಲಿ ಕೊರೊನಾ 4ನೇ ಅಲೆಯ ಭೀತಿ ಸೃಷ್ಟಿಯಾಗಿದೆ. ಈಗಾಗಲೇ ಕೊರೊನಾದ 3 ಅಲೆಗಳನ್ನ ನೋಡಿ ಬೆಚ್ಚಿಬಿದ್ದಿರುವ ಅಮೆರಿಕದಲ್ಲಿ 4ನೇ ಅಲೆ ಎದ್ದಿದೆ. ಮೆಲ್ಲಗೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ನಿತ್ಯವೂ ಸೋಂಕಿತರ ಸಂಖ್ಯೆ 1 ಲಕ್ಷದ ಗಡಿಗೆ ಬಂದು ತಲುಪುತ್ತಿದೆ. ಹೀಗಾಗಿ ಅಲರ್ಟ್ ಆಗಿರುವ ಬೈಡನ್ ಆಡಳಿತ, ಆದಷ್ಟು ಬೇಗ ಬಾಕಿ ಇರುವ ತನ್ನೆಲ್ಲಾ ಪ್ರಜೆಗಳಿಗೆ ಕೊರೊನಾ ವ್ಯಾಕ್ಸಿನ್ ಹಾಕಿಸಲು ಪ್ಲ್ಯಾನ್ ಮಾಡಿದೆ. ಹೀಗಾಗಿ ಲಸಿಕೆ ಹಾಕಿಸಿಕೊಂಡರೆ 7 ಸಾವಿರ ರೂಪಾಯಿ ಹಣ ಕೊಡಲು ಮುಂದಾಗಿದೆ. ಈ ಬಗ್ಗೆ ಬೈಡನ್ ಕಚೇರಿಯಿಂದ ಖಡಕ್ ಆದೇಶ ಹೊರಬಿದ್ದಿದೆ.

ಕೊರೊನಾವೈರಸ್ ಲಸಿಕೆ ಉತ್ಪಾದನೆಯಲ್ಲಿ ಭಾರತದ ಜೊತೆ ನಾವಿದ್ದೇವೆ ಎಂದ ಬೈಡನ್!ಕೊರೊನಾವೈರಸ್ ಲಸಿಕೆ ಉತ್ಪಾದನೆಯಲ್ಲಿ ಭಾರತದ ಜೊತೆ ನಾವಿದ್ದೇವೆ ಎಂದ ಬೈಡನ್!

ರಾಜ್ಯಗಳ ಹೆಗಲ ಮೇಲೆ ಹೊಣೆ

ರಾಜ್ಯಗಳ ಹೆಗಲ ಮೇಲೆ ಹೊಣೆ

ಈಗಾಗಲೇ 2 ಟ್ರಿಲಿಯನ್ ಡಾಲರ್ ಮೊತ್ತದ ‘ಕೊರೊನಾ' ಪ್ಯಾಕೇಜ್‌ನ ಅಮೆರಿಕ ಸರ್ಕಾರ ಘೋಷಿಸಿದೆ. ಇದೇ ದುಡ್ಡಲ್ಲಿ ಸುಮಾರು 350 ಮಿಲಿಯನ್ ಡಾಲರ್ ಹಣವನ್ನ ಅಮೆರಿಕದ ಅರ್ಥ ವ್ಯವಸ್ಥೆ ಸರಿದೂಗಿಸಲು ಎತ್ತಿಡಲಾಗಿದೆ. ಇಷ್ಟು ದೊಡ್ಡ ಮೊತ್ತದ ಹಣವನ್ನ ಅಮೆರಿಕದ ರಾಜ್ಯಗಳಿಗೆ ತಲುಪಿಸಲಾಗಿದೆ. ಇದೇ ಹಣದಲ್ಲಿ ವ್ಯಾಕ್ಸಿನ್ ಹಾಕಿಸಿಕೊಂಡವರಿಗೆ ಸುಮಾರು 100 ಡಾಲರ್ ಅಂದ್ರೆ 7400 ರೂಪಾಯಿ ಸಹಾಯಧನ ನೀಡಲು ಸೂಚನೆ ನೀಡಲಾಗಿದೆ. ಬೈಡನ್ ಆಡಳಿತದಿಂದ ಸ್ಥಳೀಯ ಆಡಳಿತಗಳಿಗೆ ಈ ಬಗ್ಗೆ ಸಂದೇಶ ನೀಡಲಾಗಿದೆ.

ವಿಶ್ವಯದ್ಧದ ನಂತರ ಅತಿಹೆಚ್ಚು ಸಾವು

ವಿಶ್ವಯದ್ಧದ ನಂತರ ಅತಿಹೆಚ್ಚು ಸಾವು

ಮಿತ್ರಪಡೆಗಳ ಪರ 2ನೇ ಮಹಾಯುದ್ಧದಲ್ಲಿ ಅಖಾಡ ಪ್ರವೇಶಿಸಿದ್ದ ದೊಡ್ಡಣ್ಣ ಅಮೆರಿಕ ಭಾರಿ ಸಾವು, ನೋವು ಅನುಭವಿಸಿತ್ತು. ಅಂದಾಜು 4 ಲಕ್ಷಕ್ಕೂ ಹೆಚ್ಚು ಅಮೆರಿಕನ್ನರು 2ನೇ ವಿಶ್ವಯುದ್ಧದಲ್ಲಿ ಮೃತಪಟ್ಟಿದ್ದರು. ಆದರೆ ಕೊರೊನಾ ಇದಕ್ಕಿಂತಲೂ ಹೆಚ್ಚಿನ ಸಾವು ನೋವು ಉಂಟುಮಾಡಿದೆ. 6 ಲಕ್ಷ 28 ಸಾವಿರಕ್ಕೂ ಹೆಚ್ಚು ಜನ ಅಮೆರಿಕದಲ್ಲಿ ಬಲಿಯಾಗಿದ್ದಾರೆ. ಅಮೆರಿಕದ ಕೆಲ ಪ್ರದೇಶಗಳಲ್ಲಿ ಕೊರೊನಾ ಕಾರಣದಿಂದ ಮೃತಪಟ್ಟವರನ್ನು ಮಣ್ಣು ಮಾಡುವುದಕ್ಕೂ ಜಾಗದ ಕೊರತೆ ಎದುರಾಗಿತ್ತು. ಇಂತಹ ಸಂದಿಗ್ಧ ಸ್ಥಿತಿಯಲ್ಲೇ ಅಮೆರಿಕದ ಅಧ್ಯಕ್ಷ ಬೈಡನ್ ಮತ್ತೊಮ್ಮೆ ಪುಟಿದೇಳುವ ಧೈರ್ಯ ತೋರಿದ್ದಾರೆ.

ಕೋವಿಡ್‌ ಲಸಿಕೆ ಪಡೆದುಕೊಂಡ ಅಮೆರಿಕನ್ನರಿಗೆ ಮಾಸ್ಕ್‌ ಧರಿಸಲು ಯು.ಎಸ್‌. ಸೂಚನೆಕೋವಿಡ್‌ ಲಸಿಕೆ ಪಡೆದುಕೊಂಡ ಅಮೆರಿಕನ್ನರಿಗೆ ಮಾಸ್ಕ್‌ ಧರಿಸಲು ಯು.ಎಸ್‌. ಸೂಚನೆ

ಕೊರೊನಾ ಕೂಪದಲ್ಲಿ ಅಮೆರಿಕ

ಕೊರೊನಾ ಕೂಪದಲ್ಲಿ ಅಮೆರಿಕ

ಬೈಡನ್ ಅಧಿಕಾರ ಸ್ವೀಕರಿಸಿ ಸುಮಾರು 6 ತಿಂಗಳಾಗಿದೆ ಅಷ್ಟೇ. ಜೋ ಬೈಡನ್ ಅಧಿಕಾರ ಸ್ವೀಕರಿಸಿದ ತಕ್ಷಣ ಅಮೆರಿಕನ್ನರ ಸಮಸ್ಯೆಗಳು ಸರಿಯಾಗುವುದಿಲ್ಲ. ಏಕೆಂದರೆ ಅಮೆರಿಕ ಶತಮಾನದಲ್ಲೇ ಎದುರಿಸದಷ್ಟು ದೊಡ್ಡ ಸಂಕಷ್ಟಕ್ಕೆ ಸಿಲುಕಿದೆ. ಇದನ್ನೆಲ್ಲಾ ಬಗೆಹರಿಸಲು ಹಲವು ವರ್ಷಗಳೇ ಬೇಕು. ಅದರಲ್ಲೂ ಟ್ರಂಪ್ ಅಮೆರಿಕದ ಘನತೆಗೆ ಹಾಗೂ ಅಮೆರಿಕ ಅರ್ಥ ವ್ಯವಸ್ಥೆಗೆ ಮಾಡಿದ ಘಾಸಿಗೆ ಮುಲಾಮು ಹಚ್ಚಬೇಕು. ಹೀಗಾಗಿ ಬೈಡನ್‌ಗೆ ಅಮೆರಿಕ ಅಧ್ಯಕ್ಷರ ಖುರ್ಚಿ ಹೂವಿನ ಹಾಸಿಗೆ ಆಗಿಲ್ಲ, ಮುಳ್ಳಿನ ಹಾದಿಯಾಗಿದೆ ಎನ್ನುತ್ತಾರೆ ಅರ್ಥಶಾಸ್ತ್ರಜ್ಞರು. ಇದನ್ನೆಲ್ಲಾ ಎದುರಿಸಿ, ಅಮೆರಿಕ ಹಾಗೂ ಅಮೆರಿಕನ್ನರನ್ನು ರಕ್ಷಿಸುವ ಹೊಣೆ ಜೋ ಬೈಡನ್ ಹೆಗಲ ಮೇಲಿದೆ.

ಮೂರುವರೆ ಕೋಟಿ ಸೋಂಕಿತರು..!

ಮೂರುವರೆ ಕೋಟಿ ಸೋಂಕಿತರು..!

ಅಮೆರಿಕದ ಸ್ಥಿತಿ ಭೀಕರವಾಗಿದ್ದು, ಸೋಂಕಿತರ ಸಾವಿನ ಸಂಖ್ಯೆಯ ವಿಚಾರದಲ್ಲಿ ಹೊಸ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಜಗತ್ತಿನಾದ್ಯಂತ 19 ಕೋಟಿ 77 ಲಕ್ಷ ಸೋಂಕಿತರು ಪತ್ತೆಯಾಗಿದ್ರೆ, ಕೇವಲ ಅಮೆರಿಕದಲ್ಲೇ ಈ ಸಂಖ್ಯೆ 3 ಕೋಟಿಗೂ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಸೋಂಕಿತರ ಸಂಖ್ಯೆ ಜೊತೆ ಸಕ್ರಿಯ ಕೇಸ್‌ಗಳ ಸಂಖ್ಯೆ ಕೂಡ ಭಯ ಹುಟ್ಟಿಸುತ್ತಿದೆ. 53 ಲಕ್ಷ ಆಕ್ಟಿವ್ ಕೇಸ್‌ಗಳು ಅಮೆರಿಕದ ಆಸ್ಪತ್ರೆಗಳನ್ನೆಲ್ಲಾ ತುಂಬುವಂತೆ ಮಾಡಿದೆ. ಇಷ್ಟೇ ಆಗಿದ್ದರೆ ಪರಿಸ್ಥಿತಿ ನಿಭಾಯಿಸಬಹುದಿತ್ತೋ ಏನೋ, ಆದರೆ ಈವರೆಗೂ 6 ಲಕ್ಷ 28 ಸಾವಿರ ಅಮೆರಿಕನ್ನರು ಡೆಡ್ಲಿ ಕೊರೊನಾಗೆ ಉಸಿರು ಚೆಲ್ಲಿದ್ದಾರೆ. ಇದು ಪರಿಸ್ಥಿತಿಯ ಭಯಾನಕತೆಯನ್ನು ಬಿಡಿಸಿಡುತ್ತಿದೆ.

ಪ್ರಜೆಗಳೇ ಇದು ಸುವರ್ಣಾವಕಾಶ! ವ್ಯಾಕ್ಸಿನ್ ಹಾಕಿಸಿಕೊಳ್ಳಿ, 7000 ರೂ. ಪಡೆದುಕೊಳ್ಳಿ!ಪ್ರಜೆಗಳೇ ಇದು ಸುವರ್ಣಾವಕಾಶ! ವ್ಯಾಕ್ಸಿನ್ ಹಾಕಿಸಿಕೊಳ್ಳಿ, 7000 ರೂ. ಪಡೆದುಕೊಳ್ಳಿ!

  ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯಲ್ಲಿ ರಾಜೀವ್ ಗಾಂಧಿ ಹೆಸರನ್ನೇ ತೆಗೆದ ಮೋದಿ | Oneindia Kannada
  ನಂ. 2 ಆಗತ್ತಾ ಅಮೆರಿಕ..?

  ನಂ. 2 ಆಗತ್ತಾ ಅಮೆರಿಕ..?

  ಅಮೆರಿಕದ ಸದ್ಯದ ಪರಿಸ್ಥಿತಿಯನ್ನು ಗಮನಿಸುತ್ತಿದ್ದರೆ, ಅಮೆರಿಕದ ಆರ್ಥಿಕತೆಗೆ ಬಲವಾದ ಪೆಟ್ಟು ಬಿದ್ದಿರುವುದು ಖಚಿತವಾಗುತ್ತಿದೆ. ಹೀಗಾಗಿ ಅಮೆರಿಕದ ಪರಮ ಶತ್ರು ಚೀನಾ ಅಮೆರಿಕದ ನಂಬರ್ 1 ಸ್ಥಾನವನ್ನ ಆಕ್ರಮಿಸಲು ತುದಿಗಾಗಲಲ್ಲಿ ನಿಂತಿದೆ. ಇದು ಕೂಡ ಅಮೆರಿಕದ ನಾಯಕರನ್ನ ಹಾಗೂ ಉದ್ಯಮಿಗಳನ್ನು ಕಂಗೆಡಿಸಿದೆ. ಹಾಗೇ ಕೊರೊನಾ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಜಗತ್ತು ಆರ್ಥಿಕ ಹಿಂಜರಿತ ಕಾಣುತ್ತಿದ್ದರೆ ಚೀನಾದ ಜಿಡಿಪಿ ಮಾತ್ರ ಗಮನಾರ್ಹ ಬೆಳವಣಿಗೆ ಕಾಣುತ್ತಿರುವುದು ಆತಂಕ ಹೆಚ್ಚಾಗುವಂತೆ ಮಾಡಿದೆ. ಇದು ಅಮೆರಿಕದ ನಂಬರ್ 1 ಸ್ಥಾನ ಅಲುಗಾಡಿಸುವ ಜೊತೆಗೆ, ಜಗತ್ತಿನಲ್ಲಿ ಹೊಸ ಆರ್ಥಿಕ ಶಕ್ತಿಯ ಉಗಮಕ್ಕೂ ಕಾರಣವಾಗುತ್ತಿದೆ.

  English summary
  Americans in fear about corona 4th wave, where cases are rising day by day.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X