• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಾಸ್ಕ್ ಹಾಕೋದು ಬೇಡ ಅಂದ ಸರ್ಕಾರ! ಯಾವ ದೇಶದಲ್ಲಿ ಗೊತ್ತಾ?

|

ಜಗತ್ತಿನಾದ್ಯಂತ ಕೊರೊನಾ ಬಿರುಗಾಳಿಯಂತೆ ಹಬ್ಬುತ್ತಿದೆ, ಅದ್ರಲ್ಲೂ ಅಮೆರಿಕ ಕೊರೊನಾ ಕೂಪವಾಗಿ ಇಷ್ಟು ದಿನ ನಲುಗಿ ಹೋಗಿತ್ತು. ಆದರೆ ಈಗೀಗ ಅಮೆರಿಕದ ಪರಿಸ್ಥಿತಿ ಸುಧಾರಿಸುತ್ತಿದ್ದು, ಬೈಡನ್ ಸರ್ಕಾರ ಅಲರ್ಟ್ ಆಗಿದೆ. ಅಮೆರಿಕದಲ್ಲಿ ಅತಿವೇಗ ಹಾಗೂ ಶೀಘ್ರವಾಗಿ ವ್ಯಾಕ್ಸಿನ್ ವಿತರಣೆ ಮಾಡಲಾಗುತ್ತಿದ್ದು, ಡೆಡ್ಲಿ ಕೊರೊನಾ ಹರಡುವುದನ್ನು ತಡೆಯಲು ಕಠಿಣ ಕ್ರಮಗಳನ್ನು ಕೈಗೊಂಡಿದೆ.

ಈ ಹೊತ್ತಲ್ಲೇ ಅಮೆರಿಕನ್ನರಿಗೆ ಖುಷಿ ನೀಡುವ ಸುದ್ದಿಯೊಂದನ್ನು ಬೈಡನ್ ನೀಡಿದ್ದು, ಸಂಪೂರ್ಣ ವ್ಯಾಕ್ಸಿನ್ ಹಾಕಿಸಿಕೊಂಡಿರುವವರು ಇನ್ನುಮುಂದೆ ಮಾಸ್ಕ್‌ ಹಾಕುವ ಅಗತ್ಯತೆ ಇಲ್ಲ ಎನ್ನಲಾಗಿದೆ.

ಅಂದರೆ 2 ಡೋಸ್ ಲಸಿಕೆ ಪಡೆದ ವ್ಯಕ್ತಿ ಇನ್ನುಮುಂದೆ ಅಮೆರಿಕದಲ್ಲಿ ಮಾಸ್ಕ್ ಹಾಕದೆ ಓಡಾಡಬಹುದು. ಆದರೆ ಅಪರಿಚಿತರು ಹಾಗೂ ಗುಂಪುಗಳಲ್ಲಿ ಸೇರುವ ಸಂದರ್ಭ ಬಂದರೆ ಅಲ್ಲಿ ಮಾಸ್ಕ್ ಕಡ್ಡಾಯವಾಗಿ ಹಾಕಬೇಕು ಎಂದು ಸಲಹೆ ನೀಡಲಾಗಿದೆ.

ಏಕೆಂದರೆ ಅಮೆರಿಕದಲ್ಲಿ ಪ್ರಜೆಗಳಿಗೆ ಕಡ್ಡಾಯವಾಗಿ ಮಾಸ್ಕ್ ಹಾಕಲು ಆಜ್ಞೆ ಹೊರಡಿಸುವಂತಿಲ್ಲ, ಆದರೆ ವಿನಂತಿ ಮಾಡಬಹುದಾಗಿದೆ. ಹೀಗಾಗಿ ಬೈಡನ್ ಸರ್ಕಾರ ಮನವೊಲಿಸುವ ತಂತ್ರ ಅನುಸರಿಸುತ್ತಿದೆ. ಮತ್ತೊಂದ್ಕಡೆ ಅಮೆರಿಕ ಸರ್ಕಾರದ ಅಧೀನದಲ್ಲಿ ಕೆಲಸ ಮಾಡುವ ನೌಕರರಿಗೆ ಕೆಲ ತಿಂಗಳ ಹಿಂದೆ ಕಚೇರಿ ವೇಳೆಯಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿತ್ತು.

ಯುವಕರ ಮನವೊಲಿಸಲು ಗಿಮಿಕ್..!

ಯುವಕರ ಮನವೊಲಿಸಲು ಗಿಮಿಕ್..!

ಅಮೆರಿಕದಲ್ಲಿ ಕೊರೊನಾ ತೊಲಗಿಸಲು ವ್ಯಾಕ್ಸಿನ್ ಮಂತ್ರ ಜಪಿಸಲಾಗುತ್ತಿದೆ. ಆದರೆ ಯುವ ಸಮುದಾಯಕ್ಕೆ ಇದನ್ನು ಮನಮುಟ್ಟುವಂತೆ ತಿಳಿಸುವುದು ಕಷ್ಟ ಕಷ್ಟ. ಹೀಗಾಗಿ ಅಮೆರಿಕದಲ್ಲಿ ವ್ಯಾಕ್ಸಿನ್ ಹಾಕಲು ನಾನಾ ತಂತ್ರ ಅನುಸರಿಸಲಾಗುತ್ತಿದೆ. ಕೆಲವರು ವ್ಯಾಕ್ಸಿನ್ ಹಾಕಿಸಿಕೊಂಡವರಿಗೆ ಉಚಿತವಾಗಿ ಗಾಂಜಾ ವಿತರಣೆ ಮಾಡಿದರೆ, ವರ್ಜೀನಿಯ ರಾಜ್ಯದಲ್ಲಿ ವ್ಯಾಕ್ಸಿನ್ ಪಡೆಯುವ ಯುವಕರಿಗೆ ಗಿಫ್ಟ್ ರೂಪದಲ್ಲಿ ಸುಮಾರು 7500 ರೂಪಾಯಿ ಮೊತ್ತದ ಬಾಂಡ್ ನೀಡಲಾಗುತ್ತಿದೆ. ಹೀಗೆ ಅಮೆರಿಕದ ಭವಿಷ್ಯ ರೂಪಿಸುವ ಯುವ ಸಮುದಾಯ ಹಾಗೂ ಪ್ರಜೆಗಳನ್ನು ಕೊರೊನಾ ಲಸಿಕೆ ಪಡೆಯುವಂತೆ ಒಪ್ಪಿಸಲಾಗುತ್ತಿದೆ.

ಗಾಂಜಾ ಗಿಫ್ಟ್ ಕೊಟ್ಟಿದ್ದರು..!

ಗಾಂಜಾ ಗಿಫ್ಟ್ ಕೊಟ್ಟಿದ್ದರು..!

ಅಮೆರಿಕದ ನ್ಯೂಯಾರ್ಕ್ ನಿವಾಸಿ, ಗಾಂಜಾ ಪರ ಹೋರಾಟಗಾರ ಟಾಡ್ ಹಿಂಡೆನ್ ಎಂಬ ವ್ಯಕ್ತಿ ವ್ಯಾಕ್ಸಿನ್ ಪಡೆಯುವ ಯುವಕರಿಗೆ ಗಾಂಜಾ ವಿತರಿಸಿ ಸುದ್ದಿಯಾಗಿದ್ದ. ವ್ಯಾಕ್ಸಿನ್ ಪಡೆಯಲು ಯುವ ಸಮುದಾಯದ ಆಸಕ್ತಿ ಕುಗ್ಗಿದೆ ಎಂಬ ಆರೋಪದ ಬೆನ್ನಲ್ಲೇ ಟಾಡ್ ಹಿಂಡೆನ್ ಇಂತಹ ಪ್ರಯತ್ನ ಮಾಡಿದ್ದ. ಕೊರೊನಾ ಲಸಿಕೆ ಪಡೆದವರಿಗೆ ಆಫರ್ ನೀಡಿ ಸುಮಾರು ಕಾಲು ಕೆ.ಜಿ. ಗಾಂಜಾ ಉಚಿತವಾಗಿ ಹಂಚಿದ್ದರು ಟಾಡ್ ಹಿಂಡೆನ್. ಇದರಿಂದ ವ್ಯಾಕ್ಸಿನ್ ಪಡೆಯುವವರ ಸಂಖ್ಯೆ ಹೆಚ್ಚಲಿದೆ ಎಂದು ಟಾಡ್ ಹಿಂಡೆನ್ ಅಭಿಪ್ರಾಯಪಟ್ಟಿದ್ದರು.

ಅಮೆರಿಕದಲ್ಲಿ ಗಾಂಜಾ ಲೀಗಲ್..!

ಅಮೆರಿಕದಲ್ಲಿ ಗಾಂಜಾ ಲೀಗಲ್..!

ಅಮೆರಿಕದ ವಾಣಿಜ್ಯ ರಾಜಧಾನಿ ನ್ಯೂಯಾರ್ಕ್‌ನಲ್ಲಿ ಗಾಂಜಾ ಬಳಸಲು ಅನುಮತಿ ಸಿಕ್ಕಿದೆ. ಏಪ್ರಿಲ್ ತಿಂಗಳ ಆರಂಭದಲ್ಲಿ ಗಾಂಜಾಗೆ ಲೀಗಲ್ ಸ್ಟೇಟಸ್ ಕೊಟ್ಟ ಮಸೂದೆ ನ್ಯೂಯಾರ್ಕ್‌ನ ಅಸೆಂಬ್ಲಿಯಲ್ಲಿ ಪಾಸ್ ಆಗಿತ್ತು. ಹೀಗಾಗಿಯೇ ಟಾಡ್ ಹಿಂಡೆನ್ & ಟೀಂ ಉಚಿತವಾಗಿ ಗಾಂಜಾ ಹಂಚುವ ಸಾಹಸ ಮಾಡಿದೆ. ಅಮೆರಿಕದ 50 ರಾಜ್ಯಗಳ ಪೈಕಿ ಈವರೆಗೂ 15 ರಾಜ್ಯಗಳಲ್ಲಿ ಗಾಂಜಾ ಲೀಗಲ್ ಆಗಿದೆ. ಇದನ್ನು ಬಿಟ್ಟರೆ ಅಮೆರಿಕದ ಬಹುತೇಕ ರಾಜ್ಯಗಳಲ್ಲಿ ಗಾಂಜಾ ಔಷಧ ತಯಾರಿಕೆಗೆ ಬಳಸಬಹುದು. ಇತ್ತೀಚಿನ ದಿನದಲ್ಲಿ ಅಮೆರಿಕದ ಒಂದೊಂದೇ ರಾಜ್ಯಗಳು ಗಾಂಜಾ ಲೀಗಲ್ ಮಾಡುತ್ತಿವೆ.

ವಿಶ್ವಯದ್ಧದ ನಂತರ ಅತಿಹೆಚ್ಚು ಸಾವು

ವಿಶ್ವಯದ್ಧದ ನಂತರ ಅತಿಹೆಚ್ಚು ಸಾವು

ಮಿತ್ರಪಡೆಗಳ ಪರ 2ನೇ ಮಹಾಯುದ್ಧದಲ್ಲಿ ಅಖಾಡ ಪ್ರವೇಶಿಸಿದ್ದ ದೊಡ್ಡಣ್ಣ ಅಮೆರಿಕ ಭಾರಿ ಸಾವು, ನೋವು ಅನುಭವಿಸಿತ್ತು. ಅಂದಾಜು 4 ಲಕ್ಷಕ್ಕೂ ಹೆಚ್ಚು ಅಮೆರಿಕನ್ನರು 2ನೇ ವಿಶ್ವಯುದ್ಧದಲ್ಲಿ ಮೃತಪಟ್ಟಿದ್ದರು. ಆದರೆ ಕೊರೊನಾ ಇದಕ್ಕಿಂತಲೂ ಹೆಚ್ಚಿನ ಸಾವು ನೋವು ಉಂಟುಮಾಡಿದೆ. 5 ಲಕ್ಷ 80 ಸಾವಿರಕ್ಕೂ ಹೆಚ್ಚು ಜನ ಅಮೆರಿಕದಲ್ಲಿ ಬಲಿಯಾಗಿದ್ದಾರೆ. ಅಮೆರಿಕದ ಕೆಲ ಪ್ರದೇಶಗಳಲ್ಲಿ ಕೊರೊನಾ ಕಾರಣದಿಂದ ಮೃತಪಟ್ಟವರನ್ನು ಮಣ್ಣು ಮಾಡುವುದಕ್ಕೂ ಜಾಗದ ಕೊರತೆ ಎದುರಾಗಿತ್ತು. ಇಂತಹ ಸಂದಿಗ್ಧ ಸ್ಥಿತಿಯಲ್ಲೇ ಅಮೆರಿಕದ ಅಧ್ಯಕ್ಷ ಬೈಡನ್ ಮತ್ತೊಮ್ಮೆ ಪುಟಿದೇಳುವ ಧೈರ್ಯ ತೋರಿದ್ದಾರೆ.

English summary
CDC says, many Americans can go out without mask after the vaccination.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X