• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹತ್ಯೆಗೀಡಾದ ಭಾರತ ಮೂಲದ ಪೊಲೀಸ್ ಅಧಿಕಾರಿಯನ್ನು 'ಹೀರೋ' ಎಂದ ಟ್ರಂಪ್

|

ವಾಷಿಂಗ್ಟನ್, ಜನವರಿ 9: ಇತ್ತೀಚೆಗೆ ಕ್ಯಾಲಿಫೋರ್ನಿಯಾದಲ್ಲಿ ಹತ್ಯೆಗೀಡಾದ ಭಾರತದ ಮೂಲದ ಅಮೆರಿಕನ್ ಪೊಲೀಸ್ ಅಧಿಕಾರಿ ಬಗ್ಗೆ ಪ್ರಸ್ತಾವ ಮಾಡಿರುವ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್, ಮೆಕ್ಸಿಕೋ ಗಡಿಯಲ್ಲಿ ತಾವು ನಿರ್ಮಿಸಬೇಕು ಎಂದು ಉದ್ದೇಶಿಸಿರುವ ಗೋಡೆಗೆ ಸಮರ್ಥನೆಯಾಗಿ ಆ ಘಟನೆಯನ್ನು ಉದಾಹರಿಸಿದ್ದಾರೆ.

ಅಕ್ರಮ ವಲಸಿಗನಿಂದ ಆ ಪೊಲೀಸ್ ಅಧಿಕಾರಿಯ ಹತ್ಯೆಯಾಯಿತು. 5.7 ಬಿಲಿಯನ್ ಅಮೆರಿಕನ್ ಡಾಲರ್ ವೆಚ್ಚದ ಗೋಡೆಯನ್ನು ಮೆಕ್ಸಿಕೋ ಗಡಿಯಲ್ಲಿ ನಿರ್ಮಿಸಿದರೆ ಅಮೆರಿಕವು ಸುರಕ್ಷಿತವಾಗಿರುತ್ತದೆ. ಸದ್ಯಕ್ಕೆ ಗಡಿಯಲ್ಲಿ ದಿನದಿನಕ್ಕೂ ಬಿಕ್ಕಟ್ಟು ಉಲ್ಬಣಿಸುತ್ತಿದೆ. ಇದರಿಂದ ಹತ್ತಾರು ಲಕ್ಷ ಅಮೆರಿಕನ್ನರಿಗೆ ತೊಂದರೆ ಆಗುತ್ತಿದೆ ಎಂದಿದ್ದಾರೆ.

ಕ್ಯಾಲಿಫೋರ್ನಿಯಾದಲ್ಲಿ ಬಂದೂಕುಧಾರಿಯಿಂದ ಗುಂಡಿನ ದಾಳಿ : ಮೂವರ ಹತ್ಯೆ

ಕ್ರಿಸ್ ಮಸ್ ನ ಮರುದಿನ ಮೂವತ್ಮೂರು ವರ್ಷದ ಭಾರತೀಯ ಮೂಲದ ಪೊಲೀಸ್ ಅಧಿಕಾರಿ ಕಾರ್ಪೊರಲ್ ರೊನಿಲ್ 'ರೊನ್' ಸಿಂಗ್ ರನ್ನು ಟ್ರಾಫಿಕ್ ಮಧ್ಯೆಯೇ ಗುಂಡಿಟ್ಟು ಕೊಲ್ಲಲಾಗಿತ್ತು. ಅಕ್ರಮ ವಲಸಿಗನಾದ ಗುಸ್ತಾವೋ ಪೆರೆಜ್ ಅರಿಯಾಗ ಎಂಬಾತ ತನ್ನ ದೇಶ ಮೆಕ್ಸಿಕೋಗೆ ಪಲಾಯನ ಮಾಡಲು ಯೋಜನೆ ರೂಪಿಸುವಾಗ ಈ ಕೃತ್ಯ ಎಸಗಿದ್ದ.

ಅಕ್ರಮ ವಲಸಿಗನಿಂದ ಕ್ರಿಸ್ ಮಸ್ ಮರುದಿನ ಕ್ಯಾಲಿಫೋರ್ನಿಯಾದಲ್ಲಿ ಒಬ್ಬ ಯುವ ಪೊಲೀಸ್ ಅಧಿಕಾರಿಯ ಕೊಲೆ ಆಗಿದ್ದರಿಂದ ಅಮೆರಿಕದ ಹೃದಯವೇ ಛಿದ್ರವಾಗಿತ್ತು. ಹತ್ಯೆ ಮಾಡಿದಾತ ಗಡಿ ದಾಟಿ ಬಂದಿದ್ದ. "ಅಮೆರಿಕದ ಹೀರೋವೊಬ್ಬನ ಜೀವನವನ್ನು ಈ ದೇಶದಲ್ಲಿ ಇರಲು ಹಕ್ಕಿಲ್ಲದ ವ್ಯಕ್ತಿಯೊಬ್ಬ ಕಸಿದಿದ್ದ" ಎಂದು ಟ್ರಂಪ್ ಹೇಳಿದ್ದಾರೆ.

ಅಕ್ರಮ ವಲಸಿಗರಿಂದ ಆದ ಅಪರಾಧ ಕೃತ್ಯಗಳನ್ನು ಇನ್ನಷ್ಟು ಪಟ್ಟಿ ಮಾಡಿ ಹೇಳಿದ ಟ್ರಂಪ್, ತಾವು ನಿರ್ಮಿಸಲು ಉದ್ದೇಶಿಸಿರುವ ಗಡಿಯಲ್ಲಿನ ಗೋಡೆಗೆ ಆ ಅಂಶಗಳನ್ನು ಸಮರ್ಥನೆಯಾಗಿ ಉದಾಹರಿಸಿದರು.

ಅಮೆರಿಕದಲ್ಲಿ ಸರಕಾರದ 'ಅಂಗಡಿ' ಭಾಗಶಃ ಬಂದ್, ಎಲ್ಲ ಟ್ರಂಪ್ ಮಹಿಮೆ!

ಗಡಿಯಲ್ಲಿ ತುರ್ತು ಪರಿಸ್ಥಿತಿ ಎಂದು ಘೋಷಣೆ ಮಾಡಲು ಕೆಲ ದಿನ ಕಳೆದರು ಟ್ರಂಪ್. ಹೀಗೆ ಮಾಡಿದರೆ ಅಧ್ಯಕ್ಷ ಟ್ರಂಪ್ ಕಾಂಗ್ರೆಸ್ ನಲ್ಲಿ ಮಾಡಿದ ತೀರ್ಮಾನವನ್ನೂ ಮೀರಿಯೂ ನಿರ್ಧಾರ ಕೈಗೊಳ್ಳಲು ಅನುಕೂಲ ಆಗುತ್ತದೆ. ಏಕೆಂದರೆ, ಅಮೆರಿಕ- ಮೆಕ್ಸಿಕೋ ಗಡಿಯಲ್ಲಿ ಗೋಡೆ ನಿರ್ಮಾಣ ಮಾಡುವುದಕ್ಕೆ ಸೈನ್ಯದಿಂದ ಹಣ ತೆಗೆದುಕೊಳ್ಳುವುದಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತದೆ.

ಕಳೆದ ವಾರ ಕಾರ್ಪೊರಲ್ ರೊನಿಲ್ ಸಿಂಗ್ ರ ಕುಟುಂಬದವರಿ ಹಾಗೂ ಸಹೋದ್ಯೋಗಿಗಳ ಜತೆ ಟ್ರಂಪ್ ಮಾತನಾಡಿದ್ದಾರೆ. ಸಿಂಗ್ ಸೇವೆಯನ್ನು ಕೊಂಡಾಡಿದ್ದಾರೆ. ಇದೇ ವೇಳೆ ಅಕ್ರಮ ವಲಸಿಗ ಗುಸ್ತಾವೋ ಪೆರೆಜ್ ಅರಿಯಾಗನನ್ನು ಕ್ಯಾಲಿಫೋರ್ನಿಯಾದ ಕೆರ್ನ್ ಕೌಂಟಿಯ ಆತನ ಮನೆಯಲ್ಲಿ ಬಂಧಿಸಲಾಗಿದೆ.

English summary
US President Donald Trump, escalating the battle over his border wall plan in a televised Oval Office address to the nation, referred to the murder of an Indian-American police officer in California by an illegal immigrant as he demanded $5.7 billion to fund the wall on the border with Mexico to keep the country safe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X