ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೊಮ್ಮೆ ಮಹಾ ಹಿಂಸಾಚಾರಕ್ಕೆ ಟ್ರಂಪ್ ಬೆಂಬಲಿಗರಿಂದ ಸ್ಕೆಚ್..?

|
Google Oneindia Kannada News

ವಾಷಿಂಗ್ಟನ್ ಜನವರಿ 17: ಜನವರಿ 6ರಂದು ಅಮೆರಿಕ ಸಂಸತ್ 'ಕ್ಯಾಪಿಟಲ್ ಹಿಲ್' ಕಟ್ಟಡದ ಮೇಲೆ ದಾಳಿ ನಡೆದಿರುವ ಘಟನೆ ಇನ್ನೂ ಹಸಿರಾಗಿರುವಾಗಲೇ ಮತ್ತೊಂದು ಮಹಾ ದಾಳಿ ಬಗ್ಗೆ ಹಿಂಟ್ ಸಿಕ್ಕಿದೆ. ಅಮೆರಿಕದ ತನಿಖಾ ಸಂಸ್ಥೆ ಎಫ್‌ಬಿಐ (FBI) ಈ ಬಗ್ಗೆ ವಾರ್ನಿಂಗ್ ಕೊಟ್ಟಿದೆ. ಹೀಗಾಗಿ ಅಮೆರಿಕದ 50 ರಾಜ್ಯಗಳ ರಾಜಧಾನಿಗಳಲ್ಲೂ ಹೈಅಲರ್ಟ್ ಘೋಷಿಸಿ, ಸೇನೆಯನ್ನು ನಿಯೋಜನೆ ಮಾಡಲಾಗಿದೆ.

ಕ್ಯಾಪಿಟಲ್ ಹಿಲ್ ಗಲಭೆಗೂ ಮುನ್ನ ಟ್ರಂಪ್ ನಡೆಸಿದ ಪ್ರಚೋದನಾಕಾರಿ ಭಾಷಣ, ಬೆಂಬಲಿಗರನ್ನ ಒಳಗೆ ನುಗ್ಗುವಂತೆ ಪ್ರೇರಿಪಿಸಿತ್ತು. ಟ್ರಂಪ್ ಮಾತು ಕೇಳಿ ಸಂಸತ್ ಒಳಗೆ ನುಗ್ಗಿದ್ದ ಟ್ರಂಪ್ ಬೆಂಬಲಿಗರು ಕೈಯಲ್ಲಿ ದೊಣ್ಣೆ ಗನ್ ಸೇರಿದಂತೆ ಮಾರಕಾಸ್ತ್ರ ಹಿಡಿದಿದ್ದರು.

ಟ್ರಂಪ್ ಬೆಂಬಲಿಗರಿಂದ ಮಹಾ ಹಿಂಸಾಚಾರಕ್ಕೆ ಮೊದಲೇ ನಡೆದಿತ್ತಾ ಸ್ಕೆಚ್..? ಟ್ರಂಪ್ ಬೆಂಬಲಿಗರಿಂದ ಮಹಾ ಹಿಂಸಾಚಾರಕ್ಕೆ ಮೊದಲೇ ನಡೆದಿತ್ತಾ ಸ್ಕೆಚ್..?

ಮಾತ್ರವಲ್ಲ ಸಂಸತ್ ಸದಸ್ಯರು ಕೂರುವ ಜಾಗದಲ್ಲಿ ಕೂತು ಸಿಗರೇಟ್ ಸೇದಿದ್ದಾರೆ, ಸಿಗಾರ್ ಹೊಡೆದಿದ್ದಾರೆ. ಕಚೇರಿಯ ದಾಖಲೆಗಳನ್ನ ಚೆಲ್ಲಾಡಿ ದೊಡ್ಡ ವಿಪತ್ತನ್ನೇ ಸೃಷ್ಟಿಸಿದ್ದರು. ಈ ಘಟನೆ ನಡೆದು ಇನ್ನೂ 2 ವಾರ ಕಳೆದಿಲ್ಲ ಆಗಲೇ ಮತ್ತೊಂದು ಸಾಮೂಹಿಕ ಹಿಂಸಾಚಾರದ ಬಗ್ಗೆ ಹಿಂಟ್ ಸಿಕ್ಕಿದೆ. ಹೀಗಾಗಿ ಅಮೆರಿಕ ಅಲರ್ಟ್ ಆಗಿದೆ.

ಕಿಟಕಿಗಳು ಲಾಕ್, ನಿಷೇಧಾಜ್ಞೆ ಜಾರಿ

ಕಿಟಕಿಗಳು ಲಾಕ್, ನಿಷೇಧಾಜ್ಞೆ ಜಾರಿ

ಅಮೆರಿಕದಲ್ಲೂ ಭಾರತದಲ್ಲಿ ಇರುವಂತೆ ರಾಜ್ಯಗಳ ಶಾಸನ ಸಭೆ ನಡೆಸಲು ವಿಧಾನಸಭಾ ಕಟ್ಟಡಗಳು ಇವೆ. ಜನವರಿ 6ರಂದು 'ಕ್ಯಾಪಿಟಲ್ ಹಿಲ್' ಮೇಲೆ ದಾಳಿ ಮಾಡಿದ್ದ ಟ್ರಂಪ್ ಬೆಂಬಲಿಗರು ಈಗ ವಿಧಾನಸಭಾ ಕಟ್ಟಡಗಳನ್ನು ಟಾರ್ಗೆಟ್ ಮಾಡಿರುವುದು ಎಫ್‌ಬಿಐ ಅಧಿಕಾರಿಗಳಿಗೆ ಕನ್ಫರ್ಮ್ ಆಗಿದೆ. ಅಮೆರಿಕದಲ್ಲಿರುವ 50 ವಿಧಾನಸಭೆ ಕಟ್ಟಡಗಳ ಸುತ್ತಲೂ ಭಾರಿ ಪ್ರಮಾಣದಲ್ಲಿ ಸೇನೆ ನಿಯೋಜಿಸಲಾಗಿದೆ. ಅಷ್ಟು ಮಾತ್ರವಲ್ಲದೆ ಕಿಟಕಿಗಳಿಗೆ ಹಲಗೆ ಬಡಿದು, ಗಾಜು ಒಡೆದು ಉದ್ರಿಕ್ತರು ಒಳಗೆ ನುಗ್ಗದಂತೆ ಕ್ರಮ ಕೈಗೊಳ್ಳಲಾಗಿದೆ. ಇದು ಟ್ರಂಪ್ ಬೆಂಬಲಿಗರಿಗೆ ಒಳಗೊಳಗೆ ಕಿಚ್ಚು ಹೊತ್ತುವಂತೆ ಮಾಡಿದೆ.

ಸಂಸದರ ಮನೆಗಳಿಗೆ ಭದ್ರತೆ..?

ಸಂಸದರ ಮನೆಗಳಿಗೆ ಭದ್ರತೆ..?

ಕ್ಯಾಪಿಟಲ್ ಕಟ್ಟಡಗಳ ಭದ್ರತೆ ಜೊತೆ ಸಂಸದರು ಹಾಗೂ ಅಮೆರಿಕದ ಶಾಸಕರ ಮನೆಗಳಿಗೆ ಭದ್ರತೆ ಕೊಡಲು ಸೂಚಿಸಲಾಗಿದೆ. ಅದರಲ್ಲೂ ಟ್ರಂಪ್ ವಿರೋಧ ಕಟ್ಟಿಕೊಂಡವರ ಮನೆಗೆ ಭಾರಿ ಪ್ರಮಾಣದ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. ಏಕೆಂದರೆ ಈಗಾಗಲೇ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ ಮನೆ ಮೇಲೆ ಉದ್ರಿಕ್ತರ ಗುಂಪು ದಾಳಿ ನಡೆಸಿತ್ತು. ಇದೀಗ ಮತ್ತೆ ಟ್ರಂಪ್ ಬೆಂಬಲಿಗರು ಗನ್ ಹಿಡಿದು ಪ್ರತಿಭಟನೆ ನಡೆಸುವ ತಯಾರಿಯಲ್ಲಿದ್ದು ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಪ್ರಮುಖವಾಗಿ ಡೆಮಾಕ್ರಟಿಕ್ ನಾಯಕರ ಮನೆಗಳು ಟಾರ್ಗೆಟ್ ಆಗುವ ಮುನ್ಸೂಚನೆ ಇದ್ದು, ಸೂಕ್ತ ಭದ್ರತೆ ನೀಡಲು ಅಮೆರಿಕ ಸೇನೆ ಮುಂದಾಗಿದೆ.

ಪಾರ್ಲಿಮೆಂಟ್ ಒಳಗೆ ಸಿಗರೇಟ್, ಸಿಗಾರ್..!

ಪಾರ್ಲಿಮೆಂಟ್ ಒಳಗೆ ಸಿಗರೇಟ್, ಸಿಗಾರ್..!

ಕ್ಯಾಪಿಟಲ್ ಹಿಲ್ ಕೇವಲ ಕಟ್ಟಡವಲ್ಲ. ಅದು ಅಮೆರಿಕ ಹಾಗೂ ಅಮೆರಿಕನ್ನರ ಪಾಲಿಗೆ ಗರ್ಭಗುಡಿ ಇದ್ದಂತೆ. ಇಂತಹ ಪವಿತ್ರ ಸ್ಥಳದ ಮೇಲೆ ಟ್ರಂಪ್ & ಗ್ಯಾಂಗ್ ಅಟ್ಯಾಕ್ ಮಾಡಿತ್ತು. ಕ್ಯಾಪಿಟಲ್ ಹಿಲ್ ಗಲಭೆಗೆ ಮುನ್ನ ಟ್ರಂಪ್ ನಡೆಸಿದ ಪ್ರಚೋದನಾಕಾರಿ ಭಾಷಣ, ಬೆಂಬಲಿಗರನ್ನು ಒಳಗೆ ನುಗ್ಗುವಂತೆ ಪ್ರೇರಿಪಿಸಿತ್ತು. ಆದರೆ ಹೀಗೆ ಸಂಸತ್ ಕಟ್ಟಡದ ಒಳಗೆ ನುಗ್ಗಿದ ಟ್ರಂಪ್ ಬೆಂಬಲಿಗರು ಕೈಯಲ್ಲಿ ದೊಣ್ಣೆ, ಗನ್ ಸೇರಿದಂತೆ ಮಾರಕಾಸ್ತ್ರಗಳನ್ನ ಹಿಡಿದಿದ್ದರು. ಮಾತ್ರವಲ್ಲ ಸಂಸತ್ ಸದಸ್ಯರು ಕೂರುವ ಜಾಗದಲ್ಲಿ ಕೂತು ಸಿಗರೇಟ್ ಸೇದಿದ್ದಾರೆ, ಸಿಗಾರ್ ಹೊಡೆದಿದ್ದಾರೆ. ಇಷ್ಟು ಮಾತ್ರವಲ್ಲದೆ ಅಸಹ್ಯಕರವಾಗಿ ವರ್ತಿಸಿ, ಅವರೆಷ್ಟು ಸೈಕೋಗಳು ಎಂಬುದನ್ನ ಸಾಬೀತು ಮಾಡಿದ್ದಾರೆ. ಅದರಲ್ಲೂ ಸ್ಪೀಕರ್ ನ್ಯಾನ್ಸಿ ಪೆಲೋಸಿ ಕಚೇರಿ ಮೊದಲ ಟಾರ್ಗೆಟ್ ಆಗಿತ್ತು.

ಹಲವು ಬಾರಿ ದಾಳಿ ನಡೆದಿದೆ

ಹಲವು ಬಾರಿ ದಾಳಿ ನಡೆದಿದೆ

1814ರ ನಂತರ 1835ರಲ್ಲಿಯೂ ಕ್ಯಾಪಿಟಲ್ ಹಿಲ್ ಮೇಲೆ ಅಟ್ಯಾಕ್ ಆಗಿತ್ತು. ಅಂದಿನ ಅಧ್ಯಕ್ಷ ಆ್ಯಂಡ್ರೊ ಜಾಕ್ಸನ್ ಹತ್ಯೆ ಮಾಡಲು ಸಂಚು ಹೂಡಿದ್ದ ಸಂದರ್ಭದಲ್ಲಿ ಕಟ್ಟಡದ ಮೇಲೆ ದಾಳಿ ನಡೆದಿತ್ತು. ನಂತರ 1856, 1915, 1954, 1971, 1983 ಮತ್ತು 1998ರಲ್ಲಿ ಕ್ಯಾಪಿಟಲ್ ಹಿಲ್ ಮೇಲೆ ದಾಳಿ ನಡೆದಿದೆ. ಆದರೆ ಇದೀಗ ಟ್ರಂಪ್ ಬೆಂಬಲಿಗರು ನಡೆಸಿರುವ ದಾಳಿ ಅಮೆರಿಕದ ಮಾನ ಹರಾಜು ಹಾಕಿದೆ. ಹಾಗೇ ಈ ದಾಳಿ ಅಮೆರಿಕ ಇತಿಹಾಸದ ಪುಟ ಸೇರಿದೆ.

English summary
American states on alert for armed protests by Trump supporters. American forces are deployed to all 50 US states.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X