ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೊನಾಲ್ಡ್ ಟ್ರಂಪ್ ಗೆಲುವಿಗೆ ರೈತ ಸಮುದಾಯ ಶಪಥ

|
Google Oneindia Kannada News

ಈ ಬಾರಿ ಅಮೆರಿಕದಲ್ಲಿ ರೈತ ಸಮುದಾಯ ಟ್ರಂಪ್ ಪರ ನಿಲ್ಲುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆ ಪ್ರಮುಖ ಕಾರಣ ಟ್ರಂಪ್ ಕೈಗೊಂಡ ಚೀನಾ ವಿರೋಧಿ ನಿಲುವು. ಅಂದಹಾಗೆ ಅಮೆರಿಕೆಗೂ, ರೈತರಿಗೂ ಎಲ್ಲಿಂದೆಲ್ಲಿಯ ಸಂಬಂಧ..? ಅನ್ನೋ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು. ಆದರೆ ಅದಕ್ಕೆಲ್ಲಾ ಉತ್ತರ ಇಲ್ಲಿದೆ. ಜಗತ್ತಿನ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಅಮೆರಿಕದಲ್ಲಿ ಹಳ್ಳಿಗಳಲ್ಲಿ ವಾಸಿಸುವವರು ಹಾಗೂ ಕೃಷಿ ಪ್ರಧಾನ ಕುಟುಂಬದಲ್ಲಿ ಬದುಕುವವರು ಕಡಿಮೆ. ಆದರೂ ಅಲ್ಲಿನ ರೈತ ಸಮುದಾಯ ಇಂದಿಗೂ ದೊಡ್ಡ ಶಕ್ತಿಯಾಗಿ ಉಳಿದಿದೆ.

ಈಗ ಅಮೆರಿಕ ಅಧ್ಯಕ್ಷರ ಆಯ್ಕೆಯಲ್ಲೂ ಆ ರೈತರ ಪಾತ್ರ ಬಹುದೊಡ್ಡದು. ಅಷ್ಟಕ್ಕೂ ಕಳೆದ ಕೆಲ ವರ್ಷಗಳಿಂದ ಕುತಂತ್ರಿ ಚೀನಾ ಜೊತೆಗೆ ಟ್ರೇಡ್ ವಾರ್ ಅಂದರೆ ವಾಣಿಜ್ಯ ಸಮರ ನಡೆಸಿದ್ದರು ಅಮೆರಿಕ ಅಧ್ಯಕ್ಷ ಟ್ರಂಪ್. ಇದರ ಪರಿಣಾಮವನ್ನು ಅಮೆರಿಕದ ರೈತರು ಕೂಡ ಅನುಭವಿಸಿದ್ದರು. ಅದರಲ್ಲೂ ಸೋಯಾ ಬೆಳೆಗಾರರಿಗೆ ಬಿಗ್ ಲಾಸ್ ಆಗಿತ್ತು. ಆದರೆ ಕೆಲ ತಿಂಗಳ ಹಿಂದೆ ಚೀನಾ ಹಾಗೂ ಅಮೆರಿಕದ ನಡುವೆ ವಾಣಿಜ್ಯ ಒಪ್ಪಂದ ಏರ್ಪಟ್ಟು, ಹಲವು ಮಹತ್ವದ ತೀರ್ಮಾನಗಳನ್ನ ಕೈಗೊಳ್ಳಲಾಗಿದೆ.

ಭಾರತೀಯರ ಹೃದಯ ಗೆದ್ದರೆ ಮಾತ್ರ ಅಮೆರಿಕ ಅಧ್ಯಕ್ಷರಾಗಲು ಸಾಧ್ಯ..!ಭಾರತೀಯರ ಹೃದಯ ಗೆದ್ದರೆ ಮಾತ್ರ ಅಮೆರಿಕ ಅಧ್ಯಕ್ಷರಾಗಲು ಸಾಧ್ಯ..!

ಇದರಲ್ಲಿ ಪ್ರಮುಖವಾಗಿ ಅಮೆರಿಕದಿಂದ ಸೋಯಾ ಖರೀದಿ ಕೂಡ ಸೇರಿದೆ. ಈ ಒಪ್ಪಂದದ ನಂತರ ಅಮೆರಿಕದಿಂದ ಚೀನಾ ಭಾರಿ ಪ್ರಮಾಣದಲ್ಲಿ ಸೋಯಾ ಖರೀದಿಗೆ ಮುಂದಾಗಿದ್ದು, ಟ್ರಂಪ್ ಕ್ರಮದಿಂದಲೇ ನಮಗೆ ಲಾಭವಾಗುತ್ತಿದೆ ಅಂತಾ ಅಲ್ಲಿನ ರೈತ ಸಮುದಾಯ ಟ್ರಂಪ್ ಬೆಂಬಲಕ್ಕೆ ನಿಲ್ಲುತ್ತಿದೆ.

ಟ್ರಂಪ್ ವಾರ್ನಿಂಗ್‌ಗೆ ಬೆಚ್ಚಿತ್ತು ಚೀನಾ..!

ಟ್ರಂಪ್ ವಾರ್ನಿಂಗ್‌ಗೆ ಬೆಚ್ಚಿತ್ತು ಚೀನಾ..!

ಬ್ಯುಸಿನೆಸ್ ಎಂದರೆ ಹಾಗೇ, 10 ರೂಪಾಯಿ ಹಾಕಿ 100 ರೂಪಾಯಿ ಲಾಭ ತೆಗೆಯೋದು. ಆದರೆ ಚೀನಾ ಹಂಗಲ್ಲ, 10 ಪೈಸೆ ಬಂಡವಾಳ ಹಾಕಿ 1000 ರೂಪಾಯಿಗೆ ಸ್ಕೆಚ್ ಹಾಕೋದು ಗುಳ್ಳೆ ನರಿ ಚೀನಾದ ಸ್ಕೆಚ್. ಹೀಗೆ ಚೀನಾ ತಾನು ತಯಾರಿಸಿದ ಉತ್ಪನ್ನಗಳಿಗೆ ಕೋಟಿ, ಕೋಟಿ ಬೆಲೆ ಇಟ್ಟು ಅಮೆರಿಕ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿತ್ತು. ಆದರೆ ಅಮೆರಿಕದಿಂದ ಯಾವುದೇ ಖರೀದಿ ಮಾಡಲು ಚೀನಾ ಸಿದ್ಧವಿರಲಿಲ್ಲ. ಈ ಕಾರಣಕ್ಕೆ ಚೀನಾ-ಅಮೆರಿಕ ನಡುವೆ ವೈಮನಸ್ಸು ಸ್ಫೋಟಗೊಂಡಿತ್ತು. ಕಚ್ಚಾ ವಸ್ತುಗಳನ್ನು ಬೇರೆ ದೇಶಗಳಿಂದ ಕಡಿಮೆ ಬೆಲೆ ಆಮದು ಮಾಡಿಕೊಳ್ಳುತ್ತಿದ್ದ ಚೀನಾ, ಅದೇ ಕಚ್ಚಾ ವಸ್ತುಗಳನ್ನ ಸಿದ್ಧವಸ್ತುಗಳನ್ನಾಗಿ ಮಾಡಿ ಹೆಚ್ಚಿನ ಬೆಲೆಗೆ ಅಮೆರಿಕದಲ್ಲಿ ಮಾರಾಟ ಮಾಡುತ್ತಿತ್ತು. ಆದರೆ ಟ್ರಂಪ್ ಇದಕ್ಕೆಲ್ಲಾ ಬ್ರೇಕ್ ಹಾಕಿದ್ದರು.

ಟ್ರಂಪ್ ಮತ್ತೆ ಅಧ್ಯಕ್ಷರಾಗೋದು ಗ್ಯಾರಂಟಿ..? ನಾಸ್ಟ್ರಡಾಮಸ್ ಕೂಡ ಇದನ್ನೇ ಹೇಳಿದ್ದನಾ..?ಟ್ರಂಪ್ ಮತ್ತೆ ಅಧ್ಯಕ್ಷರಾಗೋದು ಗ್ಯಾರಂಟಿ..? ನಾಸ್ಟ್ರಡಾಮಸ್ ಕೂಡ ಇದನ್ನೇ ಹೇಳಿದ್ದನಾ..?

ಸೋಯಾ ಬಗ್ಗೆ ಕಾಳಜಿ ಏಕೆ..?

ಸೋಯಾ ಬಗ್ಗೆ ಕಾಳಜಿ ಏಕೆ..?

ನಮ್ಮಲ್ಲಿ ಕಬ್ಬು, ಹತ್ತಿ, ಭತ್ತ ಬೆಳೆದಂತೆ ಅಮೆರಿಕದಲ್ಲಿ ಸೋಯಾ ಹಾಗೂ ಮೆಕ್ಕೆಜೋಳ ಬೆಳೆಯುವವರ ಸಂಖ್ಯೆ ದೊಡ್ಡದಿದೆ. ನಮ್ಮ ಹಾಗೆ ಅಲ್ಲಿ 1, 2 ಎಕರೆ ಲೆಕ್ಕದಲ್ಲಿ ಕೃಷಿ ಮಾಡುವುದಿಲ್ಲ. ಅಲ್ಲಿನ ರೈತರಿಗೆ ನೂರಾರು ಎಕರೆ ಜಮೀನು ಇರುತ್ತದೆ. ಅಮೆರಿಕದಲ್ಲಿ ವಂಶಪಾರಂಪರ್ಯ ಕೃಷಿ ಹೆಚ್ಚಾಗಿದ್ದು, ಹತ್ತಾರು ತಲೆಮಾರುಗಳಿಂದಲೂ ಆ ನೂರಾರು ಎಕರೆ ಭೂಮಿ ಮುಂದಿನ ಪೀಳಿಗೆಗೆ ಬಳುವಳಿಯಾಗಿ ಬಂದಿರುತ್ತದೆ. ಅಮೆರಿಕದಲ್ಲಿ ಲಕ್ಷಾಂತರ ಎಕರೆ ಪ್ರದೇಶದಲ್ಲಿ ಸೋಯಾ ಬೆಳೆಯನ್ನೇ ಬೆಳೆಯುತ್ತಾರೆ. ಈ ರೀತಿ ಲಕ್ಷಾಂತರ ಎಕರೆ ಸೋಯಾ ಬೆಳೆಗೆ ಸೂಕ್ತ ಮಾರುಕಟ್ಟೆ ಬೇಕು. ಆದರೆ ರಣಹೇಡಿ ಚೀನಾ ಕಚ್ಚಾ ವಸ್ತುಗಳಿಗೆ ಮಾತ್ರ ಬಡ ರಾಷ್ಟ್ರಗಳ ಬಳಿ ಹೋಗಿ, ಸಿದ್ಧವಸ್ತುಗಳನ್ನು ಅಮೆರಿಕದಲ್ಲಿ ಹೆಚ್ಚಿನ ಬೆಲೆಗೆ ಮಾರುತ್ತಿದ್ದುದು ಆಕ್ರೋಶಕ್ಕೆ ಕಾರಣವಾಗಿತ್ತು. ಇದಕ್ಕೆ ಬ್ರೇಕ್ ಹಾಕಿ ನ್ಯಾಯ ಕೊಡಿಸಿದ್ದೇ ಟ್ರಂಪ್ ಎಂಬ ಭಾವನೆ ಅಮೆರಿಕದ ಸೋಯಾ ಬೆಳೆಗಾರರಲ್ಲಿ ಈಗ ಮೂಡಿದೆ.

ಟ್ರಂಪ್‌ ಪಡೆಗೆ ದೊಡ್ಡ ಗೆಲುವು: ಜನಗಣತಿ ನಿಲ್ಲಿಸಲು ಸೂಚನೆ..!ಟ್ರಂಪ್‌ ಪಡೆಗೆ ದೊಡ್ಡ ಗೆಲುವು: ಜನಗಣತಿ ನಿಲ್ಲಿಸಲು ಸೂಚನೆ..!

ಚೀನಾ ಹೆಚ್ಚು ಖರೀದಿ ಮಾಡಲ್ಲ..!

ಚೀನಾ ಹೆಚ್ಚು ಖರೀದಿ ಮಾಡಲ್ಲ..!

ಒಂದು ದೇಶದ ಆರ್ಥಿಕತೆ ಆ ದೇಶದ ರಫ್ತನ್ನೇ ಅವಲಂಬನೆ ಮಾಡಿರುತ್ತದೆ. ಎಷ್ಟು ಪ್ರಮಾಣದ ರಫ್ತು ಎಂಬ ಮಾತಿಗಿಂತ, ಎಷ್ಟು ಮೌಲ್ಯದ ರಫ್ತು ಎಂಬುದೇ ಪ್ರಾಮುಖ್ಯತೆ ಪಡೆಯುತ್ತದೆ. ಉದಾಹರಣೆಗೆ ಕೃಷಿ ಪದಾರ್ಥ ರಫ್ತು ಮಾಡುವುದು ಕಷ್ಟದ ಕೆಲಸ. ನಮ್ಮ ರೈತರು ಹಗಲು, ರಾತ್ರಿ ಎನ್ನದೆ ಹೊಲ, ಗದ್ದೆಗಳಲ್ಲಿ ಉಳುಮೆಯನ್ನ ಮಾಡುತ್ತಾರೆ. ಬೆಳೆ ರಕ್ಷಿಸಿ ಅದನ್ನು ರಫ್ತು ಮಾಡುತ್ತಾರೆ. ಆದರೆ ಇದರಿಂದ ಬರುವ ಲಾಭ ಮಾತ್ರ ಅಷ್ಟಕಷ್ಟೇ.

ಟ್ರಂಪ್‌ ಬಗ್ಗೆ ಚಿಂತಿಸಿ, ಕೊರಗಿನಲ್ಲೇ ಮೃತಪಟ್ಟ ಅಪ್ಪಟ ಅಭಿಮಾನಿಟ್ರಂಪ್‌ ಬಗ್ಗೆ ಚಿಂತಿಸಿ, ಕೊರಗಿನಲ್ಲೇ ಮೃತಪಟ್ಟ ಅಪ್ಪಟ ಅಭಿಮಾನಿ

ಅತ್ಯಂತ ಕಡಿಮೆ ಪ್ರಮಾಣದ ಆಮದು

ಅತ್ಯಂತ ಕಡಿಮೆ ಪ್ರಮಾಣದ ಆಮದು

ಆದರೆ ಅಮೆರಿಕ, ರಷ್ಯಾ, ಚೀನಾ ರೀತಿಯ ದೇಶಗಳು ರಫ್ತು ಹೆಚ್ಚು ಮಾಡುತ್ತವೆ, ಅತ್ಯಂತ ಕಡಿಮೆ ಪ್ರಮಾಣದ ಆಮದು ಮಾಡಿಕೊಳ್ಳುತ್ತವೆ. ಹೀಗೆ 1 ಲಕ್ಷ ರೂಪಾಯಿ ಮೌಲ್ಯದ ರಫ್ತು ಮಾಡಿದರೆ 1 ಸಾವಿರದಷ್ಟು ಆಮದು ಮಾಡಿಕೊಂಡರೆ ಹೆಚ್ಚು. ಹೀಗಾಗಿಯೇ ಆ ದೇಶಗಳು ದೈತ್ಯವಾಗಿ ಬೆಳೆದಿವೆ. ಚೀನಾ ಕೂಡ ಹೊರ ದೇಶದಿಂದ ತರಿಸಿಕೊಳ್ಳುವುದಕ್ಕಿಂತ, ತನಗೆ ಬೇಕಾದ ವಸ್ತುವನ್ನು ತಾನೆ ಉತ್ಪಾದಿಸಿಕೊಳ್ಳುತ್ತದೆ. ಅಪ್ಪಿತಪ್ಪಿ ಖರೀದಿಸಿದರೂ ಅದು ರಷ್ಯಾದಿಂದ ಮಾತ್ರ. ಅಮೆರಿಕದ ಬಳಿ ಯಾವುದೇ ಖರೀದಿಗೆ ಚೀನಾ ಮುಂದಾಗುತ್ತಿರಲಿಲ್ಲ.

ಈಗ ಕಾಲ ಬದಲಾಗಿದೆ..!

ಈಗ ಕಾಲ ಬದಲಾಗಿದೆ..!

ಹೀಗೆ ಚೀನಾ, ಅಮೆರಿಕದ ಜನರಿಗೆ ತನ್ನ ಸರಕು ಮಾರಾಟ ಮಾಡಿ ಅದರಿಂದ ಭಾರಿ ಪ್ರಮಾಣದ ಲಾಭವನ್ನು ಪಡೆದು ಅಭಿವೃದ್ಧಿ ಹೊಂದುತ್ತಿತ್ತು. ಇದನ್ನ ಕಂಡು ಟ್ರಂಪ್‌ ಕೆಂಡವಾಗಿದ್ದರು. ಚೀನಾ ವಿರುದ್ಧ ಟ್ರಂಪ್ ವಾಣಿಜ್ಯ ಸಮರ ಸಾರಿದ್ದರು. ಪರಿಣಾಮ ಚೀನಾ ಆರ್ಥಿಕ ಸ್ಥಿತಿ ಕುಸಿಯುತ್ತಿತ್ತು. ಹೀಗಾಗಿಯೇ ಅಮೆರಿಕದ ಬಳಿ ಬಂದು, ವಾಣಿಜ್ಯ ಒಪ್ಪಂದಕ್ಕೆ ಒಪ್ಪಿತ್ತು ಚೀನಾ. ವಾಣಿಜ್ಯ ಒಪ್ಪಂದದ ಭಾಗವಾಗಿ ಅಮೆರಿಕದಿಂದ ಕೃಷಿ ಉತ್ಪನ್ನಗಳನ್ನು ಚೀನಾ ಖರೀದಿ ಮಾಡಬೇಕಿದೆ. ಪ್ರಮುಖವಾಗಿ ಸೋಯಾ ಖರೀದಿಗೆ ಚೀನಾ ಜೊತೆಯಲ್ಲಿ ಅಮೆರಿಕ ಒಪ್ಪಂದ ಮಾಡಿಕೊಂಡಿದೆ. ಇದು ಟ್ರಂಪ್‌ಗೆ ಚುನಾವಣೆಯಲ್ಲಿ ವರವಾಗುತ್ತಿದ್ದು, ರೈತ ಸಮುದಾಯ ಟ್ರಂಪ್ ಬೆಂಬಲಕ್ಕೆ ನಿಲ್ಲಲು ಸಜ್ಜಾಗಿದೆ. ಅಮೆರಿಕದ ರೈತರು ಟ್ರಂಪ್‌ರನ್ನು ಗೆಲ್ಲಿಸಲೇಬೇಕು ಅಂತಾ ಪಣತೊಟ್ಟಿದ್ದಾರೆ.

English summary
Soybean growers set to vote for Trump in the 2020 US election. They feel that Trump has waged a trade war with China and has done justice to American farmers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X