ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

25000 ಉದ್ಯೋಗ ಕಡಿತದ ಎಚ್ಚರಿಕೆ ನೀಡಿದ ಅಮೆರಿಕನ್ ಏರ್ ಲೈನ್ಸ್!

|
Google Oneindia Kannada News

ವಾಶಿಂಗ್ಟನ್, ಜುಲೈ.16: ಕೊರೊನಾವೈರಸ್ ಸೋಂಕು ಹರಡುವಿಕೆ ಹಿನ್ನೆಲೆ ಜಾಗತಿಕ ಮಟ್ಟದಲ್ಲಿ ವಿಮಾನಯಾನ ಸಂಚಾರಕ್ಕೂ ಭಾರಿ ಹೊಡೆತ ಬಿದ್ದಿದೆ. ಆರ್ಥಿಕ ಹೊರೆ ತಗ್ಗಿಸಿಕೊಳ್ಳುವ ದೃಷ್ಟಿಯಿಂದ ಅಮೆರಿಕಾ ಏರ್ ಲೈನ್ಸ್ ತನ್ನ 25,000 ಸಿಬ್ಬಂದಿಯನ್ನು ಉದ್ಯೋಗದಿಂದ ವಜಾಗೊಳಿಸುವ ಎಚ್ಚರಿಕೆ ನೀಡಿದೆ.

Recommended Video

ಚೀನಾಗೆ ಮತ್ತೊಂದು ಶಾಕ್ ಕೊಟ್ಟ ಅಮೇರಿಕಾ | Oneindia Kannada

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಶೇ.29ರಷ್ಟು ಸಿಬ್ಬಂದಿ ಹೆಚ್ಚುವರಿ ಎಂದು ಎನಿಸಿರುವ ಹಿನ್ನೆಲೆ ಈ ರೀತಿ ಕ್ರಮ ತೆಗೆದುಕೊಳ್ಳಲು ಸಂಸ್ಥೆ ಮುಂದಾಗಿರುವ ಬಗ್ಗೆ ಸಿಎನ್ ಬಿಸಿ ಸುದ್ದಿ ವಾಹಿನಿಯು ವರದಿ ಮಾಡಿದೆ.

TikTok ನಿಷೇಧದ ಹಿಂದಿನ ಅಸಲಿ ರಹಸ್ಯ ಬಿಚ್ಚಿಟ್ಟ ಅಮೆರಿಕಾ!TikTok ನಿಷೇಧದ ಹಿಂದಿನ ಅಸಲಿ ರಹಸ್ಯ ಬಿಚ್ಚಿಟ್ಟ ಅಮೆರಿಕಾ!

ವಿಮಾನಯಾನ ಸಂಸ್ಥೆಯೇ ಸಿಬ್ಬಂದಿಯನ್ನು ವಜಾಗೊಳಿಸುವ ಮುನ್ನ ಸಿಬ್ಬಂದಿ ಎರಡು ವರ್ಷಗಳವರೆಗೆ ವೇತನರಹಿತ ರಜೆ ತೆಗೆದುಕೊಳ್ಳಬಹುದು. ಅಥವಾ ಅವಧಿಪೂರ್ವ ನಿವೃತ್ತಿ ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ.

American Airlines Warns 25,000 Employees Of Possible Job Cuts

ಅಮೆರಿಕನ್ ಏರ್ ಲೈನ್ಸ್ ಆದಾಯ ಕುಸಿತ:

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ಅಮೆರಿಕನ್ ಏರ್ ಲೈನ್ಸ್ ಸಂಸ್ಥೆಗೆ ಭಾರಿ ಆರ್ಥಿಕ ಹೊಡೆತ ನೀಡಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿ ನೋಡಿದರೆ ಸಂಸ್ಥೆಗೆ ಶೇ.80ರಷ್ಟು ಆದಾಯದಲ್ಲಿ ಕುಸಿತ ಕಂಡಿದೆ. ಜಾಗತಿಕ ವಿಮಾನಯಾನ ಸಂಚಾರಕ್ಕೆ ಮಹಾಮಾರಿಯಿಂದ ತೀವ್ರ ಅಡ್ಡಿ ಉಂಟಾಗಿದೆ. ಇದು ಸಂಸ್ಥೆಯ ಆದಾಯಕ್ಕೆ ಭಾರಿ ಪೆಟ್ಟು ಕೊಟ್ಟಿದೆ ಎಂದು ಸಂಸ್ಥೆಯ ಸಿಇಓ ಡೌಗ್ ಪಾರ್ಕರ್ ಮತ್ತು ಅಧ್ಯಕ್ಷ ರಾಬರ್ಟ್ ಐಸೋಮ್ ತಿಳಿಸಿದ್ದಾರೆ.

English summary
American Airlines Warns 25,000 Employees Of Possible Job Cuts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X