ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

WHOಗೆ ಚೀನಾದಷ್ಟೇ ಅನುದಾನ ಬಿಡುಗಡೆ ಮಾಡುತ್ತೇವೆ ಎಂದ ಅಮೆರಿಕ

|
Google Oneindia Kannada News

ವಾಷಿಂಗ್ಟನ್, ಮೇ 16: ವಿಶ್ವ ಆರೋಗ್ಯ ಸಂಸ್ಥೆಗೆ ಅನುದಾನ ನೀಡಲು ಮತ್ತೆ ಅಮೆರಿಕ ಒಲವು ತೋರಿಸಿದೆ.

ಚೀನಾ ನೀಡಿದಷ್ಟೇ ಹಣವನ್ನು ನಾವೂ ಕೂಡ ನೀಡಲು ನಿರ್ಧರಿಸಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.ಏಪ್ರಿಲ್ 14 ರಂದು ವಿಶ್ವ ಸಂಸ್ಥೆಗೆ ನೀಡುತ್ತಿದ್ದ ಅನುದಾನವನ್ನು ಕಡಿತಗೊಳಿಸಿದ್ದರು. ಕೊರೊನಾ ವೈರಸ್ ಕುರಿತು ಅದರ ದುಷ್ಪರಿಣಾಮದ ಕುರಿತು ಮೊದಲೇ ಎಚ್ಚರಿಕೆ ನೀಡಿಲ್ಲ. ಹಾಗೆಯೇ ಚೀನಾದ ಬಗ್ಗೆ ಮೃದು ಧೋರಣೆ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದ್ದರು.

ಕೊರೊನಾ ವಿರುದ್ಧ ಹೋರಾಟ: ಮೋದಿ ಹೆಗಲಿಗೆ ಹೆಗಲು ಕೊಟ್ಟ ಟ್ರಂಪ್ ಕೊರೊನಾ ವಿರುದ್ಧ ಹೋರಾಟ: ಮೋದಿ ಹೆಗಲಿಗೆ ಹೆಗಲು ಕೊಟ್ಟ ಟ್ರಂಪ್

ಆದರೆ ಚೀನಾ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಮೇಲೆ ಮಾಡಿದ್ದ ಆರೋಪವನ್ನು ತಳ್ಳಿಹಾಕಲಾಗಿತ್ತು. ವಿಶ್ವ ಆರೋಗ್ಯ ಸಂಸ್ಥೆ ಪ್ರತಿ ವರ್ಷವೂ ದೊಡ್ಡ ಮೊತ್ತದ ಅನುದಾನವನ್ನು ಅಮೆರಿಕ ನೀಡುತ್ತಿತ್ತು. ಮೊದಲು ಮಾಡುತ್ತಿದ್ದ ಸಹಾಯದ 1/10 ಭಾಗದಷ್ಟು ಅನುದಾನ ನೀಡಲು ಮುಂದಾಗಿದೆ.

America Will Agree To Pay WHO Up To What China Pays

ಅಮೆರಿಕವು ಕೊರೊನಾ ಲಸಿಕೆ ಸಂಶೋಧನೆಯಲ್ಲಿ ತೊಡಗಿದ್ದು, ಡಿಸೆಂಬರ್ ಅಂತ್ಯದ ವೇಳೆಗೆ ಲಸಿಕೆ ಲಭ್ಯವಾಗಲಿದೆ ಎಂದು ಟ್ರಂಪ್ ತಿಳಿಸಿದ್ದಾರೆ.

ಕೊರೊನಾ ಚೀನಾದ ಲ್ಯಾಬ್‌ನಿಂದ ಬಂದರೇನು, ಬಾವುಲಿಯಿಂದ ಬಂದರೇನು ಬಂದಿರುವುದು ಚೀನಾದಿಂದ ಎನ್ನುವುದಷ್ಟೇ ಸತ್ಯ ಎಂದು ಟ್ರಂಪ್ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.

English summary
America President Trump administration will "agree to pay up to what China pays in assessed contributions" to the WHO.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X