ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ಗೆ ಕೋವಿಡ್ ಪಾಸಿಟಿವ್

|
Google Oneindia Kannada News

ವಾಷಿಂಗ್ಟನ್, ಏಪ್ರಿಲ್ 26: ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ಗೆ ಮಂಗಳವಾರ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ ಎಂದು ಉಪಾಧ್ಯಕ್ಷರ ಕಚೇರಿ ಮಾಹಿತಿ ನೀಡಿದೆ. ಕೋವಿಡ್ ಸೋಂಕಿಗೆ ಒಳಗಾಗಿರುವ ಕಮಲಾ ಹ್ಯಾರಿಸ್ ಯಾವುದೇ ರೋಗಲಕ್ಷಣ ಹೊಂದಿಲ್ಲ. ಹಾಗೆಯೇ ಅಧ್ಯಕ್ಷರು ಅಥವಾ ರಾಷ್ಟ್ರದ ಪ್ರಥಮ ಮಹಿಳೆಯೊಂದಿಗೆ ನಿಕಟ ಸಂಪರ್ಕದಲ್ಲಿಲ್ಲ ಎಂದು ಕಚೇರಿ ತಿಳಿಸಿದೆ.

"ಉಪಾಧ್ಯಕ್ಷರ ನಿವಾಸದಲ್ಲಿ ಪ್ರತ್ಯೇಕವಾಗಿ ಇರಲಿದ್ದಾರೆ. ಹಾಗೆಯೇ ತಮ್ಮ ಕರ್ತವ್ಯವನ್ನು ಅಲ್ಲಿಂದಲೇ ಮುಂದುವರಿಸಲಿದ್ದಾರೆ," ಎಂದು ಪತ್ರಿಕಾ ಕಾರ್ಯದರ್ಶಿ ಕರ್ಸ್ಟನ್ ಅಲೆನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹಂಗಾಮಿ ಅಧ್ಯಕ್ಷ ಸಾಲಿನಲ್ಲಿ ಮೊದಲಿಗರಾಗಿರುವ ಹ್ಯಾರಿಸ್, ಬೈಡೆನ್ ಆಡಳಿತದಲ್ಲಿ ಅತ್ಯುನ್ನತ ಶ್ರೇಣಿಯ ಅಧಿಕಾರಿಯಾಗಿದ್ದಾರೆ.

ಬೈಡನ್‌ಗೆ ಅನಾರೋಗ್ಯ; ಹಂಗಾಮಿ ಅಧ್ಯಕ್ಷ ಸ್ಥಾನಕ್ಕೇರಿದ ಕಮಲಾ ಹ್ಯಾರೀಸ್ಬೈಡನ್‌ಗೆ ಅನಾರೋಗ್ಯ; ಹಂಗಾಮಿ ಅಧ್ಯಕ್ಷ ಸ್ಥಾನಕ್ಕೇರಿದ ಕಮಲಾ ಹ್ಯಾರೀಸ್

ಕೊರೊನಾ ವೈರಸ್ ಸೋಂಕು ತಗುಲಿದ ಹಲವಾರು ಮಂದಿ ಅಧಿಕಾರಿಗಳ ಸಂಪರ್ಕಕ್ಕೆ ಬಂದ ಬಳಿಕವೂ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ಗೆ ಈವರೆಗೆ ಕೋವಿಡ್ ಸೋಂಕು ಕಾಣಿಸಿಕೊಂಡಿಲ್ಲ. ಈಗ ಕೋವಿಡ್ ಸೋಂಕಿಗೆ ಒಳಗಾಗಿರುವ ಹ್ಯಾರಿಸ್ ಬೈಡೆನ್ ಅಥವಾ ಪ್ರಥಮ ಮಹಿಳೆ ಜಿಲ್ ಬೈಡೆನ್ ಅವರ ನಿಕಟ ಸಂಪರ್ಕ ಹೊಂದಿಲ್ಲ ಎಂದು ಹೇಳಿಕೆ ಉಲ್ಲೇಖ ಮಾಡಿದೆ.

America Vice President Kamala Harris Tests Positive for Covid

ಉಪಾಧ್ಯಕ್ಷರು ಕೋವಿಡ್ ವಿರುದ್ಧ ಸಂಪೂರ್ಣವಾಗಿ ಲಸಿಕೆಯನ್ನು ಪಡೆದಿದ್ದಾರೆ. ಈ ತಿಂಗಳ ಆರಂಭದಲ್ಲಿ ಕಮಲಾ ಹ್ಯಾರಿಸ್ ಎರಡನೇ ಬೂಸ್ಟರ್ ಶಾಟ್ ಅನ್ನು ಪಡೆದರು. ರ್ಯಾಪಿಡ್ ಹಾಗೂ ಪಿಸಿಆರ್ ಪರೀಕ್ಷೆಗಳಲ್ಲಿ ಹ್ಯಾರಿಸ್‌ಗೆ ಕೋವಿಡ್ ಸೋಂಕು ಇರುವುದು ಖಚಿತವಾಗಿದೆ ಎಂದು ಕಚೇರಿ ಮಂಗಳವಾರ ತಿಳಿಸಿದೆ. ಕೋವಿಡ್ ನೆಗೆಟಿವ್ ಬಂದ ಬಳಿಕ ವೈಟ್ ಹೌಸ್‌ಗೆ ಮರಳಲಿದ್ದಾರೆ ಎಂದು ಕೂಡಾ ಹೇಳಿಕೆಯಲ್ಲಿ ಸೇರಿಸಲಾಗಿದೆ.

ಇತ್ತೀಚಿನ ವಾರಗಳಲ್ಲಿ ಯುಎಸ್‌ನಲ್ಲಿ ಕೋವಿಡ್ ಪ್ರಕರಣಗಳು ಏರಿಕೆ ಕಾಣುತ್ತಿದೆ. ಈ ನಡುವೆ ಅಮೆರಿಕ ಉಪಾಧ್ಯಕ್ಷರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಕೆಲವು ಪ್ರದೇಶಗಳಲ್ಲಿ ಇದು ಹೊಸ ಓಮಿಕ್ರಾನ್ ರೂಪಾಂತರದ ಸಬ್‌ವೇರಿಯಂಟ್ BA.2 ಕಾಣಿಸಿಕೊಂಡಿದೆ. ಇದಕ್ಕೂ ಮುನ್ನ ಇಬ್ಬರು ನಾಯಕರಾದ ಕನೆಕ್ಟಿಕಟ್‌ನ ಕ್ರಿಸ್ ಮರ್ಫಿ ಮತ್ತು ಒರೆಗಾನ್‌ನ ರಾನ್ ವೈಡನ್‌ಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಅವರಲ್ಲಿ ಸೌಮ್ಯ ರೋಗಲಕ್ಷಣ ಕಂಡು ಬಂದಿದೆ.

{document1}


English summary
Vice President Kamala Harris tests positive for Covid, is not exhibiting symptoms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X