ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನಕ್ಕೆ ಅಮೆರಿಕದಿಂದ ಮತ್ತೊಂದು ಗುದ್ದು ; $ 1.66 ಬಿಲಿಯನ್ ಸೇನಾ ನೆರವು ರದ್ದು

|
Google Oneindia Kannada News

ವಾಷಿಂಗ್ಟನ್, ನವೆಂಬರ್ 21: ಪಾಕಿಸ್ತಾನಕ್ಕೆ ನೀಡಬೇಕಾಗಿದ್ದ $ 1.66 ಬಿಲಿಯನ್ ಭದ್ರತಾ ನೆರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ದೇಶನದ ಅನ್ವಯ ರದ್ದು ಮಾಡಲಾಗಿದೆ ಎಂದು ಪೆಂಟಗನ್ ನಿಂದ ತಿಳಿಸಲಾಗಿದೆ.

ಅಮೆರಿಕದ ಹತಾಶೆ ಹಾಗೂ ಸಿಟ್ಟನ್ನು ಹೀಗೆ ವ್ಯಕ್ತಪಡಿಸಲಾಗುತ್ತಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಒಸಾಮ ಬಿನ್ ಲಾಡೆನ್ ಅಬೋಟಾಬಾದ್ ನಲ್ಲಿ ಅಡಗಿಕೊಳ್ಳಲು ಪಾಕಿಸ್ತಾನವು ನೆರವು ನೀಡಿತ್ತು. ಅಮೆರಿಕಕ್ಕೆ ಯಾವುದೇ ನೆರವನ್ನು ಪಾಕ್ ಮಾಡಿಲ್ಲ ಎಂದು ಟ್ರಂಪ್ ಹೇಳಿದ ಕೆಲ ದಿನಕ್ಕೆ ಈ ನಿರ್ಧಾರ ಹೊರಬಿದ್ದಿದೆ.

ಅಮೆರಿಕ ಅಧ್ಯಕ್ಷರಿಗೆ ನಮಗಿಂತ ಸ್ನೇಹಿತರು ಸಿಗ್ತಾರಾ ಎಂದ ಇಮ್ರಾನ್ ಖಾನ್ಅಮೆರಿಕ ಅಧ್ಯಕ್ಷರಿಗೆ ನಮಗಿಂತ ಸ್ನೇಹಿತರು ಸಿಗ್ತಾರಾ ಎಂದ ಇಮ್ರಾನ್ ಖಾನ್

ಪಾಕಿಸ್ತಾನದ $ 1.66 ಬಿಲಿಯನ್ ಭದ್ರತಾ ನೆರವನ್ನು ರದ್ದು ಮಾಡಲಾಗಿದೆ ಎಂದು ರಕ್ಷಣಾ ಇಲಾಖೆಯ ವಕ್ತಾರ ಕರ್ನಲ್ ರಾಬ್ ಮ್ಯಾನಿಂಗ್ ಇಮೇಲ್ ಮೂಲಕ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಆದರೆ, ಈ ವರೆಗೆ ಅಮೆರಿಕದ ಆತಂಕ ನಿವಾರಿಸಲು ಪಾಕಿಸ್ತಾನವು ಯಾವುದೇ ಗಂಭೀರ ಕ್ರಮ ತೆಗೆದುಕೊಂಡಿಲ್ಲ. ಪಾಕಿಸ್ತಾನದ ನೆರೆ ರಾಷ್ಟ್ರಗಳಲ್ಲಿ ಹಿಂಸಾಚಾರ ಪ್ರೋತ್ಸಾಹಿಸುವ ಗುಂಪುಗಳನ್ನು ಪ್ರೋತ್ಸಾಹಿಸುತ್ತಾ ಹಾಗೂ ಸಲಹುತ್ತಾ ಬಂದಿದೆ ಎಂದು ಅಮೆರಿಕ ರಕ್ಷಣಾ ಇಲಾಖೆಯ ಮಾಜಿ ಅಧಿಕಾರಿಯೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.

ಈ ವರ್ಷದ ಜನವರಿಯಿಂದಲೇ ಕಡಿತ

ಈ ವರ್ಷದ ಜನವರಿಯಿಂದಲೇ ಕಡಿತ

ಪಾಕಿಸ್ತಾನದ ನಾಯಕರು ಸಹಕಾರದ ಭರವಸೆ ನೀಡಿದ್ದರು. ಮಾತು ನೀಡಿದ್ದರ ಹೊರತಾಗಿ ಯಾವುದೇ ಗಂಭೀರ ಸಹಕಾರ ನೀಡಲಿಲ್ಲ. ಆದ್ದರಿಂದ ಹೇಗೆ ಬಹುತೇಕ ಅಮೆರಿಕನ್ನರು ಸಿಟ್ಟಾಗಿದ್ದಾರೋ ಅದೇ ರೀತಿ ಡೊನಾಲ್ಡ್ ಟ್ರಂಪ್ ಕೂಡ ಕೋಪಗೊಂಡಿದ್ದಾರೆ ಎಂದು ಆ ಅಧಿಕಾರಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ. ಅಮೆರಿಕದ ಹಿಂದಿನ ಅಧ್ಯಕ್ಷ ಬರಾಕ್ ಒಬಾಮ ನೀಡುತ್ತಾ ಬಂದಿದ್ದ ಸೇನಾ ನೆರವನ್ನು ಈ ವರ್ಷದ ಜನವರಿಯಿಂದ ನಿಲ್ಲಿಸುತ್ತಾ ಬರಲಾಗಿತ್ತು. ಇದು ಅಮೆರಿಕವು ತನ್ನ ಸಿಟ್ಟು-ಹತಾಶೆಯನ್ನು ವ್ಯಕ್ತಪಡಿಸಿದ ರೀತಿಯಾಗಿತ್ತು. ಲಾಡೆನ್ ಅಬೋಟಾಬಾದ್ ನಲ್ಲಿ ಇರುವುದು ಎಲ್ಲ ಪಾಕಿಸ್ತಾನೀಯರಿಗೆ ತಿಳಿದಿತ್ತು ಎಂದು ಟ್ರಂಪ್ ಆರೋಪಿಸಿದ್ದರು. ಆದರೆ ಪಾಕಿಸ್ತಾನದ ಸೇನೆಯಲ್ಲಿ ಕೆಲವೇ ಹಿರಿಯ ಅಧಿಕಾರಿಗಳಿಗೆ ಮಾತ್ರ ಈ ಬಗ್ಗೆ ತಿಳಿದಿತ್ತು ಎಂದು ಲಾಡೆನ್ ಬೇಟೆ ವೇಳೆ ಪ್ರಮುಖ ಹುದ್ದೆ ನಿಭಾಯಿಸಿದ ಅಧಿಕಾರಿ ಸಂದರ್ಶನವೊಂದರಲ್ಲಿ ತಿಳಿಸಿದ್ದರು.

ಪಕ್ಕದ ದೇಶಗಳ ವಿರುದ್ಧವೂ ಭಯೋತ್ಪಾದಕರ ಬಳಕೆ

ಪಕ್ಕದ ದೇಶಗಳ ವಿರುದ್ಧವೂ ಭಯೋತ್ಪಾದಕರ ಬಳಕೆ

ಇಸ್ಲಾಮಿಕ್ ಮೂಲಭೂತವಾದಿಗಳಿಂದ ಪಾಕಿಸ್ತಾನಕ್ಕೂ ಹಾನಿಯಾಗಿದೆ. ಇಸ್ಲಾಮಾಬಾದ್ ಇದೇ ಭಯೋತ್ಪಾದಕರನ್ನು ಪಕ್ಕದ ರಾಷ್ಟ್ರಗಳ ಮೇಲೆ ದಾಳಿಗೆ ಬಳಸಿದೆ. ಹೀಗೆ ಹಲವು ವರ್ಷಗಳ ನಂತರ ಪಾಕಿಸ್ತಾನದ ಸೇನೆ ಸರಕಾರಕ್ಕೆ ಬೆದರಿಕೆಯೊಡ್ಡುತ್ತಿರುವ ಮೂಲಭೂತವಾದಿಗಳ ವಿರುದ್ಧ ಗಂಭೀರ ಕ್ರಮ ತೆಗೆದುಕೊಳ್ಳುತ್ತಿದೆ. ಈಗ ಅಮೆರಿಕ ಕೇಳುತ್ತಿರುವುದು ಹಾಗೂ ಅಧ್ಯಕ್ಷ ಟ್ರಂಪ್ ಕೇಳುತ್ತಿರುವುದು ಇದನ್ನೇ. ಪಾಕಿಸ್ತಾನವು ಇದೇ ರೀತಿ ಕ್ರಮವನ್ನು ನೆರೆ ದೇಶಗಳಲ್ಲಿ ಉಗ್ರ ಚಟುವಟಿಕೆ ನಡೆಸುತ್ತಿರುವ ತಾಲಿಬಾನ್, ಲಷ್ಕರ್ ಇ ತೈಬಾ ಹಾಗೂ ಇತರರ ವಿರುದ್ಧವೂ ಕೈಗೊಳ್ಳಬೇಕು ಎಂದು ಹೇಳಿದ್ದಾರೆ ಆ ಅಧಿಕಾರಿ.

ತಾಲಿಬಾನ್ ಉಗ್ರರಿಗೆ, ಕುಟುಂಬದವರಿಗೆ ಈಗಲೂ ನೆಲೆ

ತಾಲಿಬಾನ್ ಉಗ್ರರಿಗೆ, ಕುಟುಂಬದವರಿಗೆ ಈಗಲೂ ನೆಲೆ

ಈಗಲೂ ತಾಲಿಬಾನ್ ಉಗ್ರರು ಪಾಕಿಸ್ತಾನದ ಮೂಲಕವೇ ಶಸ್ತ್ರಾಸ್ತ್ರ, ಉಗ್ರರು ಹಾಗೂ ಹಣದ ಸರಬರಾಜು ಮಾಡುತ್ತಿದ್ದಾರೆ. ತಾಲಿಬಾನ್ ನ ಕಮ್ಯಾಂಡರ್ ಗಳು, ಅವರ ಕುಟುಂಬಗಳು ಪಾಕಿಸ್ತಾನದಲ್ಲಿ ನೆಲೆ ಪಡೆಯುತ್ತಿದ್ದಾರೆ. ಸಭೆ ನಡೆಸುತ್ತಿದ್ದಾರೆ, ತರಬೇತಿ ನೀಡುತ್ತಿದ್ದಾರೆ. ಪಾಕಿಸ್ತಾನದಿಂದಲೇ ಅಫ್ಘಾನಿಸ್ತಾನಕ್ಕೆ ಸ್ಫೋಟಕಗಳ ರವಾನೆ ಆಗುತ್ತಿದೆ. ಉಗ್ರ ಸಂಘಟನೆಗಳ ನಾಯಕರು ಪಾಕಿಸ್ತಾನದಲ್ಲಿ ಆರಾಮವಾಗಿ ಓಡಾಡಿಕೊಂಡಿದ್ದಾರೆ ಹಾಗೂ ಹಿಂಸೆ ಪ್ರಚೋದಿಸುವಂಥ ಭಾಷಣಗಳನ್ನು ಸಾರ್ವಜನಿಕವಾಗಿ ಮಾಡುತ್ತಿದ್ದಾರೆ. ಒಂದು ವೇಳೆ ಪಾಕಿಸ್ತಾನವು ತಾಲಿಬಾನ್ ಗಳ ವಿರುದ್ಧ ಗಂಭೀರ ಕ್ರಮ ಕೈಗೊಂಡರೆ ಅಫ್ಘಾನಿಸ್ತಾನದಲ್ಲಿ ತಾನಾಗಿಯೇ ಶಾಂತಿ ನೆಲೆಸುತ್ತದೆ. ಅದೇ ರೀತಿ ಭಾರತದ ವಿರುದ್ಧ ಕೆಲಸ ಮಾಡುತ್ತಿರುವ ಉಗ್ರ ಸಂಘಟನೆಗಳ ವಿರುದ್ಧ ಕ್ರಮ ಕೈಗೊಂಡರೆ ಅದರಿಂದ ಅನುಕೂಲ ಆಗುತ್ತದೆ. ಆರ್ಥಿಕ ಸಂಬಂಧ ವೃದ್ಧಿಯಾಗಿ, ಪಾಕ್ ಆರ್ಥಿಕತೆಗೂ ನೆರವಾಗುತ್ತದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

ತಾಲಿಬಾನ್ ಉಗ್ರರ ದಾಳಿಯಲ್ಲಿ 30 ಅಫ್ಘನ್ ಪೊಲೀಸರು ಸಾವುತಾಲಿಬಾನ್ ಉಗ್ರರ ದಾಳಿಯಲ್ಲಿ 30 ಅಫ್ಘನ್ ಪೊಲೀಸರು ಸಾವು

ಕಳೆದ ವರ್ಷ $ 300 ಮಿಲಿಯನ್ ಸೇನಾ ನೆರವು ಕಡಿತ

ಕಳೆದ ವರ್ಷ $ 300 ಮಿಲಿಯನ್ ಸೇನಾ ನೆರವು ಕಡಿತ

ಅಮೆರಿಕ ಹಾಗೂ ಪಾಕಿಸ್ತಾನ ಮಧ್ಯದ ಸಂಬಂಧ ಕಳೆದ ವರ್ಷದ ಆಗಸ್ಟ್ ನಿಂದಲೇ ಹಳಸುತ್ತಾ ಬರುತ್ತಿದೆ. ಅಫ್ಘಾನಿಸ್ತಾನ ಮತ್ತು ದಕ್ಷಿಣ ಏಷ್ಯಾಗೆ ಸಂಬಂಧಿಸಿದ ನೀತಿ ಘೋಷಣೆ ವೇಳೆ ಟ್ರಂಪ್ ಪಾಕಿಸ್ತಾನದ ವಿರುದ್ಧ ಕಿಡಿ ಕಾರಿದ್ದರು. ಅಫ್ಘಾನಿಸ್ತಾನದಲ್ಲಿ ಅಮೆರಿಕನ್ನರನ್ನು ಕೊಲ್ಲುತ್ತಿರುವವರಿಗೆ ಪಾಕಿಸ್ತಾನವು ಸ್ವರ್ಗದಂತಾಗಿದೆ. ಇದು ಹೀಗೇ ಮುಂದುವರಿದರೆ ಪಾಕ್ ಬಹಳ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದರು. ನಂತರ ಸೆಪ್ಟೆಂಬರ್ ನಲ್ಲಿ $ 300 ಮಿಲಿಯನ್ ಸೇನಾ ನೆರವನ್ನು ಕಡಿತಗೊಳಿಸಿದ್ದರು. ಪಾಕ್ ನೆಲದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಕ್ಕಾನಿ ಹಾಗೂ ತಾಲಿಬಾನ್ ಸೇರಿದಂತೆ ಇತರ ಭಯೋತ್ಪಾದನಾ ಸಂಘಟನೆಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿಲ್ಲ. ಆದ್ದರಿಂದ ನೆರವು ಕಡಿತಗೊಳಿಸಲಾಗಿದೆ ಎಂದು ಕಾರಣ ಸಹ ನೀಡಿದ್ದರು.

English summary
The US has suspended US $1.66 billion in security assistance to Pakistan after President Donald Trump’s directive, the Pentagon has said, in what experts believe is a strong signal of American frustration.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X