ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಲ್ದಾಣದಲ್ಲಿಯೇ ಮಾನವ ಹೃದಯ ಮರೆತು ಬಂದಿದ್ದ ವಿಮಾನ

|
Google Oneindia Kannada News

ವಾಷಿಂಗ್ಟನ್, ಡಿಸೆಂಬರ್ 14: ಕಸಿ ಚಿಕಿತ್ಸೆಗಾಗಿ ತರಬೇಕಿದ್ದ ಮಾನವ ಹೃದಯವನ್ನು ಮರೆತುಬಂದಿದ್ದರಿಂದ ಸಿಯಾಟಲ್‌ನಿಂದ ಡಲ್ಲಾಸ್‌ಗೆ ತೆರಳುತ್ತಿದ್ದ ವಿಮಾನ ಅದಕ್ಕಾಗಿಯೇ ವಾಪಸ್ ಹೋದ ಘಟನೆ ಅಮೆರಿಕದಲ್ಲಿ ನಡೆದಿದೆ.

ಸ್ಯಾಕ್ರೆಮೆಂಟೊದಲ್ಲಿಂದ ಹೃದಯವನ್ನು ಸೌತ್‌ ವೆಸ್ಟ್ ಏರ್‌ಲೈನ್ಸ್‌ ವಾಷಿಂಗ್ಟನ್‌ಗೆ ತರುವ ಜವಾಬ್ದಾರಿ ಹೊತ್ತಿತ್ತು. ಅಲ್ಲಿನ ಆಸ್ಪತ್ರೆಯೊಂದರಲ್ಲಿ ಹೃದಯ ಕಸಿ ಶಸ್ತ್ರಚಿಕಿತ್ಸೆ ನಡೆಯಬೇಕಿತ್ತು.

ಚಲಿಸುತ್ತಿದ್ದ ವಿಮಾನದಲ್ಲಿ ನಿದ್ದೆಗೆ ಜಾರಿದ ಪೈಲಟ್ ಎಚ್ಚರಗೊಂಡಿದ್ದು ಯಾವಾಗ?ಚಲಿಸುತ್ತಿದ್ದ ವಿಮಾನದಲ್ಲಿ ನಿದ್ದೆಗೆ ಜಾರಿದ ಪೈಲಟ್ ಎಚ್ಚರಗೊಂಡಿದ್ದು ಯಾವಾಗ?

ಆದರೆ, ಸಿಬ್ಬಂದಿ ಅದನ್ನು ವಿಮಾನಕ್ಕೆ ತುಂಬಿಸುವುದನ್ನು ಮರೆತೇ ಬಿಟ್ಟಿದ್ದರು. ಎಂದಿನಂತೆ ಡಲ್ಲಾಸ್‌ಗೆ ತೆರಳುವ ರೀತಿ ವಿಮಾನವನ್ನು ಸಿದ್ಧಪಡಿಸಿದ್ದರು.

america southwest plane human heart transplant seattle dallas flight turn back

ವಿಮಾನವು ವ್ಯೋಮಿಂಗ್ ಸಮೀಪ ಹೋಗುವ ಸಮಯದಲ್ಲಿ ಸಿಬ್ಬಂದಿ ತಂಡಕ್ಕೆ ಹೃದಯವನ್ನು ಅಲ್ಲೇ ಬಿಟ್ಟುಬಂದ ಸಂಗತಿ ನೆನಪಾಗಿದೆ. ಕೂಡಲೇ ಸ್ಪೀಕರ್‌ನಲ್ಲಿ ಘೋಷಣೆ ಮಾಡಿದ ಸಿಬ್ಬಂದಿ, ಪ್ರಯಾಣಿಕರಿಗೆ ಪರಿಸ್ಥಿತಿಯನ್ನು ವಿವರಿಸಿದರು.

ಜೈಪುರ್ ನಲ್ಲಿ ತುರ್ತಾಗಿ ಇಳಿಯಿತು ಕರಾಚಿ ಮೂಲದ ಖಾಸಗಿ ವಿಮಾನಜೈಪುರ್ ನಲ್ಲಿ ತುರ್ತಾಗಿ ಇಳಿಯಿತು ಕರಾಚಿ ಮೂಲದ ಖಾಸಗಿ ವಿಮಾನ

ವಿಮಾನದಲ್ಲಿದ್ದ ಪ್ರಯಾಣಿಕರು ತಮ್ಮ ಊರನ್ನು ತಲುಪುವುದಕ್ಕಿಂತಲೂ ಹೃದಯವನ್ನು ತರುವುದು ಹೆಚ್ಚು ಮುಖ್ಯವಾದದ್ದು ಎಂದು ಅಭಿಪ್ರಾಯಪಟ್ಟರು. ಆದರೆ, ಇದೇ ವೇಳೆ ವಿಮಾನದ ಸಿಬ್ಬಂದಿಯ ನಿರ್ಲಕ್ಷ್ಯತನವನ್ನೂ ಖಂಡಿಸಿದರು.

ಸಾಮಾನ್ಯವಾಗಿ ಹೃದಯ ಮತ್ತು ಶ್ವಾಸಕೋಶಗಳನ್ನು ವಾಣಿಜ್ಯ ಉದ್ದೇಶದ ವಿಮಾನಗಳಲ್ಲಿ ಕೊಂಡೊಯ್ಯುವುದಿಲ್ಲ. ಏಕೆಂದರೆ ಈ ಅಂಗಗಳನ್ನು ವ್ಯಕ್ತಿಯ ದೇಹದಿಂದ ತೆಗೆದು ಇನ್ನೊಬ್ಬರಿಗೆ ಕಸಿ ಮಾಡಲು ನಾಲ್ಕರಿಂದ ಆರು ಗಂಟೆ ಮಾತ್ರ ಸಮಯ ಇರುತ್ತದೆ.

ಯುರೋಪ್ ರಾಷ್ಟ್ರಗಳಿಗೆ ನೇರ ಬಾಗಿಲು ತೆರೆದ ಬೆಂಗಳೂರು ಏರ್‌ಪೋರ್ಟ್ ಯುರೋಪ್ ರಾಷ್ಟ್ರಗಳಿಗೆ ನೇರ ಬಾಗಿಲು ತೆರೆದ ಬೆಂಗಳೂರು ಏರ್‌ಪೋರ್ಟ್

ಮೂತ್ರಪಿಂಡಗಳ ಕಸಿಗೆ 24-36 ಗಂಟೆಗಳ ಕಾಲಾವಕಾಶ ಇರುವುದರಿಂದ ಅವುಗಳನ್ನು ವಾಣಿಜ್ಯ ವಿಮಾನಗಳಲ್ಲಿ ಕೊಂಡೊಯ್ಯಲಾಗುತ್ತದೆ.

English summary
Southwest flight to Dallas was forced back to settle after the flight team realized a human heart had not been offloaded for transplant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X