ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನಿಸ್ತಾನ ಕುರಿತು ಮಾತುಕತೆಗಾಗಿ ರಷ್ಯಾ ನೀಡಿದ ಆಹ್ವಾನ ತಿರಸ್ಕರಿಸಿದ ಅಮೆರಿಕ

|
Google Oneindia Kannada News

ವಾಷಿಂಗ್ಟನ್, ಅಕ್ಟೋಬರ್ 19: ಅಫ್ಘಾನಿಸ್ತಾನದ ಕುರಿತು ಮಾತುಕತೆ ನಡೆಸಲು ರಷ್ಯಾ ನೀಡಿದ್ದ ಆಹ್ವಾನವನ್ನು ಅಮೆರಿಕ ತಿರಸ್ಕರಿಸಿದೆ.

ಅಫ್ಘಾನಿಸ್ತಾನ ಪರಿಸ್ಥಿತಿ ಬಗ್ಗೆ ಚರ್ಚಿಸಲು ರಷ್ಯಾ ಆಹ್ವಾನಿಸಿರುವ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ. ಚೀನಾ ಹಾಗೂ ಪಾಕಿಸ್ತಾನವೂ ಸಭೆಯಲ್ಲಿ ಭಾಗವಹಿಸಲಿದೆ.

ಅಫ್ಘಾನಿಸ್ತಾನ ಕುರಿತು ಮಾತುಕತೆ : ರಷ್ಯಾದ ಆಹ್ವಾನಕ್ಕೆ ಓಕೆ ಎಂದ ಭಾರತಅಫ್ಘಾನಿಸ್ತಾನ ಕುರಿತು ಮಾತುಕತೆ : ರಷ್ಯಾದ ಆಹ್ವಾನಕ್ಕೆ ಓಕೆ ಎಂದ ಭಾರತ

ಆ ವೇದಿಕೆಯೊಂದಿಗೆ ಮುಂದುವರೆಯಲು ಎದುರು ನೀಡುತ್ತಿದ್ದೇವೆ, ಆದರೆ ನಾವು ಈ ವಾರ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ವಿದೇಶಾಂಗ ವಕ್ತಾರ ನೆಡ್‌ಪ್ರೈಸ್ ತಿಳಿಸಿದ್ದಾರೆ.

America Says Wont Join Afghanistan Talks Announced By Russia

ಮಾಸ್ಕೋದಲ್ಲಿ ತಾಲಿಬಾನಿಗಳ ಜತೆ ನಡೆಯಲಿರುವ ಮಾತುಕತೆಯಲ್ಲಿ ಭಾಗವಹಿಸಲು ಭಾರತ ಒಪ್ಪಿಕೊಂಡಿದೆ. ಅಕ್ಟೋಬರ್ 20ರಂದು ಮಾಸ್ಕೋದಲ್ಲಿ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾವು ನೀಡಿದ್ದ ಆಹ್ವಾನವನ್ನು ಭಾರತ ಸ್ವೀಕರಿಸಿದೆ.

ತಾಲಿಬಾನ್ ಕಳೆದ ಎರಡು ತಿಂಗಳ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದ್ದು, ಅಲ್ಲಿ ತನ್ನ ಸರ್ಕಾರವನ್ನು ರಚಿಸಿದೆ. ಅಫ್ಘಾನಿಸ್ತಾನದಲ್ಲಿ ಆರ್ಥಿಕ ವ್ಯವಸ್ಥೆ ಕುಂಠಿತದ ಜತೆ ಹಲವು ತೊಂದರೆಗಳು ಕಾಡುತ್ತಿವೆ. ಇದೆಲ್ಲದರ ಕುರಿತು ಮಾತುಕತೆ ನಡೆಯಲಿದೆ.

ತಾಲಿಬಾನ್‌ಗಳ ಕೈಯಲ್ಲಿ ಅಫ್ಘಾನಿಸ್ತಾನ ಸುರಕ್ಷಿತವಾಗಿದೆ ಎಂದ ರಷ್ಯಾ!ತಾಲಿಬಾನ್‌ಗಳ ಕೈಯಲ್ಲಿ ಅಫ್ಘಾನಿಸ್ತಾನ ಸುರಕ್ಷಿತವಾಗಿದೆ ಎಂದ ರಷ್ಯಾ!

ಭಾರತೀಯ ಭಾಗವಹಿಸುವಿಕೆಯನ್ನು ದೃಢೀಕರಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅಕ್ಟೋಬರ್ 20 ರಂದು ಅಫ್ಘಾನಿಸ್ತಾನದ ಬಗ್ಗೆ ಮಾಸ್ಕೋದಲ್ಲಿ ನಡೆಯುವ ಸಭೆಗೆ ನಮಗೆ ಆಹ್ವಾನ ಬಂದಿದೆ. ನಾವು ಅದರಲ್ಲಿ ಭಾಗವಹಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಕಳೆದ ವಾರ ಅಫ್ಘಾನಿಸ್ತಾನದ ಕುರಿತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ವಿಶೇಷ ಪ್ರತಿನಿಧಿ ಜಮೀರ್ ಕಾಬುಲೋವ್, ರಷ್ಯಾ ಅಕ್ಟೋಬರ್ 20 ರಂದು ಅಫ್ಘಾನಿಸ್ತಾನದ ಕುರಿತು ಅಂತರಾಷ್ಟ್ರೀಯ ಮಾತುಕತೆಗೆ ತಾಲಿಬಾನ್ ಪ್ರತಿನಿಧಿಗಳನ್ನು ಆಹ್ವಾನಿಸಿದೆ ಎಂದು ಹೇಳಿದರು.

ಈ ವರ್ಷದ ಮಾರ್ಚ್‌ನಲ್ಲಿ ಮಾಸ್ಕೋ ಅಫ್ಘಾನಿಸ್ತಾನದಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿತು. ಇದರಲ್ಲಿ ರಷ್ಯಾ, ಅಮೆರಿಕ, ಚೀನಾ ಮತ್ತು ಪಾಕಿಸ್ತಾನ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು ಆಗ ಯುದ್ಧ ಮಾಡುತ್ತಿದ್ದ ಅಫ್ಘಾನ್ ಪಕ್ಷಗಳು ಶಾಂತಿ ಒಪ್ಪಂದಕ್ಕೆ ಬರುವಂತೆ ಕರೆ ನೀಡಿದವು.

ಎಂಇಎ ಜಂಟಿ ಕಾರ್ಯದರ್ಶಿ ಮಟ್ಟದ ಅಧಿಕಾರಿಯನ್ನು ಸಭೆಗೆ ಕಳುಹಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದ್ದು ಅಂತಿಮ ನಿರ್ಧಾರವನ್ನು ಇನ್ನೂ ತೆಗೆದುಕೊಳ್ಳಲಾಗಿಲ್ಲ.

ಅಫ್ಘಾನಿಸ್ತಾನದಲ್ಲಿನ ಬದಲಾವಣೆಯ ಹಿನ್ನೆಲೆಯಲ್ಲಿ ದೇಶದಲ್ಲಿ ಮಾನವೀಯ ಅನಾಹುತಗಳನ್ನು ತಪ್ಪಿಸಲು ಸಹಾಯ ಮಾಡುವುದಕ್ಕಾಗಿ ಅಕ್ಟೋಬರ್ 12 ರಂದು ನಡೆದ ಜಿ 20 ಶೃಂಗಸಭೆಯ ಬೆನ್ನಲ್ಲೇ ಈ ಮಾತುಕತೆ ನಡೆಯಲಿದೆ.

ಪ್ರಾದೇಶಿಕ ಭದ್ರತಾ ಸಂವಾದಕ್ಕೆ ಪಾಕಿಸ್ತಾನಕ್ಕೆ ಆಹ್ವಾನ: ಕಾಬೂಲ್ ಅನ್ನು ತಾಲಿಬಾನ್ ಸ್ವಾಧೀಪಡಿಸಿಕೊಂಡ ಮೇಲೆ ಅಫ್ಘಾನಿಸ್ತಾನದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಅಫ್ಘಾನಿಸ್ತಾನದೊಂದಿಗೆ ಗಡಿ ಹಂಚಿಕೊಂಡಿರುವ ಮತ್ತು ಪ್ರಾದೇಶಿಕ ಶಕ್ತಿಗಳ ಜತೆ ಚರ್ಚೆ ನಡೆಸಬೇಕೆಂಬ ಆಲೋಚನೆಯನ್ನು ಭಾರತ ಇಟ್ಟುಕೊಂಡಿದೆ.

ಅಫ್ಘಾನಿಸ್ತಾನ ಭವಿಷ್ಯ ಎಂಬ ವಿಚಾರ ಕುರಿತಂತೆ ನವೆಂಬರ್ ನಲ್ಲಿ ನವದೆಹಲಿಯಲ್ಲಿ ಪ್ರಾದೇಶಿಕ ಭದ್ರತಾ ಸಂವಾದ ನಡೆಸಲು ತೀರ್ಮಾನಿಸಲಾಗಿದೆ.

ಈ ಮಹತ್ವಪೂರ್ಣ ಸಭೆಯಲ್ಲಿ ಇರಾನ್, ರಷ್ಯಾ, ಚೀನಾ, ಪಾಕಿಸ್ತಾನ, ತಜಕಿಸ್ತಾನ್ ಹಾಗೂ ಉಜ್ಬೇಕಿಸ್ತಾನ ರಾಷ್ಟ್ರಗಳಿಗೆ ಆಹ್ವಾನ ನೀಡಲಾಗಿದೆ. ಪಾಕಿಸ್ತಾನ ಸೇರಿದಂತೆ ಎಲ್ಲ ಆರು ರಾಷ್ಟ್ರಗಳು ನವೆಂಬರ್ ನಲ್ಲಿ ನಡೆಯಲಿರುವ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಮೂಲಗಳ ಪ್ರಕಾರ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನೇತೃತ್ವದಲ್ಲಿ ಈ ಸಭೆ ನಡೆಯಲಿದೆ.

ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೋಯಿದ್ ಯೂಸುಫ್, ಕಳೆದ ವಾರ ಭಾರತದ ಆಹ್ವಾನವನ್ನ ಸ್ವೀಕರಿಸಿದ್ದಾರೆ ಎಂದು ಪಾಕಿಸ್ತಾನದ ಮೂಲಗಳು ದೃಢಪಡಿಸಿವೆ. ಆದರೆ, ದೆಹಲಿ ಸಭೆಯಲ್ಲಿ ಭಾಗವಹಿಸಬೇಕೆ ಅಥವಾ ಬೇಡವೇ ಅನ್ನೋ ಬಗ್ಗೆ ಇನ್ನು ತೀರ್ಮಾನ ಕೈಗೊಂಡಿಲ್ಲ ಅಂತಾ ಪಾಕಿಸ್ತಾನ ತಿಳಿಸಿದೆ.

ಈ ಮಧ್ಯೆ, ಅಕ್ಟೋಬರ್ 20ರಂದು ಅಫ್ಘಾನಿಸ್ತಾನದ ಪರಿಸ್ಥಿತಿ ಕುರಿತು ಚರ್ಚಿಸಲು ರಷ್ಯಾದ ಮಾಸ್ಕೋದಲ್ಲಿ ಸಭೆ ಆಯೋಜಿಸಾಗಿದೆ. ಸಭೆಯಲ್ಲಿ ಭಾರತ, ಚೀನಾ, ಪಾಕಿಸ್ತಾನ, ಅಮೆರಿಕ, ಮಧ್ಯ ಏಷ್ಯಾ ರಾಷ್ಟ್ರಗಳಿಗೆ ರಷ್ಯಾ ಆಹ್ವಾನಿಸಿದೆ. ಈ ಸಭೆಯಲ್ಲಿ ತಾಲಿಬಾನ್ ಸರ್ಕಾರದ ಉಪ ಪ್ರಧಾನಿಗೂ ಆಹ್ವಾನ ನೀಡಲಾಗಿದೆ. ಸಭೆಗೆ ಹಾಜರಾಗುವುದಾಗಿ ಭಾರತ ಈಗಾಗಲೇ ಖಚಿತ ಪಡಿಸಿದೆ.

ಆಗಸ್ಟ್ 15ರಂದು ತಾಲಿಬಾನ್ ಪಡೆಗಳು ಅಫ್ಘಾನಿಸ್ತಾನ ವಶಪಡಿಸಿಕೊಂಡ ನಂತರ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಶಿಯಾ ಸಮುದಾಯವನ್ನು ಗುರಿಯಾಗಿರಿಸಿಕೊಂಡು ಕಂದಾಹಾರ್ ಪ್ರಾರ್ಥನಾ ಮಂದಿರದ ಮೇಲೆ ದಾಳಿ ನಡೆಸಲಾಗಿತ್ತು. ಈ ವೇಳೆ 47ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಈ ಕಾರಣದಿಂದಾಗಿ ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲಸುವ ಸಂಬಂಧ ಭಾರತ ಪ್ರಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ನವೆಂಬರ್ ನಲ್ಲಿ ನಡೆಯಲಿರುವ ಸಭೆ ಅತ್ಯಂತ ಮಹತ್ವ ಪಡೆದುಕೊಂಡಿದೆ.

English summary
The United States said it will not join talks on Afghanistan announced for this Tuesday by Russia that will include two other key players, China and Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X