ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾದಲ್ಲಿ ನಿರುದ್ಯೋಗ ಪ್ರಮಾಣ 50 ವರ್ಷದ ಕನಿಷ್ಠ ಮಟ್ಟಕ್ಕೆ ಕುಸಿತ

|
Google Oneindia Kannada News

ವಾಷಿಂಗ್ಟನ್, ಅಕ್ಟೋಬರ್ 4: ಅಮೆರಿಕಾದಲ್ಲಿ ನಿರುದ್ಯೋಗ ಪ್ರಮಾಣವು ಸೆಪ್ಟೆಂಬರ್ ನಲ್ಲಿ ಐವತ್ತು ವರ್ಷದಲ್ಲೇ ಕನಿಷ್ಠ ಮಟ್ಟ ತಲುಪಿದೆ. ಇದರಿಂದ ಆರ್ಥಿಕ ಹಿಂಜರಿತದ ಆತಂಕ ದೂರ ಮಾಡುವ ಸಾಧ್ಯತೆ ಇದೆ ಎಂಬ ಅಂಶವನ್ನು ಎಂಬ ದತ್ತಾಂಶವನ್ನು ಶುಕ್ರವಾರ ಸರ್ಕಾರ ಬಿಡುಗಡೆ ಮಾಡಿದೆ.

ಉದ್ಯೋಗ ಸೃಷ್ಟಿ ಆಗುತ್ತಿದ್ದರೂ ಆ ಪ್ರಮಾಣ ತೀರಾ ಹೆಚ್ಚಿಲ್ಲ. ಜತೆಗೆ ವೇತನ ಕೂಡ ಉತ್ತಮವಾದುದಲ್ಲ. ಅದು ಮಂದಗತಿಯನ್ನೇ ಸೂಚಿಸುತ್ತಿದೆ. ನಿರುದ್ಯೋಗವು ಹತ್ತನೇ ಎರಡರಿಂದ 3.5 ಪರ್ಸೆಂಟ್ ಗೆ ಕುಸಿದಿದೆ. ಇದಕ್ಕೂ ಮುನ್ನ 1969ರ ಡಿಸೆಂಬರ್ ನಲ್ಲಿ ನಿರುದ್ಯೋಗ ಪ್ರಮಾಣ ಈ ಮಟ್ಟವನ್ನು ತಲುಪಿತ್ತು.

ಮೋದಿ 'ಭಾರತದ ಪಿತಾಮಹ' ಎಂದ ಡೊನಾಲ್ಡ್ ಟ್ರಂಪ್ಮೋದಿ 'ಭಾರತದ ಪಿತಾಮಹ' ಎಂದ ಡೊನಾಲ್ಡ್ ಟ್ರಂಪ್

ಉದ್ಯೋಗದಾತರು ಹೊಸದಾಗಿ ನಿವ್ವಳ 136000 ಹೊಸ ಹುದ್ದೆಗಳನ್ನು ಸೇರ್ಪಡೆ ಮಾಡಿದ್ದಾರೆ. ಇದು ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಏಕೆಂದರೆ ಶಿಕ್ಷಣ, ಸರ್ಕಾರ, ಆರ್ಥಿಕ ಹಾಗೂ ವ್ಯಾಪಾರ ಸೇವೆಗಳಲ್ಲಿ ಹಿಂಜರಿತ ಆಗಿದೆ ಎನ್ನಲಾಗುತ್ತಿದೆ. ಆಗಸ್ಟ್ ನಲ್ಲಿ ಉದ್ಯೋಗ ಪಡೆದ ಪ್ರಮಾಣ 1,68,000ಕ್ಕೆ ಪರಿಷ್ಕೃತವಾಗಿದೆ. ಅದಕ್ಕೂ ಮುನ್ನ ವರದಿ ಆಗಿದ್ದಕ್ಕಿಂತ 40,000 ಹೆಚ್ಚಿನ ಪ್ರಮಾಣ ಇದಾಗಿದೆ.

Donald Trump

"ಬ್ರೇಕಿಂಗ್ ನ್ಯೂಸ್: ನಿರುದ್ಯೋಗ ಪ್ರಮಾಣ 3.5%, 50 ವರ್ಷದ ಕನಿಷ್ಠ ಮಟ್ಟಕ್ಕೆ ಕುಸಿತ. ವಾಹ್ ಅಮೆರಿಕಾ, ನಿಮ್ಮ ಅಧ್ಯಕ್ಷರ ವಾಗ್ದಂಡನೆಗೆ ಗುರಿ ಮಾಡಿ (ಆತ ಯಾವುದೇ ತಪ್ಪು ಮಾಡದಿದ್ದರೂ!)" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ.

English summary
US government data released on Friday revealed that, America's unemployment rate fell to 50 year low.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X