• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಗತ್ತಿಗೆ ಚೀನಾ ದೊಡ್ಡಣ್ಣ..? ಸೋತು ಹೋಯಿತಾ ಅಮೆರಿಕ..?

|

ಡೊನಾಲ್ಡ್ ಟ್ರಂಪ್ ವಿರುದ್ಧ ಅಮೆರಿಕದ ಮಾಜಿ ಅಧ್ಯಕ್ಷ ಒಬಾಮಾ ಮತ್ತೆ ಗುಡುಗಿದ್ದಾರೆ. ಟ್ರಂಪ್ ಮಾಡಿದ ಎಡವಟ್ಟುಗಳಿಂದ ಅಮೆರಿಕದ ಮಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗಿದೆ ಎಂದು ಒಬಾಮಾ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದ ಒಬಾಮಾ ಈ ಹೇಳಿಕೆ ನೀಡಿದ್ದಾರೆ. ಅಮೆರಿಕದಲ್ಲಿ ಪ್ರತಿಬಾರಿ ಅಧ್ಯಕ್ಷೀಯ ಚುನಾವಣೆ ರಿಪಬ್ಲಿಕನ್ಸ್ V/ S ಡೆಮಾಕ್ರಟಿಕ್ ಎನ್ನುವಂತಿತ್ತು. ಆದರೆ 2020ರ ಅಧ್ಯಕ್ಷೀಯ ಚುನಾವಣೆ ಟ್ರಂಪ್ V/ S ಟ್ರಂಪ್ ವಿರೋಧಿಗಳು ಎನ್ನುವಂತೆ ಬಿಂಬಿತವಾಗುತ್ತಿದೆ. ಇದಕ್ಕೆಲ್ಲಾ ಕಾರಣ ಟ್ರಂಪ್‌ಗೆ ಸ್ವಂತ ಪಕ್ಷದಲ್ಲೇ ವಿರೋಧಿಗಳು ಹುಟ್ಟಿಕೊಂಡಿರುವುದು. ಇಷ್ಟೆಲ್ಲದರ ಮಧ್ಯೆ ಅಮೆರಿಕದ 44ನೇ ಅಧ್ಯಕ್ಷ ಒಬಾಮಾ ಕೂಡ ಟ್ರಂಪ್ ವಿರುದ್ಧ ಅಖಾಡ ಪ್ರವೇಶಿಸಿದ್ದಾರೆ.

ಅಮೆರಿಕದ ಪೌರತ್ವ ನೀಡುವ ಆಶ್ವಾಸನೆ ನೀಡಿದ ಜೋ

ಜಗತ್ತಿನಲ್ಲಿ ಅಮೆರಿಕ ಎಂದರೆ ಉನ್ನತ ಭಾವನೆ ಇದೆ, ಗೌರವ ಇದೆ. ಆದರೆ ಟ್ರಂಪ್ ಅಧಿಕಾರಕ್ಕೆ ಬಂದ ಬಳಿಕ ಅಮೆರಿಕದ ಘನತೆ ದಿನದಿನಕ್ಕೂ ಕುಸಿಯುತ್ತಾ ಸಾಗಿದೆ. ಇದಕ್ಕೆಲ್ಲಾ ಡೊನಾಲ್ಡ್ ಟ್ರಂಪ್ ವರ್ತನೆ, ಅವರು ಕೈಗೊಳ್ಳುತ್ತಿರುವ ವಿವಾದಾತ್ಮಕ ಕ್ರಮಗಳೇ ಕಾರಣ ಎಂದು ಒಬಾಮಾ ಟ್ರಂಪ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಒಬಾಮಾ ಹೇಳಿಕೆ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಕಿಚ್ಚುಹಚ್ಚಿದೆ.

ಜಗತ್ತಿಗೆ ತೊಂದರೆ ಆದರೆ ಮಾಸ್ಕೋ ಬೇಕಿಲ್ಲ..!

ಜಗತ್ತಿಗೆ ತೊಂದರೆ ಆದರೆ ಮಾಸ್ಕೋ ಬೇಕಿಲ್ಲ..!

ಇದುವರೆಗೂ ಜಗತ್ತಿಗೆ ತೊಂದರೆ ಆದರೆ ವಾಷಿಂಗ್ಟನ್ ಕಡೆಗೆ ಮುಖ ಮಾಡಿ ನಿಲ್ಲುತ್ತಿದ್ರು. ಅವರಿಗೆ ಮಾಸ್ಕೋ ಬೇಕಿರಲಿಲ್ಲ. ಆದರೆ ಟ್ರಂಪ್ ಈಗ ಎಲ್ಲವನ್ನೂ ಹಾಳು ಮಾಡುತ್ತಿದ್ದಾರೆ. ಅಮೆರಿಕದ ವಿರೋಧಿಗಳಿಗೆ ಅದೇನು ಬೇಕೋ ಹಾಗೇ ಟ್ರಂಪ್ ಮನಸ್ಸಿಗೆ ಬಂದಂತೆ ವರ್ತಿಸುತ್ತಿದ್ದಾರೆ. ಕೊರೊನಾ ಬಗ್ಗೆ ಬಾಯಿಗೆ ಬಂದಂತೆ ಹೇಳಿಕೆ ಕೊಡುತ್ತಿದ್ದಾರೆ.

ಕೊರೊನಾ ಭೀತಿ: ಅಂಚೆ ಮತದಾನಕ್ಕೆ ಮುಗಿಬಿದ್ದ ಅಮೆರಿಕನ್ನರು

ಇದೆಲ್ಲದರ ಪರಿಣಾಮ ಅಮೆರಿಕ ಮಾನ ಹರಾಜಾಗಿದೆ ಎಂದು ಒಬಾಮಾ ಆರೋಪಿಸಿದ್ದಾರೆ. ಅಲ್ಲದೆ ಟ್ರಂಪ್‌ಗೆ ತಮ್ಮ ಕ್ರಮ ಹಾಗೂ ತಾವು ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟನೆ ಇರುವುದಿಲ್ಲ ಎಂದು ಒಬಾಮಾ ಆರೋಪಿಸಿದ್ದಾರೆ. ಇದೆಲ್ಲದರ ಪರಿಣಾಮ ರಷ್ಯಾ ಹಾಗೂ ಚೀನಾ ಜಗತ್ತಿನ ಚುಕ್ಕಾಣಿಗೆ ಹಿಡಿಯಲು ಹವಣಿಸುತ್ತಿವೆ ಎಂದು ಒಬಾಮಾ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಅಮೆರಿಕದ ಜೊತೆಗೆ ಇತರ ದೇಶಗಳ ಸಂಬಂಧ ಹಾಳಾಗಲು ಟ್ರಂಪ್ ಕಾರಣ ಎಂದು ಒಬಾಮಾ ಹೇಳಿದ್ದಾರೆ.

ಕೈಬಿಟ್ಟು ಹೋಗುತ್ತಿದೆಯಾ ಯೂರೋಪ್..?

ಕೈಬಿಟ್ಟು ಹೋಗುತ್ತಿದೆಯಾ ಯೂರೋಪ್..?

ಹೌದು, ಒಬಾಮಾ ಮಾತುಗಳನ್ನು ಸೂಕ್ಷ್ಮವಾಗಿ ಅರ್ಥೈಸಿಕೊಂಡರೆ ಆಘಾತಕಾರಿ ಸತ್ಯಗಳು ಹೊರಬೀಳುತ್ತವೆ. ಇದುವರೆಗೂ ಯುರೋಪ್ ಅಮೆರಿಕದ ನೆರಳಲ್ಲೇ ಬೆಳೆಯಲು ಇಚ್ಛಿಸುತ್ತಿತ್ತು. ಅದರಲ್ಲೂ 2ನೇ ಮಹಾಯುದ್ಧ ಮುಗಿದ ಬಳಿಕ ಅಮೆರಿಕ ಯುರೋಪ್ ದೇಶಗಳ ಪಾಲಿಗೆ ನಿಜವಾದ ಹೀರೋ ಆಗಿತ್ತು.

ಬ್ರಿಟನ್ ಪತನವಾದ ಬಳಿಕ ಅಮೆರಿಕ ಜಗತ್ತಿನ ಪರ ದೊಡ್ಡಣ್ಣನ ಪಾತ್ರ ನಿರ್ವಹಿಸುತ್ತಿದೆ. ಅದರಲ್ಲೂ ಯುರೋಪ್ ಪಾಲಿಗೆ ವಿಲನ್ ಆಗಿದ್ದ ಹಿಟ್ಲರ್‌ನ ಅಂತ್ಯವೂ ಅಮೆರಿಕದ ಸಹಾಯದಿಂದಲೇ ಆಗಿದ್ದು. ಇಷ್ಟೆಲ್ಲಾ ಇದ್ದರೂ ಕೆಲ ವರ್ಷಗಳಿಂದ ಯುರೋಪ್ ರಾಷ್ಟ್ರಗಳು ಅಮೆರಿಕದ ಸ್ನೇಹ ಮರೆಯುತ್ತಿವೆ. ಅಲ್ಲದೆ ಚೀನಾಗೆ ಹತ್ತಿರವಾಗುತ್ತಿವೆ. ಇದಕ್ಕೆಲ್ಲಾ ತಾಜಾ ಉದಾಹರಣೆ ಚೀನಾ ಯುರೋಪ್ ದೇಶಗಳಲ್ಲಿ ಮಾಡುತ್ತಿರುವ ಹೂಡಿಕೆ ಹಾಗೂ ಸಹಾಯದ ನೆಪ ಹೇಳುತ್ತಾ ಯುರೋಪ್ ರಾಷ್ಟ್ರಗಳಿಗೆ ಹತ್ತಿರವಾಗುತ್ತಿರುವ ಪರಿ ಅಮೆರಿಕನ್ನರಲ್ಲಿ ಆತಂಕ ಮೂಡಿಸುತ್ತಿದೆ.

ಟ್ರಂಪ್ ನಾಲಾಯಕ್ ಅಧ್ಯಕ್ಷ..!

ಟ್ರಂಪ್ ನಾಲಾಯಕ್ ಅಧ್ಯಕ್ಷ..!

ಒಬಾಮಾ ಹೀಗೆ ಟ್ರಂಪ್ ವಿರುದ್ಧ ವಾಗ್ದಾಳಿ ನಡೆಸುತ್ತಿರುವುದು ಇದೇ ಮೊದಲಲ್ಲ. ಕಳೆದ ತಿಂಗಳು ಇದೇ ರೀತಿ ಟ್ರಂಪ್‌ಗೆ ಬೆವರಿಳಿಸಿದ್ದರು. ಡೆಮಾಕ್ರಟಿಕ್ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ್ದ ಅಮೆರಿಕದ ಮಾಜಿ ಅಧ್ಯಕ್ಷ ಒಬಾಮಾ, ಟ್ರಂಪ್ ತಾವು ಕುಳಿತ ಕಚೇರಿಗೆ ಒಂದಿಷ್ಟೂ ಯೋಗ್ಯರಲ್ಲ ಎಂದಿದ್ದಾರೆ. ಅಲ್ಲದೆ ಅಧ್ಯಕ್ಷ ಸ್ಥಾನ ನಿಭಾಯಿಸಲು ಟ್ರಂಪ್ ಅದಕ್ಷ ಎಂದು ಯಾವುದೇ ಮುಲಾಜು ನೋಡದೆ ಟ್ರಂಪ್‌ ಆಡಳಿತ ವೈಖರಿ ಜರಿದಿದ್ರು. ಟ್ರಂಪ್ ಕೆಲಸ ಮಾಡಲು ಆಸಕ್ತಿ ತೋರುತ್ತಿಲ್ಲ. ಟ್ರಂಪ್ ತಮಗೆ ಮತ್ತು ಅವರ ಸ್ನೇಹಿತರನ್ನ ಹೊರತುಪಡಿಸಿ ಯಾರಿಗಾದರೂ ಸಹಾಯ ಮಾಡಲು ಕಚೇರಿ ನೀಡಿರುವ ಅಧಿಕಾರ ಬಳಸಿಕೊಳ್ಳಲು ಆಸಕ್ತಿ ತೋರುತ್ತಿಲ್ಲ ಎಂದು ಆರೋಪಿಸಿದ್ದರು. ಡೆಮಾಕ್ರಟಿಕ್ ರಾಷ್ಟ್ರೀಯ ಸಮಾವೇಶದ ಬಳಿಕ ಒಬಾಮಾ ಇದೀಗ ಮತ್ತೆ ಟ್ರಂಪ್ ವಿರುದ್ಧ ಚುನಾವಣಾ ಅಖಾಡ ಪ್ರವೇಶಿಸಿದ್ದಾರೆ.

ಅಮೆರಿಕ ಅಧ್ಯಕ್ಷರ ಆಯ್ಕೆಗೆ ದಿನಗಣನೆ, 244 ವರ್ಷಗಳ ಮಹಾನ್ ಇತಿಹಾಸ

English summary
Obama alleges that America's international relations have been tarnished by the plight of Trump. Obama has said that Trump doing what America's opponents want.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X