ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಪಾಪಿಸ್ತಾನ'ಕ್ಕೆ ತಕ್ಕ ಶಾಸ್ತಿ! ಪಾಕ್ ಗೆ ಬಿಗ್ ಶಾಕ್ ನೀಡಿದ ಅಮೆರಿಕ

|
Google Oneindia Kannada News

Recommended Video

Pulwama : ದೇಶಕ್ಕೆ ದೊಡ್ಡ ಆಘಾತ ನೀಡಿದ ಅಮೇರಿಕಾ | Oneindia Kannada

ವಾಷಿಂಗ್ಟನ್, ಮಾರ್ಚ್ 06: ತನ್ನ ವೀಸಾ ನೀತಿಯಲ್ಲಿ ಬದಲಾವಣೆ ಮಾಡಿರುವ ಅಮೆರಿಕ, ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಿದೆ.

ಪಾಕಿಸ್ತಾನಿ ಪ್ರಜೆಗಳಿಗಿದ್ದ 5 ವರ್ಷಗಳ ವೀಸಾ ಅವಧಿಯನ್ನು 3 ತಿಂಗಳಿಗೆ ಇಳಿಸುವ ಮೂಲಕ ಪಾಕಿಸ್ತಾನಕ್ಕೆ ಭಾರೀ ಆಘಾತ ನೀಡಿದೆ.

ಅಷ್ಟೇ ಅಲ್ಲ, ವೀಸಾ ಶುಲ್ಕದಲ್ಲೂ ಬದಲಾವಣೆ ಮಾಡಲಾಗಿದೆ.

ಭಾರತಕ್ಕೆ ಭಾರೀ ಆಘಾತ ನೀಡಿದ ಡೊನಾಲ್ಡ್ ಟ್ರಂಪ್ ನಡೆಭಾರತಕ್ಕೆ ಭಾರೀ ಆಘಾತ ನೀಡಿದ ಡೊನಾಲ್ಡ್ ಟ್ರಂಪ್ ನಡೆ

ಬರೋಬ್ಬರಿ ಐದು ವರ್ಷಗಳಿಂದ ಮೂರು ತಿಂಗಳಿಗೆ ವೀಸಾ ಅವಧಿಯನ್ನು ಕಡಿತಗೊಳಿಸಿದ್ದು, ಇದು ಪಾಕ್ ನಾಗರಿಕರಿಗೆ ಮತ್ತು ಅಮೆರಿಕದಲ್ಲಿರುವ ಪಾಕ್ ಪತ್ರಕರ್ತರಿಗೂ ಅನ್ವಯಿಸುತ್ತದೆ ಎಂದು ಅಮೆರಿಕ ಹೇಳಿದೆ ಎಂದು ARY ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ಪುಲ್ವಾಮಾ ಘಟನೆಯ ನಂತರ ಅಮೆರಿಕ ಸೇರಿದಂತೆ ವಿಶ್ವದ ನಾನಾ ದೇಶಗಳ ಎಚ್ಚರಿಕೆಯನ್ನೂ ಗಂಭೀರವಾಗಿ ಪರಿಗಣಿಸಿದೆ, ಈಗಲೂ ಉಗ್ರರಿಗೆ ನೆಲೆ ನೀಡುತ್ತಲೇ ಇರುವ ಪಾಕಿಸ್ತಾನಕ್ಕೆ ಇದೊಂದು ಭಾರೀ ಆಘಾತ ಎನ್ನಿಸಿದೆ.

ಹೊಸ ವೀಸಾ ಪಾಲಿಸಿ

ಹೊಸ ವೀಸಾ ಪಾಲಿಸಿ

"ಅಮೆರಿಕವು ಹೊಸ ವೀಸಾ ಪಾಲಿಸಿಯನ್ನು ಪರಿಚಯಿಸಿದ್ದು, ಹಳೇ ನೀತಿಯಲ್ಲಿ ಕೆಲವು ಬದಲಾವಣೆಗಳನ್ನು ತರಲಾಗಿದೆ. ಪಾಕಿಸ್ತಾನಿ ನಾಗರಿಕರಿಗಿದ್ದ ವೀಸಾ ಅವಧಿಯನ್ನು ಐದು ವರ್ಶಃದಿಂದ ಮೂರು ತಿಂಗಳಿಗೆ ಇಳಿಸಲಾಗಿದ್ದು, ವೀಸಾ ಶುಲ್ಕದಲ್ಲೂ ಬದಲಾವಣೆ ಮಾಡಲಾಗಿದೆ" ಎಂದು ಪಾಕಿಸ್ತಾನದಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ತಿಳಿಸಿದೆ.

ಅಮೆರಿಕ ಅಧ್ಯಕ್ಷ ಆದರೂ ಬಿಜಿನೆಸ್ ಮನ್ ಗಿಂತ ಎತ್ತರಕ್ಕೇರದ ಟ್ರಂಪ್ಅಮೆರಿಕ ಅಧ್ಯಕ್ಷ ಆದರೂ ಬಿಜಿನೆಸ್ ಮನ್ ಗಿಂತ ಎತ್ತರಕ್ಕೇರದ ಟ್ರಂಪ್

ಶುಲ್ಕ ಎಷ್ಟು?

ಶುಲ್ಕ ಎಷ್ಟು?

ಪಾಕಿಸ್ತಾನಿ ನಾಗರಿಕರಿಗೆ ಅಮೆರಿಕ ವೀಸಾ ಪಡೆಯಲು ಇದ್ದ ಶುಲ್ಕವನ್ನು 160 ಡಾಲರ್(11,520 ರೂ.)ನಿಂದ 192 ಡಾಲರ್(13,824 ರೂ.) ಗೆ ಹೆಚ್ಚಿಸಲಾಗಿದೆ. ಅಂತೆಯೇ ವೀಸಾ ಕಾಲಮಿತಿಯನ್ನೂ ಕಡಿತಗೊಳಿಸಲಾಗಿದೆ.

ಪಾಕಿಸ್ತಾನ ಸುಳ್ಳು ಹೇಳಿಕೆಗೆ ಪ್ರತ್ಯುತ್ತರ ಭಾರತೀಯ ಜಲಸೇನೆಪಾಕಿಸ್ತಾನ ಸುಳ್ಳು ಹೇಳಿಕೆಗೆ ಪ್ರತ್ಯುತ್ತರ ಭಾರತೀಯ ಜಲಸೇನೆ

ಉಗ್ರರಿಗೆ ನೆಲೆ ನೀಡಿದ್ದಕ್ಕಾಗಿ ತಕ್ಕ ಶಾಸ್ತಿ?

ಉಗ್ರರಿಗೆ ನೆಲೆ ನೀಡಿದ್ದಕ್ಕಾಗಿ ತಕ್ಕ ಶಾಸ್ತಿ?

ಪಾಕಿಸ್ತಾನ ಇಡಿ ವಿಶ್ವದ ಎಚ್ಚರಿಕೆಯ ಹೊರತಾಗಿಯೂ ಉಗ್ರರಿಗೆ ನೆಲೆ ನೀಡುತ್ತಿರುವ ಕಾರಣಕ್ಕೆ ಅಮೆರಿಕ ಇಂಥ ನಿರ್ಧಾರ ಕೈಗೊಂಡಿದೆಯೇ? ಎಂಬ ಪ್ರಶ್ನೆ ಈಗ ಎದ್ದಿದೆ. ಉಗ್ರರಿಗೆ ನೆಲೆ ನೀಡುವ ಕುರಿತು ವಿಶ್ವಸಂಸ್ಥೆ ನೀಡಿದ ಎಚ್ಚರಿಕೆಯನ್ನೂ ಪಾಕಿಸ್ತಾನ ಗಂಭೀರವಾಗಿ ಪರಿಗಣಿಸದಿರುವುದು ಪಾಕಿಸ್ತಾನಕ್ಕೆ ಇದೀಗ ಮುಳುವಾಗಿರುವುದು ಖಂಡಿತ.

ಪುಲ್ವಾಮಾ ದಾಳಿಯ ನಂತರ ಬದಲಾದ ಸನ್ನಿವೇಶ

ಪುಲ್ವಾಮಾ ದಾಳಿಯ ನಂತರ ಬದಲಾದ ಸನ್ನಿವೇಶ

ಪುಲ್ವಾಮಾದಲ್ಲಿ ಫೆಬ್ರವರಿ 14 ರಂದು ನಡೆದ ಭಯೋತ್ಪಾದಕ ದಾಳಿ ಮತ್ತು ಆ ದಾಳಿಯಲ್ಲಿ ಪಾಕಿಸ್ತಾನ ಮೂಲದ ಜೈಶ್ ಇ ಮೊಹಮ್ಮದ್ ಸಂಘಟನೆಯ ಪಾತ್ರವಿದೆ ಎಂಬುದು ದೃಢವಾದ ಮೇಲೆ ಪಾಕಿಸ್ತಾನಕ್ಕೆ ಅಮೆರಿಕ ಸೇರಿದಂತೆ ಹಲವು ದೇಶಗಳು ಖಡಕ್ ವಾರ್ನಿಂಗ್ ನೀಡಿದ್ದವು. ಉಗ್ರರನ್ನು ದಮನ ಮಾಡುವಂತೆ ಆಜ್ಞಾಪಿಸಿದ್ದವು. ಪುಲ್ವಾಮಾ ದಾಳಿಯಲ್ಲಿ ಭಾರತದ 44 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರು.

English summary
Visa duration for Pakistani citizens has been reduced to three months from five years, reports ARY News quoting US Embassy spokesperson.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X