ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಜರ್ 'ಜಾಗತಿಕ ಉಗ್ರ': ಭಾರತಕ್ಕೆ ನಮ್ಮ ಬೆಂಬಲ ಎಂದ ಅಮೆರಿಕ

|
Google Oneindia Kannada News

ವಾಷಿಂಗ್ಟನ್, ಮಾರ್ಚ್ 14: ಉಗ್ರ ಸಂಘಟನೆ ಜೈಶ್ ಎ ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್‌ನನ್ನು 'ಜಾಗತಿಕ ಉಗ್ರ' ಎಂದು ವಿಶ್ವಸಂಸ್ಥೆಯಲ್ಲಿ ಘೋಷಣೆ ಮಾಡಲು ಚೀನಾ ತಡೆಯೊಡ್ಡಿರುವುದಕ್ಕೆ ಭಾರತ ನಿರಾಸೆ ವ್ಯಕ್ತಪಡಿಸಿದೆ.

ಇದರ ಬೆನ್ನಲ್ಲೇ ವಿಶ್ವದ ದೊಡ್ಡಣ್ಣ ಅಮೆರಿಕ, ಭಾರತಕ್ಕೆ ತನ್ನ ಬೆಂಬಲವನ್ನು ಪುನರುಚ್ಚರಿಸಿದೆ. ಚೀನಾದ ನಡೆ ವಿರುದ್ಧ ಕಿಡಿಕಾರಿದೆ. ಅಲ್ಲದೆ, ಮಸೂದ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸುವ ನಿಟ್ಟಿನಲ್ಲಿ ಭಾರತಕ್ಕೆ ತನ್ನ ಸಂಪೂರ್ಣ ಬೆಂಬಲವಿದ್ದು, ಜೈಶ್ ವಿರುದ್ಧದ ಹೋರಾಟದಲ್ಲಿ ಕ್ರಮ ತೆಗೆದುಕೊಳ್ಳುವುದನ್ನು ಮುಂದುವರಿಸುವುದಾಗಿ ಭರವಸೆ ನೀಡಿದೆ.

ನಾಲ್ಕನೇ ಬಾರಿಗೆ ವಿಶ್ವಸಂಸ್ಥೆ ಭದ್ರತಾ ಸಮಿತಿಯಲ್ಲಿ ಅಜರ್ ನನ್ನು ರಕ್ಷಿಸಿದ ಚೀನಾ ನಾಲ್ಕನೇ ಬಾರಿಗೆ ವಿಶ್ವಸಂಸ್ಥೆ ಭದ್ರತಾ ಸಮಿತಿಯಲ್ಲಿ ಅಜರ್ ನನ್ನು ರಕ್ಷಿಸಿದ ಚೀನಾ

ಅಜರ್ ವಿಚಾರದಲ್ಲಿ ಚೀನಾದ ನಡೆಯು ಜಾಗತಿಕ ಮಟ್ಟದಲ್ಲಿನ ಭಯೋತ್ಪಾದನೆಯ ವಿರುದ್ಧದ ನಮ್ಮ ಹೋರಾಟಕ್ಕೆ ತಡೆಯಾಗಿದೆ. ಈ ನಿರ್ದಿಷ್ಟ ವಿಷಯದ ಬಗ್ಗೆ ಹೇಳಿಕೆ ನೀಡುವುದಿಲ್ಲ. ಆದರೆ, ಭಾರತದ ಪ್ರಯತ್ನಕ್ಕೆ ಬೆಂಬಲ ನೀಡುವುದನ್ನು ಮುಂದುವರಿಸಲಿದ್ದೇವೆ ಎಂದು ಅಮೆರಿಕ ರಾಜತಾಂತ್ರಿಕ ಕಚೇರಿ ವಕ್ತಾರರು ತಿಳಿಸಿದ್ದಾರೆ.

america reaffirms support to india on china block pakistan jem azhar masood global terrorist

ನಮ್ಮ ನೆಲೆ ಮೇಲೆ ಭಾರತ ದಾಳಿ ಮಾಡಿದ್ದು ಸತ್ಯ: ಜೈಷ್ ಉಗ್ರ ಮಸೂದ್ ನಮ್ಮ ನೆಲೆ ಮೇಲೆ ಭಾರತ ದಾಳಿ ಮಾಡಿದ್ದು ಸತ್ಯ: ಜೈಷ್ ಉಗ್ರ ಮಸೂದ್

ವಿಶ್ವಸಂಸ್ಥೆಯ ನಿರ್ಬಂಧ ಸಮಿತಿಯೊಂದಿಗೆ ಅಮೆರಿಕ ಚರ್ಚಿಸಲಿದೆ. ಪ್ರಾದೇಶಿಕ ಭದ್ರತೆಯ ವಿಚಾರದಲ್ಲಿ ಚೀನಾ ಭಾರತಕ್ಕೆ ಸಹಕಾರ ನೀಡಬೇಕು. ಪಾಕಿಸ್ತಾನದ ಉಗ್ರರನ್ನು ರಕ್ಷಿಸಲು ಅದು ಮುಂದಾಗಬಾರದು ಎಂದು ಅವರು ಹೇಳಿದ್ದಾರೆ.

English summary
America reaffirms its support to India on declaring JEM chief Azhar Masood as 'Global Terrorist' after China blocks India's initiative in United Nations Security Council.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X