ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾ: ಹೆಚ್-1ಬಿ ವಿಶೇಷ ಉದ್ಯೋಗಿಗಳಿಗಿಲ್ಲ ವ್ಯಾಪಾರ ವೀಸಾ

|
Google Oneindia Kannada News

ವಾಶಿಂಗ್ಟನ್, ಅಕ್ಟೋಬರ್.22: ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ಎಚ್-1ಬಿ ವಿಶೇಷ ಉದ್ಯೋಗಿಗಳಿಗೆ ತಾತ್ಕಾಲಿಕವಾಗಿ ವ್ಯಾಪಾರ ವೀಸಾ ನೀಡದಿರುವುದಕ್ಕೆ ರಾಜ್ಯ ಇಲಾಖೆಯು ಪ್ರಸ್ತಾಪಿಸಿದ್ದು, ನೂರಾರು ಭಾರತೀಯರ ಮೇಲೆ ಇದರ ಪರಿಣಾಮ ಬೀರಲಿದೆ.

ಹಲವು ಕಂಪನಿಗಳಲ್ಲಿ ಅಲ್ಪಾವಧಿವರೆಗೆ ತಂತ್ರಜ್ಞಾನ ಮತ್ತು ವೃತ್ತಿಪರ ಕಾರ್ಯಗಳನ್ನು ಪೂರ್ಣಗೊಳಿಸಲು ಈ ಮೊದಲು ಅವಕಾಶ ನೀಡಲಾಗುತ್ತಿತ್ತು. ನೂತನ ಪ್ರಸ್ತಾಪಕ್ಕೆ ಅನುಮೋದನೆ ಸಿಕ್ಕಲ್ಲಿ "ಎಚ್ ನೀತಿ ಬದಲಾಗಿ ಬಿ -1" ವಿದೇಶಿ ವೃತ್ತಿಪರರು ಅಮೆರಿಕಾ ಪ್ರವೇಶಿಸಲು ಮತ್ತು ನುರಿತ ಕಾರ್ಮಿಕರನ್ನು ನಿರ್ವಹಿಸಲು ಪರ್ಯಾಯ ಮಾರ್ಗವನ್ನು ಒದಗಿಸುತ್ತದೆ ಎಂಬ ತಪ್ಪು ಕಲ್ಪನೆಯನ್ನು ತೆಗೆದುಹಾಕುತ್ತದೆ.

ಎಚ್1ಬಿ ವೀಸಾ ಹೊಸ ನಿಯಮ, ಭಾರತದ ಐಟಿ ಕ್ಷೇತ್ರಕ್ಕೆ ಆಘಾತ!ಎಚ್1ಬಿ ವೀಸಾ ಹೊಸ ನಿಯಮ, ಭಾರತದ ಐಟಿ ಕ್ಷೇತ್ರಕ್ಕೆ ಆಘಾತ!

America Proposes Not To Issue Business Visa For H-1B Speciality Occupations

ಅಮೆರಿಕಾದ ಕಾರ್ಮಿಕರನ್ನು ರಕ್ಷಿಸಲು ಕಾಂಗ್ರೆಸ್ ಸ್ಥಾಪಿಸಿದ ಎಚ್ ವಲಸೆರಹಿತ ವರ್ಗೀಕರಣಕ್ಕೆ ಸಂಬಂಧಿಸಿದ ನಿರ್ಬಂಧಗಳು ಮತ್ತು ಅವಶ್ಯಕತೆಗಳನ್ನು ತಪ್ಪಿಸಲು ಉದ್ಯೋಗಿಗಳು ಮತ್ತು ಕಂಪನಿಗಳಿಗೆ ಪ್ರೋತ್ಸಾಹಿಸ ಸಿಗುತ್ತದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.

ಭಾರತೀಯ ಕಂಪನಿಗಳ ಮೇಲೆ ಪರಿಣಾಮ:
ಅಮೆರಿಕಾ ಅಧ್ಯಕ್ಷೀಯ ಚುನಾವಣೆ ನವೆಂಬರ್.03ರಂದು ನಡೆಯಲಿದ್ದು, ಎರಡು ವಾರಗಳ ಮೊದಲೇ ಸರ್ಕಾರವು ತೆಗೆದುಕೊಂಡ ಕ್ರಮವು ಭಾರತೀಯ ಕಂಪನಿಗಳ ಮೇಲೆ ಪರಿಣಾಮ ಬೀರಲಿದೆ. ಏಕೆಂದರೆ ಹಲವು ಕಂಪನಿಗಳು ತಂತ್ರಜ್ಞಾನ ವೃತ್ತಿಪರ ಉದ್ಯೋಗಿಗಳನ್ನು ಅಲ್ಪಾವಧಿಗಾಗಿ ಬಿ-1 ವೀಸಾ ನೀಡಿ ಕಳುಹಿಸಲಾಗುತ್ತಿತ್ತು.
ಕಳೆದ 2019ರ ಡಿಸೆಂಬರ್.17ರಂದು ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್ ಇನ್ಫೋಸಿಸ್ ಲಿಮಿಟೆಡ್ ಜೊತೆಗೆ ಮಾಡಿಕೊಂಡಿದ್ದ 8 ಲಕ್ಷ ಯುಎಸ್ ಡಾಲರ್ ಒಪ್ಪಂದದ ಬಗ್ಗೆ ಘೋಷಿಸಿದ್ದರು. ಈ ಒಪ್ಪಂದದ ಪ್ರಕಾರ, ಇನ್ಫೋಸಿಸ್ ಲಿಮಿಟೆಡ್ ನ 500ಕ್ಕೂ ಹೆಚ್ಚು ಉದ್ಯೋಗಿಗಳು ಎಚ್-1 ಬಿ ವೀಸಾ ಬದಲಿಗೆ ಬಿ-1 ವೀಸಾ ಪಡೆದು ತಾತ್ಕಾಲಿಕ ಉದ್ಯೋಗಿಗಳಂತೆ ಬಂದು ಕಾರ್ಯ ನಿರ್ವಹಿಸಿದ್ದಾರೆ ಎಂಬ ಆರೋಪದ ಬಗ್ಗೆ ರಾಜ್ಯ ಇಲಾಖೆ ಉಲ್ಲೇಖಿಸಿದೆ.
"ಪ್ರಸ್ತಾಪಿಸಿದ ಬದಲಾವಣೆಗಳಿಂದ ಪಾರದರ್ಶಕತೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಜೊತೆಗೆ ಅಮೆರಿಕಾದಲ್ಲಿರುವ ಉದ್ಯೋಗಿಗಳ ಮೇಲೆ ವಿದೇಶಿ ಉದ್ಯೋಗಿಗಳು ಬೀರುವ ಪರಿಣಾಮವನ್ನು ತಗ್ಗಿಸುತ್ತದೆ ಎಂದು ರಾಜ್ಯ ಇಲಾಖೆಯು ತಿಳಿಸಿದೆ. ಅಧಿಸೂಚನೆಯ ಪ್ರಕಾರ, ಈ ಪ್ರಸ್ತಾಪವು ವರ್ಷಕ್ಕೆ ಕೇವಲ 6,000 ರಿಂದ 8,000 ವಿದೇಶಿ ಕಾರ್ಮಿಕರ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ವಿದೇಶಾಂಗ ಇಲಾಖೆ ಅಂದಾಜಿಸಿದೆ.

English summary
America Proposes Not To Issue Business Visa For H-1B Speciality Occupations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X