ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಅಧ್ಯಕ್ಷ ಆದರೂ ಬಿಜಿನೆಸ್ ಮನ್ ಗಿಂತ ಎತ್ತರಕ್ಕೇರದ ಟ್ರಂಪ್

By ಅನಿಲ್ ಅಚಾರ್
|
Google Oneindia Kannada News

ವಾಷಿಂಗ್ಟನ್ (ಅಮೆರಿಕ), ಮಾರ್ಚ್ 5: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆ ದೇಶಕ್ಕೆ ಆಗಿ ಹೋದ ಉಳಿದ ಅಧ್ಯಕ್ಷರಂತಲ್ಲ. ಈಗಲೂ ಯಾವುದೇ ದೇಶದ ಜತೆಗೆ ಅಮೆರಿಕದ ವ್ಯವಹಾರವನ್ನು ಅವರು ಪಕ್ಕಾ ವ್ಯಾಪಾರಿಯಂತೆಯೇ ಮಾಡುತ್ತಾರೆ. ಅವರ ಪಾಲಿಗೆ ಅಧ್ಯಕ್ಷರಾಗಿ ತಾವು ತೆಗೆದುಕೊಳ್ಳುವ ನಿರ್ಧಾರ ಅಮೆರಿಕದ ಮರ್ಯಾದೆ ಪ್ರಶ್ನೆ ಎಂಬ ಆಲೋಚನೆಯೇ ಇಲ್ಲ.

ಏಕೆ ಇಷ್ಟೆಲ್ಲ ಪೀಠಿಕೆ ಹಾಕಬೇಕಾಯಿತು ಅಂದರೆ, ಈ ವರೆಗೆ ಅಮೆರಿಕವು ಭಾರತಕ್ಕೆ ಆದ್ಯತೆ ವಹಿವಾಟು ನಡೆಸಲು ಅವಕಾಶ ಮಾಡಿಕೊಟ್ಟು, ಸುಂಕ ವಿಧಿಸದಂತೆ ರಫ್ತು ಮಾಡಲು ಅನುವು ಮಾಡಿಕೊಟ್ಟಿದೆ. ಅದು ಕೂಡ 560 ಕೋಟಿ ಅಮೆರಿಕನ್ ಡಾಲರ್ ನಷ್ಟು ಭಾರತದಿಂದ ರಫ್ತು ಮಾಡಬಹುದು. ಅದಕ್ಕೆ ಅಮೆರಿಕ ಯಾವುದೇ ಸುಂಕ ವಿಧಿಸಲ್ಲ. ಆದರೆ ಇನ್ನು ಮುಂದೆ ಅದಕ್ಕೆ ಅವಕಾಶ ನೀಡಲ್ಲ ಎಂಬುದು ಟ್ರಂಪ್ ವಾರ್ನಿಂಗ್.

ಭಾರತಕ್ಕೆ ಭಾರೀ ಆಘಾತ ನೀಡಿದ ಡೊನಾಲ್ಡ್ ಟ್ರಂಪ್ ನಡೆ ಭಾರತಕ್ಕೆ ಭಾರೀ ಆಘಾತ ನೀಡಿದ ಡೊನಾಲ್ಡ್ ಟ್ರಂಪ್ ನಡೆ

ಅಮೆರಿಕದ ವಿತ್ತೀಯ ಕೊರತೆ ಕಡಿಮೆ ಮಾಡಲು ಟ್ರಂಪ್ ಯೋಚಿಸುತ್ತಿದ್ದಾರೆ. ಭಾರತವು ಅಮೆರಿಕದ ವಸ್ತುಗಳಿಗೆ ವಿಪರೀತ ಸುಂಕ ವಿಧಿಸುತ್ತಿದೆ ಎಂಬುದು ಅವರ ತಕರಾರು. ನಿಜ. ಈ ಮಾತು ಒಪ್ಪಬೇಕು. ಆದರೆ ಮಾರುಕಟ್ಟೆ ದೃಷ್ಟಿಯಿಂದ ಅಮೆರಿಕವನ್ನು ಹಾಗೂ ಭಾರತವನ್ನು ಒಂದೇ ತಟ್ಟೆಯಲ್ಲಿಟ್ಟು ತೂಗಲು ಸಾಧ್ಯವಾ?

ಭಾರತಕ್ಕೆ ಅತಿ ದೊಡ್ಡ ಹೊಡೆತ ನೀಡಲಿದೆ

ಭಾರತಕ್ಕೆ ಅತಿ ದೊಡ್ಡ ಹೊಡೆತ ನೀಡಲಿದೆ

ಭಾರತ ಸರಕಾರದ ಜತೆಗೆ ನಿರಂತರವಾಗಿ ನಾನು ಮಾತನಾಡಿದೆ. ಆ ನಂತರವೂ ಅಲ್ಲಿನ ಮಾರುಕಟ್ಟೆಗೆ ಅಮೆರಿಕ ಪ್ರವೇಶಿಸಲು ಸಮಾನವಾದ ಹಾಗೂ ಸಲೀಸಾದ ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ ಎಂಬುದು ಟ್ರಂಪ್ ಬೇಸರ. ಅಧಿಸೂಚನೆ ಹೊರಡಿಸಿದ ಅರವತ್ತು ದಿನದ ತನಕ ನಿಯಮ ಜಾರಿಗೆ ಬರುವುದಿಲ್ಲ. ಮಾಹಿತಿ ಪ್ರಕಾರ ಹೇಳುವುದಾದರೆ, ಎರಡು ವರ್ಷದ ಹಿಂದೆ ಭಾರತದ ಜತೆಗೆ ಅಮೆರಿಕದ ರಫ್ತಿಗಿಂತ ಹೆಚ್ಚಾಗಿದ್ದ ಆಮದಿನ ಪ್ರಮಾಣ 273 ಕೋಟಿ ಅಮೆರಿಕನ್ ಡಾಲರ್. ಅಮೆರಿಕ ನೀಡಿರುವ ಈ ಆದ್ಯತೆ ವಹಿವಾಟು (ಸುಂಕ ಇಲ್ಲದಂತೆ ರಫ್ತು ಮಾಡುವ ಅವಕಾಶ) ಹೆಚ್ಚು ಲಾಭ ಆಗಿರುವುದು ಭಾರತಕ್ಕೆ. ಆದರೆ ಟ್ರಂಪ್ ಅಧಿಕಾರ ವಹಿಸಿಕೊಂಡ ನಂತರ ತೆಗೆದುಕೊಳ್ಳುತ್ತಿರುವ ಈ ಕಠಿಣ ಕ್ರಮ ಭಾರತಕ್ಕೆ ದೊಡ್ಡ ಹೊಡೆತ ನೀಡಲಿದೆ.

ಇ ಕಾಮರ್ಸ್ ಕಂಪನಿಗಳ ಮೇಲೆ ಭಾರತದ ನಿರ್ಬಂಧ

ಇ ಕಾಮರ್ಸ್ ಕಂಪನಿಗಳ ಮೇಲೆ ಭಾರತದ ನಿರ್ಬಂಧ

ಭಾರತ ಹಾಗೂ ಅಮೆರಿಕ ಮಧ್ಯದ ವ್ಯಾಪಾರ ವಹಿವಾಟಿಗೆ ಹೊಡೆತ ಬಿದ್ದಿದ್ದು ಇತ್ತೀಚೆಗೆ ಭಾರತ ಜಾರಿಗೆ ತಂದಿರುವ ನಿಯಮದಿಂದ. ಅಮೆರಿಕ ಮೂಲದ ಅಮೆಜಾನ್ ಹಾಗೂ ವಾಲ್ ಮಾರ್ಟ್ ಖರೀದಿ ಮಾಡಿರುವ ಫ್ಲಿಪ್ ಕಾರ್ಟ್ ಇ ಕಾಮರ್ಸ್ ವ್ಯವಹಾರಗಳ ಮೇಲೆ ಯಾವಾಗ ಭಾರತ ನಿಬಂಧನೆಗಳನ್ನು ವಿಧಿಸಿತೋ ಆಗ ಟ್ರಂಪ್ ಸಿಟ್ಟಿಗೆದ್ದಿದ್ದಾರೆ. ಜಾಗತಿಕ ಮಟ್ಟದ ಪಾವತಿ ಕಂಪನಿಗಳಾದ ಮಾಸ್ಟರ್ ಕಾರ್ಡ್ ಹಾಗೂ ವೀಸಾಗಳ ದತ್ತಾಂಶವನ್ನು ಭಾರತಕ್ಕೆ ಕಳುಹಿಸಬೇಕು ಎಂದು ಹೇಳಿತ್ತು. ಜತೆಗೆ ಎಲೆಕ್ಟ್ರಾನಿಕ್ ಉತ್ಪನ್ನಗಳು ಹಾಗೂ ಸ್ಮಾರ್ಟ್ ಫೋನ್ ಗಳ ಮೇಲೆ ಹೆಚ್ಚಿನ ಸುಂಕ ವಿಧಿಸಿತು. ಈಗ ಟ್ರಂಪ್ ತೆಗೆದುಕೊಂಡಿರುವ ನಿರ್ಧಾರ ಭಾರತ-ಅಮೆರಿಕ ಮಧ್ಯದ ದ್ವಿಪಕ್ಷೀಯ ಸಂಬಂಧಕ್ಕೆ ದೊಡ್ಡ ಹಿನ್ನಡೆ. ಅದರಲ್ಲೂ ವ್ಯಾಪಾರ ಹಾಗೂ ಆರ್ಥಿಕತೆಗೆ ದೊಡ್ಡ ಹಿನ್ನಡೆ ಆಗಲಿದೆ.

ಆದ್ಯತೆ ವಹಿವಾಟಿಗೆ ಕೆಲ ಮಾನದಂಡಗಳು

ಆದ್ಯತೆ ವಹಿವಾಟಿಗೆ ಕೆಲ ಮಾನದಂಡಗಳು

ಅಮೆರಿಕದ ಕಾಂಗ್ರೆಸ್ (ಸಂಸತ್)ನಲ್ಲಿ ರೂಪಿಸಿದ ನಿಯಮಗಳ ಅನುಸಾರವಾಗಿ ಉತ್ಪನ್ನಗಳು ಇದ್ದಲ್ಲಿ ಯಾವುದೇ ಸುಂಕ ಪಾವತಿಸದೆ ಆ ದೇಶಕ್ಕೆ ರಫ್ತು ಮಾಡುವ ಅವಕಾಶ ಇದೆ. ಇಂಥ ಅವಕಾಶ ಇರುವುದು ಅಭಿವೃದ್ಧಿ ಹೊಂದುತ್ತಿರುವ ಪಟ್ಟಿಯಲ್ಲಿರುವ ದೇಶಗಳಿಗೆ ಮಾತ್ರ. ಜತೆಗೆ ಯಾವ ದೇಶವು ಅಮೆರಿಕದ ನಾಗರಿಕರು ಅಥವಾ ಕಂಪನಿಗಳ ಪರವಾಗಿ ಇರುತ್ತವೋ, ಬಾಲ ಕಾರ್ಮಿಕ ಪಿಡುಗಿನ ವಿರುದ್ಧ ಕೆಲಸ ಮಾಡುತ್ತದೋ, ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಮಿಕರ ಹಕ್ಕನ್ನು ಗೌರವಿಸುತ್ತದೋ ಹಾಗೂ ಇವೆಲ್ಲದರ ಜತೆಗೆ ತನ್ನ ದೇಶದ ಮಾರುಕಟ್ಟೆಯಲ್ಲಿ ಅಮೆರಿಕದ ಉತ್ಪಾದನೆಗಳಿಗೆ ಸಮಾನವಾದ ಅವಕಾಶ ನೀಡುತ್ತದೋ ಅಂಥ ದೇಶಗಳಿಗೆ ಆದ್ಯತೆ ವಹಿವಾಟಿಗೆ ಅವಕಾಶ ನೀಡುತ್ತದೆ.

ಸರಿ-ತಪ್ಪುಗಳ ವಿವೇಚನೆ ಬಗ್ಗೆ ಹೇಳುವವರು ಯಾರು?

ಸರಿ-ತಪ್ಪುಗಳ ವಿವೇಚನೆ ಬಗ್ಗೆ ಹೇಳುವವರು ಯಾರು?

ಕಳೆದ ವರ್ಷ ಏಪ್ರಿಲ್ ನಲ್ಲೇ ಭಾರತದ ಆದ್ಯತೆ ವಹಿವಾಟಿನ ಬಗ್ಗೆ ಟ್ರಂಪ್ ಆಡಳಿತ ಪರಿಶೀಲನೆ ಆರಂಭಿಸಿತು. ಅಮೆರಿಕವು ಭಾರತದ ಜತೆ ನಿರಂತರ ಮಾತುಕತೆ ನಡೆಸಿದ ಹೊರತಾಗಿಯೂ ಆದ್ಯತೆ ವಹಿವಾಟಿನ ಮಾನದಂಡ ಮುಟ್ಟುವಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ವಿಫಲವಾಗಿದೆ ಎಂದು ಅಮೆರಿಕದ ವ್ಯವಹಾರ ಪ್ರತಿನಿಧಿ ಹೇಳಿದ್ದಾರೆ. ಹಾಗಿದ್ದರೆ ಅಮೆರಿಕ ಉತ್ಪನ್ನಗಳಿಗೆ ಭಾರತದಲ್ಲಿ ಮುಕ್ತ ಅವಕಾಶ ನೀಡಬೇಕಾ? ಇ ಕಾಮರ್ಸ್ ಕಂಪನಿಗಳಿಗೆ ಮುಕ್ತ ಅವಕಾಶ ನೀಡಿದರೆ, ಯಾವುದೇ ಕಡಿವಾಣ ಹಾಕದಿದ್ದಲ್ಲಿ ಭಾರತದಲ್ಲಿ ಸಣ್ಣ ವ್ಯಾಪಾರಿಗಳು ಉಳಿಯುವುದೇ ಅಸಾಧ್ಯವಾಗುತ್ತದೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತದೆ. ಉದ್ಯಮಶೀಲತೆ ಚಿವುಟಿ ಹಾಕಿದಂತಾಗುತ್ತದೆ. ಆದರೆ ಡೊನಾಲ್ಡ್ ಟ್ರಂಪ್ ಅಮೆರಿಕವನ್ನು ಭಾರತದ ಸನ್ನಿವೇಶಕ್ಕೆ ಹೋಲಿಸಿ ಇಂಥ ನಿರ್ಧಾರ ಮಾಡಿದ್ದಾರೆ. ಸರಿ-ತಪ್ಪುಗಳ ವಿವೇಚನೆ ಬಗ್ಗೆ ಹೇಳುವವರು ಯಾರು?

English summary
US President Donald Trump said on Monday he intends to end India's preferential trade treatment under a programme that allows $5.6 billion worth of Indian exports to enter the United States duty free.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X