• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮೆರಿಕಾ ಅಧ್ಯಕ್ಷೀಯ ಚುನಾವಣೆ: ಎರಡೂ ಪಕ್ಷಕ್ಕೆ 'ಮೋದಿಯೇ ಟ್ರಂಪ್ ಕಾರ್ಡ್'

|

ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತೀಯ ಮತ್ತು ಆಫ್ರಿಕನ್ ಮೂಲದವರ ಪ್ರಭಾವ ಯಾವಾಗಲೂ ಇದ್ದೇ ಇರುತ್ತದೆ. ಅದಕ್ಕೆ ಈಗಿನ ಅಂದರೆ, ಮುಂಬರುವ ನವೆಂಬರ್ ತಿಂಗಳಲ್ಲಿ ನಡೆಯುವ ಚುನಾವಣೆ ಹೊರತೇನೂ ಅಲ್ಲ. ಚೆನ್ನೈ - ಮೆಕ್ಸಿಕೋ ಮೂಲದ ಮಹಿಳೆಯೊಬ್ಬರು ಉಪಾಧ್ಯಕ್ಷ ಚುನಾವಣೆಯ ರೇಸ್‌ನಲ್ಲಿರುವುದರಿಂದ, ಈ ಬಾರಿಯ ಚುನಾವಣೆಯಲ್ಲಿ ಈ ಕಾವು ತುಸು ಹೆಚ್ಚಿದೆ. ಸ್ವಾಭಾವಿಕವಾಗಿ, ಇದು ಅನಿವಾಸಿ ಭಾರತೀಯರಿಗೆ ಹೆಮ್ಮೆಯ ವಿಚಾರ.

ರಾಜಕೀಯ ಎನ್ನುವುದು ಅಮೆರಿಕದಲ್ಲೂ ಒಂದೇ, ಭಾರತದಲ್ಲೂ ಒಂದೇ. ಓಲೈಕೆಯ ವಿಧಾನಗಳು ಬೇರೆಬೇರೆ ಇರಬಹುದಷ್ಟೇ. ಇಲ್ಲಿ, ಡೆಮೊಕ್ರೆಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಪಕ್ಷಕ್ಕೆ ವರವಾಗಿ ಪರಿಣಮಿಸಬಹುದು ಅಥವಾ ವಿರುದ್ದವಾಗಿಯೂ ಸಾಗಬಹುದು. ಇದಕ್ಕೆ ಕಮಲಾ, ಉಪಾಧ್ಯಕ್ಷ ಹುದ್ದೆಗೆ ಅಭ್ಯರ್ಥಿ ಎಂದು ಘೋಷಣೆಯಾಗುವ ಮುನ್ನ ಇಟ್ಟಿದ್ದ ರಾಜಕೀಯ ನಡೆಗಳು/ಹೇಳಿಕೆಗಳು ಸಾಕ್ಷಿಗಳು.

ಟ್ರಂಪ್ 'ಕ್ರೂರಿ, ಸುಳ್ಳುಗಾರ': ಟ್ರಂಪ್ ಅಕ್ಕನ ಆರೋಪ

ಕಮಲಾ ಹ್ಯಾರಿಸ್, ಭಾರತದ ಪ್ರಧಾನಿ ನರೇಂದ್ರ ಮೋದಿ ಸರಕಾರದ ನಿರ್ಧಾರಗಳನ್ನು ಈ ಹಿಂದೆ ಟೀಕಿಸಿದ ಉದಾಹರಣೆಗಳು ಸಾಕಷ್ಟಿವೆ. ಹಾಗಾಗಿ, ಇದನ್ನು ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಯಾವರೀತಿ ಚುನಾವಣಾ ದಾಳವನ್ನಾಗಿ ಬಳಸಿಕೊಳ್ಳಬಹುದು ಎನ್ನುವುದಕ್ಕೆ ಈಗಾಗಲೇ ಉದಾಹರಣೆಗಳು ಸಿಕ್ಕಾಗಿದೆ.

ಜನಾಂಗೀಯ ವಾದ ಒಂದು ರೋಗ, ಅದಕ್ಕೆ ಲಸಿಕೆ ಇಲ್ಲ: ಕಮಲಾ

ಕಮಲಾ ಹ್ಯಾರಿಸ್ ಗೆ ಇರುವ ಅಡ್ವಾಂಟೇಜ್ ಭಾರತೀಯ ಮೂಲದವರು ಎನ್ನುವುದು ಒಂದು ಕಡೆಯಾದರೆ, ಡಿಸ್ ಅಡ್ವಾಂಟೇಜ್ ಆಕೆ ಪ್ರಧಾನಿ ಮೋದಿ ವಿರುದ್ದ ನಿಲುವನ್ನು ಹೊಂದಿದವರು ಎನ್ನುವುದು. ಈ ವಿಚಾರ, ಅನಿವಾಸಿ ಭಾರತೀಯರಿಗೆ ಚುನಾವಣೆಯ ಆಸುಪಾಸಿನಲ್ಲಿ ಸಿಕ್ಕಾಪಟ್ಟೆ ಕನ್ಫ್ಯೂಸನ್ ಆಗುವ ಸಾಧ್ಯತೆಯಿಲ್ಲದಿಲ್ಲ ಎನ್ನುತ್ತವೆ ಅಮೆರಿಕಾದ ಕೆಲವೊಂದು ಸಮೀಕ್ಷೆಗಳು.

ಅಬ್ ಕೀ ಬಾರ್ ಟ್ರಂಪ್ ಸರಕಾರ್

ಅಬ್ ಕೀ ಬಾರ್ ಟ್ರಂಪ್ ಸರಕಾರ್

ಕೆಲವು ದಿನಗಳ ಹಿಂದೆ ಕಮಲಾ ಹ್ಯಾರಿಸ್ ಮಸಾಲದೋಸೆ ತಯಾರಿಸುವ ಮತ್ತು ಇಡ್ಲಿ ನನಗೆ ಬಹಳ ಪ್ರಿಯವಾದ ತಿನಿಸು ಎಂದು ಹೇಳಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದಕ್ಕೆ ಟಿಟ್ ಫಾರ್ ಟ್ಯಾಟ್ ಎನ್ನುವಂತೆ, ಕಳೆದ ವರ್ಷ ಹ್ಯೂಸ್ಟನ್ ನಲ್ಲಿ ನಡೆದ ಸಭೆಯಲ್ಲಿ 'ಅಬ್ ಕೀ ಬಾರ್ ಟ್ರಂಪ್ ಸರಕಾರ್' ಎಂದು ಮೋದಿ ಹೇಳಿರುವ ವಿಡಿಯೋವನ್ನು ರಿಪಬ್ಲಿಕ್ ಪಕ್ಷದವರು ವೈರಲ್ ಮಾಡುತ್ತಿದ್ದಾರೆ.

ವಿದೇಶಾಂಗ ಸಚಿವ ಜೈಶಂಕರ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು

ವಿದೇಶಾಂಗ ಸಚಿವ ಜೈಶಂಕರ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ವಾಯತ್ತತ್ತೆಯನ್ನು ಮೋದಿ ಸರಕಾರ ಹಿಂಪಡೆದುಕೊಂಡಾಗ ಕಮಲಾ ಹ್ಯಾರಿಸ್ ಇದಕ್ಕೆ ವಿರೋಧ ವ್ಯಕ್ತಪಡಿಸಿ, ವಿದೇಶಾಂಗ ಸಚಿವ ಜೈಶಂಕರ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಕಾಶ್ಮೀರದ ನಿರ್ಧಾರ, ಮೋದಿ ಸರಕಾರದ ಡೈನಾಮಿಕ್ ಹೆಜ್ಜೆ ಎಂದು ಹತ್ತು ಹಲವು ಸಮೀಕ್ಷೆಗಳಲ್ಲಿ ವ್ಯಕ್ತವಾಗಿತ್ತು. ಇದಕ್ಕೆ, ಕಮಲಾ ಹ್ಯಾರಿಸ್ ವಿರೋಧ ವ್ಯಕ್ತಪಡಿಸಿದ್ದು, ಅನಿವಾಸಿ ಭಾರತೀಯರ ಅಸಮಾಧಾನಕ್ಕೆ ಗುರಿಯಾಗಿತ್ತು.

ಹ್ಯೂಸ್ಟನ್ ಮತ್ತು ಅಹಮದಾಬಾದ್

ಹ್ಯೂಸ್ಟನ್ ಮತ್ತು ಅಹಮದಾಬಾದ್

ಹ್ಯೂಸ್ಟನ್ ಮತ್ತು ಅಹಮದಾಬಾದ್ ನಲ್ಲಿ ಮೋದಿ ಮತ್ತು ಟ್ರಂಪ್ ಮಾತನಾಡಿರುವ ವಿಡಿಯೋ, ಸದ್ಯದ ಮಟ್ಟಿಗೆ ರಿಪಬ್ಲಿಕ್ ಪಕ್ಷದವರಿಗೆ ಸಿಕ್ಕ ಹೊಸ ಬಿಸಿಬಿಸಿ ಮಸಾಲದೋಸೆ. ಟ್ರಂಪ್ ಮತ್ತು ಮೋದಿ ಗೆಳೆತನ, ಭಾರತ-ಅಮೆರಿಕ ಬಾಂಧವ್ಯವನ್ನು ಈ ವಿಡಿಯೋದ ಮೂಲಕ ಅನಿವಾಸಿ ಭಾರತೀಯರಿಗೆ ತಲುಪಿಸುವ ಕೆಲಸವನ್ನು ಟ್ರಂಪ್ ಪಕ್ಷ ಮಾಡುತ್ತಿದೆ.

ಚುನಾವಣಾ ಆಸುಪಾಸಿನಲ್ಲಿ ಇದು ಯಾವ ಹಂತಕ್ಕೆ ಬಂದು ನಿಲ್ಲುತ್ತದೆ

ಚುನಾವಣಾ ಆಸುಪಾಸಿನಲ್ಲಿ ಇದು ಯಾವ ಹಂತಕ್ಕೆ ಬಂದು ನಿಲ್ಲುತ್ತದೆ

ಚುನಾವಣೆಗೆ ಇನ್ನೂ ಬರೋಬ್ಬರಿ ಎರಡು ತಿಂಗಳ ಮೇಲಿದೆ. ಕಮಲಾ ಹ್ಯಾರಿಸ್ ಅವರನ್ನು ಮೋದಿ ವಿರೋಧಿ ಎಂದು ಜಾಹೀರು ಪಡಿಸುವ ಕೆಲಸ ಒಂದು ಕಡೆಗಿದ್ದರೆ, ಇನ್ನೊಂದು ಕಡೆ, ಆಕೆ ಅನಿವಾಸಿ ಭಾರತೀಯಳು ಎನ್ನುವ ಸೆಂಟಿಮೆಂಟ್ ಹರಡುವ ಕೆಲಸವೂ ನಡೆಯುತ್ತಿದೆ. ಚುನಾವಣಾ ಆಸುಪಾಸಿನಲ್ಲಿ ಇದು ಯಾವ ಹಂತಕ್ಕೆ ಬಂದು ನಿಲ್ಲುತ್ತದೆ ಎಂಬುದು ಫಲಿತಾಂಶವನ್ನು ನಿರ್ಧರಿಸಲಿದೆ.

English summary
America President Election:NRI Voters Is The Key Factor For Both The Parties.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X