ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಚುನಾವಣೆ: ಟ್ರಂಪ್ ಹಿಂದಿಕ್ಕಲು ಬಿಡನ್ ಗೆ ನೆರವಾದ ದೇಣಿಗೆ ಸಂಗ್ರಹಣೆ

|
Google Oneindia Kannada News

ವಾಷಿಂಗ್ಟನ್, ಅ 16: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಜೋ ಬಿಡೆನ್ ಭಾರೀ ಪ್ರಮಾಣದ ದೇಣಿಗೆಯನ್ನು ಸಂಗ್ರಹಿಸಿದ್ದಾರೆ. ಇದು ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರನ್ನು ಹಿಂದಿಕ್ಕಲು ನೆರವಾಗುವ ಸಾಧ್ಯತೆಯಿದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ.

ಸೆಪ್ಟಂಬರ್ ಒಂದು ತಿಂಗಳಲ್ಲೇ ಬಿಡೆನ್ 383ದಶಲಕ್ಷ ಡಾಲರ್ ಸಂಗ್ರಹಿಸಿದ್ದಾರೆ. ಒಂದು ತಿಂಗಳಲ್ಲಿ ಈ ಮೊತ್ತ ಭಾರೀ ಪ್ರಮಾಣದಲ್ಲಿ ಹರಿದು ಬಂದ ದೇಣಿಗೆ ಎಂದು ಅಭಿಪ್ರಾಯ ಪಡಲಾಗುತ್ತಿದೆ. ಆದರೆ, ಇವರ ಎದುರಾಳಿ ರಿಪಬ್ಲಿಕನ್ ಪಕ್ಷದ ಕಳೆದ ತಿಂಗಳ ದೇಣಿಗೆ ಮೊತ್ತ ಎಷ್ಟು ಎನ್ನುವುದು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.

ಅಧ್ಯಕ್ಷೀಯ ಚುನಾವಣೆ ಇತಿಹಾಸದಲ್ಲೇ ಬಿಡನ್ ಅತ್ಯಂತ ಕೆಟ್ಟ ಅಭ್ಯರ್ಥಿ: ಟ್ರಂಪ್ಅಧ್ಯಕ್ಷೀಯ ಚುನಾವಣೆ ಇತಿಹಾಸದಲ್ಲೇ ಬಿಡನ್ ಅತ್ಯಂತ ಕೆಟ್ಟ ಅಭ್ಯರ್ಥಿ: ಟ್ರಂಪ್

ಅಲ್ಲಿನ ಸರ್ವೋಚ್ಚ ನ್ಯಾಯಾಲಯದ ಜಸ್ಟೀಸ್ ರುತ್ ಬೇಡರ್ ನಿಧನದ ನಂತರ, ಡೆಮಾಕ್ರಟಿಕ್ ಪಕ್ಷಕ್ಕೆ ಹರಿದು ಬರುತ್ತಿರುವ ದೇಣಿಗೆ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಿದೆ. ಸುಮಾರು ನೂರು ಮಿಲಿಯನ್ ಡಾಲರ್ ಪಕ್ಷದ ದೇಣಿಗೆ ಸಂಗ್ರಹ ತಾಣವಾದ ಆಕ್ಟ್ ಬ್ಲೂ ಮೂಲಕ ಸಂಗ್ರಹವಾಗಿದೆ.

America President Election: Joe Biden Raised Whopping 383 Million USD As Donation

ಡೊನಾಲ್ಡ್ ಟ್ರಂಪ್ ಅವರ ಪ್ರಚಾರ ಮತ್ತು ರಿಪಬ್ಲಿಕನ್ ರಾಷ್ಟ್ರೀಯ ಸಮಿತಿಯು ಸೆಪ್ಟೆಂಬರ್ ತಿಂಗಳಿನಲ್ಲಿ ತಮ್ಮ ಪಕ್ಷಕ್ಕೆ ಸಂಗ್ರಹವಾದ ದೇಣಿಗೆಯ ಮೊತ್ತವನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಆದರೆ, ಅಕ್ಟೋಬರ್ 20ರೊಳಗೆ ಸಂಗ್ರಹವಾದ ಮೊತ್ತವನ್ನು ವರದಿ ಸಮೇತ ಸಲ್ಲಿಸಬೇಕಾಗುತ್ತದೆ.

"ಜೋ ಬಿಡೆನ್, ಡೆಮಾಕ್ರಟಿಕ್ ನ್ಯಾಷನಲ್ ಕಮಿಟಿ ಮತ್ತು ಜಂಟಿ ನಿಧಿಸಂಗ್ರಹಣಾ ಸಮಿತಿ, ಅಭಿಯಾನದ ಅಂತಿಮ 34 ದಿನಗಳನ್ನು 432 ಮಿಲಿಯನ್‌ ಡಾಲರ್ ಬ್ಯಾಂಕ್ ಬ್ಯಾಲನ್ಸ್ ಮೂಲಕ ಪ್ರಾರಂಭಿಸಲಾಗಿದೆ" ಎಂದು ಬಿಡೆನ್ ಪ್ರಚಾರ ವ್ಯವಸ್ಥಾಪಕ ಜೆನ್ ಒ'ಮ್ಯಾಲಿ ಡಿಲನ್ ಟ್ವೀಟ್ ಮಾಡಿದ್ದಾರೆ.

ಟ್ರಂಪ್‌ ಪಡೆಗೆ ದೊಡ್ಡ ಗೆಲುವು: ಜನಗಣತಿ ನಿಲ್ಲಿಸಲು ಸೂಚನೆ..!ಟ್ರಂಪ್‌ ಪಡೆಗೆ ದೊಡ್ಡ ಗೆಲುವು: ಜನಗಣತಿ ನಿಲ್ಲಿಸಲು ಸೂಚನೆ..!

ಸೆಪ್ಟೆಂಬರ್ 29ರಂದು ನಡೆದ ಮೊದಲ ಅಧ್ಯಕ್ಷೀಯ ಚರ್ಚೆಯ ನಂತರ, ಬಿಡೆನ್ ಅವರ ಪರವಾಗಿ ಸಂಗ್ರಹವಾಗುತ್ತಿರುವ ದೇಣಿಗೆ ಅಭಿಯಾನ ಇನ್ನೂ ವೇಗವನ್ನು ಪಡೆದುಕೊಳ್ಳುತ್ತಿದೆ.

English summary
America President Election: Joe Biden Raised Whopping 383 Million USD As Donation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X