• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇದಪ್ಪಾ ವರಸೆ.. ಕೊಟ್ಟ ಮಾತಿಗೆ ತಪ್ಪುತ್ತಿದೆಯಾ ‘ವಿಶ್ವದ ದೊಡ್ಡಣ್ಣ’ ಅಮೆರಿಕ?

|
Google Oneindia Kannada News

ನಾನೇ ನಂ. 1 ಆಗಿರಬೇಕು ಅನ್ನೋದು ಅಮೆರಿಕದ ಕನಸು. ಆದರೆ ಆ ಕನಸಿಗೆ ಆಗಾಗ ಗುನ್ನಾ ಬೀಳುತ್ತಿರುತ್ತೆ. ಇಂತಹ ಸಂದರ್ಭ ಬಂದಾಗೆಲ್ಲಾ ಅಮೆರಿಕ ಉಲ್ಟಾ ಹೊಡೆಯೋದು ಮಾಮೂಲಿ. ಈಗ ಕೂಡ ಅಫ್ಘಾನಿಸ್ತಾನ ವಿಚಾರದಲ್ಲಿ ಅಮೆರಿಕ ಉಲ್ಟಾ ಹೊಡೆದಿದೆ. ತಲೆ ಮೇಲೆ ತಲೆ ಬೀಳಲಿ ಸೆಪ್ಟೆಂಬರ್ 11ರ ಒಳಗೆ ಅಫ್ಘಾನ್‌ನಿಂದ ಜಾಗ ಖಾಲಿ ಮಾಡ್ತೀವಿ ಅಂತಾ ಹೇಳಿತ್ತು ಅಮೆರಿಕ. ಮೇ 1ರಿಂದಲೇ ಸೇನೆ ಹಿಂದಕ್ಕೆ ಕರೆಸಿಕೊಳ್ಳೋಕು ಶುರು ಮಾಡಿತ್ತು ಅಮೆರಿಕ. ಆದರೆ ದೊಡ್ಡಣ್ಣ ವರಸೆ ಬದಲಿಸಿದ್ದು ಮಾತಿಗೆ ತಪ್ಪುತ್ತಿದೆಯಾ ಎಂಬ ಡೌಟ್ ಕಾಡುತ್ತಿದೆ.

ಏಕೆಂದರೆ ಅಫ್ಘಾನಿಸ್ತಾನ ಬಿಟ್ಟು ಅಮೆರಿಕ ಹೊರಡಲು ಸಿದ್ಧವಾದ ತಕ್ಷಣ ತಾಲಿಬಾನಿಗಳು ಅಲರ್ಟ್ ಆಗಿದ್ದಾರೆ. 2 ತಿಂಗಳಿಂದ ತಾಲಿಬಾನ್ ಉಗ್ರರು ಭೀಕರ ದಾಳಿಗಳನ್ನ ಪದೇ ಪದೆ ನಡೆಸುತ್ತಿದ್ದಾರೆ. ಅಲ್ದೆ ಅಮೆರಿಕ ನಮ್ಮನ್ನ ನೋಡಿ ಹೆದರಿ ಹೋಗುತ್ತಿದೆ ಅಂತಾ ಡೈಲಾಗ್ ಹೊಡೆಯುತ್ತಿದ್ದಾರೆ ತಾಲಿಬಾನಿಗಳು. ಇಷ್ಟೇ ಆಗಿದ್ರೆ ಅಮೆರಿಕ ಸುಮ್ಮನೆ ಜಾಗ ಖಾಲಿ ಮಾಡುತ್ತಿತ್ತು.

ಉಗ್ರರ ವಿರುದ್ಧ ಹೋರಾಡಲು ಒಂದಾದ ಶತ್ರುಗಳು! ಪಾಕಿಸ್ತಾನ ಹೇಳಿದ್ದೇನು ಗೊತ್ತಾ?ಉಗ್ರರ ವಿರುದ್ಧ ಹೋರಾಡಲು ಒಂದಾದ ಶತ್ರುಗಳು! ಪಾಕಿಸ್ತಾನ ಹೇಳಿದ್ದೇನು ಗೊತ್ತಾ?

ಆದ್ರೆ ಅಮೆರಿಕದ ಶತ್ರು ರಾಷ್ಟ್ರಗಳು ಈಗ ಅಫ್ಘಾನಿಸ್ತಾನದ ಜೊತೆ ಸ್ನೇಹ ಬೆಸೆಯಲು ಪ್ರಯತ್ನ ನಡೆಸುತ್ತಿವೆ. ಈ ಕಾರಣಕ್ಕೆ ಅಫ್ಘಾನಿಸ್ತಾನದಿಂದ ಸೇನೆ ಹಿಂದೆ ಕರೆಸಿಕೊಳ್ಳಲು ಅಮೆರಿಕ ಚಿಂತೆ ಮಾಡುತ್ತಿದೆ. 2021ರ ಸೆಪ್ಟೆಂಬರ್ 11 ಒಳಗೆ ಅಮೆರಿಕದ ಸೇನೆ ಪೂರ್ತಿ ಖಾಲಿ ಆಗೋದು ಬಹುತೇಕ ಡೌಟ್ ಅಂತಿದ್ದಾರೆ ತಜ್ಞರು.

ಅಫ್ಘಾನ್ ಏನು ಹೇಳುತ್ತೆ..?

ಅಫ್ಘಾನ್ ಏನು ಹೇಳುತ್ತೆ..?

ಅಫ್ಘಾನಿಸ್ತಾನ ಬಿಟ್ಟು ಅಮೆರಿಕ ಸೇನೆ ಹೊರಗೆ ಹೋಗುತ್ತಿರುವುದು ಅಲ್ಲಿನ ಸರ್ಕಾರಕ್ಕೆ ಚಿಂತೆ ತಂದಿದ್ದರೆ, ಉಗ್ರ ಪಡೆಗೆ ಖುಷಿ ಕೊಟ್ಟಿದೆ. ಏಕೆಂದರೆ ದಿಢೀರ್ ಅಮೆರಿಕ ಸೇನೆ ಹೊರ ಹೋದರೆ ತಾಲಿಬಾನ್‌ ಉಗ್ರರ ಉಪಟಳ ಹೆಚ್ಚಲಿದೆ. ಅಮೆರಿಕ ಸೇನೆ ಇದ್ದಾಗಲೇ ತಾಲಿಬಾನ್ ಅಟ್ಟಹಾಸ ಕಂಟ್ರೋಲ್‌ಗೆ ಬರಲಿಲ್ಲ. ಇನ್ನು ಅಮೆರಿಕ ತನ್ನ ಸೇನೆ ಹಿಂದಕ್ಕೆ ಕರೆಸಿಕೊಂಡರೆ ಅಫ್ಘಾನ್ ಪರಿಸ್ಥಿತಿ ಹೇಗಿರಬೇಡ? ಇದೇ ಚಿಂತೆ ಅಫ್ಘಾನಿಸ್ತಾನದ ಸರ್ಕಾರಕ್ಕೂ ಕಾಡುತ್ತಿದೆ. ಅಮೆರಿಕ ಇಂತಹ ಸಂದರ್ಭದಲ್ಲಿ ಅಫ್ಘಾನ್‌ನ ಒಂಟಿಯಾಗಿ ಬಿಟ್ಟು ಹೋದರೆ ತಾಲಿಬಾನ್ ಇಡೀ ಅಫ್ಘಾನಿಸ್ತಾನವನ್ನೇ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಅಪಾಯ ಇದೆ ಎನ್ನುತ್ತಾರೆ ತಜ್ಞರು.

ಯಾರಿಗೆ ನಷ್ಟ, ಯಾರಿಗೆ ಲಾಭ..?

ಯಾರಿಗೆ ನಷ್ಟ, ಯಾರಿಗೆ ಲಾಭ..?

ಅಮೆರಿಕ ದಿಢೀರ್ ಅಫ್ಘಾನಿಸ್ತಾನದಿಂದ ಹೊರ ಹೋಗುವುದಿಲ್ಲ. ಹಂತ ಹಂತವಾಗಿ ಸೇನೆಯನ್ನು ಸೆಪ್ಟೆಂಬರ್ 11ರ ಒಳಗಾಗಿ ವಾಪಸ್ ಕರೆಸಿಕೊಳ್ಳಲಿದೆ. ಆದ್ರೆ ಅಮೆರಿಕದ ನಿರ್ಧಾರದ ಬೆನ್ನಲ್ಲೇ ಯಾರಿಗೆ ಲಾಭ, ಯಾರಿಗೆ ನಷ್ಟ ಎಂಬ ಲೆಕ್ಕಾಚಾರಗಳು ಆರಂಭವಾಗಿವೆ. ಮತ್ತೊಂದು ಕಡೆ ಅಫ್ಘಾನಿಸ್ತಾನದ ಸ್ಥಳೀಯರಿಗೆ ತಾಲಿಬಾನಿಗಳ ಭಯ ಇನ್ನೂ ಹೋಗಿಲ್ಲ. ಏಕೆಂದರೆ ತಾಲಿಬಾನಿ ಉಗ್ರರು ನಡೆಸಿರುವ ಕೃತ್ಯಗಳು ಅಷ್ಟು ಭಯಾನಕವಾಗಿವೆ. ಇಷ್ಟೆಲ್ಲದರ ನಡುವೆ ಮತ್ತೊಂದು ದೇಶ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಬಹುದಾ ಎಂಬ ಪ್ರಶ್ನೆ ಕೂಡ ಹುಟ್ಟಿಕೊಂಡಿದೆ. ಆದರೆ ಇದಕ್ಕೆಲ್ಲಾ ಕಾಲವೇ ಉತ್ತರ ನೀಡಲಿದೆ.

ಅಫ್ಘಾನ್‌ ಜನರಿಗೆ ನೆಮ್ಮದಿಯೇ ಇಲ್ಲ

ಅಫ್ಘಾನ್‌ ಜನರಿಗೆ ನೆಮ್ಮದಿಯೇ ಇಲ್ಲ

ಬ್ರಿಟಿಷರಿಂದ ಅಫ್ಘಾನ್‌ 1919ರಲ್ಲೇ ಸ್ವಾತಂತ್ರ್ಯ ಪಡೆದಿದೆ. ಇದು ಭಾರತಕ್ಕಿಂತ ಮೊದಲಾದರೂ ಅಲ್ಲಿ ಶಾಂತಿ ನೆಲೆಸಿಲ್ಲ. ಸದ್ಯಕ್ಕೆ ಅಫ್ಘಾನ್‌ ಸ್ಥಿತಿ ಹೇಗಿದೆ ಎಂದರೆ, ಧೈರ್ಯವಾಗಿ ಹೊರಗೆ ಹೋಗಲೂ ಸಾಧ್ಯವಿಲ್ಲ. ಯಾವ ಕ್ಷಣದಲ್ಲಿ ಉಗ್ರಪಡೆ ಗುಂಡಿನ ಮಳೆಗರೆಯುತ್ತೋ, ಬಾಂಬ್ ಹಾಕುತ್ತೋ ಎಂಬ ಭಯ. ಅಫ್ಘಾನ್‌ನಲ್ಲಿ ದಿನಕ್ಕೆ ಒಂದಾದರೂ ಹಿಂಸೆ ನಡೆಸದಿದ್ದರೆ ತಾಲಿಬಾನ್ ಉಗ್ರರಿಗೆ ನಿದ್ದೆ ಬರೋದಿಲ್ಲ. ಈಗಾಗಲೇ ಲಕ್ಷಾಂತರ ಜನ ರಕ್ತ ಪಿಪಾಸುಗಳ ದಾಳಿಗೆ ಬಲಿಯಾಗಿದ್ದಾರೆ. ತಾಲಿಬಾನಿಗಳ ಉಪಟಳಕ್ಕೆ ಬ್ರೇಕ್ ಹಾಕಲು ಅಶ್ರಫ್ ಘನಿ ಸರ್ಕಾರ ಪರದಾಡುತ್ತಿದೆ. ಕಂಡ ಕಂಡಲ್ಲಿ ಪಟಾಕಿಗಳಂತೆ ಉಗ್ರರು ಬಾಂಬ್ ಉಡಾಯಿಸುತ್ತಿದ್ದಾರೆ.

ಹೊಟ್ಟೆಗೆ ಅನ್ನವಿಲ್ಲ, ಮಕ್ಕಳಿಗೆ ವಿದ್ಯಾಭ್ಯಾಸವಿಲ್ಲ

ಹೊಟ್ಟೆಗೆ ಅನ್ನವಿಲ್ಲ, ಮಕ್ಕಳಿಗೆ ವಿದ್ಯಾಭ್ಯಾಸವಿಲ್ಲ

ಅಫ್ಘಾನಿಸ್ತಾನದ ಜನರು ಅದೇನು ಪಾಪ ಮಾಡಿದ್ದಾರೋ ಗೊತ್ತಿಲ್ಲ, ಅಲ್ಲಿ ಬದುಕಬೇಕು ಎಂದರೆ ನರಕದರ್ಶನ ಗ್ಯಾರಂಟಿ. ಹೆಜ್ಜೆ ಹೆಜ್ಜೆಗೂ ಆವರಿಸುವ ಭಯ. ಯಾವ ಸಮಯದಲ್ಲಿ ಏನಾಗುತ್ತೋ ಎಂಬ ಆತಂಕ. ನೆಮ್ಮದಿ, ಶಾಂತಿ ಎಂಬುದೇ ಅಫ್ಘಾನಿಸ್ತಾನದ ಜನರಿಗೆ ಮರೆತು ಹೋದಂತಿದೆ. ಇನ್ನು ಅಲ್ಲಿನ ಆರ್ಥಿಕ ಸ್ಥಿತಿ ಕೂಡ ತೀರಾ ಹದಗೆಟ್ಟು ಹೋಗಿದ್ದು, ಹೊಟ್ಟೆಗೆ ಅನ್ನವಿಲ್ಲದೆ ಕೋಟ್ಯಂತರ ಮಂದಿ ನರಳುತ್ತಿದ್ದಾರೆ. ಮಕ್ಕಳಿಗೆ ವಿದ್ಯಾಭ್ಯಾಸವೂ ಸಿಗದ ಪರಿಸ್ಥಿತಿ ಅಫ್ಘಾನಿಸ್ತಾನದಲ್ಲಿ ನಿರ್ಮಾಣವಾಗಿದೆ. ಹೀಗೆ ಅಫ್ಘಾನಿಸ್ತಾನದ ಪರಿಸ್ಥಿತಿ ಸುಧಾರಣೆ ನೆಪ ಮಾಡಿ ಬಂದು ಸೇರಿಕೊಂಡ ಯಾವುದೇ ದೇಶ ಕೂಡ ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸುವಂತೆ ಮಾಡುವಲ್ಲ ಸಕ್ಸಸ್ ಆಗಿಲ್ಲ. ಅದು ಬಿಡಿ ಪ್ರಾಮಾಣಿಕ ಪ್ರಯತ್ನಗಳನ್ನೂ ನಡೆಸುತ್ತಿಲ್ಲ ಎಂಬ ಆರೋಪವಿದೆ.

 ಟ್ರಂಪ್ ಸಂಧಾನವೂ ವಿಫಲವಾಗಿತ್ತು..!

ಟ್ರಂಪ್ ಸಂಧಾನವೂ ವಿಫಲವಾಗಿತ್ತು..!

ತಾಲಿಬಾನಿ ನಾಯಕರ ಜೊತೆ ಹಿಂದೆ ಅಮೆರಿಕ ಅಧ್ಯಕ್ಷ ಟ್ರಂಪ್ ಚರ್ಚೆ ನಡೆಸಲು ಮುಂದಾಗಿದ್ದರು. ಅಲ್ಲದೆ ತಾಲಿಬಾನಿಗಳು ಒಳ್ಳೆಯವರು ಎಂದು ಟ್ರಂಪ್ ಹೇಳಿದ್ದರು. ಆದರೆ ಅಫ್ಘಾನ್‌ ಸರ್ಕಾರದ ಮಧ್ಯಸ್ಥಿಕೆ ಇಲ್ಲದೆ ನೇರವಾಗಿ ಉಗ್ರರ ಜೊತೆ ಮಾತುಕತೆ ನಡೆಸಿದ್ದಕ್ಕೆ ಅಮೆರಿಕದ ವಿರುದ್ಧ ಅಶ್ರಫ್ ಘನಿ ಸರ್ಕಾರ ಆಕ್ರೋಶ ವ್ಯಕ್ತಪಡಿಸಿತ್ತು. ಇದೆಲ್ಲಾ ನಡೆದು ಕೆಲವೇ ದಿನಗಳು ಕಳೆಯುವ ಒಳಗಾಗಿ ಅಮೆರಿಕದ ಸೈನಿಕರನ್ನೇ ತಾಲಿಬಾನ್ ಉಗ್ರರು ಕೊಂದು ಹಾಕಿದ್ದರು. ಈ ದಾಳಿ ನಂತರ ಅಮೆರಿಕ ಹಾಗೂ ತಾಲಿಬಾನ್ ನಡುವಿನ ಮಾತುಕತೆಯೇ ಮುರಿದುಬಿದ್ದಿತ್ತು. ಆದರೆ ನಂತರದ ಬೆಳವಣಿಗೆಯಲ್ಲಿ ಸೇನೆ ಹಿಂಪಡೆಯಲು ಅಮೆರಿಕ ಒಪ್ಪಿಗೆ ಸೂಚಿಸಿತ್ತು.

ಪಾರ್ಲಿಮೆಂಟ್ ಮೇಲೆ ದಾಳಿ ನಡೆಸಿದ್ದರು..!

ಪಾರ್ಲಿಮೆಂಟ್ ಮೇಲೆ ದಾಳಿ ನಡೆಸಿದ್ದರು..!

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅದೆಷ್ಟು ಕ್ರೂರವಾಗಿ ವರ್ತಿಸುತ್ತಿದೆ ಎಂದರೆ, ಅಲ್ಲಿನ ಪ್ರಧಾನಿ, ಅಧ್ಯಕ್ಷರು, ಉಪಾಧ್ಯಕ್ಷರಿಗೇ ಸರಿಯಾದ ಭದ್ರತೆ ಸಿಗುತ್ತಿಲ್ಲ. ಕೆಲವು ತಿಂಗಳ ಹಿಂದೆ ತಾಲಿಬಾನ್ ಉಗ್ರರು ಅಫ್ಘಾನಿಸ್ತಾನ ಪಾರ್ಲಿಮೆಂಟ್ ಮೇಲೆ ದಾಳಿಗೆ ಮುಂದಾಗಿದ್ದರು. ಅದೃಷ್ಟವಶಾತ್ ಸೂಸೈಡ್ ಬಾಂಬರ್ ಅಫ್ಘಾನ್ ಸಂಸತ್ ಭವನದಿಂದ ದೂರದಲ್ಲೇ ಬಾಂಬ್ ಬ್ಲಾಸ್ಟ್ ಮಾಡಿದ್ದ. ಇದರಿಂದ ಜನಪ್ರತಿನಿಧಿಗಳ ಜೀವ ಉಳಿದಿತ್ತು. ಆದರೆ ಅಂದಿನ ಸ್ಫೋಟದ ತೀವ್ರತೆಗೆ ಅಫ್ಘಾನಿಸ್ತಾನದ ಪಾರ್ಲಿಮೆಂಟ್ ಕಟ್ಟಡವೇ ನಡುಗಿ ಹೋಗಿತ್ತು. ಗೋಡೆಗಳು ಬಿರುಕುಬಿಡುವಷ್ಟು ತೀವ್ರತೆ ಆ ಸ್ಫೋಟಕ್ಕೆ ಇತ್ತು.

English summary
America may slowdown withdrawing troops from Afghanistan after Taliban’s several attacks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X