• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭಾರತದ ಮೇಲೆ ಉಗ್ರರ ದಾಳಿಗೆ ಸಂಚು ರೂಪಿಸಿದ್ದ ಸೋಲೆಮನಿ: ಡೊನಾಲ್ಡ್ ಟ್ರಂಪ್

|

ವಾಷಿಂಗ್ಟನ್, ಜನವರಿ 4: ಇರಾಕ್‌ ರಾಜಧಾನಿ ಬಾಗ್ದಾದ್‌ನ ವಿಮಾನ ನಿಲ್ದಾಣದಲ್ಲಿ ವಾಯು ದಾಳಿ ಮೂಲಕ ಇರಾನ್ ಸೇನಾ ಕಮಾಂಡರ್ ಖಾಸಿಂ ಸೋಲೆಮನಿ ಹತ್ಯೆ ಮಾಡಿದ ಕೃತ್ಯವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ.

ಫ್ಲೋರಿಡಾದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಖಾಸಿಂ ಸೋಲೆಮನಿ ಹತ್ಯೆಯಿಂದ 'ಭಯೋತ್ಪಾದನೆಯ ಆಡಳಿತ ಅಂತ್ಯಗೊಂಡಿದೆ' ಎಂದು ಹೇಳಿರುವ ಟ್ರಂಪ್, ನವದೆಹಲಿ ಮತ್ತು ಲಂಡನ್ ಮೇಲೆ ದಾಳಿ ನಡೆಸುವ ಭಯೋತ್ಪಾದಕರ ಸಂಚಿಗೆ ಸೋಲೆಮನಿ ಬೆಂಬಲ ನೀಡಿದ್ದ ಎಂದು ಆರೋಪಿಸಿದ್ದಾರೆ.

'ಒಬ್ಬ ಅಮೆರಿಕನ್ ಸಾವು ಹಾಗೂ ನಾಲ್ವರು ಅಮೆರಿಕದ ಯೋಧರು ತೀವ್ರವಾಗಿ ಗಾಯಗೊಳ್ಳಲು ಕಾರಣವಾದ ಇತ್ತೀಚಿನ ರಾಕೆಟ್ ದಾಳಿ ಸೇರಿದಂತೆ ಇರಾಕ್‌ನಲ್ಲಿರುವ ಅಮೆರಿಕದ ಕಚೇರಿಗಳ ಮೇಲೆ ಇತ್ತೀಚೆಗೆ ನಡೆದ ದಾಳಿಗಳು, ಬಾಗ್ದಾದ್‌ನಲ್ಲಿನ ನಮ್ಮ ರಾಯಭಾರ ಕಚೇರಿಯಲ್ಲಿನ ಹಿಂಸಾಚಾರದ ದಾಳಿಗಳು ಸೋಲೆಮನಿಯ ನಿರ್ದೇಶನದಂತೆಯೇ ನಡೆದಿದೆ' ಎಂದು ಹೇಳಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಹೆಚ್ಚುವರಿ ಸೇನೆ ಜಮಾವಣೆ: ನಡೆಯುತ್ತದೆಯೇ 3ನೇ ಮಹಾಯುದ್ಧ?

'ವ್ಯಾಧಿಗ್ರಸ್ಥ ಮನಸ್ಥಿತಿಯ ಸೋಲೆಮನಿ, ಅಮಾಯಕರ ಸಾವಿಗೆ ಕಾರಣನಾಗಿದ್ದಾನೆ. ಅಷ್ಟೇ ಅಲ್ಲದೆ, ದೂರದ ನವದೆಹಲಿ ಮತ್ತು ಲಂಡನ್‌ನಲ್ಲಿ ಭಯೋತ್ಪಾದಕರ ಸಂಚುಗಳಿಗೆ ಕೊಡುಗೆ ನೀಡಿದ್ದಾನೆ. ಸೋಲೆಮನಿಯ ಅನೇಕ ದುಷ್ಕೃತ್ಯಗಳಿಗೆ ಬಲಿಯಾದವರನ್ನು ಇಂದು ನೆನಪಿಸಿಕೊಂಡು ನಾವು ಅವರನ್ನು ಗೌರವಿಸುತ್ತಿದ್ದೇವೆ. ಆತನ ಭಯೋತ್ಪಾದಕ ಆಳ್ವಿಕೆಯು ಅಂತ್ಯಗೊಂಡಿರುವುದನ್ನು ತಿಳಿದು ನಾವು ನೆಮ್ಮದಿಪಟ್ಟುಕೊಳ್ಳುತ್ತಿದ್ದೇವೆ' ಎಂದಿದ್ದಾರೆ.

ಉಗ್ರರಿಗೆ ಸೋಲೆಮನಿ ಬೆಂಬಲ

ಉಗ್ರರಿಗೆ ಸೋಲೆಮನಿ ಬೆಂಬಲ

ಕಳೆದ 20 ವರ್ಷಗಳಿಂದ ಮಧ್ಯಪ್ರಾಚ್ಯವನ್ನು ಅಸ್ಥಿರಗೊಳಿಸಲು ಸೋಲೆಮನಿ ಭಯೋತ್ಪಾದಕ ಕೃತ್ಯಗಳಿಗೆ ಉತ್ತೇಜನ ನೀಡುತ್ತಿದ್ದ ಎಂದು ಟ್ರಂಪ್ ಆರೋಪಿಸಿದ್ದಾರೆ. ಅಮೆರಿಕವು ನಿನ್ನೆ ಮಾಡಿದ್ದನ್ನು ಬಹಳ ಹಿಂದೆಯೇ ಮಾಡಬೇಕಿತ್ತು. ಇದರಿಂದ ಅನೇಕ ಜೀವಗಳು ಉಳಿಯುತ್ತಿದ್ದವು. ಇರಾನ್‌ನಲ್ಲಿ ಇತ್ತೀಚೆಗಷ್ಟೇ ಪ್ರತಿಭಟನಾಕಾರರನ್ನು ಸೋಲೆಮನಿ ಕ್ರೂರವಾಗಿ ಹತ್ತಿಕ್ಕಿದ್ದ. ತಮ್ಮದೇ ಸರ್ಕಾರದಿಂದ ಒಂದು ಸಾವಿರಕ್ಕೂ ಅಮಾಯಕ ನಾಗರಿಕರು ಹಿಂಸೆಗೊಳಗಾಗಿ, ಕೊಲೆಯಾಗಿದ್ದರು ಎಂದು ದೂರಿದ್ದಾರೆ.

ಯುದ್ಧದ ಆತಂಕ ಬೇಡ

ಯುದ್ಧದ ಆತಂಕ ಬೇಡ

ಸೋಲೆಮನಿಯ ಹತ್ಯೆಯು ಯುದ್ಧಕ್ಕೆ ಮುನ್ನುಡಿ ಬರೆಯುತ್ತದೆ ಎಂಬ ಆತಂಕ ಬೇಡ ಎಂದು ಟ್ರಂಪ್ ಭರವಸೆ ನೀಡಿದ್ದಾರೆ. 'ಯುದ್ಧವನ್ನು ತಡೆಯುವ ಸಲುವಾಗಿಯೇ ನಾವು ಕಳೆದ ರಾತ್ರಿ ಈ ಹೆಜ್ಜೆ ಇರಿಸಿದ್ದೇವೆ. ನಾವು ಯುದ್ಧ ಪ್ರಾರಂಭಿಸಲು ಈ ಕ್ರಮ ತೆಗೆದುಕೊಂಡಿದ್ದಲ್ಲ. ಇರಾನಿನ ಜನರ ಮೇಲೆ ನನಗೆ ಬಹಳ ಗೌರವ ಇದೆ. ಅವರು ನಂಬಲಾಗದಂತಹ ಅಪೂರ್ವ ಪರಂಪರೆಯನ್ನು ಹಾಗೂ ಅನಿಯಮಿತ ಸಾಮರ್ಥ್ಯ ಹೊಂದಿರುವ ಜನರು. ಅವರ ಆಡಳಿತದಲ್ಲಿ ಬದಲಾವಣೆಯಾಗಬೇಕು ಎಂದು ನಾವು ಬಯಸುತ್ತಿಲ್ಲ ಎಂದಿದ್ದಾರೆ.

ತನಗೆ ಸಹಾಯ ಮಾಡಿದ್ದವನನ್ನೇ ಕೊಂದ ಅಮೆರಿಕ: ಯಾರಿದು ಸೋಲೆಮನಿ?

ಭವಿಷ್ಯದ ಜನರಿಗೆ ಇದು ಬೇಡ

ಭವಿಷ್ಯದ ಜನರಿಗೆ ಇದು ಬೇಡ

'ಆದರೆ ಇರಾನಿನ ಆಡಳಿತ ಆ ಪ್ರದೇಶದಲ್ಲಿ ಆಕ್ರಮಣಕಾರಿಯಾಗಿದೆ. ನೆರೆಯ ದೇಶಗಳನ್ನು ಅಸ್ಥಿರಗೊಳಿಸಲು ನಕಲಿ ಯೋಧರನ್ನು ಬಳಸಿಕೊಳ್ಳುತ್ತಿದೆ. ಇದು ಅಂತ್ಯವಾಗಬೇಕಿದೆ. ಭವಿಷ್ಯವು ಇರಾನ್‌ನ ಜನರಿಗೆ ಸೇರಿದ್ದು. ಅವರು ಶಾಂತಿಯುತ ಸಹಬಾಳ್ವೆ ಮತ್ತು ಸಹಕಾರವನ್ನು ನಿರೀಕ್ಷಿಸುತ್ತಿದ್ದಾರೆಯೇ ವಿನಾ, ತಮ್ಮ ದೇಶವನ್ನು ಆರ್ಥಿಕ ರಕ್ತಪಾತದ ಜಾಗವನ್ನಾಗಿ ಪರಿವರ್ತಿಸುವ ಉಗ್ರ ತಾಣವನ್ನಾಗಿ ಅಲ್ಲ ಎಂದು ಹೇಳಿದ್ದಾರೆ.

ಭೀಕರ ದಾಳಿಗೆ ಸಂಚು ರೂಪಿಸಿದ್ದ

ಭೀಕರ ದಾಳಿಗೆ ಸಂಚು ರೂಪಿಸಿದ್ದ

ತಮ್ಮ ನಿರ್ದೇಶನದಂತೆ ಅಮೆರಿಕದ ಸೇನಾ ಪಡೆಯು ಜಗತ್ತಿನ ಯಾವುದೇ ಭಾಗದಲ್ಲಿನ 'ನಂಬರ್ ಒನ್ ಉಗ್ರ'ನನ್ನು ಅಡೆತಡೆಗಳಿಲ್ಲದ ಕಾರ್ಯಾಚರಣೆಯ ಮೂಲಕ ಹತ್ಯೆ ಮಾಡಿದೆ. ಅಮೆರಿಕದ ರಾಜತಾಂತ್ರಿಕರು ಮತ್ತು ಸೇನಾ ಸಿಬ್ಬಂದಿ ಮೇಲೆ ಭೀಕರ ದಾಳಿ ನಡೆಸಲು ಸಂಚು ರೂಪಿಸಿದ್ದ. ಆದರೆ ನಾವು ಆತನ ಕೃತ್ಯವನ್ನು ಕಂಡುಹಿಡಿದು ಆತನನ್ನು ನಿರ್ಮೂಲನೆ ಮಾಡಿದೆವು ಎಂದಿದ್ದಾರೆ.

ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ: ಅಮೆರಿಕಕ್ಕೆ ಇರಾನ್ ಎಚ್ಚರಿಕೆ

ಜಗತ್ತು ಈಗ ಸುರಕ್ಷಿತವಾಗಿದೆ

ಜಗತ್ತು ಈಗ ಸುರಕ್ಷಿತವಾಗಿದೆ

'ನಾವು ಜಗತ್ತಿನಲ್ಲಿಯೇ ಅತ್ಯುತ್ತಮ ಬೇಹುಗಾರಿಕೆಯನ್ನು ಹೊಂದಿದ್ದೇವೆ. ಯಾವುದೇ ಭಾಗದಲ್ಲಿ ಅಮೆರಿಕನ್ನರಿಗೆ ಬೆದರಿಕೆ ಉಂಟಾದರೂ ಅದನ್ನು ಕಂಡುಕೊಳ್ಳುತ್ತೇವೆ. ಅಗತ್ಯವಿರುವ ಯಾವುದೇ ಕ್ರಮ ತೆಗೆದುಕೊಳ್ಳಲು ನಾನು ಸಿದ್ಧನಿದ್ದೇನೆ. ಅದರಲ್ಲಿಯೂ ಮುಖ್ಯವಾಗಿ ಇರಾನ್‌ ವಿಚಾರದಲ್ಲಿ ನಾನು ಎಂದಿಗೂ ಸಿದ್ಧ. ನನ್ನ ನಾಯಕತ್ವದಲ್ಲಿ ನಾವು ಐಸಿಸ್‌ನ ಪ್ರಾದೇಶಿಕ ಕೇಂದ್ರವನ್ನು ನಾಶಪಡಿಸಿದ್ದೇವೆ. ಇತ್ತೀಚೆಗಷ್ಟೇ ಉಗ್ರರ ನಾಯಕ ಅಲ್ ಬಗ್ದಾದಿಯನ್ನು ಅಮೆರಿಕದ ವಿಶೇಷ ಕಾರ್ಯಾಚರಣೆಯು ಹತ್ಯೆ ಮಾಡಿದೆ. ಈ ಕ್ರೂರಿಗಳಿಂದ ಜಗತ್ತು ಸುರಕ್ಷಿತವಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.

English summary
US President Donald Trump said that, Qassem Soleimani had contributed to terrorist plots as far away as New Delhi and London.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X