ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹೇಶ್ ಭಟ್ ಹತ್ಯೆಗೆ ಯತ್ನಿಸಿದ್ದ ಆರೋಪಿ ಒಬೆದ್ ಭಾರತಕ್ಕೆ ಗಡಿಪಾರು

|
Google Oneindia Kannada News

ನ್ಯೂಯಾರ್ಕ್, ಏಪ್ರಿಲ್ 3: ಕೊಲೆ ಪ್ರಯತ್ನ, ಸುಲಿಗೆ, ಕಳ್ಳತನ ಮತ್ತು ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಆರೋಪಗಳಲ್ಲಿ ಭಾರತಕ್ಕೆ ಬೇಕಾಗಿದ್ದ ವ್ಯಕ್ತಿಯನ್ನು ಅಮೆರಿಕ ಭಾರತಕ್ಕೆ ಗಡಿಪಾರು ಮಾಡಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಒಬೆದ್ ರೇಡಿಯೋವಾಲಾ ಎಂದು ಗುರುತಿಸಿಕೊಂಡಿದ್ದ 46 ವರ್ಷದ ಉಬೈದುಲ್ಲಾ ಅಬ್ದುಲ್ ರಷೀದ್ ರೇಡಿಯೋವಾಲಾನನ್ನು ಅಮೆರಿಕದ ಅಧಿಕಾರಿಗಳು ಭಾರತಕ್ಕೆ ಒಪ್ಪಿಸಿದ್ದಾರೆ ಎಂದು ಅಮೆರಿಕದ ವಲಸೆ ಹಾಗೂ ಸುಂಕ ಜಾರಿ ಸಂಸ್ಥೆ (ಐಸಿಇ) ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ನೀರವ್ ಮೋದಿ ಸಂಬಳ ₹ 18 ಲಕ್ಷ, ಮನೆ ಬಾಡಿಗೆ ₹ 15 ಲಕ್ಷ! ನೀರವ್ ಮೋದಿ ಸಂಬಳ ₹ 18 ಲಕ್ಷ, ಮನೆ ಬಾಡಿಗೆ ₹ 15 ಲಕ್ಷ!

ಈಗ 2014ರಲ್ಲಿ ಬಾಲಿವುಡ್ ನಿರ್ದೇಶಕರಾದ ಮಹೇಶ್ ಭಟ್ ಅವರನ್ನು ಕೊಲ್ಲಲು ಸಂಚು ರೂಪಿಸಿದ ಮತ್ತು ನಿರ್ಮಾಪಕ ಕರೀಂ ಮೊರಾನಿ ಅವರ ಮೇಲೆ ಗುಂಡು ಹಾರಿಸಿದ ಆರೋಪ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ.

america deports obed radiowala accused in conspiracy to kill mahesh bhat karim morani

ಒಬೆದ್ ವಿರುದ್ಧ ಮಹಾರಾಷ್ಟ್ರ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಎಂಸಿಒಸಿಎ) ಕೋರ್ಟ್ ಜಾಮೀನು ರಹಿತ ವಾರಂಟ್ ಹೊರಡಿಸಿದ ಬಳಿಕ 2015ರಲ್ಲಿ ಸಿಬಿಐ ಮನವಿ ಮೇರೆಗೆ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಹೊರಡಿಸಿತ್ತು.

ಉದ್ಯಮಿ ವಿಜಯ್ ಮಲ್ಯ ಗಡಿಪಾರಿಗೆ ಯುಕೆ ಜಡ್ಜ್ ಆದೇಶ ಉದ್ಯಮಿ ವಿಜಯ್ ಮಲ್ಯ ಗಡಿಪಾರಿಗೆ ಯುಕೆ ಜಡ್ಜ್ ಆದೇಶ

ಒಬೆದ್‌ನನ್ನು 2017ರ ಸೆಪ್ಟೆಂಬರ್‌ನಲ್ಲಿ ಅಮೆರಿಕದ ನ್ಯೂ ಜೆರ್ಸಿಯಲ್ಲಿ ಅಕ್ರಮವಾಗಿ ನೆಲೆಸಿರುವುದಕ್ಕೆ ಇಸೆಲಿನ್‌ನಲ್ಲಿ ಬಂಧಿಸಲಾಗಿತ್ತು. ಆತನನ್ನು ಭಾರತಕ್ಕೆ ಗಡಿಪಾರು ಮಾಡುವಂತೆ ವಲಸೆ ನ್ಯಾಯಾಧೀಶರು ಸೂಚಿಸಿದ್ದರು.

English summary
US deported an Indian national, accused in the case of alleged conspiracy to kill Bollywood director Mahesh Bhat and firing on film maker Karim Morani.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X