ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದೂ ಆಗಿದ್ದಕ್ಕೆ ನನ್ನ ವಿರುದ್ಧ ಷಡ್ಯಂತ್ರ: ತುಳಸಿ ಆರೋಪ

|
Google Oneindia Kannada News

ವಾಷಿಂಗ್ಟನ್, ಜನವರಿ 28: ತಾವು ಧರ್ಮಾಂಧತೆಯ ಬಲಿಪಶುವಾಗಿದ್ದು, ಹಿಂದೂ ಹೆಸರುಳ್ಳ, ಹಿಂದೂ ರಾಷ್ಟ್ರೀಯವಾದಿಗಳಾಗಿರುವ ಕಾರಣಕ್ಕೆ ತಮ್ಮನ್ನು ಮತ್ತು ಬೆಂಬಲಿಗರನ್ನು ಕೆಲವು ಮಾಧ್ಯಮ ಸಂಸ್ಥೆಗಳು ಟಾರ್ಗೆಟ್ ಮಾಡುತ್ತಿವೆ ಎಂದು ಅಮೆರಿಕದ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಆಕಾಂಕ್ಷಿ ತುಳಸಿ ಗಬ್ಬಾರ್ಡ್ ಆರೋಪಿಸಿದ್ದಾರೆ.

ಅಮೆರಿಕ ಕಾಂಗ್ರೆಸ್‌ಗೆ ಆಯ್ಕೆಯಾದ ಮೊದಲ ಹಿಂದೂ ಎನಿಸಿರುವ ತುಳಸಿ ಗಬ್ಬಾರ್ಡ್, ಅಲ್ಲಿನ 'ರಿಲೀಜಿಯಸ್ ನ್ಯೂಸ್ ಸರ್ವೀಸಸ್' ಪತ್ರಿಕೆಗೆ ಭಾನುವಾರ ಬರೆದ ಅಂಕಣದಲ್ಲಿ ಈ ಆರೋಪ ಮಾಡಿದ್ದಾರೆ.

ಯುಎಸ್ ಅಧ್ಯಕ್ಷೀಯ ಚುನಾವಣೆ ಕಣಕ್ಕೆ ಕಮಲಾ ಹ್ಯಾರೀಸ್ ಯುಎಸ್ ಅಧ್ಯಕ್ಷೀಯ ಚುನಾವಣೆ ಕಣಕ್ಕೆ ಕಮಲಾ ಹ್ಯಾರೀಸ್

ತಮ್ಮ ಬೆಂಬಲಿಗರು, ದಾನಿಗಳ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದ್ದು, ಯಾವುದೇ ಆಧಾರವಿಲ್ಲದೆ ಹಿಂದೂ ಅಮೆರಿಕನ್ನರನ್ನು ಪ್ರತ್ಯೇಕವಾಗಿ ಗುರುತಿಸಿ, ಅಪಪ್ರಚಾರ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

america democratic presidential tulsi gabbard victim of religious bigotry hindu nationalists

ಹಿಂದೂ ರಾಷ್ಟ್ರೀಯವಾದಿಯಾಗಿರುವ ಕಾರಣಕ್ಕೆ ತಮ್ಮ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಹೊರಿಸಲಾಗುತ್ತಿದೆ. ನಾಳೆ ಇದು ಮುಸ್ಲಿಂ ಅಥವಾ ಅಮೆರಿಕನ್ ಯಹೂದಿಗಳಾಬಹುದೇ? ಜಪಾನೀಯರು, ಹಿಸ್ಪಾನಿಕ್ ಅಥವಾ ಆಫ್ರಿಕನ್ ಅಮೆರಿಕನ್ನರು ಆಗಬಹುದೇ? ಎಂದು ಪ್ರಶ್ನಿಸಿದ್ದಾರೆ.

ಭಾರತದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆಯ್ಕೆಯಾದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಭೇಟಿಯನ್ನು ತಮ್ಮ ಆರೋಪಗಳಿಗೆ 'ಸಾಕ್ಷ್ಯ' ಎಂದು ಬಿಂಬಿಸಲಾಗುತ್ತಿದೆ. ಆಗಿನ ಅಧ್ಯಕ್ಷ ಬರಾಕ್ ಒಬಾಮ, ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಕಾಂಗ್ರೆಸ್‌ನ ನನ್ನ ಅನೇಕ ಸಹೋದ್ಯೋಗಿಗಳು ಅವರನ್ನು ಭೇಟಿ ಮಾಡಿ ಜತೆಗೆ ಕೆಲಸ ಮಾಡಿದ್ದರು. ಆದರೆ, ನನ್ನ ಬಗ್ಗೆ ಅನುಮಾನ ಮೂಡುವಂತೆ ಚಿತ್ರಿಸಲಾಗಿದೆ ಎಂದು ದೂರಿದ್ದಾರೆ.

ಮಹತ್ವದ 3 ಹುದ್ದೆಗೆ ಭಾರತೀಯ ಮೂಲದವರ ಶಿಫಾರಸ್ಸು ಮಾಡಿದ ಟ್ರಂಪ್ಮಹತ್ವದ 3 ಹುದ್ದೆಗೆ ಭಾರತೀಯ ಮೂಲದವರ ಶಿಫಾರಸ್ಸು ಮಾಡಿದ ಟ್ರಂಪ್

ಕಾಂಗ್ರೆಸ್‌ಗೆ ಆಯ್ಕೆಯಾದ ಮತ್ತು ಅಧ್ಯಕ್ಷೀಯ ಸ್ಥಾನದ ಸ್ಪರ್ಧೆಯಲ್ಲಿ ಇರುವ ಮೊದಲ ಹಿಂದೂ-ಅಮೆರಿಕನ್ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆಯಿದೆ. ಈ ಐತಿಹಾಸಿಕ ಪ್ರಥಮ ಎಂದು ಶೀರ್ಷಿಕೆಗಳಲ್ಲಿ ನನ್ನ ಘೋಷಣೆಯನ್ನು ಸಂಭ್ರಮಿಸಬೇಕಿತ್ತು. ಆದರೆ, ನನ್ನ ಮೇಲೆ ಮಾತ್ರವಲ್ಲದೆ ನನ್ನ ಬೆಂಬಲಿಗರನ್ನೂ ಅನುಮಾನ, ಭಯ ಮತ್ತು ಧಾರ್ಮಿಕ ಮತಾಂಧತೆಯ ದೃಷ್ಟಿಕೋನದಿಂದ ಕಾಣಲಾಗುತ್ತಿದೆ ಎಂದು ತುಳಸಿ ಅಳಲು ತೋಡಿಕೊಂಡಿದ್ದಾರೆ.

English summary
First elected Hindu-American congress and US Democratic presidential aspirant Tulsi Gabbard alleged that she had become a victim of religious bigotry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X