ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಲಸೆ ಕಾನೂನು ಉಲ್ಲಂಘನೆ: ಇನ್ಫೋಸಿಸ್, ಆಪಲ್ ವಿರುದ್ಧದ ಪ್ರಕರಣ ವಜಾ

|
Google Oneindia Kannada News

ಬೆಂಗಳೂರು, ಮಾರ್ಚ್ 15: ಇನ್ಫೋಸಿಸ್ ಮತ್ತು ಆಪಲ್ ಕಂಪೆನಿಗಳ ವಿರುದ್ಧ ವಲಸೆ ಕಾನೂನು ಉಲ್ಲಂಘನೆ ಆರೋಪದಡಿ ದಾಖಲಿಸಲಾಗಿದ್ದ ಪ್ರಕರಣವನ್ನು ಅಮೆರಿಕದ ಕ್ಯಾಲಿಫೋರ್ನಿಯಾ ನ್ಯಾಯಾಲಯವೊಂದು ವಜಾಗೊಳಿಸಿದೆ.

ಹೆಚ್ಚು ದುಬಾರಿಯಾಗಿರುವ ಮತ್ತು ಸಂಖ್ಯಾ ನಿರ್ಬಂಧಗಳಿರುವ ಎಚ್-1ಬಿ ವೀಸಾ ಬದಲು ಬ್ಯುಸಿನೆಸ್ ಬಿ1 ವೀಸಾ ಪಡೆದುಕೊಂಡು ಇಬ್ಬರು ಭಾರತೀಯರು ತರಬೇತಿ ನೀಡಲು ಅಮೆರಿಕಕ್ಕೆ ತೆರಳಿದ್ದರು ಎಂದು ಈ ಎರಡು ಕಂಪೆನಿಗಳ ವಿರುದ್ಧ ದೂರು ದಾಖಲಿಸಲಾಗಿತ್ತು.

ಇನ್ಫೋಸಿಸ್ ಗೆ ಒಲಿದ ಐಟಿ ರಿಟನ್ಸ್ ಸರಳಗೊಳಿಸುವ ಗುತ್ತಿಗೆ ಇನ್ಫೋಸಿಸ್ ಗೆ ಒಲಿದ ಐಟಿ ರಿಟನ್ಸ್ ಸರಳಗೊಳಿಸುವ ಗುತ್ತಿಗೆ

ಕ್ಯಾಲಿಫೋರ್ನಿಯಾದಲ್ಲಿ 16 ನೇರ ತರಬೇತಿ ಕಾರ್ಯಕ್ರಮಗಳನ್ನು ನಡೆಸಲು ಇನ್ಫೋಸಿಸ್, ಆಪಲ್‌ನೊಂದಿಗೆ 50 ಸಾವಿರ ಡಾಲರ್ ಒಪ್ಪಂದ ಮಾಡಿಕೊಂಡಿತ್ತು. ಆಪಲ್‌ನಲ್ಲಿ ನಡೆಸಲಾಗುವ ತರಗತಿ ತರಬೇತಿ ಅವಧಿಗಳಲ್ಲಿ ಕಾನೂನಾತ್ಮಕವಾಗಿ ಪಾಲ್ಗೊಳ್ಳಲು ವಿದೇಶಿಗರಿಗೆ ಅಗತ್ಯವಿರುವಷ್ಟು ಎಚ್‌1ಬಿ ವೀಸಾದ ಕೊರತೆಯಿರುವುದರಿಂದ ಇನ್ಫೋಸಿಸ್, ಬ್ಯುಸಿನೆಸ್ ವೀಸಾದಡಿ ಅವರನ್ನು ಕಳುಹಿಸಲು ಒಪ್ಪಂದ ಮಾಡಿಕೊಂಡಿತ್ತು ಎಂದು ಇನ್ಫೋಸಿಸ್‌ನ ಮಾಜಿ ಗುತ್ತಿಗೆದಾರ ಕಾರ್ಲ್ ಕ್ರಾವಿಟ್ ದೂರು ಸಲ್ಲಿಸಿದ್ದರು.

america court quashes suit against Apple Infosys violate immigration law

2014ರ ಸೆಪ್ಟೆಂಬರ್‌ನಲ್ಲಿ ಕಾರ್ಲ್ ಕ್ರಾವಿಟ್ ಅವರು ಇನ್ಫೋಸಿಸ್‌ನ ಸ್ವತಂತ್ರ ಗುತ್ತಿಗೆದಾರರಾಗಿ ಆಪಲ್‌ನಲ್ಲಿ ಕೆಲಸ ಆರಂಭಿಸಿದ್ದರು. ತರಬೇತಿ ಕೋರ್ಸ್‌ಗಳನ್ನು ನಡೆಸಲು ಇನ್ಫೋಸಿಸ್‌ನ ಇಬ್ಬರು ಉದ್ಯೋಗಿಗಳಿಗೆ ಅಗತ್ಯ ಎಚ್-1ಬಿ ವೀಸಾದ ಕೊರತೆ ಇದೆ ಎಂದು ಇನ್ಫೋಸಿಸ್‌ನ ಅಧಿಕಾರಿಗಳು ಮತ್ತು ಉದ್ಯೋಗಿಗೋಳಿಗೆ ಎಚ್ಚರಿಕೆ ನೀಡಿದ್ದರು.

ಟಾಪ್ 10 ಮಾರುಕಟ್ಟೆ ಮೌಲ್ಯ: ಇನ್ಫೋಸಿಸ್, ಐಟಿಸಿ ಮೌಲ್ಯ ಜಿಗಿತ ಟಾಪ್ 10 ಮಾರುಕಟ್ಟೆ ಮೌಲ್ಯ: ಇನ್ಫೋಸಿಸ್, ಐಟಿಸಿ ಮೌಲ್ಯ ಜಿಗಿತ

ಆಪಲ್‌ನ ಹಿರಿಯ ಮ್ಯಾನೇಜರ್‌ಗೆ ಕೂಡ ಇಬ್ಬರು ತರಬೇತುದಾರರು ಬಿ-1 ವೀಸಾದಡಿ ಅಮೆರಿಕಕ್ಕೆ ಬಂದಿದ್ದಾರೆ ಎನ್ನುವುದು ತಿಳಿದಿದ್ದರೂ ಈ ತರಬೇತಿ ಚಟುವಟಿಕೆಗೆ ಅನುಮತಿ ನೀಡಿದ್ದರು ಎಂದು ಆರೋಪಿಸಿದ್ದರು.

ಆಪಲ್ ಕಂಪನಿ ಉತ್ಪನ್ನ ಬಳಸಬೇಡಿ ಎಂದ ಫೇಸ್ ಬುಕ್ ಸಿಇಒ ಝುಕರ್ ಬರ್ಗ್ ಆಪಲ್ ಕಂಪನಿ ಉತ್ಪನ್ನ ಬಳಸಬೇಡಿ ಎಂದ ಫೇಸ್ ಬುಕ್ ಸಿಇಒ ಝುಕರ್ ಬರ್ಗ್

ಬಿ-1 ವೀಸಾದಡಿ ತರಬೇತಿ ಚಟುವಟಿಕೆಗಳನ್ನು ನಡೆಸಲು ಅವಕಾಶವಿದೆ ಎಂದು ಆಪಲ್ ವಾದಿಸಿತ್ತು.

English summary
A California Court has quashes a lawsuit against Apple and Infosys to violate immigration law.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X