ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಕಂಪನ, ಮತ್ತೊಂದು ದಾಖಲೆ ಬರೆದ ಅಮೆರಿಕ..!

|
Google Oneindia Kannada News

ಕೊರೊನಾ ಕಾರಣಕ್ಕೆ ಅಮೆರಿಕದಲ್ಲಿ ಎಲ್ಲಾ ಅಯೋಮಯವಾಗಿದೆ. ಕೊರೊನಾ ಬಂದಪ್ಪಳಿಸಿದ ಬಳಿಕ ವಿಶ್ವದ ದೊಡ್ಡಣ್ಣನ ಬುಡ ಅಲುಗಾಡುತ್ತಿದೆ. ವಿಶ್ವದ ನಂ. 1 ರಾಷ್ಟ್ರ ಎಂಬ ಪಟ್ಟಕ್ಕೂ ಕುತ್ತು ಬಂದಿದೆ. ಈ ಹೊತ್ತಲ್ಲಿಯೇ ಅಮೆರಿಕ ಮತ್ತೊಂದು ಆಘಾತಕ್ಕೆ ಒಳಗಾಗಿದೆ. ನಿನ್ನೆ ಒಂದೇ ದಿನ ಮತ್ತೆ ದಾಖಲೆ ಪ್ರಮಾಣದಲ್ಲಿ 'ಕೊರೊನಾ' ಕೇಸ್‌ಗಳು ಪತ್ತೆಯಾಗಿವೆ. ನಿನ್ನೆ ಒಂದೇ ದಿನ ಅಮೆರಿಕದಲ್ಲಿ ಬರೋಬ್ಬರಿ 83,010 ಜನರಿಗೆ ಡೆಡ್ಲಿ 'ಕೊರೊನಾ' ಕನ್ಫರ್ಮ್ ಆಗಿದೆ.

ಈ ಮೂಲಕ ಅಮೆರಿಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 87 ಲಕ್ಷದ ಗಡಿ ದಾಟಿದೆ. ಹಾಗೇ 903 ಅಮೆರಿಕನ್ನರು ನಿನ್ನೆ ಕೊರೊನಾಗೆ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 2 ಲಕ್ಷ 29 ಸಾವಿರಕ್ಕೆ ತಲುಪಿದೆ. ಕಳೆದ ಹಲವು ತಿಂಗಳಿಂದಲೂ ವಿಶ್ವದ ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಅಮೆರಿಕ ಮೊದಲನೇ ಸ್ಥಾನದಲ್ಲೇ ಕೂತಿದೆ. ಒಂದೆಡೆ ಬ್ರೆಜಿಲ್‌ನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದಾಗ ಬ್ರೆಜಿಲ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಹೋಗಬಹುದು ಎನ್ನಲಾಗಿತ್ತು.

ಕೊರೊನಾ ತೊಲಗುತ್ತಿದೆ.. ತೊಲಗುತ್ತಿದೆ.. ಟ್ರಂಪ್ ಹೇಳಿಕೆಗೆ ತೀವ್ರ ಆಕ್ರೋಶಕೊರೊನಾ ತೊಲಗುತ್ತಿದೆ.. ತೊಲಗುತ್ತಿದೆ.. ಟ್ರಂಪ್ ಹೇಳಿಕೆಗೆ ತೀವ್ರ ಆಕ್ರೋಶ

ಆದರೆ ಬಡರಾಷ್ಟ್ರ ಬ್ರೆಜಿಲ್‌ನಲ್ಲೂ 'ಕೊರೊನಾ' ವೈರಸ್‌ನ ಪ್ರಭಾವ ಒಂದಷ್ಟು ತಗ್ಗಿದೆ. ಮತ್ತೊಂದೆಡೆ ಭಾರತದಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಏರುತ್ತಿರುವುದನ್ನು ನೋಡಿ ಇದೇ ರೀತಿ ಭಾವಿಸಲಾಗಿತ್ತು. ಆದರೆ ಭಾರತದಲ್ಲೂ ಹೊಸ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಅಮೆರಿಕದಲ್ಲಿ ಮಾತ್ರ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಲೇ ಇಲ್ಲ. ಬದಲಾಗಿ ದಿನದಿಂದ ದಿನಕ್ಕೆ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ.

ಮುಂದಿನ 6 ವಾರಗಳು ಹಾರಿಬಲ್..!

ಮುಂದಿನ 6 ವಾರಗಳು ಹಾರಿಬಲ್..!

ಹೌದು, ಅಮೆರಿಕ ನಾಯಕರಿಗೆ ಈಗಾಗಲೇ ತಜ್ಞರು ನೀಡಿರುವ ಎಚ್ಚರಿಕೆಯಂತೆ ಮುಂದಿನ 6 ವಾರಗಳು ಭಾರಿ ಗಂಡಾಂತರದಿಂದ ಕೂಡಿರಬಹುದು. ಇದಕ್ಕೆಲ್ಲಾ ಪ್ರಮುಖ ಕಾರಣ ಚಳಿಗಾಲ. ಅಮೆರಿಕ ಭೂಮಧ್ಯ ರೇಖೆಯ ಉತ್ತರ ಭಾಗದಲ್ಲಿ ಹರಡಿಕೊಂಡಿದೆ. ಹೀಗಾಗಿ ಉತ್ತರ ಧ್ರುವ ಪ್ರದೇಶಕ್ಕೆ ಸಾಕಷ್ಟು ಹತ್ತಿರದಲ್ಲಿದೆ. ಚಳಿಗಾಲದ ಪರಿಣಾಮ ನವೆಂಬರ್-ಡಿಸೆಂಬರ್ ವೇಳೆಗೆ ಪ್ರಾರಂಭವಾಗಿ ಜನವರಿ-ಫೆಬ್ರವರಿ ತಿಂಗಳವರೆಗೂ ಮುಂದುವರಿಯಲಿದೆ. ಅದರಲ್ಲೂ ಮುಂದಿನ 6 ವಾರಗಳು ಅಮೆರಿಕನ್ನರ ಪಾಲಿಗೆ ಹಾರಿಬಲ್ ಎಂದು ತಜ್ಞ ವೈದ್ಯರು ವಾರ್ನಿಂಗ್ ಕೊಟ್ಟಿದ್ದಾರೆ. ಇದಕ್ಕಾಗಿ ಭರದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ವ್ಯಾಕ್ಸಿನ್ ಇಲ್ಲ, ದೇಹ ತಡೆಯುತ್ತಿಲ್ಲ

ವ್ಯಾಕ್ಸಿನ್ ಇಲ್ಲ, ದೇಹ ತಡೆಯುತ್ತಿಲ್ಲ

ಈ ಹಿಂದೆ ಟ್ರಂಪ್ ಡಿಸೆಂಬರ್ ಒಳಗಾಗಿ ವ್ಯಾಕ್ಸಿನ್ ಸಿಗುವ ಭರವಸೆ ವ್ಯಕ್ತಪಡಿಸಿದ್ದರು. ಇದರ ಹಿಂದೆ ಚಳಿ ಹತ್ತಿರವಾಗುತ್ತಿದೆ ಎಂಬ ಮುನ್ಸೂಚನೆ ಕೂಡ ಇತ್ತು. ಆದರೆ ಟ್ರಂಪ್ ಭರವಸೆ ಈಡೇರಿಲ್ಲ, ಟ್ರಂಪ್ ಊಹೆ ಸುಳ್ಳಾಗಿ ಹೋಗಿದೆ. ಇಷ್ಟೆಲ್ಲದರ ಮಧ್ಯೆ 2 ಲಕ್ಷ 29 ಸಾವಿರ ಅಮೆರಿಕನ್ನರು ಕೊರೊನಾಗೆ ಬಲಿಯಾಗಿದ್ದಾರೆ. ಅದರಲ್ಲೂ ಚಳಿಗಾಲ ಅಮೆರಿಕದ ನೆಲಕ್ಕೆ ಬಂದಪ್ಪಳಿಸುತ್ತಿರುವ ಈ ಕಾಲಘಟ್ಟದಲ್ಲಿ ಆ ಭಗವಂತನೇ ಅಲ್ಲಿನ ನಿವಾಸಿಗಳನ್ನು ಕಾಪಾಡಬೇಕು. ಮಾಮೂಲಿ ಚಳಿ ಇದ್ದಾಗಲೇ ಜನ ನೂರಾರು ರೋಗಿಗಳಿಗೆ ತುತ್ತಾಗುತ್ತಿದ್ದರು. ಆದರೆ ಈಗ ಬಂಪರ್ ಗಿಫ್ಟ್ ಎಂಬಂತೆ ಕೊರೊನಾ ಬಂದೆರಗಿದ್ದು, ದೊಡ್ಡಣ್ಣನ ನಾಡು ಸಂದಿಗ್ಧ ಸ್ಥಿತಿಯಲ್ಲಿ ಸುಧಾರಿಸಿಕೊಳ್ಳಲು ಕೂಡ ಸಾಧ್ಯವಾಗದೆ ನಲುಗಿ ಹೋಗಿದೆ.

ಲಸಿಕೆ ನಂಬಿ ಕೂತರೆ ಸ್ಮಶಾನ..!

ಲಸಿಕೆ ನಂಬಿ ಕೂತರೆ ಸ್ಮಶಾನ..!

ಕೆಲ ದಿನಗಳ ಹಿಂದೆ ಬ್ರಿಟನ್‌ನ ಸಾಂಕ್ರಾಮಿಕ ರೋಗಗಳ ತಜ್ಞರು ಒಂದು ಆಘಾತಕಾರಿ ಸಂಗತಿ ತಿಳಿಸಿದ್ದರು. ಕೊರೊನಾ ಸೋಂಕು ಅಷ್ಟು ಸುಲಭವಾಗಿ ಭೂಮಿಯಿಂದ ನಾಶವಾಗದು ಎಂಬ ಎಚ್ಚರಿಕೆಯನ್ನು ನೀಡಿದ್ದರು. ಅಲ್ಲದೆ ಇನ್ನೇನು ಲಸಿಕೆ ಬಂದುಬಿಡುತ್ತೆ, ಕೊರೊನಾ ಈ ಭೂಮಿಯನ್ನೇ ಬಿಟ್ಟು ತೊಲಗುತ್ತೆ ಎಂಬ ಊಹೆಗಳು ಇದ್ದರೆ ಮನಸ್ಸಿನಿಂದ ತೆಗೆದುಹಾಕಿ ಎಂದಿದ್ದರು. ಏಕೆಂದರೆ ಈವರೆಗೂ ಯಾವುದೇ ಲಸಿಕೆಗಳು ಅಷ್ಟು ಪ್ರಭಾವ ಬೀರುತ್ತಿಲ್ಲ. ಅಕಸ್ಮಾತ್ ವ್ಯಾಕ್ಸಿನ್ ಸಕ್ಸಸ್ ಆದರೂ ಕೊರೊನಾ ತೊಲಗುತ್ತೆ ಎಂಬುದು ಭ್ರಮೆ, ಲಸಿಕೆಯಿಂದ ಸದ್ಯಕ್ಕೆ ಕೊರೊನಾ ನಿಯಂತ್ರಿಸಬಹುದು. ಲಸಿಕೆ ಬಂದ ನಂತರ ಹಲವು ವರ್ಷಗಳ ಕಾಲ ಕೊರೊನಾ ಭೂಮಿ ಮೇಲೆ ಇರುತ್ತದೆ ಎಂದು ಎಚ್ಚರಿಸಿದ್ದರು. ತಜ್ಞರ ಎಚ್ಚರಿಕೆ ಬೆನ್ನಲ್ಲೇ ಅಮೆರಿಕದಲ್ಲಿ ದಾಖಲೆ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಪತ್ತೆಯಾಗಿ ಆತಂಕವನ್ನು ಹೆಚ್ಚುಮಾಡಿದೆ.

Recommended Video

ಎಲ್ಲರೂ BJPಗೆ ಸೇರೋದು ಪಕ್ಕ!! | Oneindia Kannada
ಚುನಾವಣೆ ಹೊತ್ತಿನಲ್ಲಿ ಕೊರೊನಾ ಕಾಟ

ಚುನಾವಣೆ ಹೊತ್ತಿನಲ್ಲಿ ಕೊರೊನಾ ಕಾಟ

ಯುಎಸ್ ಅಧ್ಯಕ್ಷೀಯ ಚುನಾವಣೆ ಹೊತ್ತಲ್ಲಿಯೇ ಅಮೆರಿಕದಲ್ಲಿ ದಾಖಲೆ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಪತ್ತೆಯಾಗಿ ಆತಂಕವನ್ನು ಹೆಚ್ಚುಮಾಡಿದೆ. ಚುನಾವಣಾ ಡಿಬೇಟ್ ಗಳಲ್ಲಿ ಕೊರೊನಾವೈರಸ್ ನಿಯಂತ್ರಣಕ್ಕಾಗಿ ಟ್ರಂಪ್ ಆಡಳಿತ ತೆಗೆದುಕೊಂಡ ಕ್ರಮದ ಬಗ್ಗೆ ಭಾರಿ ಚರ್ಚೆಯಾಗಿದೆ. ಟ್ರಂಪ್ ಹಾಗೂ ಪ್ರತಿಸ್ಪರ್ಧಿ ಜೋ ಬೈಡನ್ ಇಬ್ಬರೂ ಲಸಿಕೆ ಸಿಕ್ಕಬಳಿಕ ಎಲ್ಲರಿಗೂ ಉಚಿತವಾಗಿ ಹಂಚುವ ಆಶ್ವಾಸನೆ ನೀಡಿದ್ದಾರೆ.

English summary
The United States of America Once again breaks their own record that to during Presidential Election process. Corona cases have hit a record daily high in America, 83,010 new cases confirmed on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X