ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಡೆನ್ ಮಗನ ಹತ್ಯೆ: ಖಾತ್ರಿ ಪಡಿಸಿದ ಡೊನಾಲ್ಡ್‌ ಟ್ರಂಪ್

|
Google Oneindia Kannada News

ವಾಷಿಂಗ್ಟನ್, ಸೆಪ್ಟೆಂಬರ್ 14: ಜಗತ್ತಿಗೆ ಭೀತಿ ಹುಟ್ಟಿಸಿದ್ದ ಒಸಾಮಾ ಬಿನ್ ಲಾಡೆನ್ ಪುತ್ರನ ಸಾವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ಖಾತ್ರಿ ಪಡಿಸಿದ್ದಾರೆ.

ಲಾದೆನ್ ಪುತ್ರ ಹಮ್ಜಾ ಬಿನ್ ಲಾಡೆನ್ ಅಮೆರಿಕ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಹತನಾಗಿರುವುದಾಗಿ ಇಂದು ಶ್ವೇತಭವನದಿಂದ ಬಿಡುಗಡೆ ಮಾಡಲಾಗಿರುವ ಮಾಧ್ಯಮ ಪ್ರಕಟಣೆಯಲ್ಲಿ ಹೇಳಲಾಗಿದೆ.

ಅಲ್ ಖೈದಾ ಸಂಘಟನೆಯ ಉತ್ತರಾಧಿಕಾರಿಯೂ ಆಗಿದ್ದ ಹಮ್ಜಾ ಬಿನ್ ಲಾಡೆನ್ ಅನ್ನು ಅಫ್ಘಾನಿಸ್ತಾನ-ಪಾಕಿಸ್ತಾನ ಗಡಿಯಲ್ಲಿ ನಡೆದ ಭಯೋತ್ಪಾದನೆ ವಿರುದ್ಧ ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಿರುವುದಾಗಿ ಮಾಧ್ಯಮ ಪ್ರಕಟಣೆಯಲ್ಲಿ ಹೇಳಲಾಗಿದೆ.

America Confirms Bin Ladens Sons Death

ಹಜ್ಮಾ ಬಿನ್ ಲಾಡೆನ್ ಸಾವಿನ ಬಗ್ಗೆ ಆಗಸ್ಟ್‌ 1 ರಂದೇ ವರದಿಗಳು ಪ್ರಕಟವಾಗಿದ್ದವು, ಗುಪ್ತಚರ ಇಲಾಖೆ ಮಾಹಿತಿ ಮೇರೆಗೆ ಈ ವರದಿಗಳನ್ನು ಪ್ರಕಟಿಸಲಾಗಿತ್ತು. ಆದರೆ ಆತನ ಸಾವನ್ನು ಈಗ ಅಮೆರಿಕ ಸರ್ಕಾರ ಖಾತ್ರಿಪಡಿಸಿದೆ.

ಉಗ್ರ ಒಸಾಮಾ ಬಿನ್ ಲಾಡೆನ್ ಪುತ್ರ ಹಮ್ಜಾ ಲಾಡೆನ್ ಸಾವುಉಗ್ರ ಒಸಾಮಾ ಬಿನ್ ಲಾಡೆನ್ ಪುತ್ರ ಹಮ್ಜಾ ಲಾಡೆನ್ ಸಾವು

ಲಾಡೆನ್‌ಗೆ ಇದ್ದ 20 ಮಕ್ಕಳಲ್ಲಿ 15ನೇಯ ಮಗ ಹಜ್ಮಾ ಬಿನ್ ಲಾಡೆನ್ ಆಗಿದ್ದು, ಲಾಡೆನ್‌ನ ಮೂರನೇ ಪತ್ನಿಯ ಮಗನಾಗಿದ್ದ. ಲಾಡೆನ್‌ನ ಮರಣಾನಂತರ ಅಲ್‌ ಖೈದಾದ ಮುಖಂಡತ್ವವನ್ನು ಈತ ವಹಿಸಿದ್ದು, ಕೆಲವು ತಿಂಗಳುಗಳ ಹಿಂದೆ ಅಮೆರಿಕದ ವಿರುದ್ಧ ಯುದ್ಧ ಮಾಡುವಂತೆ ಕರೆ ನೀಡಿದ್ದ. ಈತನನ್ನು ಭಯೋತ್ಪಾದಕರ ಕಪ್ಪು ಪಟ್ಟಿಗೆ ಇದೇ ವರ್ಷದ ಮಾರ್ಚ್‌ನಲ್ಲಿ ಸೇರಿಸಲಾಗಿತ್ತು. ಈತನಿಗೆ 30 ವರ್ಷ ವಯಸ್ಸಾಗಿತ್ತು.

ಅಲ್ ಖೈದಾ ಸಂಘಟನೆಯ ಹಮ್ಜಾ ಬಿನ್ ಲಾಡೆನ್ ಕಪ್ಪು ಪಟ್ಟಿಗೆಅಲ್ ಖೈದಾ ಸಂಘಟನೆಯ ಹಮ್ಜಾ ಬಿನ್ ಲಾಡೆನ್ ಕಪ್ಪು ಪಟ್ಟಿಗೆ

English summary
America today confirms that Osama Bin Laden's son Hajma Bin Laden dead in Afghanistan-Pakistan border in a anti terrorist operation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X