ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನ್‌ನಿಂದ ಹೋದವರಿಗೆ ಪುಟ್ಟ ನಗರಗಳನ್ನು ನಿರ್ಮಿಸುತ್ತಿದೆ ಅಮೆರಿಕ

|
Google Oneindia Kannada News

ವಾಷಿಂಗ್ಟನ್, ಸೆಪ್ಟೆಂಬರ್ 04: ತಾಲಿಬಾನಿಗಳ ಕ್ರೌರ್ಯಕ್ಕೆ ಹೆದರಿ ಅಮೆರಿಕಕ್ಕೆ ಹೋದ ಸುಮಾರು 25ಸಾವಿರ ಮಂದಿಗೆ ಪುಟ್ಟ ನಗರ ನಿರ್ಮಿಸಲಾಗುತ್ತಿದೆ.

ಅಫ್ಘಾನಿಸ್ತಾನದಿಂದ ಹೊತ್ತು ತಂದ 25,000 ಆಫ್ಘನ್ನರನ್ನು ಸದ್ಯ ಅಮೆರಿಕದ 8 ಸೇನಾನೆಲೆಗಳಲ್ಲಿ ತಂದು ಬಿಟ್ಟಿದೆ. ಈಗ ಅವರಿಗೆ ಎಲ್ಲಿ ವಾಸ್ತವ್ಯಕ್ಕೆ ಅನುಕೂಲ ಮಾಡಿಕೊಡುವುದು ಎಂದು ತಲೆಕೆಡಿಸಿಕೊಂಡು ಅವರಿಗಾಗಿ ಸೇನಾನೆಲೆಗಳಲ್ಲೇ ಪುಟ್ಟ ನಗರಗಳನ್ನು ನಿರ್ಮಾಣ ಮಾಡಲು ನಿರ್ಧರಿಸಿದೆ..

 ಶಿಕ್ಷೆ ಕೊಟ್ಟ ಮಹಿಳಾ ನ್ಯಾಯಾಧೀಶರ ಹುಡುಕಾಟದಲ್ಲಿದ್ದಾರೆ ತಾಲಿಬಾನ್ ಕ್ರಿಮಿನಲ್‌ಗಳು ಶಿಕ್ಷೆ ಕೊಟ್ಟ ಮಹಿಳಾ ನ್ಯಾಯಾಧೀಶರ ಹುಡುಕಾಟದಲ್ಲಿದ್ದಾರೆ ತಾಲಿಬಾನ್ ಕ್ರಿಮಿನಲ್‌ಗಳು

ಸ್ಥಳಾಂತರ ಗೊಂಡಿರುವ ಆಫ್ಘನ್ನರು ಭಾಷೆ, ವಿಭಿನ್ನ ಸಂಸ್ಕೃತಿಯಿಂದಾಗಿ ಅಮೆರಿಕದಲ್ಲಿ ಹೊಂದಿಕೊಳ್ಳ ಕಷ್ಟ ಪಡುತ್ತಿದ್ದಾರೆ. ಅಲ್ಲದೆ ಅವರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎನ್ನುವ ಪೀಕಲಾಟ ಅಲ್ಲಿನ ನಾಗರಿಕರಿಗೂ ಸಮಸ್ಯೆ ತಂದೊಡ್ಡಬಲ್ಲುದು ಎಂದು ಬೈಡನ್ ಸರ್ಕಾರ ಯೋಜಿಸಿದೆ.

America Building Small Cities At Bases For Afghans

ತಾಲಿಬಾನ್ ಕಾಬೂಲನ್ನು ಆಕ್ರಮಿಸಿಕೊಂಡಾಗಿನ ಕ್ಷಣಗಳನ್ನು ಯಾರೂ ಮರೆಯುವ ಹಾಗಿಲ್ಲ. ದೇಶದ ಜನರು ತಾಲಿಬಾನ್ ಆಡಳಿತಕ್ಕೆ ಬೆದರಿ ದೇಶ ತೊರೆಯಲು ವಿಮಾನ ನಿಲ್ದಾಣದಲ್ಲಿ ನೆರೆದು ಅದರಿಂದ ಸೃಷ್ಟಿಯಾದ ಅವಾಂತರಗಳನ್ನು ಇಡೀ ಜಗತ್ತು ಬೆಕ್ಕಸ ಬೆರಗಾಗಿ ನೋಡಿತ್ತು.

ಅಫ್ಘನ್ನರೊಂದಿಗೆ ವ್ಯವಹರಿಸಲು ಅಮೆರಿಕ ಸೇನೆ ಅಫ್ಘನ್ ಭಾಷೆಯನ್ನು ತಿಳಿದ ಭಾಷಾಂತರಕಾರರನ್ನು ನೇಮಿಸಿದೆ ಎಂದು ತಿಳಿದುಬಂಡಿದೆ. ಅಫ್ಘಾನಿಸ್ತಾನದಲ್ಲಿ ಅಮೆರಿಕ ಕಾರ್ಯಾಚರಣೆ ನಡೆಸುವ ಸಂದರ್ಭದಲ್ಲಿ ಅಮೆರಿಕ ಸೇನೆ ಇಂಗ್ಲಿಷ್ ಬಲ್ಲ ಆಫ್ಘನ್ನರನ್ನು ನೇಮಿಸಿಕೊಂಡಿತ್ತು. ಈಗ ಅಲ್ಲಿಂದ ಹೊರಬಂದ ಮೇಲೂ ಅದೇ ಪರಿಸ್ಥಿತಿ ಮುಂದುವರಿಸಿದಿರುವುದು ವಿಪರ್ಯಾಸ ಎಂದು ಪರಿಣತರು ಅಭಿಪ್ರಾಯಪಟ್ಟಿದ್ದಾರೆ.

ಎಲ್ಲಾ ಕಷ್ಟ ಕೋಟಲೆಗಳ ನಡುವೆಯೂ ಅಮೆರಿಕ ತಮ್ಮಿಂದ ಸಾಧ್ಯವಾದಷ್ಟೂ ಆಫ್ಘನ್ ನಾಗರಿಕರನ್ನು ಆ ದೇಶದಿಂದ ಹೊತ್ತು ತಂದಿತು. ಈಗ ಅಲ್ಲಿಂದ ಹೊತ್ತು ತಂದವರನ್ನು ಏನು ಮಾಡುವುದು ಎಂಬ ಚಿಂತೆಯಲ್ಲಿ ಅಮೆರಿಕ ಮುಳುಗಿತ್ತು.

ಅಮೆರಿಕ ಸೈನಿಕರು ನಿಷ್ಕ್ರಿಯಗೊಳಿಸಿದ್ದೇವೆ ಎಂದು ಹೇಳಲಾದ ಸೇನಾ ಸಾಮಗ್ರಿಗಳಲ್ಲಿ 73 ಯುದ್ಧವಿಮಾನಗಳು, 70 ಸೇನಾ ಲಾರಿಗಳು, 27 ಹಮ್ಮರ್ ಜೀಪುಗಳು ಸೇರಿವೆ. ಇದಲ್ಲದೆ ಮೂಲಗಳ ಪ್ರಕಾರ ಆಫ್ಘಾನಿಸ್ತಾನದಾದ್ಯಂತ ಅಮೆರಿಕ 2 ಸಾವಿರ ಸೇನಾವಾಹನಗಳಿದ್ದು, ಈ ಪೈಕಿ ಯುಎಸ್ ಹಮ್ವೀಸ್, 74 ಯುದ್ಧ ವಿಮಾನಗಳು, ಎಂ16 ಅಸಾಲ್ಟ್ ವೆಪನ್ ಸೇರಿದಂತೆ 6 ಲಕ್ಷ ಇನ್ ಫ್ಯಾಂಟ್ರಿ ವೆಪನ್ ಗಳು, 1.62ಲಕ್ಷ ಸೇನಾ ಸಂವಹನ ಸಂಪರ್ಕ ಯಂತ್ರಗಳು, 16 ಸಾವಿರ ನೈಟ್ ವಿಷನ್ ಕನ್ನಡಕಗಳು ಸೇರಿದಂತೆ ಹಲವು ಉಪಕರಣಗಳಿವೆ ಎನ್ನಲಾಗಿದೆ.

ಈ ಎಲ್ಲ ಬೆಳವಣಿಗೆಗಳ ನಡುವೆ ತನ್ನ ಸೇನೆಯ ಬೆಂಬಲಕ್ಕೆ ಅಮೆರಿಕ ನಿಂತಿದ್ದು, ತಮ್ಮ ಸೈನಿಕರು ಆಪ್ಘನ್ ತೊರೆಯುವಾಗ ಅಲ್ಲಿದ್ದ ಸೇನಾ ವಾಹನಗಳು, ಸೇನಾ ಯಂತ್ರೋಪಕರಣಗಳನ್ನು ಬಳಸಲಾಗದ ರೀತಿಯಲ್ಲಿ ನಿಷ್ಕ್ರಿಯಗೊಳಿಸಿದ್ದಾರೆ ಎಂದು ಹೇಳಿದೆ.

ಈ ಬಗ್ಗೆ ಮಾತನಾಡಿರುವ ಪೆಂಟಗನ್ ಕಾರ್ಯದರ್ಶಿ ಜಾನ್ ಕಿರ್ಬಿ ಅವರು, ತಾಲಿಬಾನಿಗಳು ಅಮೆರಿಕ ಸೇನೆಯ ಸೇನಾವಾಹನಗಳು, ಕಾಪ್ಟರ್ ಗಳು, ಯುದ್ಧ ವಿಮಾನಗಳನ್ನು ಬಳಕೆ ಮಾಡಲು ಯತ್ನಿಸಬಹುದು.

ಅವರು ಅವುಗಳ ಮುಂದೆ ಹೋಗಿ ನೋಡಬಹುದು. ಒಳಗೆ ಕುಳಿತುಕೊಳ್ಳಬಹುದು. ಪೋಟೋಗೆ ಪೋಸ್ ನೀಡಬಹುದು. ಆದರೆ ಅವರು ಅವುಗಳನ್ನು ಬಳಕೆ ಮಾಡಲು ಸಾಧ್ಯವಿಲ್ಲ. ರಿಪೇರಿ ಕೂಡ ಮಾಡಲಾಗದಂತೆ ಅಷ್ಟರ ಮಟ್ಟಿಗೆ ಅವುಗಳನ್ನು ಸೈನಿಕರು ನಿಷ್ಕ್ರಿಯಗೊಳಿಸಿದ್ದಾರೆ ಎಂದು ಹೇಳಿದ್ದಾರೆ.

English summary
US military bases housing Afghanistan evacuees are building their own city-type leadership organizations to deal with sanitation, food and other challenges as the numbers of Afghans coming into the US grows.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X