• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚೀನಾದ ಈ 5 ಸರಕುಗಳ ಆಮದಿಗೆ ನಿರ್ಬಂಧ ವಿಧಿಸಿದ ಅಮೆರಿಕ

|

ವಾಷಿಂಗ್ಟನ್, ಸೆಪ್ಟೆಂಬರ್ 15: ಚೀನಾದ ಒಟ್ಟು ಐದು ಸರಕುಗಳ ಆಮದಿಗೆ ಅಮೆರಿಕ ನಿರ್ಬಂಧ ವಿಧಿಸಿದೆ.

ಕಂಪ್ಯೂಟರ್-ಭಾಗಗಳು, ಹತ್ತಿ ಮತ್ತು ಕೂದಲಿನ ಉತ್ಪನ್ನಗಳು ಸೇರಿದಂತೆ ಚೀನಾದಿಂದ ಐದು ಸರಕುಗಳನ್ನು ಆಮದು ಮಾಡಿಕೊಳ್ಳುವುದನ್ನು ಅಮೆರಿಕಾ ನಿಷೇಧಿಸಿದೆ.

ಕೊವಿಡ್-19 ಸಾಂಕ್ರಾಮಿಕ ರೋಗದ ನಂತರ ಜಗತ್ತಿನಾದ್ಯಂತ ಸೋಂಕು ಹರಡುವಿಕೆಗೆ ಚೀನಾ ಕಾರಣ ಎಂದು ಡೊನಾಲ್ಡ್ ಟ್ರಂಪ್ ಬಹಿರಂಗವಾಗಿ ದೂಷಿಸುವುದರೊಂದಿಗೆ ಅಮೆರಿಕಾ- ಚೀನಾ ನಡುವಣ ಸಂಬಂಧ ಕ್ಷೀಣಿಸಿದೆ.

ಚೀನಾದ ವುಹಾನ್ ಪ್ರಾಂತ್ಯದಲ್ಲಿ ಸರ್ಕಾರದ ನಿಯಂತ್ರಣದಲ್ಲಿರುವ ಲ್ಯಾಬಿನಿಂದಲೇ ಜಾಗತಿಕ ಸಾಂಕ್ರಾಮಿಕ ವೈರಸ್ ಕೊವಿಡ್ 19 ಉತ್ಪತ್ತಿಯಾಗಿದ್ದು, ಅಲ್ಲಿಂದಲೇ ಎಲ್ಲೆಡೆ ಪ್ರಸಾರವಾಗಿದೆ ಎಂದು ಸಂಶೋಧಕಿ ಡಾ. ಲಿ ಮೆಂಗ್ ಯಾನ್ ಪ್ರತಿಪಾದಿಸಿದ್ದಾರೆ.

ಚೀನಾ-ಅಮೆರಿಕ ಕಚ್ಚಾಟದಲ್ಲಿ ಅಧಿಕಾರಿಗಳು ಅಪ್ಪಚ್ಚಿ..!

ವುಹಾನ್ ಲ್ಯಾಬಿನಲ್ಲೇ ಕೊರೊನಾವೈರಸ್ ಸೃಷ್ಟಿಸಲಾಗಿದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ, ಇದು ಬಾವಲಿ, ಪಶು, ಪಕ್ಷಿ, ಸಸ್ತನಿಯಿಂದ ಉತ್ಪಾದನೆ ಹಾಗೂ ಹರಡುವಂಥ ವೈರಸ್ ಅಲ್ಲವೇ ಅಲ್ಲ, ಇದನ್ನು ಪ್ರಯೋಗಾಲಯದಲ್ಲೇ ಸೃಷ್ಟಿ ಮಾಡಲಾಗಿದೆ. ಈ ಬಗ್ಗೆ ಇರುವ ಸಾಕ್ಷಿ, ಪುರಾವೆಗಳನ್ನು ಮುಂದಿಟ್ಟುಕೊಂಡು ಮುಂದಿನ ವಿಜ್ಞಾನ ಸರಣಿ ಲೇಖನವನ್ನು ಸಾರ್ವಜನಿಕರ ಮುಂದಿಡುತ್ತೇನೆ ಎಂದು ವೈರೊಲೊಜಿಸ್ಟ್ ಹೇಳಿದ್ದಾರೆ.

ಮಾನವ ಹಕ್ಕುಗಳ ಉಲ್ಲಂಘನೆ

ಮಾನವ ಹಕ್ಕುಗಳ ಉಲ್ಲಂಘನೆ

ಕ್ಸಿನ್‌ಜಿಯಾಂಗ್ ಪ್ರಾಂತ್ಯದಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆ, ಹಾಂಗ್ ಕಾಂಗ್, ಟಿಬೆಟ್, ಸ್ವಾತಂತ್ರ್ಯ, ತಂತ್ರಜ್ಞಾನ ಕಳವು ಮತ್ತಿತರ ಆರೋಪಗಳಿಂದಲೂ ಉಭಯ ದೇಶಗಳ ನಡುವಣ ಸಂಬಂಧ ಮತ್ತಷ್ಟು ಹದಗೆಟ್ಟಿದೆ.

ಕ್ಸಿನ್ ಜಿಯಾಂಗ್ ಪ್ರಾಂತ್ಯದಲ್ಲಿ ಸರಕು ತಯಾರಿಕೆಎ

ಕ್ಸಿನ್ ಜಿಯಾಂಗ್ ಪ್ರಾಂತ್ಯದಲ್ಲಿ ಸರಕು ತಯಾರಿಕೆಎ

ಮುಸ್ಲಿಂ ಬಹುಸಂಖ್ಯಾತ ಕ್ಸಿನ್‌ಜಿಯಾಂಗ್ ಪ್ರಾಂತ್ಯದಲ್ಲಿನ ಬಂಧಿತ ಕಾರ್ಮಿಕ ಶಿಬಿರಗಳಲ್ಲಿ ಅವುಗಳನ್ನು ಉತ್ಪಾದಿಸಲಾಗುತ್ತಿದೆ ಎಂದು ಅಮೆರಿಕ ಆರೋಪಿಸಿದೆ.

ವಿಶ್ವಸಂಸ್ಥೆ: ಚೀನಾವನ್ನು ಸೋಲಿಸಿ ಪ್ರತಿಷ್ಠಿತ ಸದಸ್ಯತ್ವ ಪಡೆದ ಭಾರತ

ಕಾರ್ಮಿಕರಿಂದ ಸರಕುಗಳ ಉತ್ಪಾದನೆ

ಕಾರ್ಮಿಕರಿಂದ ಸರಕುಗಳ ಉತ್ಪಾದನೆ

ಚೀನಾ ಸರ್ಕಾರದಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವ ಕ್ಸಿನ್‌ಜಿಯಾಂಗ್ ಉಯಿಗೂರ್ ಸ್ವಾಯತ್ತ ಪ್ರದೇಶದಲ್ಲಿನ ರಾಜ್ಯ ಪ್ರಯೋಜಿತ ಕಾರ್ಮಿಕರಿಂದ ಈ ಸರಕುಗಳನ್ನು ಉತ್ಪಾದಿಸಲಾಗುತ್ತಿದೆ ಎಂದು ಅಮೆರಿಕಾ ಹೇಳಿದೆ.

ವೃತ್ತಿಪರ ಕೌಶಲ್ಯ ಶಿಕ್ಷಣ

ವೃತ್ತಿಪರ ಕೌಶಲ್ಯ ಶಿಕ್ಷಣ

ಕ್ಸಿನ್‌ಜಿಯಾಂಗ್ ಪ್ರಾಂತ್ಯದಲ್ಲಿನ ನಾಲ್ಕು 4 ವೃತ್ತಿಪರ ಕೌಶಲ್ಯ ಶಿಕ್ಷಣ ಮತ್ತು ತರಬೇತಿ ಕೇಂದ್ರಗಳಲ್ಲಿ ಬಂಧಿತ ಕಾರ್ಮಿಕರಿಂದ ಉತ್ಪಾದಿಸಲಾಗಿರುವ ಹತ್ತಿ, ಅಫೆರೆಲ್, ಕಂಪ್ಯೂಟರು ಭಾಗಗಳು ಮತ್ತು ಕೂದಲಿನ ಉತ್ಪನ್ನಗಳನ್ನು ನಿಷೇಧಿಸಲಾಗಿದೆ ಎಂದು ಅಮೆರಿಕಾದ ಒಳಾಡಳಿತ ಭದ್ರತಾ ಇಲಾಖೆ ( ಡಿಪಾರ್ಟ್ ಮೆಂಟ್ ಆಫ್ ಹೋಮ್ ಲ್ಯಾಂಡ್ ಸೆಕ್ಯೂರಿಟಿ) ಹೇಳಿಕೆಯಲ್ಲಿ ತಿಳಿಸಿದೆ.

English summary
The Trump administration has banned the import of certain apparel and computer parts from China, saying they are made by forced laborers from the Xinjiang region.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X