ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ವಿರುದ್ಧ ವಾಣಿಜ್ಯ ಸಮರದ ಮತ್ತೊಂದು ಮಜಲನ್ನು ತೆರೆದ ಅಮೆರಿಕ

|
Google Oneindia Kannada News

ವಾಷಿಂಗ್ಟನ್, ಆಗಸ್ಟ್ 6: ಅಚ್ಚರಿಯ ಬೆಳವಣಿಗೆಯಲ್ಲಿ ಅಮೆರಿಕವು ಚೀನಾದ ವಿರುದ್ಧ ಇನ್ನೊಂದು ಘೋಷಣೆ ಮಾಡಿದ್ದು, ಕರೆನ್ಸಿ ಮ್ಯಾನಿಪುಲೇಟರ್ ಎಂದು ಪ್ರಕಟಿಸಿದೆ.

ಅಮೆರಿಕ ಹಾಗೂ ಚೀನಾ ನಡುವಿನ ವಾಣಿಜ್ಯ ಸಮರದ ಮುಂದುವರೆದ ಭಾಗವಾಗಿ ಚೀನಾದ ವಿರುದ್ಧ ಅಮೆರಿಕ ಹೊಸ ಕ್ರಮಕ್ಕೆ ಮುಂದಾಗಿದೆ.

ಮಾರುಕಟ್ಟೆಯಲ್ಲಿ ಡಾಲರ್ ಎದುರು ಚೀನಾದ ಕರೆನ್ಸಿ 'ಯಾನ್' ಮೌಲ್ಯವು ಡಾಲರ್‌ಗೆ ಪ್ರತಿಯಾಗಿ 7.13 ಯಾನ್‌ಗೆ ಇಳಿದಿದ್ದರಿಂದ ಅಮರಿಕ ಕೆಂಗೆಟ್ಟಿದೆ.

America Announces China As a Currency Manipulator

ಇದಲ್ಲದೆ ಅಮೆರಿಕದಿಂದ ಕೃಷಿ ಉತ್ಪನ್ನಗಳನ್ನು ಖರೀದಿಸಲು ನಿಲ್ಲಿಸಬೇಕು ಎಂದು ಚೀನಾ ನಿರ್ಧರಿಸಿದೆ. ಈ ಬೆಳವಣಿಗೆಗಳಿಂದ ಅಮೆರಿಕದ ಮೇಲೆ ದುಷ್ಪರಿಣಾಮ ಬೀರಬಹುದು ಎನ್ನುವುದು ಟ್ರಂಪ್ ಆಡಳಿತದ ಅಂದಾಜಾಗಿದೆ.

ಹಾಗೆಯೇ ಡಾಲರ್ ಎದುರು ಚೀನಾ ಮೌಲ್ಯವು ಐತಿಹಾಸಿಕವಾಗಿ ಕಡಿಮೆಯಾಗಿದೆ.ಇದು ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಅಮೆರಿಕ ಚೀನಾ ಕರೆನ್ಸಿ ಮ್ಯಾನುಪುಲೇಟರ್ ಎಂದು ಘೋಷಿಸಿದೆ.

ಇದು ಚೀನಾ ಮತ್ತು ಅಮೆರಿಕ ವಾಣಿಜ್ಯ ಸಮರದ ಇನ್ನೊಂದು ಮಜಲಿನತ್ತ ಕೊಂಡೊಯ್ಯುವ ಸಾಧ್ಯತೆ ಇದೆ.

ಕರೆನ್ಸಿ ಮ್ಯಾನುಪುಲೇಟರ್ ಎಂದರೇನು?: ಕರೆನ್ಸಿ ಮ್ಯಾನಿಪ್ಯುಲೇಟರ್ ಎನ್ನುವುದು ಯುನೈಟೆಡ್ ಸ್ಟೇಟ್ಸ್ ಖಜಾನೆಯಂತಹ ಸರ್ಕಾರಿ ಅಧಿಕಾರಿಗಳು ಬಳಸುವ ಪದವಾಗಿದೆ. ಕರೆನ್ಸಿ ಚಲಾವಣೆಯಲ್ಲಿ ತೊಡಗಿರುವ ದೇಶಗಳು, ಕೇಂದ್ರೀಯ ಬ್ಯಾಂಕ್, ತಮ್ಮ ದೇಶೀಯ ಕರೆನ್ಸಿಗೆ ಬದಲಾಗಿ ವಿದೇಶಿ ಕರೆನ್ಸಿಯನ್ನು ಖರೀದಿಸಿದಾಗ ಅಥವಾ ಮಾರಾಟ ಮಾಡುವಾಗ ಸಂಭವಿಸುವ ವಿತ್ತೀಯ ನೀತಿಯಾಗಿದೆ.

ಸಾಮಾನ್ಯವಾಗಿ ವಿನಿಮಯ ದರ ಮತ್ತು ವಾಣಿಜ್ಯ ನೀತಿಯ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ನೀತಿ ನಿರೂಪಕರು ಹಣದುಬ್ಬರವನ್ನು ನಿಯಂತ್ರಿಸುವುದು,ಅಂತರಾಷ್ಟ್ರೀಯ ಸ್ಪರ್ಧಾತ್ಮಕತೆಯನ್ನು ಕಾಪಾಡಿಕೊಳ್ಳುವುದು ಅಥವಾ ಆರ್ಥಿಕ ಸ್ಥಿರತೆ, ಕರೆನ್ಸಿ ವಿನಿಮಯ ಹೀಗೆ ವಿಭಿನ್ನ ಕಾರಣಗಳನ್ನು ಹೊಂದಿರಬಹುದು.

English summary
Trade War continuous between America And China in a recent move America Announces China As a Currency Manipulator.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X