ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಚ್ಛೇದಿತ ಪತ್ನಿಗೆ ಅಮೆಜಾನ್ ಸಂಸ್ಥಾಪಕ ನೀಡುವ ಪರಿಹಾರ ಎಷ್ಟು ಗೊತ್ತೇ?

|
Google Oneindia Kannada News

ವಾಷಿಂಗ್ಟನ್, ಜುಲೈ 2: ಅಮೆಜಾನ್‌ನ ಸಂಸ್ಥಾಪಕ, ದೇಶದ ಅತಿ ಶ್ರೀಮಂತರಲ್ಲಿ ಒಬ್ಬರಾದ ಜೆಫ್ ಬೆಜೋಸ್ ಅವರು ಪತ್ನಿ ಮೆಕೆಂಜಿ ಬೆಜೋಸ್ ಅವರೊಂದಿಗಿನ ದಾಂಪತ್ಯ ಬದುಕನ್ನು ಅಂತ್ಯಗೊಳಿಸುತ್ತಿದ್ದಾರೆ. ಈ ವಿಚ್ಛೇದನ ಜಗತ್ತಿನಲ್ಲಿ ಅತ್ಯಂತ ದುಬಾರಿ ಎನ್ನಲಾಗಿದೆ.

ಜೆಫ್ ಅವರು 26 ವರ್ಷದ ದಾಂಪತ್ಯದ ಬಳಿಕ ಮೆಕೆಂಜಿ ಅವರಿಂದ ಅಧಿಕೃತವಾಗಿ ಈ ವಾರ ದೂರಾಗಲಿದ್ದಾರೆ. ಈ ವಿಚ್ಛೇದನಕ್ಕೆ ಜೆಫ್ ತೆರಬೇಕಾಗಿರುವ ಪರಿಹಾರದ ಮೊತ್ತ ಬರೋಬ್ಬರಿ 38 ಬಿಲಿಯನ್ ಡಾಲರ್ (26,22,00,00,00,000.00 ರೂಪಾಯಿ!).

ವಿಶ್ವದ ಅತಿ ದುಬಾರಿ ವಿಚ್ಛೇದನ: ಅಮೆಜಾನ್ ದಂಪತಿ ದೂರ ದೂರವಿಶ್ವದ ಅತಿ ದುಬಾರಿ ವಿಚ್ಛೇದನ: ಅಮೆಜಾನ್ ದಂಪತಿ ದೂರ ದೂರ

ಅಂತರ್ಜಾಲ ಶಾಪಿಂಗ್‌ನಲ್ಲಿ ಮುಂಚೂಣಿಯಲ್ಲಿರುವ ಅಮೆಜಾನ್ ಕಂಪೆನಿಯಲ್ಲಿ ಮೆಕೆಂಜಿ ಪರಿಹಾರದ ರೂಪವಾಗಿ ಶೇ 4ರಷ್ಟು ಪಾಲು ಪಡೆದುಕೊಳ್ಳಲಿದ್ದಾರೆ. ಈ ಒಪ್ಪಂದ ಹಾಗೂ ವಿಚ್ಛೇದನಕ್ಕೆ ನ್ಯಾಯಾಧೀಶರು ಈ ವಾರ ಅಧಿಕೃತ ಮುದ್ರೆ ಒತ್ತುವ ನಿರೀಕ್ಷೆಯಿದೆ.

amazon founder Jeff bezos divorce settlement mackenzie $38 billion

1993ರಲ್ಲಿ ಈ ಜೋಡಿ ಮದುವೆಯಾಗಿತ್ತು. ಈ ವೇಳೆಗೆ ಜೆಫ್ ಅವರು ಇನ್ನೂ ಈ ದೈತ್ಯ ಅಮೆಜಾನ್ ಕಂಪೆನಿಯನ್ನು ಸ್ಥಾಪಿಸಿರಲಿಲ್ಲ. ಈ ದಂಪತಿಗೆ ನಾಲ್ವರು ಮಕ್ಕಳಿದ್ದಾರೆ.

ವಿಚ್ಛೇದನ ಪಡೆದುಕೊಂಡ ಬಳಿಕ 49 ವರ್ಷದ ಮೆಕೆಂಜಿ ಜಗತ್ತಿನ ನಾಲ್ಕನೆಯ ಅತಿ ಶ್ರೀಮಂತ ಮಹಿಳೆ ಎಂದೆನಿಸಿಕೊಳ್ಳಲಿದ್ದಾರೆ. ತಮಗೆ ದೊರಕುವ ಪರಿಹಾರದ ಮೊತ್ತದಲ್ಲಿ ಕನಿಷ್ಠ ಅರ್ಧದಷ್ಟನ್ನು ಸಾಮಾಜಿಕ ಕಾರ್ಯಕ್ಕೆ ಬಳಸುವುದಾಗಿ ಅವರು ಭರವಸೆ ನೀಡಿದ್ದಾರೆ.

ಅಮೆಜಾನ್ ಮಹಾತ್ಮೆ: ತೆಂಗಿನಕಾಯಿಗಿಂತಲೂ ಚಿಪ್ಪು ದುಬಾರಿ!ಅಮೆಜಾನ್ ಮಹಾತ್ಮೆ: ತೆಂಗಿನಕಾಯಿಗಿಂತಲೂ ಚಿಪ್ಪು ದುಬಾರಿ!

ಆಗರ್ಭ ಶ್ರೀಮಂತರು ತಮ್ಮ ಆಸ್ತಿಯ ಅರ್ಧಕ್ಕೂ ಹೆಚ್ಚು ಭಾಗವನ್ನು ಪರೋಪಕಾರಿ ಕಾರ್ಯಗಳಿಗೆ ಬಳಸಲು ಉತ್ತೇಜನ ನೀಡುವ ಸಲುವಾಗಿ ವಾರೆನ್ ಬಫೆಟ್ ಮತ್ತು ಬಿಲ್ ಗೇಟ್ಸ್ ಅವರು ಸ್ಥಾಪಿಸಿರುವ 'ದಿ ಗಿವಿಂಗ್ ಪ್ಲೆಡ್ಜ್' ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಭಾರಿ ಪ್ರಮಾಣದ ದಾನ ಮಾಡುವ ಉದ್ದೇಶವನ್ನು ಹಂಚಿಕೊಂಡಿದ್ದಾರೆ. ಸದ್ಯದಲ್ಲಿಯೇ ತಮ್ಮಿಂದ ದೂರವಾಗಲಿರುವ ಪತ್ನಿಯ ಈ ಕಾಳಜಿಯನ್ನು ಜೆಫ್ ಶ್ಲಾಘಿಸಿದ್ದಾರೆ.

English summary
Amazon founder Jeff Bezos is to pay $38 Billion to settle the divorce with his wife Mackenzie Bezos.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X