ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಚ್ಚಿ ಬೀಳಿಸೋ ಸುದ್ದಿ: ಅಮೆರಿಕದಲ್ಲಿ ಕೊರೊನಾ ವೈರಸ್ ಹರಡಲೆಂದೇ ನಡೀತಿತ್ತು ಪಾರ್ಟಿ

|
Google Oneindia Kannada News

ಅಲಬಾಮಾ(ಟುಸ್ಕಲೂಸಾ), ಜುಲೈ 3: ವಿಶ್ವದಾದ್ಯಂತ ಕೊವಿಡ್ 19 ಮಹಾಮಾರಿ ಪಸರಿಸುತ್ತಿದ್ದರೂ , ಅಮೆರಿಕದ ಜನತೆ ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸುವ ಲಕ್ಷಣ ಕಾಣಿಸುತ್ತಿಲ್ಲ. ಪರಿಣಾಮವಾಗಿ ಲಕ್ಷಗಟ್ಟಲೆ ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗುತ್ತಿವೆ. ಈಗಾಗಲೇ ಲಕ್ಷಕ್ಕೂ ಅಧಿಕ ಜನರೂ ಸಾವನ್ನಪ್ಪಿದ್ದಾರೆ.

Recommended Video

ರೌಡಿಗಳಿಂದ ಗುಂಡಿನ ದಾಳಿ, ಡಿವೈಎಸ್‌ಪಿ ಸೇರಿ 8 ಮಂದಿ ಪೊಲೀಸರ ಹತ್ಯೆ | Uttar Pradesh | Oneindia Kannada

ಹೀಗಿರುವಾಗ ಕೊವಿಡ್ 19 ರೋಗ ಹರಡಲೆಂದೇ ವಿದ್ಯಾರ್ಥಿಗಳು ಪಾರ್ಟಿಗಳನ್ನು ನಡೆಸಿರುವುದು ಬೆಳಕಿಗೆ ಬಂದಿದೆ.ಪಾರ್ಟಿಯಲ್ಲಿ ಭಾಗವಹಿಸುವ ಯಾವ ವಿದ್ಯಾರ್ಥಿಗೆ ಮೊದಲು ಕೊರೊನಾ ಬರುತ್ತದೆ ಎನ್ನುವ ವಿಚಿತ್ರ ಸವಾಲುಗಳೊಂದಿಗೆ ಪಾರ್ಟಿಯನ್ನು ಆಯೋಜಿಸಿರುವುದಾಗಿ ತಿಳಿದುಬಂದಿದೆ. ಅಮರಿಕದಲ್ಲಿ ಮತ್ತೆ 53 ಸಾವಿರ ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

ಅಲಬಾಮಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ಪಾರ್ಟಿ ಆಯೋಜನೆ

ಅಲಬಾಮಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ಪಾರ್ಟಿ ಆಯೋಜನೆ

ದಕ್ಷಿಣ ಅಮೆರಿಕದ ಅಲಬಾಮಾ ಸಿಟಿಯಲ್ಲಿರುವ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ದುಸ್ಸಾಹಸಕ್ಕೆ ಕೈಹಾಕಿದ್ದಾರೆ. ಕೊವಿಡ್ 19 ಪಾರ್ಟಿಯನ್ನು ಆಯೋಜಿಸಿ ಯಾರಿಗೆ ಮೊದಲು ಕೊರೊನಾ ಹರಡುತ್ತೆ ಎಂಬುದನ್ನು ಪರೀಕ್ಷಿಸುತ್ತಿದ್ದರು.

ಅಮೆರಿಕದಲ್ಲಿ ಒಂದೇ ದಿನ 52 ಸಾವಿರ ಕೊರೊನಾ ಸೋಂಕಿತರು ಪತ್ತೆಅಮೆರಿಕದಲ್ಲಿ ಒಂದೇ ದಿನ 52 ಸಾವಿರ ಕೊರೊನಾ ಸೋಂಕಿತರು ಪತ್ತೆ

ಕೊರೊನಾ ಹರಡಲು ಬೆಟ್ಟಿಂಗ್

ಕೊರೊನಾ ಹರಡಲು ಬೆಟ್ಟಿಂಗ್

ಈ ವಿದ್ಯಾರ್ಥಿಗಳು ಕೊವಿಡ್ 19 ಪಾರ್ಟಿಯನ್ನು ಆಯೋಜಿಸಿ, ಕೊರೊನಾ ವೈರಸ್ ಸೋಂಕಿತರನ್ನೇ ಆಹ್ವಾನಿಸುತ್ತಿದ್ದರು. ಹಾಗೆಯೇ ಯಾರಿಗೆ ಮೊದಲು ಕೊರೊನಾ ಸೋಂಕು ಹರಡುತ್ತದೆ ಎಂದು ಬೆಟ್ಟಿಂಗ್ ಕಟ್ಟಿ, ಅದರ ಮೇಲೆ ಸಾಕಷ್ಟು ಹಣ ಹೂಡುತ್ತಿದ್ದರು.

ಸಿಟಿಯ ಕೌನ್ಸಿಲರ್ ಹೇಳುವುದೇನು?

ಸಿಟಿಯ ಕೌನ್ಸಿಲರ್ ಹೇಳುವುದೇನು?

ಇದೊಂದು ಹೇಯ ಕೃತ್ಯ , ಕೊರೊನಾ ವೈರಸ್‌ನ್ನು ಉದ್ದೇಶಪೂರ್ವಕವಾಗಿಯೇ ಹರಡುತ್ತಿದ್ದರು. ಮೊದಲು ಈ ಪಾರ್ಟಿಗಳೆಲ್ಲ ಸುಳ್ಳು ಎನ್ನಲಾಗಿತ್ತು, ಬಳಿಕ ಕೆಲವು ವಿದ್ಯಾರ್ಥಿಗಳು ಈ ಪಾರ್ಟಿಯನ್ನು ನಡೆಸಿದ್ದು, ಸತ್ಯ ಎಂಬುದು ಮನವರಿಕೆಯಾಗಿತ್ತು.

ವಿದ್ಯಾರ್ಥಿಗಳ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ

ವಿದ್ಯಾರ್ಥಿಗಳ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ

ಟುಸ್ಕಾಲೂಸಾದಲ್ಲಿರುವ ಯೂನಿವರ್ಸಿಟಿ ಹಾಗೂ ಇತರೆ ಕಾಲೇಜುಗಳ ವಿದ್ಯಾರ್ಥಿಗಳು ಸೇರಿ ಈ ಕೊವಿಡ್ ಪಾರ್ಟಿಯನ್ನು ಮಾಡಿದ್ದರು. ಆದರೆ ಅವರು ಯಾವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು ಎನ್ನುವ ನಿಖರ ಮಾಹಿತಿ ನೀಡುತ್ತಿಲ್ಲ. ಅವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎನ್ನುವುದಕ್ಕೂ ಕೂಡ ಉತ್ತರವಿಲ್ಲ.

ಎಲ್ಲರ ದೇಹದಲ್ಲಿಕೊರೊನಾ ಸೋಂಕು ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ, ತಲೆನೋವು, ಜ್ವರ, ಕೆಮ್ಮು, ಕಫ ಇರುತ್ತದೆ ಕೆಲವು ವಾರಗಳ ಬಳಿಕ ಅದು ಗುಣವಾಗುತ್ತದೆ. ಆದರೆ ಈಗಾಗಲೇ ಬೇರೆ ಯಾವುದಾದರೂ ರೋಗದಿಂದ ಬಳಲುತ್ತಿರುವವರ ಮೇಲೆ ಹೆಚ್ಚಿನ ಪರಿಣಾಮ ಉಂಟಾಗಲಿದೆ.

English summary
Amid a steep rise in coronavirus cases in the United States, several college students in an Alabama city are throwing 'Covid-19 parties as a contest to see who would get infected first.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X