ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದ ಕುರಿತ ಖಡಕ್ ನಿರ್ಣಯದಲ್ಲಿ ಬದಲಾವಣೆಯಿಲ್ಲ: ಅಮೆರಿಕ

|
Google Oneindia Kannada News

ವಾಷಿಂಗ್ಟನ್, ಜುಲೈ 19: ಅಮೆರಿಕಕ್ಕೆ ಭದ್ರತೆಯ ನೆರವು ನೀಡುವುದನ್ನು ರದ್ದುಗೊಳಿಸಿರುವ ತನ್ನ ನಡೆಯಲ್ಲಿ ಯಾವುದೇ ಬದಲಾವಣೆಯಿಲ್ಲ, ಈ ಅಮಾನತು ಮುಂದುವರಿಯಲಿದೆ ಎಂದು ಅಮೆರಿಕ ಸ್ಪಷ್ಟಪಡಿಸಿದೆ.

ಮುಂದಿನವಾರ ಪಾಕಿಸ್ತಾನಿ ಪ್ರಧಾನಿ ಇಮ್ರಾನ್ ಖಾನ್ ಅವರು ಅಮೆರಿಕಕ್ಕೆ ಭೇಟಿ ನೀಡಲಿದ್ದು, ಈ ಹಿನ್ನೆಲೆಯಲ್ಲಿ ಅಮೆರಿಕ ಪಾಕಿಸ್ತಾನದ ಕುರಿತು ಮೃದುಧೋರಣೆ ತಾಳಬಹುದು ಎಂದು ಅಂದಾಜಿಸಲಾಗಿತ್ತು.

ಕುಲಭೂಷಣ್ ವಿಷಯದಲ್ಲಿ ಕಾನೂನು ಪಾಲಿಸುತ್ತೇವೆ : ಇಮ್ರಾನ್ ಖಾನ್ಕುಲಭೂಷಣ್ ವಿಷಯದಲ್ಲಿ ಕಾನೂನು ಪಾಲಿಸುತ್ತೇವೆ : ಇಮ್ರಾನ್ ಖಾನ್

ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಅಮೆರಿಕಕ್ಕೆ ತೆರಳಿ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಡಲಿದ್ದಾರೆ.

Ahead Imran Khans visit to US, America says Aid to Pakistan suspended

ಆದರೆ ಈ ಬಗ್ಗೆ ಪ್ರತಿಕ್ರಿಯೆ ಅಮೆರಿಕದ ಸ್ವತಂತ್ರ ಸಂಶೋಧನಾ ಸಂಸ್ಥೆಯಾದ ಕಾಂಗ್ರೆಶನಲ್ ರೀಸರ್ಚ್ ಸರ್ವಿಸ್(ಸಿಆರ್ ಎಸ್), "ಪಾಕಿಸ್ತಾನವು ಅಸಂಖ್ಯೆ ಇಸ್ಲಾಮಿಕ್ ಉಗ್ರವಾದಿ ಸಂಘಟನೆಗಳಿಗೆ ನೆಲೆ ನೀಡಿದೆ. ತಮ್ಮ ನೆರೆ ದೇಶದ ಮೇಲೆ ದಾಳಿ ನಡೆಸಲು, ನೆರೆ ದೇಶಗಳಿಗೆ ಭಯ ಹುಟ್ಟಿಸಲು ಪಾಕಿಸ್ತಾನ ಈ ಉಗ್ರವಾದಿಗಳನ್ನು ಸಾಕಿಟ್ಟುಕೊಂಡಿದೆ, ಸಹಿಸಿಕೊಂಡಿದೆ" ಎಂದು ಸಿಆರ್ ಎಸ್ ದೂರಿದೆ.

ವಿಶ್ವ ವಾಣಿಜ್ಯ ಕಟ್ಟಡದ ಮೇಲೆ ದಾಳಿ ನಡೆಸಿದ್ದ ಅಲ್ ಖೈದಾ ಮುಖಂಡ ಒಸಾಮಾ ಬಿನ್ ಲಾಡೆನ್ ನಿಗೆ ಪಾಕಿಸ್ತಾನವೇ ಹಲವು ವರ್ಷಗಳ ಕಾಲ ಆಶ್ರಯ ನೀಡಿತ್ತು ಎಂದು ಸಿಆರ್ ಎಸ್ ನೆನಪಿಸಿದೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ದೇಶನದ ಮೇರೆಗೆ 2018 ರಲ್ಲೇ ಪಾಕಿಸ್ತಾನಕ್ಕೆ ನೀಡಿದ್ದ ಭದ್ರತಾ ನೆರವನ್ನು ಅಮೆರಿಕ ಅಮಾನತು ಮಾಡಿತ್ತು.

English summary
Ahead of Pakistan Prime Minister Imran Khan's visit to the United States America says, It will not change its decision of suspending security assistance to Pakistan
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X