ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

UNGA ಸಭೆಯಲ್ಲಿ ಪಾಲ್ಗೊಂಡಿದ್ದ ವಿದೇಶಾಂಗ ಇಲಾಖೆ ವಕ್ತಾರ ನೆಡ್‌ಪ್ರೈಸ್‌ಗೆ ಕೊರೊನಾ ಸೋಂಕು

|
Google Oneindia Kannada News

ಇತ್ತೀಚೆಗಷ್ಟೇ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡಿದ್ದ ವಿದೇಶಾಂಗ ಇಲಾಖೆ ವಕ್ತಾರ ನೆಡ್‌ ಪ್ರೈಸ್‌ಗೆ ಕೊರೊನಾ ಸೋಂಕು ತಗುಲಿರುವ ಕುರಿತು ಮಾಹಿತಿ ಲಭ್ಯವಾಗಿದೆ.

ಭಯೋತ್ಪಾದನೆ, ಹವಾಮಾನ ವೈಪರಿತ್ಯ ಇನ್ನಿತರೆ ವಿಚಾರಗಳನ್ನು ಚರ್ಚಿಸುವ ಕುರಿತು ಸಭೆ ನಡೆಸಲಾಗಿತ್ತು.ನ್ಯೂಯಾರ್ಕ್‌ನಿಂದ ವಾಪಸಾದ ಬಳಿಕ ಕೊರೊನಾ ಲಕ್ಷಣಗಳು ಗೋಚರಿಸಿದ್ದವು. ಆಂಟೊನಿ ಬ್ಲಿಂಕೆನ್ ಜತೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡಿದ್ದರು.

ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪ್ರಧಾನಿ ಮೋದಿ ಭಾಷಣದ ಪ್ರಮುಖಾಂಶಗಳುವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪ್ರಧಾನಿ ಮೋದಿ ಭಾಷಣದ ಪ್ರಮುಖಾಂಶಗಳು

ನೆಡ್‌ ಪ್ರೈಸ್ ಅವರು ಕೊರೊನಾ ವಿರುದ್ಧದ ಸಂಪೂರ್ಣ ಲಸಿಕೆಯನ್ನೂ ಪಡೆದಿದ್ದಾರೆ. ಆದರೂ ಸೋಂಕು ತಗುಲಿದ್ದು 10 ದಿನಗಳ ಕಾಲ ಸ್ವಯಂ ದಿಗ್ಬಂಧನದಲ್ಲಿರಲಿದ್ದಾರೆ. ಅವರಿಗೆ ಸೋಮವಾರ ಕೊರೊನಾ ಲಕ್ಷಣ ಕಾಣಿಸಿಕೊಂಡಿದ್ದು, ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು ಇದೀಗ ವರದಿ ಪಾಸಿಟಿವ್ ಬಂದಿದೆ ಹೀಗಾಗಿ ಹತ್ತು ದಿನಗಳ ಕಾಲ ಯಾರ ಸಂಪರ್ಕದಲ್ಲೂ ಇರುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

After UNGA State Dept Spokesman Tests Positive For Covid-19

ಕೊರೊನಾ ಲಸಿಕೆ ಪಡೆದ ಕಾರಣ ಸೋಂಕಿನ ಲಕ್ಷಣಗಳು ತೀವ್ರವಾಗಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಆಂಟೊನಿ ಬ್ಲಿಂಕೆನ್‌ಗೂ ಪರೀಕ್ಷೆ ನಡೆಸಲಾಗಿದ್ದು, ಅವರಿಗೆ ನೆಗೆಟಿವ್ ಬಂದಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಸುಮಾರು 60 ದೇಶಗಳಿಂದ ಪ್ರತಿನಿಧಿಗಳು ಆಗಮಿಸಿದ್ದರು.

ಆದರೆ ನೆಡ್ ಅವರನ್ನು ಹೊರತುಪಡಿಸಿ ಇನ್ಯಾರಿಗೂ ಸೋಂಕು ತಗುಲಿರುವ ಕುರಿತು ವರದಿಯಾಗಿಲ್ಲ. ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರೂ ಕೂಡ ಪಾಲ್ಗೊಂಡಿದ್ದರು.

ಮಾಲ್ಡೀವ್ಸ್ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 76 ನೇ ಅಧಿವೇಶನದ ಅಧ್ಯಕ್ಷರಾಗಿದ್ದರು.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋದಿ ಭಾಷಣದ ತುಣುಕುಗಳು

*36 ಕೋಟಿಗೂ ಅಧಿಕ ಜನರಿಗೆ ನಮ್ಮ ಸರ್ಕಾರ ಭೀಮಾ ಸುರಕ್ಷಾ ಯೋಜನೆಯನ್ನು ಮಾಡಿಕೊಟ್ಟಿದೆ, ಈ ಮೂಲಕ ಜನರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ, ಭಾರತವು ಈ ಮೂಲಕ ಗುಣಾತ್ಮಕ 3 ಕೋಟಿ ಜನರಿಗೆ ಮನೆಯನ್ನು ಕಟ್ಟಿಕೊಟ್ಟಿದೆ.

*ಕೊರೊನಾ ಲಸಿಕೆ ಅಭಿವೃದ್ಧಿ ಹಾಗೂ ಉತ್ಪಾದನೆಯಲ್ಲಿ ಭಾರತವು ವಿಶೇಷ ಒತ್ತು ನೀಡುತ್ತಿದೆ.

*ಡಿಎನ್‌ಎ ಆಧಾರಿತ ಮೊದಲ ಲಸಿಕೆಯನ್ನು ಭಾರತ ಸಂಶೋಧಿಸಿದ್ದು, ಇದು 12 ವರ್ಷದ ಮೇಲ್ಪಟ್ಟ ಎಲ್ಲರಿಗೂ ನೀಡಬಹುದಾಗಿದೆ. ವಿಶ್ವದಲ್ಲಿ ಮೊದಲ ದೇಶ ಇದಾಗಿದೆ, ಆರ್ಎನ್‌ಎ ಆಧಾರಿತ ಲಸಿಕೆ ಕೂಡ ಪ್ರಯೋಗದ ಹಂತದಲ್ಲಿದೆ.

*ಭಾರತಕ್ಕೆ ಬಂದು ಲಸಿಕೆ ತಯಾರಿಸಿ ಎಂದು ಜಾಗತಿಕ ಕಂಪನಿಗಳಿಗೆ ಮೋದಿ ಕರೆ

*ಪ್ರಜಾಸತ್ತಾತ್ಮಕ ಮೌಲ್ಯಗಳಿಂದ ತಂತ್ರಜ್ಞಾನದ ಅಭಿವೃದ್ಧಿಯತ್ತ ಗಮನ ಹರಿಸಬೇಕಾಗಿದೆ

*ಭಾರತವು ಆರ್ಥಿಕತೆ ಹಾಗೂ ಪರಿಸರ ಈ ಎರಡೂ ವಿಷಯಗಳಲ್ಲಿ ಸಮತೋಲನ ಸಾಧಿಸಿದೆ.

*450 ಗಿಗೋವ್ಯಾಟ್ ನವೀಕರಿಸಬಹುದಾದ ಇಂಧನ ಉತ್ಪಾದನೆ ಗುರಿಯತ್ತ ಸಾಗಿದ್ದೇವೆ.

*ಗ್ರೀನ್ ಹೈಡ್ರೋಜನ್ ಹಬ್ ಆರಂಭಿಸುವ ಪ್ರಯತ್ನ ನಡೆಯುತ್ತಿದೆ.

*ಭಾರತ ಅಭಿವೃದ್ಧಿಯಾದರೆ ವಿಶ್ವ ಅಭಿವೃದ್ಧಿಯಾಗಲಿದೆ, ಭಾರತ ಸುಧಾರಣೆಯತ್ತ ಸಾಗಿದರೆ ವಿಶ್ವವೂ ಸುಧಾರಣೆಯತ್ತ ಸಾಗಲಿದೆ.

*ಭಾರತದ ಶಾಲಾ ಕಾಲೇಜುಗಳಲ್ಲಿ ನಿರ್ಮಿಲಸಾಗುತ್ತಿರುವ 75 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಹಾರಿಸಲಾಗುತ್ತಿದೆ.

*ಕೆಲ ದೇಶಗಳು, ಭಯೋತ್ಪಾದನೆ ರಾಜಕೀಯ , ಟೂಲ್‌ಗಳನ್ನು ಬಳಸುತ್ತಿದೆ, ಅಫ್ಘಾನಿಸ್ತಾನ ಭೂಮಿಯನ್ನು ಭಯೋತ್ಪಾದನೆಗೆ ಬಳಸಕೂಡದು.

*ಅಲ್ಲಿಯ ಸೂಕ್ಷ್ಮ ಪರಿಸ್ಥಿತಿಯನ್ನು, ತನ್ನ ಸ್ವಾರ್ಥಕ್ಕೆ ಯಾವ ದೇಶಗಳೂ ಬಳಸಿಕೊಳ್ಳಬಾರದು, ಅಫ್ಘಾನಿಸ್ತಾನದ ನಾಜೂಕಿನ ಸ್ಥಿತಿ ಯಾವ ದೇಶಕ್ಕೂ ಟೂಲ್‌ಕಿಟ್ ಆಗಬಾರದು ಅಲ್ಲಿನ, ಅಲ್ಪ ಸಂಖ್ಯಾತರಿಗೆ ನೆರವಿನ ಅಗತ್ಯವಿದೆ

English summary
State Department spokesman Ned Price has tested positive for COVID-19 and will be self-quarantining for the next 10 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X