• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹುಟ್ಟುಗುಣ ಬಿಡದ ಟ್ರಂಪ್, ಮತ್ತೆ ಡಿಬೆಟ್‌ನಲ್ಲಿ ‘ರೋಷಾಗ್ನಿ’!

|

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರಿಗೆ ಮುಂಗೋಪ ಕಡಿಮೆಯಾಗಿಲ್ಲ. ಟ್ರಂಪ್ ಕಳೆದ ಡಿಬೆಟ್‌ನಲ್ಲಿ ವರ್ತಿಸಿದಂತೆ ಈಗಲೂ ವರ್ತಿಸಿದ್ದಾರೆ. ಅಷ್ಟಕ್ಕೂ ಈ ಮಾತುಗಳನ್ನು ಹೇಳಿರುವುದು ಬೇರೆ ಯಾರೂ ಅಲ್ಲ, ವಿಶ್ವದ ದೊಡ್ಡಣ್ಣ ಅಮೆರಿಕದ ಮಾಧ್ಯಮಗಳು. ಅಮೆರಿಕ ಕಾಲಮಾನದ ಪ್ರಕಾರ ನಿನ್ನೆ ರಾತ್ರಿ ನಡೆದ 2020ರ ಅಧ್ಯಕ್ಷೀಯ ಚುನಾವಣೆಯ 3ನೇ ಹಾಗೂ ಕೊನೆಯ ಡಿಬೆಟ್‌ನಲ್ಲಿ ಟ್ರಂಪ್ ವರ್ತಿಸಿರುವ ರೀತಿಯ ಕುರಿತು ಟೀಕಾಪ್ರಹಾರ ಕೇಳಿಬಂದಿದೆ.

ಸೆಪ್ಟೆಂಬರ್ 29ರಂದು ನಡೆದಿದ್ದ 2020ರ ಅಧ್ಯಕ್ಷೀಯ ಚುನಾವಣೆಯ 1ನೇ ಡಿಬೆಟ್ ನಗೆಪಾಟಲಿಗೆ ಈಡಾಗಿತ್ತು. ಬಿಡೆನ್ ಮಾತನಾಡುವಾಗ ಟ್ರಂಪ್ ಪದೇ ಪದೆ ಮಧ್ಯಪ್ರವೇಶಿಸಿದ್ದರು. ಇದು ಮೊದಲ ಡಿಬೆಟ್ ಅನ್ನೇ ಹಾಳು ಮಾಡಿತ್ತು ಎಂದು ಅಮೆರಿಕದ ಮಾಧ್ಯಮಗಳು ಟ್ರಂಪ್ ವಿರುದ್ಧವೇ ಹರಿಹಾಯ್ದಿದ್ದವು. ಇದಾದ ಬಳಿಕ ಅಮೆರಿಕನ್ ಡಿಬೆಟ್ ಕಮಿಷನ್ ಮಹತ್ವದ ನಿರ್ಧಾರಕ್ಕೆ ಬಂದಿತ್ತು.

ಟ್ರಂಪ್ ಅಧ್ಯಕ್ಷರಾಗಲು ಈ ರಾಜ್ಯಗಳಲ್ಲಿ ಗೆಲ್ಲಲೇಬೇಕು..!

3ನೇ ಡಿಬೆಟ್ ವೇಳೆ ಮೈಕ್ ಮ್ಯೂಟ್ ಮಾಡುವ ನಿರ್ಧಾರಕ್ಕೆ ಬಂದಿತ್ತು. ಒಬ್ಬ ಅಭ್ಯರ್ಥಿ ಮಾತನಾಡುವ ಸಂದರ್ಭ ಇನ್ನೊಬ್ಬರು ಮಧ್ಯಪ್ರವೇಶ ಮಾಡಬಾರದೆಂದು ಈ ನಿರ್ಧಾರಕ್ಕೆ ಬರಲಾಗಿತ್ತು. ಆದರೆ ತಮ್ಮ ಮೈಕ್ ಆಫ್ ಆಗಿದ್ದರೂ ಪದೇ ಪದೆ ಬಿಡೆನ್ ಮಾತುಗಳ ವಿರುದ್ಧ ಸಿಟ್ಟಿಗೆದ್ದಿದ್ದರು. ಟ್ರಂಪ್ ವರ್ತನೆ ಬಗ್ಗೆ ಸ್ವತಃ ಅಮೆರಿಕದ ಮಾಧ್ಯಮಗಳೇ ಕಿಡಿಕಾರುವ ಸ್ಥಿತಿ ಈಗ ನಿರ್ಮಾಣವಾಗಿದೆ.

ಡಿಬೆಟ್‌ನಲ್ಲಿ ಏಟಿಗೆ ಎದಿರೇಟು..!

ಡಿಬೆಟ್‌ನಲ್ಲಿ ಏಟಿಗೆ ಎದಿರೇಟು..!

ಸೆಪ್ಟೆಂಬರ್ 29ರ ಮೊದಲನೇ ಡಿಬೆಟ್‌ಗೆ ಹೋಲಿಸಿದರೆ ನಿನ್ನೆಯ ಅಮೆರಿಕನ್ ಎಲೆಕ್ಷನ್ ಡಿಬೆಟ್ ಅಡೆತಡೆ ಇಲ್ಲದೆ ಸರಾಗವಾಗಿ ನಡೆದರೂ ವಿವಾದಗಳಿಂದ ದೂರ ಉಳಿಯಲಿಲ್ಲ. ಪ್ರತಿ ವಿಚಾರಗಳು ಚರ್ಚೆಗೆ ಬಂದಾಗ ಬಿಡೆನ್ ವಿರುದ್ಧ ಟ್ರಂಪ್ ವಾಗ್ದಾಳಿ ನಡೆಸುತ್ತಿದ್ದರು. ಬಿಡೆನ್ ಮಾತಿಗೆ ತಕ್ಷಣವೇ ಪ್ರತ್ಯುತ್ತರ ನೀಡಲು ಟ್ರಂಪ್ ಮುಂದಾಗುತ್ತಿದ್ದರು. ಇದು ಮತ್ತೆ ಮತ್ತೆ ಚರ್ಚೆಯನ್ನು ಹಳ್ಳ ಹಿಡಿಸುತ್ತಿದ್ದಾದರೂ ಮೈಕ್ ಮ್ಯೂಟ್ ಆಗಿದ್ದರಿಂದ ಪರಿಸ್ಥಿತಿ ಒಂದಷ್ಟು ಹಿಡಿತದಲ್ಲೇ ಇತ್ತು. ಈ ಬಾರಿಯ ಡಿಬೆಟ್‌ನಲ್ಲಿ ಅಭ್ಯರ್ಥಿಗಳನ್ನು ನಿಭಾಯಿಸಲು ಮೈಕ್ ಮ್ಯೂಟ್ ಕ್ರಮ ಒಂದಷ್ಟು ಸಹಾಯಕವಾಗಿತ್ತು.

ಪತ್ರಕರ್ತೆ ವಿರುದ್ಧವೂ ಆಗಾಗ ಆಕ್ರೋಶ..!

ಪತ್ರಕರ್ತೆ ವಿರುದ್ಧವೂ ಆಗಾಗ ಆಕ್ರೋಶ..!

ಡಿಬೆಟ್‌ನಲ್ಲಿ ಟ್ರಂಪ್ ಬಿಡೆನ್ ವಿರುದ್ಧ ಮಾತ್ರ ಸಿಟ್ಟು, ಆಕ್ರೋಶ ಹೊರಹಾಕಲಿಲ್ಲ. ಡಿಬೆಟ್ ನಡೆಸಿಕೊಡುತ್ತಿದ್ದ ಪತ್ರಕರ್ತೆ ವಿರುದ್ಧವೂ ಆಗಾಗ ಗರಂ ಆಗುತ್ತಿದ್ದರು. ಪ್ರತಿ ಅಭ್ಯರ್ಥಿಗೂ ತಲಾ 2 ನಿಮಿಷಗಳ ಕಾಲಾವಕಾಶವನ್ನ ನೀಡಿದ ನಂತರ ಮೈಕ್ ಮ್ಯೂಟ್ ಆಗುತ್ತಿತ್ತು. ಆಗ ಪತ್ರಕರ್ತೆ ಕ್ರಿಸ್ಟೆನ್ ವೆಲ್ಕರ್ ಮಧ್ಯಪ್ರವೇಶಿಸಿ ಡಿಬೆಟ್‌ನಲ್ಲಿ ಮಾತನಾಡಲು ಮತ್ತೊಬ್ಬರಿಗೆ ಅವಕಾಶ ಮಾಡಿಕೊಡುತ್ತಿದ್ದರು. ಇದೇ ರೀತಿ ಕ್ರಿಸ್ಟೆನ್ ವೆಲ್ಕರ್ ಮಧ್ಯಪ್ರವೇಶ ಮಾಡಿ ಬಿಡೆನ್ ಸರದಿ ಎಂದು ಹೇಳುವಾಗ ಟ್ರಂಪ್ ಕೋಪಗೊಳ್ಳುತ್ತಿದ್ದರು. ಇದೀಗ ಟ್ರಂಪ್‌ರ ಈ ವರ್ತನೆ ಅಮೆರಿಕದ ಮಾಧ್ಯಮಗಳನ್ನು ಕೂಡ ಕೋಪಗೊಳ್ಳುವಂತೆ ಮಾಡಿದೆ.

ಎಲೆಕ್ಷನ್ ಡಿಬೆಟ್‌ಗೆ 6 ದಶಕಗಳ ಇತಿಹಾಸ

ಎಲೆಕ್ಷನ್ ಡಿಬೆಟ್‌ಗೆ 6 ದಶಕಗಳ ಇತಿಹಾಸ

ಅಮೆರಿಕದಲ್ಲಿ ಪ್ರತಿ 4 ವರ್ಷಗಳಿಗೆ ಒಮ್ಮೆ ಅಧ್ಯಕ್ಷೀಯ ಚುನಾವಣೆ ಎದುರಾದಾಗ ಸಾಂಪ್ರದಾಯಿಕವಾಗಿಯೇ ಡಿಬೆಟ್ ನಡೆಸಲಾಗುತ್ತದೆ. ಅಷ್ಟಕ್ಕೂ ಈ ಸಂಪ್ರದಾಯ ಬೆಳೆದು ಬಂದಿದ್ದು 1954ರಲ್ಲಿ, ಅದು ಮೇರಿಲ್ಯಾಂಡ್ ವಿಶ್ವವಿದ್ಯಾಲಯದ ಪ್ರಯತ್ನದಿಂದ. ಇದಾದ ಬಳಿಕ 1960ರಲ್ಲಿ ನಡೆದಿದ್ದ ಕೆನಡಿ ಹಾಗೂ ನಿಕ್ಸನ್ ನಡುವಿನ ಚುನಾವಣಾ ಚರ್ಚೆ (Election Debate) ವಿಶ್ವದ ಗಮನ ಸೆಳೆದಿತ್ತು.

 66 ವರ್ಷಗಳಿಂದಲೂ ಈ ರೀತಿ ಎಲೆಕ್ಷನ್ ಡಿಬೆಟ್ ಸಂಪ್ರದಾಯ

66 ವರ್ಷಗಳಿಂದಲೂ ಈ ರೀತಿ ಎಲೆಕ್ಷನ್ ಡಿಬೆಟ್ ಸಂಪ್ರದಾಯ

ಹೀಗೆ ಸುಮಾರು 66 ವರ್ಷಗಳಿಂದಲೂ ಈ ರೀತಿ ಎಲೆಕ್ಷನ್ ಡಿಬೆಟ್ ಸಂಪ್ರದಾಯ ಮುಂದುವರಿದಿದೆ. ಆದರೆ ಕಳೆದ 6 ದಶಕಗಳಲ್ಲೇ ಹೆಚ್ಚು ವಿವಾದ ಸೃಷ್ಟಿಸಿದ್ದು 2020ರ 1ನೇ ಡಿಬೆಟ್. ಒಬ್ಬರು ಮಾತನಾಡುವಾಗ ಮತ್ತೊಬ್ಬ ಅಭ್ಯರ್ಥಿ ಮಧ್ಯಪ್ರವೇಶ ಮಾಡಿದ್ದು ಜಾಗತಿಕ ಮಟ್ಟದಲ್ಲಿ ಡಿಬೆಟ್ ನಗೆಪಾಟಲಿಗೆ ಈಡಾಗಿತ್ತು. ಈಗ 3ನೇ ಹಾಗೂ ಕೊನೆಯ ಡಿಬೆಟ್ ಅಷ್ಟಕ್ಕಷ್ಟೆ ಎಂಬ ಅಭಿಪ್ರಾಯ ಪಡೆಯುತ್ತಿದೆ.

English summary
3rd & the last debate of 2020 American election has successfully completed. But American media’s angered on Donald Trump over his behaviour in election debate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X