ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಜವಾಹಿರಿ ಹತ್ಯೆ, ಪ್ರತಿದಾಳಿ ಎಚ್ಚರಿಕೆ ಕೊಟ್ಟ ಅಮೆರಿಕ

|
Google Oneindia Kannada News

ವಾಷಿಂಗ್ಟನ್, ಆ.03: ಅಲ್ ಖೈದಾ ಮುಖ್ಯಸ್ಥ ಐಮನ್ ಅಲ್ ಜವಾಹಿರಿ ಹತ್ಯೆ ನಂತರ ಅಮೆರಿಕ ಪ್ರತಿದಾಳಿ ನಡೆಯುವ ಎಚ್ಚರಿಕೆ ನೀಡಲಾಗಿದೆ. ಸ್ಟೇಟ್ ಡಿಪಾರ್ಟ್ಮೆಂಟ್ ವಿಶ್ವಾದ್ಯಂತ ಪ್ರತಿಕಾರದ ದಾಳಿ ನಡೆಯಬಹುದು ಎಂದು ಹೇಳಿದೆ.

ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ ಅಲ್ ಖೈದಾ ಮುಖ್ಯಸ್ಥ ಐಮನ್ ಅಲ್-ಜವಾಹಿರಿ ಹತನಾಗಿದ್ದಾನೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಘೋಷಣೆ ಮಾಡಿದ್ದರು.

ಅಲ್-ಖೈದಾ ಮುಖ್ಯಸ್ಥನ ಹತ್ಯೆಗೆ ಅಮೆರಿಕ ಬಳಸಿದ ಶಸ್ತ್ರಾಸ್ತ್ರ ಯಾವುದು?ಅಲ್-ಖೈದಾ ಮುಖ್ಯಸ್ಥನ ಹತ್ಯೆಗೆ ಅಮೆರಿಕ ಬಳಸಿದ ಶಸ್ತ್ರಾಸ್ತ್ರ ಯಾವುದು?

"ಜುಲೈ 31, 2022 ರಂದು ನನ್ನ ನಿರ್ದೇಶನದ ಮೇರೆಗೆ ಯುನೈಟೆಡ್ ಸ್ಟೇಟ್ಸ್, ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿ ವೈಮಾನಿಕ ದಾಳಿಯನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿತು. ಇಲ್ಲಿ ಅಲ್ ಖೈದಾ ಅಮೀರ್ ಅಯ್ಮನ್ ಅಲ್-ಜವಾಹಿರಿಯನ್ನು ಹತ್ಯೆ ಮಾಡಲಾಯಿತು" ಎಂದು ಬೈಡನ್ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದರು.

After Al Qaeda Zawahiris Death US Warns Of Possible Retaliation

"ಅಲ್-ಜವಾಹಿರಿ ಸೆಪ್ಟೆಂಬರ್ 11, 2001 ರಂದು ಯುನೈಟೆಡ್ ಸ್ಟೇಟ್ಸ್ ನಲ್ಲಿ ನಡೆದ ದಾಳಿಯ ಮಾಸ್ಟರ್‌ಮೈಂಡ್‌ಗಳಲ್ಲಿ ಒಬ್ಬರಾಗಿದ್ದರು. ಯುನೈಟೆಡ್ ಸ್ಟೇಟ್ಸ್ ಮೇಲೆ ದಾಳಿ ಮಾಡಲು ತನ್ನ ಅನುಯಾಯಿಗಳನ್ನು ಒತ್ತಾಯಿಸುತ್ತಲೇ ಇದ್ದರು" ಎಂದು ಯುಎಸ್ ಸ್ಟೇಟ್ ಡಿಪಾರ್ಟ್‌ಮೆಂಟ್ ಮಂಗಳವಾರ (ಸ್ಥಳೀಯ ಸಮಯ) ತಿಳಿಸಿದೆ.

"ಅಲ್-ಜವಾಹಿರಿಯ ಮರಣದ ನಂತರ, ಅಲ್-ಖೈದಾ ಬೆಂಬಲಿಗರು ಅಥವಾ ಅದರ ಅಂಗಸಂಸ್ಥೆಯ ಭಯೋತ್ಪಾದಕ ಸಂಘಟನೆಗಳು, ಅಮೆರಿಕಾದ ಮೇಲೆ, ಸಿಬ್ಬಂದಿ ಮೇಲೆ ಅಥವಾ ನಾಗರಿಕರ ಮೇಲೆ ದಾಳಿ ಮಾಡಲು ಪ್ರಯತ್ನಿಸಬಹುದು' ಎಂದಿದೆ.

'ಭಯೋತ್ಪಾದಕ ದಾಳಿಗಳು ಎಚ್ಚರಿಕೆಯಿಲ್ಲದೆ ಆಗಾಗ್ಗೆ ಸಂಭವಿಸುವುದರಿಂದ, ಅಮೆರಿಕಾದ ನಾಗರಿಕರು ಜಾಗರೂಕತೆಯಿಂದ ಸುರಕ್ಷಿತವಾಗಿರಬೇಕು ಮತ್ತು ವಿದೇಶಕ್ಕೆ ಪ್ರಯಾಣಿಸುವಾಗ ಎಚ್ಚರಿಕೆಯಿಂದ ಇರಬೇಕು" ಎಂದು ಹೇಳಿದೆ.

ಜವಾಹಿರಿ ವಿಶ್ವದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬರಾಗಿದ್ದರು. ಸೆಪ್ಟೆಂಬರ್ 11, 2001 ರ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ ಅವರನ್ನು ಅಫ್ಘಾನ್ ರಾಜಧಾನಿ ಕಾಬೂಲ್‌ನಲ್ಲಿ ಯುಎಸ್ ನಡೆಸಿದ ಡ್ರೋನ್ ದಾಳಿಯಲ್ಲಿ ಕೊಲ್ಲಲಾಯಿತು.

ಈಜಿಪ್ಟಿನ ಶಸ್ತ್ರಚಿಕಿತ್ಸಕರಾದ ಜವಾಹಿರಿ ಅವರು 9/11 ರ ದಾಳಿಯಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದರು. ಜೊತೆಗೆ ಒಸಾಮಾ ಬಿನ್ ಲಾಡೆನ್ಸ್ ಅವರ ವೈಯಕ್ತಿಕ ವೈದ್ಯರಾಗಿಯೂ ಕಾರ್ಯನಿರ್ವಹಿಸಿದ್ದರು.

ಇನ್ನು, ತಾಲಿಬಾನ್ ಕೂಡ ಜವಾಹಿರಿಯ ಹತ್ಯೆಯನ್ನು ದೃಢಪಡಿಸಿ, ಅಮೆರಿಕಾ ನಡೆಸಿದ ಡ್ರೋನ್ ದಾಳಿಯನ್ನು ಖಂಡಿಸಿತು.

English summary
Al Qaeda leader Ayman al-Zawahiri Death: America state department warned of possible retaliation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X