ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾದಲ್ಲಿ ಶಾಂತಿಯುತ ಅಧಿಕಾರ ಹಸ್ತಾಂತರಕ್ಕೆ ಮುನ್ನುಡಿ

|
Google Oneindia Kannada News

ವಾಶಿಂಗ್ಟನ್, ನವೆಂಬರ್.24: ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ನೂತನ ಅಧ್ಯಕ್ಷರ ಅಗತ್ಯಕ್ಕೆ ತಕ್ಕಂತೆ ಶ್ವೇತ ಭವನ ಪರಿವರ್ತನೆಗೆ ನೆರವು ಬಿಡುಗಡೆಗೊಳಿಸಿದ ನಡೆಯನ್ನು ಚುನಾಯಿತ ಅಧ್ಯಕ್ಷ ಜೋ ಬಿಡೆನ್ ಸ್ವಾಗತಿಸಿದ್ದಾರೆ. ಸುಗಮ ಹಾಗೂ ಶಾಂತಿಯುತ ರೀತಿಯಲ್ಲಿ ಅಧಿಕಾರ ಹಸ್ತಾಂತರಿಸುವುದರ ಮೊದಲ ಹೆಜ್ಜೆ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜೋ ಬಿಡೆನ್ ಮತ್ತು ಉಪಾಧ್ಯಕ್ಷರಾಗಿ ಕಮಲಾ ಹ್ಯಾರಿಸ್ ಆಯ್ಕೆ ಕುರಿತು ಸಾಮಾನ್ಯ ಸೇವಾ ಆಡಳಿತದ ಆಡಳಿತಾಧಿಕಾರಿಗಳು ಖಚಿತಪಡಿಸಿಕೊಂಡಿದ್ದಾರೆ. ಈ ಹಿನ್ನೆಲೆ ಸುಗಮ ಹಾಗೂ ಶಾಂತಿಯುತ ರೀತಿಯಲ್ಲಿ ಅಧಿಕಾರ ಹಸ್ತಾಂತರಿಸುವುದಕ್ಕೆ ಅಗತ್ಯವಿರುವ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಬಿಡೆನ್ ಅವರ ಆಡಳಿತ ವರ್ಗವು ಹೇಳಿದೆ.

ಯುಎಸ್ ಚುನಾವಣೆ: ಪೆನ್ಸಿಲ್ವೇನಿಯಾದಲ್ಲಿ ಜೋ ಬಿಡೆನ್ ಅಧಿಕೃತ ಗೆಲುವು ಯುಎಸ್ ಚುನಾವಣೆ: ಪೆನ್ಸಿಲ್ವೇನಿಯಾದಲ್ಲಿ ಜೋ ಬಿಡೆನ್ ಅಧಿಕೃತ ಗೆಲುವು

"ದೇಶವು ಎದುರಿಸುತ್ತಿರುವ ಸವಾಲುಗಳನ್ನು ಹೇಗೆ ನಿಭಾಯಿಸಬೇಕು ಎನ್ನುವುದರ ಕುರಿತು ತೀರ್ಮಾನ ತೆಗೆದುಕೊಳ್ಳುವುದಕ್ಕೆ ಇಂದಿನ ನಡೆಯು ಮೊದಲ ಹೆಜ್ಜೆ ಆಗಿರಲಿದೆ. ಸಾಂಕ್ರಾಮಿಕ ಪಿಡುಗು ನಿಯಂತ್ರಣ, ದೇಶದ ಆರ್ಥಿಕತೆಯನ್ನು ತಹಬದಿಗೆ ತರುವುದಕ್ಕೆ ಸಹಕಾರಿ ಆಗಿರಲಿದೆ. ಫೆಡರಲ್ ಏಜೆನ್ಸಿಯ ನಡೆಯು ಅಧಿಕಾರ ಹಸ್ತಾಂತರವನ್ನು ಆರಂಭಿಸುವ ನಿರ್ಣಾಯಕ ಹಾಗೂ ಆಡಳಿತಾತ್ಮಕ ಕ್ರಮವಾಗಿದೆ" ಎಂದು ಬಿಡೆನ್ ತಂಡವು ಹೇಳಿದೆ.

A Step Allowing For Smooth And Peaceful Transfer Of Power To Joe Biden


ರಾಜಕೀಯ ಒತ್ತಡಗಳಿಲ್ಲ ಎಂದ ಅಧಿಕಾರಿ:

ಅಮೆರಿಕಾದ ಜನರಲ್ ಅಡ್ಮಿನಿಸ್ಟ್ರೇಷನ್ ಮುಖ್ಯಸ್ಥೆ ಎಮಿಲಿ ಮರ್ಫಿಯವರು ತಮ್ಮ ಮೇಲೆ ಯಾವುದೇ ರಾಜಕೀಯ ಒತ್ತಡಗಳಿರಲಿಲ್ಲ ಎಂದು ಹೇಳಿದ್ದರು. ಆದರೆ ನವೆಂಬರ್.03ರ ಚುನಾವಣಾ ಫಲಿತಾಂಶದ ಬಳಿಕವೂ ಬಿಡೆನ್ ನೇತೃತ್ವದ ಆಡಳಿತಾತ್ಮಕ ತಂಡಕ್ಕೆ ಅಗತ್ಯ ಆಡಳಿತಾತ್ಮಕ ನೆರವು ನೀಡುವುದಕ್ಕೆ ನಿರಾಕರಿಸಿದ್ದರು ಎನ್ನಲಾಗಿದೆ. ಒಂದು ಕಡೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚುನಾವಣಾ ಫಲಿತಾಂಶದ ಬಗ್ಗೆ ವೃಥಾ ಆರೋಪಗಳನ್ನು ಮಾಡುತ್ತಿದ್ದರು. ಚುನಾವಣೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ನ್ಯಾಯಾಂಗ ಹೋರಾಟ ಮಾಡುವುದಾಗಿ ಹೇಳುತ್ತಿದ್ದರು. ಈ ಹಿನ್ನೆಲೆ ಹೊಸ ಆಡಳಿತ ತಂಡಕ್ಕೆ ಅಗತ್ಯ ನೆರವು ನೀಡುವುದಕ್ಕೆ ಹಿಂದೇಟು ಹಾಕಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ.

English summary
US Election: A Step Allowing For "Smooth And Peaceful Transfer Of Power" To Joe Biden.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X