ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಲವೇ ವಾರಗಳಲ್ಲಿ ಸ್ಪೇಸ್ ಎಕ್ಸ್‌ ರಾಕೆಟ್ ಭಾಗ ಚಂದ್ರನ ಬಳಿ ಅಪ್ಪಳಿಸಲಿದೆ

|
Google Oneindia Kannada News

ನ್ಯೂಯಾರ್ಕ್‌, ಜನವರಿ 31: ಕೆಲವೇ ವಾರಗಳಲ್ಲಿ ಸ್ಪೇಸ್‌ ಎಕ್ಸ್‌ ರಾಕೆಟ್ ಭಾಗವು ಚಂದ್ರನ ಬಳಿ ಅಪ್ಪಳಿಸಲಿದೆ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಯ ಮಾಹಿತಿ ಪ್ರಕಾರ, ಗ್ರೇ ಸಾಫ್ಟ್‌ವೇರ್‌ವೊಂದನ್ನು ಅಭಿವೃದ್ಧಿಪಡಿಸಿದ್ದು, ಅದು ಪ್ರಪಂಚದಾದ್ಯಂತದ ವೀಕ್ಷಕರ ತಂಡದೊಂದಿಗೆ ನಮ್ಮ ಸೌರವ್ಯೂಹದ ಒಳಗೆ ಸುತ್ತುತ್ತಿರುವ ವಸ್ತುಗಳ ಮೇಲೆ ಟ್ಯಾಬ್‌ಗಳನ್ನು ಇರಿಸುತ್ತದೆ.

ಭಾರತೀಯನ ನೇತೃತ್ವದಲ್ಲಿ ಸ್ಪೇಸ್‌ಎಕ್ಸ್‌ನ ಬಾಹ್ಯಾಕಾಶ ಯಾತ್ರೆಭಾರತೀಯನ ನೇತೃತ್ವದಲ್ಲಿ ಸ್ಪೇಸ್‌ಎಕ್ಸ್‌ನ ಬಾಹ್ಯಾಕಾಶ ಯಾತ್ರೆ

ಸ್ಪೇಸ್‌ಎಕ್ಸ್ ಜಂಕ್ ಮಾರ್ಚ್ 4 ರಂದು ಎಇಡಿಟಿ (ಭಾರತದ ಸಮಯ ಸಂಜೆ 4.55) ಬೆಳಗ್ಗೆ 11.25 ಗಂಟೆಗೆ ಅಪ್ಪಳಿಸಲಿದೆ ಎಂದು ಊಹಿಸಲಾಗಿದ್ದು, ಇದು ಅಷ್ಟೊಂದು ಪರಿಣಾಮ ಬೀರುವುದಿಲ್ಲ ಎಂತಲೂ ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.

A Rogue Rocket Is On Course To Crash Into The Moon. It Wont Be The First

ಡೀಪ್ ಸ್ಪೇಸ್ ಕ್ಲೈಮೇಟ್ ಅಬ್ಸರ್ವೇಟರಿ (DSCOVR) ಎಂಬ ನಾಸಾ ಉಪಗ್ರಹವನ್ನು ಕಕ್ಷೆಗೆ ಸೇರಿಸಲು ಸ್ಪೇಸ್‌ಎಕ್ಸ್‌ ರಾಕೆಟ್ ಅನ್ನು 2015ರಲ್ಲಿ ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲಾಗಿತ್ತು. 4 ಟನ್ ತೂಕದ ರಾಕೆಟ್ ಆಕಸ್ಮಿಕವಾಗಿ ಚಂದ್ರನ ಮೇಲ್ಮೈಯಲ್ಲಿ ಸ್ಮ್ಯಾಶ್ ಮಾಡಲು ಟ್ರ್ಯಾಕ್‌ನಲ್ಲೇ ಸ್ಫೋಟಗೊಂಡಿತ್ತು. ಈಗ ಸ್ಪೇಸ್‌ಎಕ್ಸ್ ರಾಕೆಟ್ ಹಂತವು ಚಂದ್ರನ ಮೇಲ್ಮೈಯಲ್ಲಿ ಹರ್ಟ್ಜ್‌ಸ್ಪ್ರಂಗ್ ಎಂಬ 520 ಕಿ.ಮೀ ಅಗಲದ ಕುಳಿಗೆ ಅಪ್ಪಳಿಸಲು ಸಿದ್ಧವಾಗಿದೆ.

7 ವರ್ಷಗಳ ಹಿಂದೆ ಬಾಹ್ಯಾಕಾಶದಲ್ಲಿ ಸ್ಫೋಟಗೊಂಡಿದ್ದ ಸ್ಪೇಸ್‌ಎಕ್ಸ್‌ ರಾಕೆಟ್‌ನ ಒಂದು ಭಾಗ ಇದೇ ವರ್ಷದ ಮಾರ್ಚ್‌ 4 ರಂದು ಚಂದ್ರನ ದೂರಕ್ಕೆ ಹೋಗಿ ಅಪ್ಪಳಿಸಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಸ್ಪೇಸ್‌ಎಕ್ಸ್ ಫಾಲ್ಕನ್ 9 ರಾಕೆಟ್‌ನ ಭಾರಿ ಗಾತ್ರದ ಭಾಗವು ಗಂಟೆಗೆ ಸುಮಾರು 8,000 ಕಿ.ಮೀ ವೇಗದಲ್ಲಿ ಉರಿಯುತ್ತಿದ್ದು, ಚಂದ್ರನಿಂದ ದೂರದ ಭಾಗದಲ್ಲಿ ಅಪ್ಪಳಿಸುತ್ತದೆ. ಇದು ಭೂಮಿಯಿಂದ ಗೋಚರಿಸುವುದಿಲ್ಲ ಎಂದು ಅಮೆರಿಕದ ಖಗೋಳಶಾಸ್ತ್ರಜ್ಞ ಬಿಲ್ ಗ್ರೇ ಅವರು ಚಂದ್ರನೊಂದಿಗೆ ಬಾಹ್ಯಾಕಾಶ ಜಂಕ್​ನ ಹೊಸ ಘರ್ಷಣೆಯ ಕೋರ್ಸ್ ಬಗ್ಗೆ ಲೆಕ್ಕ ಹಾಕಿದ್ದಾರೆ.

ವಿಶ್ವದ ಅತ್ಯಂತ ಶಕ್ತಿಶಾಲಿ ರಾಕೆಟ್ ಎಂದೇ ಖ್ಯಾತಿ ಗಳಿಸಿರುವ ಅಮೆರಿಕದ ಸ್ಪೇಸ್ ಎಕ್ಸ್ ಸಂಸ್ಥೆಯ ಫಾಲ್ಕನ್ ಯಶಸ್ವೀ ಉಡಾವಣೆಯಾಗಿದ್ದು, ಭವಿಷ್ಯದ ಮಂಗಳ ಗ್ರಹಕ್ಕೆ ಮಾನವ ಸಹಿತ ಪ್ರಯಾಣಕ್ಕೆ ಒಂದು ಹೆಜ್ಜೆ ಸನ್ನಿಹಿತವಾದಂತಾಗಿದೆ.

ಅಮೆರಿಕದ ಖ್ಯಾತ ಉದ್ಯಮಿ ಇಯಾನ್ ಮಸ್ಕ್ ಅವರ ಕನಸಿನ ಯೋಜನೆ 'ಸ್ಪೇಸ್ ಎಕ್ಸ್'ಗೆ ಜೀವ ತುಂಬಲಿರುವ ಫಾಲ್ಕನ್ ರಾಕೆಟ್ ಅನ್ನು ಇಂದು ಫ್ಲೋರಿಡಾದಲ್ಲಿರುವ ಕೆನಡಿ ಬಾಹ್ಯಾಕಾಶ ನಿಲ್ದಾಣದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.

ಈ ಕಾರ್ಯಾಚರಣೆಯನ್ನು ಸ್ಪೇಸ್ ಎಕ್ಸ್ ಸಂಸ್ಥೆ ನೇರ ಪ್ರಸಾರ ಮಾಡಿದ್ದು, ನಿರೀಕ್ಷಿತ ಸಮಯಕ್ಕೆ ನಿಖರವಾಗಿ ರಾಕೆಟ್ ತಲುಪಿದೆ ಎಂದು ವಿಜ್ಞಾನಿಗಳು ತಿಳಸಿದ್ದಾರೆ. ರಾಕೆಟ್ ಗೆ ಅಳವಡಿಸಲಾಗಿದ್ದ ಪ್ರಬಲಶಾಲಿ 27 ಎಂಜಿನ್ ಗಳ 9 ಬೂಸ್ಟರ್ ಗಳು ಮೂರು ವಿವಿಧ ಸ್ಥರಗಳಲ್ಲಿ ಕಾರ್ಯ ನಿರ್ವಹಿಸಿ ರಾಕೆಟ್ ಅನ್ನು ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ರವಾನೆ ಮಾಡಿತು.

ಬಾಹ್ಯಾಕಾಶಕ್ಕೆ ಸ್ಪೋರ್ಟ್ಸ್ ಕಾರು!
ಇನ್ನು ಫಾಲ್ಕನ್ ರಾಕೆಟ್ ತನ್ನೊಂದಿಗೆ ಟೆಸ್ಲಾ ಸಂಸ್ಥೆಯ ಸ್ಪೋರ್ಟ್ಸ್ ಕಾರನ್ನೂ ಕೂಡ ಬಾಹ್ಯಾಕಾಶಕ್ಕೆ ಹೊತ್ಯೊಯ್ದಿತ್ತು.ಡಮ್ಮಿ ಚಾಲಕ (ಬೊಂಬೆ)ನಿದ್ದ ಕೆಂಪು ಬಣ್ಣದ ಟೆಸ್ಲಾ ಕಾರನ್ನು ಫಾಲ್ಕನ್ ರಾಕೆಟ್ ಹೊತ್ತೊಯ್ದು ಯಶಸ್ವಿಯಾಗಿ ಕಾರನ್ನು ಬಾಹ್ಯಾಕಾಶ ಕಕ್ಷೆಗೆ , ಇನ್ನು ಫಾಲ್ಕನ್ ರಾಕೆಟ್ ನ ಎಂಜಿನ್ ಮೂರು ಎಂಜಿನ್ ಗಳ ಪೈಕಿ ಎರಡು ಎಂಜಿನ್ ಗಳ ಯಶಸ್ವಿಯಾಗಿ ಭೂಮಿಗೆ ಮರಳಿದ್ದು, ಅಟ್ಲಾಂಟಿಕ್ ಸಾಗರದಲ್ಲಿರುವ ಸ್ಪೇಸ್ ಎಕ್ಸ್ ನ ನೌಕೆಯತ್ತ ಬರಬೇಕಿದ್ದ ಮೂರನೇ ಎಂಜಿನ್ ಇನ್ನಷ್ಟೇ ಆಗಮಿಸಬೇಕಿದೆ. ಇನ್ನು ವಿಜ್ಞಾನಿಗಳು ತಿಳಿಸಿರುವಂತೆ ಫಾಲ್ಕನ್ ರಾಕೆಟ್ ಪ್ರಸ್ತುತ ಉಡಾವಣೆಯಲ್ಲಿ ಹೊತ್ತು ಸಾಗಿದೆ ಭಾರಕ್ಕಿಂತ ದುಪ್ಪಟ್ಟು ಭಾರದ ಇಂಧನ ಮತ್ತು ಇತರೆ ವಸ್ತುಗಳನ್ನು ಹೊತ್ತು ಸಾಗುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದ್ದಾರೆ.

ಒಟ್ಟಾರೆ ಉದ್ಯಮಿ ಇಯಾನ್ ಮಸ್ಕ್ ಅವರ ಕನಸಿನ ಯೋಜನೆ ಸ್ಪೇಸ್ ಎಕ್ಸ್ ಗೆ ಫಾಲ್ಕನ್ ರಾಕೆಟ್ ಯಶಸ್ವೀ ಉಡಾವಣೆ ಜೀವ ತುಂಬಿದೆ.

English summary
In a few weeks' time, a rocket launched in 2015 is expected to crash into the Moon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X