• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟ್ರಂಪ್ ಗೆಲುವಿಗೆ $4 ಕೋಟಿ ಬೆಟ್ಟಿಂಗ್ ಕಟ್ಟಿದ ಗ್ಯಾಂಬ್ಲರ್..!

|

ಚುನಾವಣೆಯಲ್ಲಿ ಯಾರು ಗೆಲ್ತಾರೆ, ಯಾರು ಸೋಲ್ತಾರೆ ಅಂತಾ ಬೆಟ್ಟಿಂಗ್ ಕಟ್ಟೋದು ಭಾರತದಲ್ಲಿ ಮಾತ್ರ ರೂಢಿಯಲ್ಲಿ ಇಲ್ಲ. ವಿದೇಶಗಳಲ್ಲೂ ಎಲೆಕ್ಷನ್ ಬೆಟ್ಟಿಂಗ್ ಫುಲ್ ಫೇಮಸ್. ಹೀಗೆ ಬ್ರಿಟಿಷ್ ಬುಕ್ಕಿಯೊಬ್ಬ ಟ್ರಂಪ್ ಗೆದ್ದೇ ಗೆಲ್ತಾರೆ ಅಂತಾ ಸುಮಾರು 5 ಮಿಲಿಯನ್ ಡಾಲರ್, ಅಂದರೆ ಹತ್ತಿರ ಹತ್ತಿರ 4 ಕೋಟಿ ರೂಪಾಯಿ ಬೆಟ್ ಮಾಡಿದ್ದಾನೆ.

ಅಮೆರಿಕ ಚುನಾವಣಾ ಅಖಾಡ ರಂಗೇರಿದ್ದು, ಈಗಾಗಲೇ ಅಂತಿಮ ಹಂತದ ಮತದಾನ ಆರಂಭವಾಗಿದೆ. ಇಂದು ಅಮೆರಿಕದಲ್ಲಿ ಮತದಾನ ಕೊನೆಯಾಗಲಿದ್ದು, ಕೆಲವೇ ದಿನಗಳಲ್ಲಿ ರಿಸಲ್ಟ್ ಕೂಡ ಹೊರಬೀಳಲಿದೆ. ಆದರೆ ಈ ಹೊತ್ತಲೇ ಬುಕ್ಕಿಗಳ ಬೆಟ್ಟಿಂಗ್ ಪರ್ವ ಆರಂಭವಾಗಿದ್ದು, ಕೋಟಿ ಕೋಟಿ ಡಾಲರ್ ಬೆಟ್ಟಿಂಗ್ ನಡೆಯುತ್ತಿದೆ.

ಅಮೆರಿಕ ಚುನಾವಣೆಯಲ್ಲಿ ಯಾರಿಗೆ ಗೆಲುವು..? ಯಾರಿಗೆ ಸೋಲು..? ಅಮೆರಿಕ ಚುನಾವಣೆಯಲ್ಲಿ ಯಾರಿಗೆ ಗೆಲುವು..? ಯಾರಿಗೆ ಸೋಲು..?

2016ರ ಸಮೀಕ್ಷೆಗಳ ಆಧಾರದಲ್ಲಿ ಹಿಲರಿ ಗೆಲುವು ಪಕ್ಕಾ ಆಗಿತ್ತು. ಆದರೆ ಕಡೆಯ ಕ್ಷಣಗಳಲ್ಲಿ ಟ್ರಂಪ್ ಗೆದ್ದು, ಹಿಲರಿಯನ್ನು ಹಿಂದಿಕ್ಕಿದ್ದರು. ಆಗ ಜೂಜುಕೋರರಿಗೆ ಭಾರಿ ಲಾಭವಾದರೆ, ಬುಕ್ಕಿಗಳಿಗೆ ನಷ್ಟವಾಗಿತ್ತು. ಹೀಗಾಗಿಯೇ ಈ ಬಾರಿ ಕೂಡ ಬೆಟ್ಟಿಂಗ್ ಕಟ್ಟುವವರ ಹಾಟ್ ಫೇವರಿಟ್ ಟ್ರಂಪ್ ಆಗಿದ್ದು, ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರವಾಗಿ ಹಣದ ಹೊಳೆಯನ್ನೇ ಹರಿಸುತ್ತಿದ್ದಾರೆ.

ಹಾಕಿದ್ದು 5, ಗೆದ್ದರೆ ಸಿಗುತ್ತೆ 15..!

ಹಾಕಿದ್ದು 5, ಗೆದ್ದರೆ ಸಿಗುತ್ತೆ 15..!

ಜೂಜುಕೋರರೇ ಹಾಗೆ, ಗೆಲುವಿಗಾಗಿ ಎಲ್ಲವನ್ನೂ ಮಾರಿಕೊಳ್ತಾರೆ. ಅಕಸ್ಮಾತ್ ಗೆದ್ದುಬಿಟ್ಟರೆ ಬೀಗುತ್ತಾರೆ. ಹೀಗೆ ಬ್ರಿಟಿಷ್ ಗ್ಯಾಂಬ್ಲರ್ ಟ್ರಂಪ್ ಮೇಲೆ ಹಾಕಿರುವ 5 ಮಿಲಿಯನ್ ಡಾಲರ್‌ಗೆ ಪ್ರತಿಯಾಗಿ ಆತನಿಗೆ 15 ಮಿಲಿಯನ್ ಡಾಲರ್ ಸಿಗಲಿದೆ. ಆದರೆ ಜೂಜುಕೋರನ ಕನಸು ಈಡೇರಲು ಟ್ರಂಪ್ ಗೆಲ್ಲಬೇಕಾಗಿದೆ ಅಷ್ಟೇ. ಇದೀಗ ಟ್ರಂಪ್ ಗೆದ್ದೇ ಗೆಲ್ತಾರೆ ಎಂದು ಬೆಟ್ ಹಾಕಿರುವ ಬ್ರಿಟಿಷ್ ಗ್ಯಾಂಬ್ಲರ್ ದಾಖಲೆಯನ್ನೂ ಬರೆದಿದ್ದಾನೆ. ಈತ ಹಾಕಿರುವ 5 ಮಿಲಿಯನ್ ಡಾಲರ್ ಬೆಟ್ ಇದುವರೆಗಿನ ಚುನಾವಣೆಗಳಲ್ಲೇ ದೊಡ್ಡ ಮೊತ್ತದ್ದಾಗಿದೆ.

ಡೊನಾಲ್ಡ್ ಟ್ರಂಪ್ ಸೋಲುವುದು ಗ್ಯಾರಂಟಿ: ಅಮೆರಿಕದ ‘ನಾಸ್ಟ್ರಡಾಮಸ್'ಡೊನಾಲ್ಡ್ ಟ್ರಂಪ್ ಸೋಲುವುದು ಗ್ಯಾರಂಟಿ: ಅಮೆರಿಕದ ‘ನಾಸ್ಟ್ರಡಾಮಸ್'

ಅಮೆರಿಕದಲ್ಲಿ ಬೆಟ್ಟಿಂಗ್ ಆಡಿದರೆ ಜೈಲೂಟ..!

ಅಮೆರಿಕದಲ್ಲಿ ಬೆಟ್ಟಿಂಗ್ ಆಡಿದರೆ ಜೈಲೂಟ..!

ಚುನಾವಣೆಗಳ ಮೇಲೆ ಬೆಟ್ಟಿಂಗ್ ಹಾಕುವುದು ಬಹುದೊಡ್ಡ ಕ್ರೇಜ್. ಆದರೆ ಈ ರೀತಿ ಅಮೆರಿಕದಲ್ಲಿ ಬೆಟ್ಟಿಂಗ್ ಕಟ್ಟಿ, ಅಭ್ಯರ್ಥಿ ಗೆಲುವು ನಿಶ್ಚಯ ಮಾಡಿದರೆ ಜೈಲೂಟ ತಿನ್ನಲು ಸಿದ್ಧವಾಗಿರಬೇಕು. ಏಕೆಂದರೆ ಅಮೆರಿಕದಲ್ಲಿ ಎಲೆಕ್ಷನ್ ಬೆಟ್ಟಿಂಗ್ ನಡೆಸುವವರ ವಿರುದ್ಧ ಕಠಿಣ ಕಾನೂನುಗಳಿವೆ. ಅಲ್ಲಿನ ಕಾನೂನಿನ ವಿಷಯಕ್ಕೆ ಬಂದರೆ, ಒಂದು ಅಥವಾ ಎರಡು ವರ್ಷಗಳ ಶಿಕ್ಷೆ ಕನಸಿನ ಮಾತು. ಮಾತೆತ್ತಿದ್ದರೆ 10, 20 ವರ್ಷಗಳ ಲೆಕ್ಕದಲ್ಲೇ ಶಿಕ್ಷೆ ವಿಧಿಸುತ್ತಿದ್ದಾರೆ. ಹೀಗಾಗಿ ಅಮೆರಿಕದಲ್ಲಿ ಈ ರೀತಿ ಎಲೆಕ್ಷನ್ ಬೆಟ್ಟಿಂಗ್‌ ನಡೆದರೂ ಕದ್ದುಮುಚ್ಚಿ ನಡೆಸುತ್ತಾರೆ.

ಯುರೋಪ್‌ನಲ್ಲಿ ಸಿಕ್ಕಾಪಟ್ಟೆ ಕ್ರೇಜ್..!

ಯುರೋಪ್‌ನಲ್ಲಿ ಸಿಕ್ಕಾಪಟ್ಟೆ ಕ್ರೇಜ್..!

ಜಗತ್ತಿಗೆ ಯುರೋಪಿಯನ್ನರು ಆಧುನಿಕತೆ ಪಾಠ ಹೇಳಿಕೊಟ್ಟಂತೆ, ಎಲೆಕ್ಷನ್ ಗ್ಯಾಂಬ್ಲಿಂಗ್ ಬಗ್ಗೆಯೂ ರುಚಿ ತೋರಿಸಿದ್ದಾರೆ. ಏಕೆಂದರೆ ಬ್ರಿಟನ್ ಸೇರಿದಂತೆ ಯುರೋಪ್‌ನ ಬಹುಪಾಲು ದೇಶಗಳಲ್ಲಿ ಎಲೆಕ್ಷನ್ ಬೆಟ್ಟಿಂಗ್ ಸಿಕ್ಕಾಪಟ್ಟೆ ಫೇಮಸ್. ಅದರಲ್ಲೂ ಅಮೆರಿಕದಲ್ಲಿ ಚುನಾವಣೆ ನಡೆಯುತ್ತಿದೆ ಎಂದರೆ, ಜೂಜುಕೋರರು ಕೈಲಿ ಕಾಸು ಹಿಡಿದು ಬೆಟ್ಟಿಂಗ್ ಕಟ್ಟುವುದಕ್ಕೆ ಸಿದ್ಧರಾಗಿರುತ್ತಾರೆ. ಈ ಬಾರಿ ಯುರೋಪ್‌ನ ದೇಶಗಳಲ್ಲೂ ಟ್ರಂಪ್ ಹಾಟ್ ಫೇವರಿಟ್ ಆಗಿದ್ದಾರೆ. ಏಕೆಂದರೆ ಸಮೀಕ್ಷೆಗಳ ವರದಿ ಟ್ರಂಪ್ ವಿರುದ್ಧ ಇದೆ. ಹೀಗಾಗಿ ಅಕಸ್ಮಾತ್ 2016ರ ರೀತಿ ಜಾದೂ ನಡೆದು ಟ್ರಂಪ್ ಗೆದ್ದರೆ ಹೆಚ್ಚಿನ ಲಾಭ ಗಳಿಸಬಹುದು ಎಂಬುದು ಅವರ ಲೆಕ್ಕಾಚಾರ.

ಅಮೆರಿಕ ಚುನಾವಣೆ Poll: ಯಾರಿಗೆ ಸೋಲು, ಯಾರಿಗೆ ಗೆಲುವು..?ಅಮೆರಿಕ ಚುನಾವಣೆ Poll: ಯಾರಿಗೆ ಸೋಲು, ಯಾರಿಗೆ ಗೆಲುವು..?

ಶೇಕಡವಾರು ಮತಗಳಿಕೆಯಲ್ಲೂ ಬಿಡೆನ್ ಮುಂದೆ

ಶೇಕಡವಾರು ಮತಗಳಿಕೆಯಲ್ಲೂ ಬಿಡೆನ್ ಮುಂದೆ

ಬಿಡೆನ್ 538 ಸ್ಥಾನಗಳ ಪೈಕಿ 290 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಳ್ಳುವ ಜೊತೆ ಜೊತೆಗೆ ಶೇಕಡವಾರು ಮತದಾನದಲ್ಲಿ ಶೇ. 53.8 ರಷ್ಟು ಮತಗಳನ್ನು ಬಾಚಿಕೊಳ್ಳುವ ಮುನ್ಸೂಚನೆ ನೀಡಿದ್ದಾರೆ. ಆದರೆ ಮತ್ತೊಂದು ಬದಿಯಲ್ಲಿ ಟ್ರಂಪ್‌ಗೆ ಶೇಕಡವಾರು ಮತದಾನದಲ್ಲೂ ಭಾರಿ ಹಿನ್ನಡೆಯಾಗಿದೆ. ಬಿಡೆನ್‌ಗಿಂತಲೂ ಟ್ರಂಪ್ ಶೇಕಡ 9.6ರಷ್ಟು ಕಡಿಮೆ ಮತ ಗಳಿಸಿದ್ದಾರೆ. ಚುನಾವಣೆಗೆ ಇನ್ನೂ 6 ದಿನಗಳು ಬಾಕಿ ಇರುವಾಗಲೇ ಇದು ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಆಘಾತ ನೀಡಿದೆ.

English summary
A British gambler staked 5 million dollar on President Donald Trump winning. Gamblers saying it is the largest ever political bet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X