• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯುಎಸ್ ಎಚ್ಚರ! 9/11 ರೀತಿ ದಾಳಿ ಮತ್ತೆ ಸಾಧ್ಯ: ಬಿನ್ ಲಾಡೆನ್!

|

9/11 ರೀತಿ ದಾಳಿ ಅಮೆರಿಕದಲ್ಲಿ ಮತ್ತೆ ನಡೆಯಬಹುದು ಎಂದು ಒಸಾಮಾ ಬಿನ್ ಲಾಡೆನ್ ಸಹೋದರನ ಪುತ್ರಿ ಎಚ್ಚರಿಕೆ ನೀಡಿದ್ದಾಳೆ. ಅಂತಾರಾಷ್ಟ್ರೀಯ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ನೂರ್ ಬಿನ್ ಲಾಡೆನ್ ಈ ರೀತಿ ವಾರ್ನಿಂಗ್ ಕೊಟ್ಟಿದ್ದಾಳೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಗೆದ್ದರೆ ಪರಿಸ್ಥಿತಿ ಕೈಮೀರಲಿದೆ.

ಇದು ಎಷ್ಟರಮಟ್ಟಿಗೆ ಎಂದರೆ ಮತ್ತೊಮ್ಮೆ 9/11ರ ರೀತಿಯ ಭೀಕರ ದಾಳಿ ಅಮೆರಿಕದಲ್ಲಿ ನಡೆಯಬಹುದು ಎಂದು ನೂರ್ ಬಿನ್ ಲಾಡೆನ್ ಪ್ರತಿಪಾದಿಸಿದ್ದಾಳೆ. ಅಂದಹಾಗೆ ನೂರ್ ಬಿನ್ ಲಾಡೆನ್ ಹುಟ್ಟಿದ್ದು ಸ್ವಿಜರ್‌ಲ್ಯಾಂಡ್‌ನಲ್ಲಿ. ಈಕೆಯ ತಾಯಿ ಸ್ವಿಜರ್‌ಲ್ಯಾಂಡ್‌ನ ಲೇಖಕಿ.

ಒಸಾಮಾ ಬಿನ್ ಲಾಡೆನ್ 'ಸೆಕ್ಸ್ ಫೈಲ್ಸ್' ಬಚ್ಚಿಟ್ಟ ಅಮೆರಿಕ

ನೂರ್ ಬಿನ್ ಲಾಡೆನ್ ತಂದೆ ಒಸಾಮಾ ಬಿನ್ ಲಾಡೆನ್‌ಗೆ ಸಹೋದರನಾಗಬೇಕು. ಆದರೆ ತನ್ನ ಕೌಟುಂಬಿಕ ಹಿನ್ನೆಲೆಗಿಂತಲೂ ತೀರಾ ಭಿನ್ನ ಆಲೋಚನೆಗಳನ್ನು ಈಕೆ ಹೊಂದಿದ್ದಾಳೆ. ಅಲ್ ಖೈದಾ ಸೇರಿದಂತೆ ಉಗ್ರ ಸಂಘಟನೆಗಳನ್ನ ದ್ವೇಷಿಸುತ್ತಾಳೆ.

ನೂರ್ ಬಿನ್ ಲಾಡೆನ್ ಪ್ರಕಾರ ಜೋ ಬಿಡೆನ್ ಗೆದ್ದರೆ ಡೆಮಾಕ್ರಟಿಕ್ ಪಕ್ಷದವರು ಇಸ್ಲಾಂ ಮೂಲಭೂತವಾದಿಗಳಿಗೆ ಬೆಂಬಲ ನೀಡುತ್ತಾರೆ. ಇದರಿಂದ ಜಗತ್ತಿನಲ್ಲಿ ಭೀಕರ ಉಗ್ರ ದಾಳಿಗಳು ನಡೆಯಲಿವೆ ಎಂದಿದ್ದಾಳೆ. ನೂರ್ ಬಿನ್ ಲಾಡೆನ್ ಹೇಳಿಕೆ ಜಗತ್ತಿನಾದ್ಯಂತ ಕಿಚ್ಚು ಹೊತ್ತಿಸಿದೆ.

9/11ರ ದಾಳಿಕೋರ ಒಸಾಮಾ ಬಿನ್ ಲಾಡೆನ್

9/11ರ ದಾಳಿಕೋರ ಒಸಾಮಾ ಬಿನ್ ಲಾಡೆನ್

ಜಗತ್ತಿನಾದ್ಯಂತ ಲೆಕ್ಕವಿಲ್ಲದಷ್ಟು ಜನರ ನೆತ್ತರು ಹರಿಸಿದ ‘ಅಲ್ ಖೈದಾ' ಉಗ್ರ ಸಂಘಟನೆ ಸಂಸ್ಥಾಪಕನೇ ಈ ಒಸಾಮಾ ಬಿನ್ ಲಾಡೆನ್. ಉಗ್ರ ಪಡೆಯಲ್ಲಿ ಕಿರಾತಕರಿಗೆ ಕಿರಾತಕ ಎನಿಸಿಕೊಂಡಿದ್ದ ಈತನನ್ನು 2011ರ ಮೇ 2ರಂದು ಅಮೆರಿಕ ಸೇನೆ ಹತ್ಯೆ ಮಾಡಿತ್ತು. ಪಾಕಿಸ್ತಾನಕ್ಕೆ ನುಗ್ಗಿ, ಪಾಕಿಸ್ತಾನದವರಿಗೇ ಗೊತ್ತಿಲ್ಲದಂತೆ ಪಾಪಿ ಬಿನ್ ಲಾಡೆನ್ ಹೆಣ ತಂದಿತ್ತು. ಅಷ್ಟಕ್ಕೂ ಅಮೆರಿಕ ಹೀಗೆ ಲಾಡೆನ್ ಹತ್ಯೆ ಮಾಡಲು ಕಾರಣ 2001ರ ಸೆಪ್ಟೆಂಬರ್ 11ರ ಡೆಡ್ಲಿ ಅಟ್ಯಾಕ್. ಅಂದು ಅಮೆರಿಕದ ಪ್ರತಿಷ್ಠಿತ ನ್ಯೂಯಾರ್ಕ್ ನಗರದ ವಿಶ್ವ ವ್ಯಾಪಾರ ಸಂಘಟನೆಯ 2 ಗಗನಚುಂಬಿ ಕಟ್ಟಡಗಳ ಮೇಲೆ ದಾಳಿ ನಡೆದಿತ್ತು. ದಾಳಿ ನಡೆಸಿದ್ದು ಲಾಡೆನ್ ನೇತೃತ್ವದ ಅಲ್ ಖೈದಾ ಉಗ್ರ ಸಂಘಟ. ಇದೇ ಕಾರಣಕ್ಕೆ ಲಾಡೆನ್ ಹೆಣ ಉರುಳಿಸಿದ್ದ ವಿಶ್ವದ ದೊಡ್ಡಣ್ಣ ಅಮೆರಿಕ.

ಸುಮಾರು 3 ಸಾವಿರ ಮಂದಿ ಸಾವು

ಸುಮಾರು 3 ಸಾವಿರ ಮಂದಿ ಸಾವು

ಅಂದು ನ್ಯೂಯಾರ್ಕ್‌ನ ಸ್ಥಿತಿ ಸಾಮಾನ್ಯವಾಗಿತ್ತು. ಎಂದಿನಂತೆ ಜನ ಕೆಲಸ ಕಾರ್ಯಗಳಲ್ಲಿ ಮಗ್ನರಾಗಿದ್ದರು. ಆದರೆ ಬೆಳಗ್ಗೆ 8.46ರ ಸುಮಾರಿಗೆ ಎಲ್ಲಿಂದಲೋ ಎಂಟ್ರಿ ಕೊಟ್ಟ ಅನಾಮಿಕ ವಿಮಾನವೊಂದು ವಿಶ್ವ ವ್ಯಾಪಾರ ಸಂಘಟನೆಯ 2 ಬೃಹತ್ ಕಟ್ಟಡಗಳ ಪೈಕಿ ಒಂದಕ್ಕೆ ಅಪ್ಪಳಿಸಿತ್ತು. ಇದನ್ನು ಕಂಡು ಇಡೀ ಅಮೆರಿಕ ಶಾಕ್‌ಗೆ ಒಳಗಾಗಿರುವಾಗಲೇ, 17 ನಿಮಿಷದ ಅಂತರದಲ್ಲಿ. ಅಂದರೆ ಬೆಳಗ್ಗೆ 9.03ಕ್ಕೆ ಇನ್ನೊಂದು ವಿಮಾನ ಮತ್ತೊಂದು ಕಟ್ಟಡಕ್ಕೆ ಗುದ್ದಿತ್ತು. ನೋಡ ನೋಡುತ್ತಿದ್ದಂತೆ ಮುಗಿಲೆತ್ತರದಲ್ಲಿದ್ದ ಕಟ್ಟಡಗಳು ಧರೆಗೆ ಉರುಳಿ, ಸರ್ವನಾಶವಾಗಿ ಹೋಗಿದ್ದವು. ಬರೋಬ್ಬರಿ 2,977 ಅಮಾಯಕರ ಪ್ರಾಣಪಕ್ಷಿ ಹಾರಿಹೋಗಿತ್ತು. ಅದೇ ಸಂದರ್ಭದಲ್ಲಿ 19 ಪಾಪಿ ಉಗ್ರರು ಕೂಡ ಫಿನಿಶ್ ಆಗಿದ್ದರು. ಇದು ಜಗತ್ತಿನಲ್ಲೇ ಈವರೆಗೂ ನಡೆದಿರುವ ಅತಿದೊಡ್ಡ ಹಾಗೂ ಭೀಕರ ಉಗ್ರದಾಳಿ ಎಂಬ ಅಪಖ್ಯಾತಿ ಕೂಡ ಪಡೆದಿದೆ.

ಉಗ್ರ ಒಸಾಮಾ ಬಿನ್ ಲಾಡೆನ್ ಪುತ್ರ ಹಮ್ಜಾ ಲಾಡೆನ್ ಸಾವು

ಬುಧವಾರಕ್ಕೆ 19 ವರ್ಷ ತುಂಬಲಿದೆ..!

ಬುಧವಾರಕ್ಕೆ 19 ವರ್ಷ ತುಂಬಲಿದೆ..!

ಒಸಾಮಾ ಬಿನ್ ಲಾಡೆನ್ ಸಹೋದರನ ಮಗಳು ನೀಡಿರುವ ಹೇಳಿಕೆ ಅಮೆರಿಕದಲ್ಲಿ ಹಲ್‌ಚಲ್ ಎಬ್ಬಿಸಿದೆ. ಏಕೆಂದರೆ 9/11ರ ದಾಳಿ ನಡೆದು ಬುಧವಾರಕ್ಕೆ ಬರೋಬ್ಬರಿ 19 ವರ್ಷ ತುಂಬಲಿದೆ. ಇದೇ ಸಂದರ್ಭದಲ್ಲಿ ನೂರ್ ಬಿನ್ ಲಾಡೆನ್ ಸ್ಫೋಟಕ ಅಭಿಪ್ರಾಯ ಹೊರಹಾಕಿದ್ದಾರೆ. 2015ರಿಂದಲೂ ನೂರ್ ಬಿನ್ ಲಾಡೆನ್ ಟ್ರಂಪ್ ಬೆಂಬಲಿಗರಾಗಿದ್ದಾರೆ. ಅಲ್ಲದೆ ಟ್ರಂಪ್ ಅಧಿಕಾರಕ್ಕೆ ಬಂದಿದ್ದರಿಂದಲೇ ಅಮೆರಿಕ ಮತ್ತು ಯುರೋಪ್ ದೇಶಗಳಲ್ಲಿ 4 ವರ್ಷಗಳಿಂದ ದೊಡ್ಡಮಟ್ಟದ ಉಗ್ರ ದಾಳಿಗಳು ನಡೆದಿಲ್ಲ ಎಂಬುದು ನೂರ್ ನಂಬಿಕೆ. ಆದರೆ ಈ ಬಾರಿ ಬಿಡೆನ್ ಗೆದ್ದರೆ ಮತ್ತೆ ಪರಿಸ್ಥಿತಿ ಹದಗೆಡಲಿದೆ ಎಂದಿದ್ದಾರೆ ನೂರ್.

9/11 ದಾಳಿಯ ಮಾಸ್ಟರ್ ಮೈಂಡ್ ಒಸಾಮ ಬಿನ್ ಲಾಡೆನ್

ಪರ-ವಿರೋಧದ ಚರ್ಚೆ ಶುರು..!

ಪರ-ವಿರೋಧದ ಚರ್ಚೆ ಶುರು..!

ನೂರ್ ಬಿನ್ ಲಾಡೆನ್ ಸಂದರ್ಶನದ ಹೇಳಿಕೆಗಳು ಇಂಟರ್‌ನೆಟ್‌ನಲ್ಲಿ ಸುನಾಮಿಯನ್ನೇ ಎಬ್ಬಿಸಿದೆ. ಟ್ರಂಪ್ ಬೆಂಬಲಿಗರು ಇದನ್ನು ಪ್ರಚಾರಕ್ಕೆ ಪ್ಲಸ್ ಪಾಯಿಂಟ್ ಮಾಡಿಕೊಂಡರೆ, ಡೆಮಾಕ್ರಟಿಕ್ ಪಕ್ಷ ಹಾಗೂ ಬಿಡೆನ್ ಬೆಂಬಲಿಗರು ಆಕ್ರೋಶಗೊಂಡಿದ್ದಾರೆ. ಇದ್ಯಾವುದಕ್ಕೂ ನೂರ್ ಬಿನ್ ಲಾಡೆನ್ ಪ್ರತಿಕ್ರಿಯಿಸಿಲ್ಲ. ಬದಲಾಗಿ ‘ಮೇಕ್ ಅಮೆರಿಕ ಗ್ರೇಟ್ ಅಗೈನ್' ಬಟ್ಟೆ ತೊಟ್ಟು ನೂರ್ ಬಿನ್ ಲಾಡೆನ್ ಡೊನಾಲ್ಡ್ ಟ್ರಂಪ್ ಪರವಾಗಿ ಮತಬೇಟೆಗೆ ಇಳಿದಿದ್ದಾರೆ.

ಒಸಾಬಾ ಬಿನ್ ಲಾಡೆನ್ ಓರ್ವ 'ಹುತಾತ್ಮ' ಎಂದ ಪಾಕ್ ಪ್ರಧಾನಿ ಇಮ್ರಾನ್ ಖಾನ್

English summary
Terror leader Osama Bin Laden's niece Noor Bin Laden has expressed support for President Trump in an interview. And warned that if Biden will win, 9/11 could happen again in America.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X