• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮೆರಿಕದ ಮಾಲ್‌ನಲ್ಲಿ ಗುಂಡಿನ ಮೊರೆತ, 8 ಮಂದಿಗೆ ಗಾಯ

|

ವಾಷಿಂಗ್ಟನ್, ನವೆಂಬರ್ 21: ಅಮೆರಿಕದ ವಿಸ್ಕಾನ್ಸಿನ್‌ನಲ್ಲಿರುವ ಮಾಲ್‌ ಒಂದರಲ್ಲಿ ಗುಂಡಿನ ಸದ್ದು ಕೇಳಿದ್ದು, 8 ಮಂದಿ ಗಾಯಗೊಂಡಿದ್ದಾರೆ.

ಗನ್‌ಮ್ಯಾನ್ ನಾಪತ್ತೆಯಾಗಿದ್ದಾನೆ. ದಾಳಿಕೋರ ಯಾರು ಮತ್ತು ಯಾವ ಉದ್ದೇಶದಿಂದ ಗುಂಡು ಹಾರಿಸಿದ್ದಾರೆ ಎಂಬುದನ್ನು ಕಂಡುಹಿಡಿಯಲು ಪೊಲೀಸರು ಇಲ್ಲಿಯವರೆಗೆ ವಿಫಲರಾಗಿದ್ದಾರೆ.

ನ್ಯೂಯಾರ್ಕ್‌ನಲ್ಲಿ ಗುಂಡಿನ ದಾಳಿ: 2 ಸಾವು, 16 ಮಂದಿಗೆ ಗಾಯ

ಸ್ಥಳೀಯ ಮೇಯರ್ ಡೆನ್ನಿಸ್ ಮೆಕ್‌ಬ್ರೈಡ್ ಪ್ರಕಾರ, ವಿಸ್ಕಾನ್ಸಿನ್‌ನ ಮಿಲ್ವಾಕಿ (Milwaukee) ಯಲ್ಲಿರುವ ಮೇಫೀಲ್ಡ್ ಶಾಪಿಂಗ್ ಮಾಲ್‌ನಲ್ಲಿ ಹಠಾತ್ ಗುಂಡಿನ ದಾಳಿ ನಡೆದಾಗ ಭೀತಿ ಉಂಟಾಯಿತು.

ಈ ಘಟನೆಯಲ್ಲಿ ಈವರೆಗೆ 8 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಆದರೆ ಶೂಟೌಟ್‌ನಲ್ಲಿ ಯಾರೂ ಮೃತಪಟ್ಟಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಗುಂಡಿನ ದಾಳಿ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಇಡೀ ಪ್ರದೇಶವನ್ನು ಸುತ್ತುವರಿದರು, ಸುಮಾರು 75 ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ತಲುಪಿದ್ದಾರೆ. ಆದರೆ ಅಪರಾಧಿಯನ್ನು ಹಿಡಿಯಲು ವಿಫಲವಾಗಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೊವೊಂದರಲ್ಲಿ ಶೂಟೌಟ್‌ನಲ್ಲಿ ಗಾಯಗೊಂಡ ಜನರನ್ನು ಸ್ಟ್ರೆಚರ್‌ನಲ್ಲಿ ಮಾಲ್‌ನಿಂದ ಹೊರಗೆ ಕರೆದೊಯ್ಯಲಾಗುತ್ತಿರುವುದನ್ನು ತೋರಿಸಲಾಗಿದೆ.

ಲೈವ್ ಟಿವಿ ದೃಶ್ಯಗಳು ಮೆಸ್ಸಿಯ ಡಿಪಾರ್ಟ್ಮೆಂಟ್ ಸ್ಟೋರ್ ಹೊರಗೆ ಡಜನ್ಗಟ್ಟಲೆ ಪೊಲೀಸ್ ವಾಹನಗಳು ಇರುವುದನ್ನು ತೋರಿಸುತ್ತದೆ. ಗುಂಡಿನ ಶಬ್ದ ಕೇಳಿದ ನಂತರ ಮಾಲ್ ನೌಕರರು ಮತ್ತು ಅಂಗಡಿಯವರು ತಮ್ಮನ್ನು ಒಳಗೆ ಇರಿಸಿಕೊಂಡಿದ್ದರು. ಆದರೆ ಎಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ಅನೇಕ ಜನರು ಹೇಳಿದ್ದಾರೆ.

ಅದೇ ಸಮಯದಲ್ಲಿ ಇನ್ನೊಬ್ಬ ವ್ಯಕ್ತಿಯು ಮಾಲ್‌ನಲ್ಲಿ ಕೆಲಸ ಮಾಡುವ ತನ್ನ ಸಹೋದರಿ 15 ಸುತ್ತು ಗುಂಡು ಹಾರಿಸುವ ಶಬ್ದವನ್ನು ಕೇಳಿರುವುದಾಗಿ ಮಾಹಿತಿ ನೀಡಿರುವುದಾಗಿ ತಿಳಿಸಿದ್ದಾರೆ.

English summary
Eight people were injured in a shooting at a US mall in Wisconsin on Friday according to police, who said they were still hunting for the shooter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X