ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪ್ರಧಾನಿ ಮೋದಿ ಭಾಷಣದ ಪ್ರಮುಖಾಂಶಗಳು

|
Google Oneindia Kannada News

ವಾಷಿಂಗ್ಟನ್, ಸೆಪ್ಟೆಂಬರ್ 25: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದ್ದಾರೆ.

*ದೇಶದ ಸೇವೆ ಮಾಡುತ್ತಾ 20 ವರ್ಷಗಳಾಗುತ್ತಿದೆ, ದೀನದಯಾಳ್ ಉಪಾಧ್ಯಾಯರ ಅಂತ್ಯೋದಯ ಚಿಂತನೆಯಲ್ಲಿ ಭಾರತ ಸರ್ಕಾರ ಕೆಲಸ ಂಆಡುತ್ತಿದೆ. ಪ್ರಜಾತಂತ್ರ ಸರ್ಕಾರ ಕೂಡ ಯಶಸ್ವಿಯಾಗಬಲ್ಲದು ಎಂದು ತೋರಿಸಿಕೊಟ್ಟಿದೆ.

76th UN General Assembly Modi Speech Highlights

*36 ಕೋಟಿಗೂ ಅಧಿಕ ಜನರಿಗೆ ನಮ್ಮ ಸರ್ಕಾರ ಭೀಮಾ ಸುರಕ್ಷಾ ಯೋಜನೆಯನ್ನು ಮಾಡಿಕೊಟ್ಟಿದೆ, ಈ ಮೂಲಕ ಜನರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ, ಭಾರತವು ಈ ಮೂಲಕ ಗುಣಾತ್ಮಕ 3 ಕೋಟಿ ಜನರಿಗೆ ಮನೆಯನ್ನು ಕಟ್ಟಿಕೊಟ್ಟಿದೆ.

*ಕೊರೊನಾ ಲಸಿಕೆ ಅಭಿವೃದ್ಧಿ ಹಾಗೂ ಉತ್ಪಾದನೆಯಲ್ಲಿ ಭಾರತವು ವಿಶೇಷ ಒತ್ತು ನೀಡುತ್ತಿದೆ
*ಡಿಎನ್‌ಎ ಆಧಾರಿತ ಮೊದಲ ಲಸಿಕೆಯನ್ನು ಭಾರತ ಸಂಶೋಧಿಸಿದ್ದು, ಇದು 12 ವರ್ಷದ ಮೇಲ್ಪಟ್ಟ ಎಲ್ಲರಿಗೂ ನೀಡಬಹುದಾಗಿದೆ. ವಿಶ್ವದಲ್ಲಿ ಮೊದಲ ದೇಶ ಇದಾಗಿದೆ, ಆರ್ಎನ್‌ಎ ಆಧಾರಿತ ಲಸಿಕೆ ಕೂಡ ಪ್ರಯೋಗದ ಹಂತದಲ್ಲಿದೆ.
*ಭಾರತಕ್ಕೆ ಬಂದು ಲಸಿಕೆ ತಯಾರಿಸಿ ಎಂದು ಜಾಗತಿಕ ಕಂಪನಿಗಳಿಗೆ ಮೋದಿ ಕರೆ
*ಪ್ರಜಾಸತ್ತಾತ್ಮಕ ಮೌಲ್ಯಗಳಿಂದ ತಂತ್ರಜ್ಞಾನದ ಅಭಿವೃದ್ಧಿಯತ್ತ ಗಮನ ಹರಿಸಬೇಕಾಗಿದೆ

*ಭಾರತವು ಆರ್ಥಿಕತೆ ಹಾಗೂ ಪರಿಸರ ಈ ಎರಡೂ ವಿಷಯಗಳಲ್ಲಿ ಸಮತೋಲನ ಸಾಧಿಸಿದೆ.
*450 ಗಿಗೋವ್ಯಾಟ್ ನವೀಕರಿಸಬಹುದಾದ ಇಂಧನ ಉತ್ಪಾದನೆ ಗುರಿಯತ್ತ ಸಾಗಿದ್ದೇವೆ.
*ಗ್ರೀನ್ ಹೈಡ್ರೋಜನ್ ಹಬ್ ಆರಂಭಿಸುವ ಪ್ರಯತ್ನ ನಡೆಯುತ್ತಿದೆ
*ಭಾರತ ಅಭಿವೃದ್ಧಿಯಾದರೆ ವಿಶ್ವ ಅಭಿವೃದ್ಧಿಯಾಗಲಿದೆ, ಭಾರತ ಸುಧಾರಣೆಯತ್ತ ಸಾಗಿದರೆ ವಿಶ್ವವೂ ಸುಧಾರಣೆಯತ್ತ ಸಾಗಲಿದೆ
*ಭಾರತದ ಶಾಲಾ ಕಾಲೇಜುಗಳಲ್ಲಿ ನಿರ್ಮಿಲಸಾಗುತ್ತಿರುವ 75 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಹಾರಿಸಲಾಗುತ್ತಿದೆ
*ಕೆಲ ದೇಶಗಳು, ಭಯೋತ್ಪಾದನೆ ರಾಜಕೀಯ , ಟೂಲ್‌ಗಳನ್ನು ಬಳಸುತ್ತಿದೆ, ಅಫ್ಘಾನಿಸ್ತಾನ ಭೂಮಿಯನ್ನು ಭಯೋತ್ಪಾದನೆಗೆ ಬಳಸಕೂಡದು
*ಅಲ್ಲಿಯ ಸೂಕ್ಷ್ಮ ಪರಿಸ್ಥಿತಿಯನ್ನು, ತನ್ನ ಸ್ವಾರ್ಥಕ್ಕೆ ಯಾವ ದೇಶಗಳೂ ಬಳಸಿಕೊಳ್ಳಬಾರದು, ಅಫ್ಘಾನಿಸ್ತಾನದ ನಾಜೂಕಿನ ಸ್ಥಿತಿ ಯಾವ ದೇಶಕ್ಕೂ ಟೂಲ್‌ಕಿಟ್ ಆಗಬಾರದು ಅಲ್ಲಿನ, ಅಲ್ಪ ಸಂಖ್ಯಾತರಿಗೆ ನೆರವಿನ ಅಗತ್ಯವಿದೆ
*ಸಮುದ್ರದ ಸಂಪನ್ಮೂಲಗಳನ್ನು ನಾವು ಬಳಸಬೇಕೆ ಹೊರತು, ದುರ್ಬಳಕೆ ಮಾಡಬಾರದು

*ವಿಶ್ವಸಂಸ್ಥೆ ನೆಪಮಾತ್ರಕ್ಕೆ ಆಗಬಾರದು, ಜಾಗತಿಕ ವಿಚಾರಗಳಲ್ಲಿ ನಿಷ್ಪಕ್ಷಪಾತವಾಗಿ, ನಿಷ್ಠೂರವಾಗಿ ತನ್ನ ಕೆಲಸ ಮಾಡಬೇಕಿದೆ. ಇವತ್ತಿನ ಸವಾಲಿನ ಸಂದರ್ಭದಲ್ಲಿ ವಿಶ್ವಸಂಸ್ಥೆ ಇನ್ನಷ್ಟು ಪ್ರಖರವಾಗಿ, ಜಾಗತಿಕ ಮೌಲ್ಯಗಳಿಗೆ ಸರಿಯಾಗಿ ತನ್ನ ಅಸ್ತಿತ್ವವನ್ನು ತೋರಿಸಬೇಕಿದೆ.
ಆದರೆ ಕೊರೊನಾ ಮೂಲ, ಅಫ್ಘಾನಿಸ್ತಾನದಲ್ಲಿನ ಪ್ರಸಕ್ತ ಸ್ಥಿತಿ ಭಯೋತ್ಪಾದನೆಯ ಪ್ರಾಕ್ಸಿ ಯುದ್ಧಗಳು ವಿಚಾರದಲ್ಲಿ ವಿಶ್ವಸಂಸ್ಥೆ, ತನ್ನ ಮೌಲ್ಯಕ್ಕೆ ಸರಿಯಾಗಿ ನಡೆದುಕೊಳ್ಳದಿರುವುದು ಬೇಸರ ಮೂಡಿಸಿದೆ.

*ವಿಶ್ವಸಂಸ್ಥೆಯ ಕಾರ್ಯವೈಖರಿ ಬಗ್ಗೆ ಸಾಕಷ್ಟು ಪ್ರಶ್ನೆಗಳು ಉದ್ಭವವಾಗಿವೆ, ಹವಾಮಾನ ವೈಪರಿತ್ಯ, ಕೋವಿಡ್ ವಿಚಾರದಲ್ಲಿ ಇದನ್ನು ನಾವು ನೋಡಿದ್ದೇವೆ

English summary
Prime Minister Narendra Modi address the 76th session of the United Nations General Assembly Highlights here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X