• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಮೀಕ್ಷೆ ವರದಿ; ಅಮೆರಿಕ ಚುನಾವಣೆಯಲ್ಲಿ ಭಾರತೀಯರ ಬೆಂಬಲ ಯಾರಿಗೆ?

|

ವಾಷಿಂಗ್ಟನ್, ಅಕ್ಟೋಬರ್ 14 : ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆ ವಿಶ್ವದಲ್ಲಿ ಕುತೂಹಲ ಉಂಟು ಮಾಡಿದೆ. ಅಮೆರಿಕದಲ್ಲಿರುವ ನೆಲೆಸಿರುವ ಭಾರತೀಯರ ಬೆಂಬಲ ಯಾರಿಗೆ? ಎನ್ನುವುದು ಪ್ರಮುಖ ಪ್ರಶ್ನೆಯಾಗಿದೆ.

ಚುನಾವಣೆಯಲ್ಲಿ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಜೋ ಬೈಡನ್ ಶೇ 72ರಷ್ಟು ಭಾರತೀಯರ ಬೆಂಬಲ ಪಡೆಯಲಿದ್ದಾರೆ ಎಂದು ಬುಧವಾರ ಪ್ರಕಟವಾದ ಸಮೀಕ್ಷೆ ಹೇಳಿದೆ.

ಅಮೆರಿಕ ಅಧ್ಯಕ್ಷರ ಆಯ್ಕೆಗೆ ದಿನಗಣನೆ, 244 ವರ್ಷಗಳ ಮಹಾನ್ ಇತಿಹಾಸ

ಅಮೆರಿಕದಲ್ಲಿರುವ ವಲಸಿಗರಲ್ಲಿ ಭಾರತೀಯರು 2ನೇ ಅತಿ ದೊಡ್ಡ ಸಂಖ್ಯೆಯಲ್ಲಿದ್ದಾರೆ. ನವೆಂಬರ್ 3ರಂದು ನಡೆಯಲಿರುವ ಚುನಾವಣೆಗೆ ಶೇ 1ರಷ್ಟು ಜನರು ನೋಂದಣಿ ಮಾಡಿಸಿದ್ದಾರೆ. ಆದರೆ, ಎರಡೂ ಪಕ್ಷಗಳು ಭಾರತೀಯರ ಮತ ಸೆಳೆಯಲು ಪ್ರಯತ್ನವನ್ನು ಮಾಡುತ್ತಿವೆ.

ಅಮೆರಿಕ ಚುನಾವಣೆ Poll: ಯಾರಿಗೆ ಸೋಲು, ಯಾರಿಗೆ ಗೆಲುವು..?

ಜೋ ಬೈಡನ್ ಅವರು ಉಪಾಧ್ಯಕ್ಷ ಸ್ಥಾನಕ್ಕೆ ಕಮಲಾ ಹ್ಯಾರೀಸ್ ಆಯ್ಕೆ ಮಾಡಿದ ಬಳಿಕ ಭಾರತೀಯರು ಬೈಡನ್ ಬೆಂಬಲಕ್ಕೆ ನಿಂತಿದ್ದಾರೆ ಎನ್ನುತ್ತದೆ ಸಮೀಕ್ಷೆಯ ವರದಿ. ಕಮಲಾ ಹ್ಯಾರೀಸ್ ಅಭ್ಯರ್ಥಿಯಾದ ಮೇಲೆ ಶೇ 49 ರಷ್ಟು ಜನರು ಬೈಡನ್‌ ಬೆಂಬಲಿಸಲು ತೀರ್ಮಾನಿಸಿದ್ದಾರೆ.

ಅಮೆರಿಕ ಅಧ್ಯಕ್ಷರ ಆಯ್ಕೆಗೆ ದಿನಗಣನೆ, 244 ವರ್ಷಗಳ ಮಹಾನ್ ಇತಿಹಾಸ

ಶೇ 72ರಷ್ಟು ಭಾರತೀಯರು ಜೋ ಬೈಡನ್ ಅವರಿಗೆ ಚುನಾವಣೆಯಲ್ಲಿ ಬೆಂಬಲ ನೀಡಿಲು ತೀರ್ಮಾನಿಸಿದ್ದಾರೆ. ಪ್ರಸ್ತುತ ಅಮೆರಿಕದ ಅಧ್ಯಕ್ಷರಾಗಿರುವ ಡೊನಾಲ್ಡ್ ಟ್ರಂಪ್‌ಗೆ ಶೇ 22ರಷ್ಟು ಜನರು ಬೆಂಬಲ ನೀಡಲಿದ್ದಾರೆ.

ಕಾರ್ನೆಗೀ ಎಂಡೋಮೆಂಟ್ ಫಾರ್ ಇಂಟರ್ನ್ಯಾಶನಲ್ ಪೀಸ್ (ಸಿಇಐಪಿ), ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ ಜಂಟಿಯಾಗಿ ಸೆಪ್ಟೆಂಬರ್ 1 ರಿಂದ 20ರ ತನಕ ನಡೆಸಿದ 936 ಜನರ ಸಮೀಕ್ಷೆಯ ಫಲಿತಾಂಶವಿದಾಗಿದೆ.

ಮೊದಲಿನಿಂದಲೂ ಅಮೆರಿಕದಲ್ಲಿರುವ ಭಾರತೀಯರು ಡೆಮಾಕ್ರಟಿಕ್‌ ಪಕ್ಷವನ್ನು ಬೆಂಬಲಿಸುತ್ತಿದ್ದರು. ಆದರೆ, ಡೊನಾಲ್ಡ್ ಟ್ರಂಪ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಸ್ನೇಹದ ಕಾರಣ ಈ ಬಾರಿ ಯಾರಿಗೆ ಬೆಂಬಲ ಎನ್ನುವುದು ಕುತೂಹಲಕ್ಕೆ ಕಾರಣವಾಗಿತ್ತು.

ಭಾರತೀಯರ ಬೆಂಬಲ ಪಡೆಯಲು ಟ್ರಂಪ್ ಸಹ ಪ್ರಯತ್ನ ನಡೆಸಿದ್ದರು. ಕಳೆದ ವರ್ಷ ಟೆಕ್ಸಾಸ್‌ನಲ್ಲಿ 'ಹೌಡಿ ಮೋದಿ' ಎಂಬ ಹೆಸರಿನ ದೊಡ್ಡ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ್ದರು.

English summary
Democratic presidential candidate Joe Biden get the support of the 72 % Indians said survey report. Indian American supported Biden after Kamala Harris's nomination says report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X